For Quick Alerts
ALLOW NOTIFICATIONS  
For Daily Alerts

ಗ್ಯಾಸ್ ಉಂಟುಮಾಡುವಂತಹ ತರಕಾರಿಗಳು

By Hemanth Amin
|

ತರಕಾರಿಗಳು ನಿಮ್ಮ ಆಹಾರಕ್ರಮದ ಅತ್ಯಂತ ಆರೋಗ್ಯಕರ ಭಾಗ. ಇದು ನಿಮ್ಮ ದೇಹಕ್ಕೆ ಬೇಕಾಗಿರುವ ಅತ್ಯಗತ್ಯ ಪೋಷಕಾಂಶಗಳನ್ನು ನೈಸರ್ಗಿಕ ವಿಧಾನದಿಂದ ಒದಗಿಸುತ್ತದೆ. ಆದರೂ ಕೆಲವೊಂದು ತರಕಾರಿಗಳು ಒಳ್ಳೆಯ ಆರೋಗ್ಯಕಾರಿ ಗುಣಗಳನ್ನು ಹೊಂದಿದ್ದರೆ ಮತ್ತೆ ಕೆಲವು ಅಡ್ಡ ಪರಿಣಾಮ ಬೀರಬಹುದು. ಇಂತಹ ಕೆಲವು ತರಕಾರಿಗಳು ನಿಮ್ಮ ದೇಹಕ್ಕೆ ಅತ್ಯಗತ್ಯ ಪೋಷಕಾಂಶಗಳನ್ನು ನೀಡುವುದರೊಂದಿಗೆ ಗ್ಯಾಸ್ ನಿರ್ಮಿಸಿ ನಿಮ್ಮ ಹೊಟ್ಟೆ ಉಬ್ಬರಿಸುವಂತೆ ಮಾಡಬಹುದು. ಇದರ ಪರಿಣಾಮ ಊಟವಾದ ಬಳಿಕ ನಿಮ್ಮ ಹೊಟ್ಟೆಯಲ್ಲಿ ಕಿರಿಕಿಯಾಗಬಹುದು ಮತ್ತು ಕೆಲವೊಂದು ಸಲ ಗ್ಯಾಸ್ ಹೊರಹೋಗಬಹುದು.

ಹೆಚ್ಚುವರಿಯಾಗಿ ಗ್ಯಾಸ್ ಹೊಟ್ಟೆಯಲ್ಲಿ ನಿಂತರೆ ಆಗ ನೋವು ಕಾಣಿಸಿಕೊಳ್ಳುತ್ತದೆ. ರಫ್ಫಿನೊಸ್, ಲ್ಯಾಕ್ಟೋಸ್, ಫ್ರಕ್ಟೋಸ್ ಮತ್ತು ಸಾರ್ಬಿಟಾಲ್ ನಂತಹ ಸಕ್ಕರೆ ಅಂಶಗಳನ್ನು ಹೊಂದಿರುವಂತಹ ಕೆಲವೊಂದು ತರಕಾರಿಗಳು ನಿಮ್ಮ ದೇಹದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಗ್ಯಾಸ್ ನಿರ್ಮಾಣಕ್ಕೆ ಕಾರಣವಾಗಹುದು. ರಫ್ಫಿನೊಸ್ ಎನ್ನುವುದು ಸಾಮಾನ್ಯವಾಗಿ ತರಕಾರಿಗಳಲ್ಲಿ ಕಂಡುಬರುವಂತಹ ಸಕ್ಕರೆ ಅಂಶ ಮತ್ತು ಇದು ಗ್ಯಾಸ್ ನಿಂದ ಹೊಟ್ಟೆ ಉಬ್ಬರ ಮತ್ತು ನೋವಿಗೆ ಕಾರಣವಾಗುತ್ತದೆ. ಕೆಲವು ಆಹಾರಗಳು ಇತರ ಆಹಾರಗಳಿಗಿಂತ ಹೆಚ್ಚಿನ ಗ್ಯಾಸ್ ಉಂಟು ಮಾಡುತ್ತದೆ. ಇದು ಪ್ರತಿಯೊಬ್ಬ ವ್ಯಕ್ತಿಗೆ ಭಿನ್ನವಾಗಿರುತ್ತದೆ ಮತ್ತು ಒಬ್ಬ ವ್ಯಕ್ತಿಯಲ್ಲಿ ಗ್ಯಾಸ್ ಉಂಟುಮಾಡುವ ಆಹಾರವು ಮತ್ತೊಬ್ಬ ವ್ಯಕ್ತಿಯಲ್ಲಿ ಗ್ಯಾಸ್ ಉಂಟು ಮಾಡಬೇಕೆಂದಿಲ್ಲ.

ಕೆಲವೊಂದು ತರಕಾರಿಗಳನ್ನು ನಿಮ್ಮ ಆಹಾರದಲ್ಲಿ ಬಳಸುವುದರಿಂದ ನಿಮ್ಮ ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಂಡು ಉಬ್ಬರಿಕೆ ಕಂಡು ಬಂದರೆ ಮುಂದಿನ ದಿನಗಳಲ್ಲಿ ಇಂತಹ ತರಕಾರಿಯನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿ. ಈರುಳ್ಳಿ, ಸೆಲರಿ, ಕ್ಯಾರೆಟ್, ಬ್ರಸಲ್ಸ್ ಮೊಗ್ಗುಗಳು, ಸೌತೆಕಾಯಿ, ಕೋಸು, ಹೂಕೋಸು, ಕೆಂಪು ಮೂಲಂಗಿಯಂತಹ ತರಕಾರಿಗಳನ್ನು ತಿನ್ನುವುದರಿಂದ ಹೊಟ್ಟೆಯಲ್ಲಿ ಅತಿಯಾದ ಗ್ಯಾಸ್ ಉಂಟುಮಾಡುತ್ತದೆ. ಗ್ಯಾಸ್ ತಡೆಯಲು ಇಂತಹ ಆರೋಗ್ಯಕಾರಿ ತರಕಾರಿಗಳನ್ನು ತಿನ್ನದಿರಲು ಸಾಧ್ಯವಿಲ್ಲ. ಇದನ್ನು ಕಡಿಮೆ ಮಟ್ಟದಲ್ಲಿ ಸೇವನೆ ಮಾಡಿ ಮತ್ತು ಪ್ರತಿನಿತ್ಯ ಇದನ್ನೇ ಸೇವಿಸಬೇಡಿ.

ಅತಿಯಾದ ಗ್ಯಾಸ್ ಉಂಟುಮಾಡುವಂತಹ ಕೆಲವೊಂದು ತರಕಾರಿಗಳನ್ನು ಇಲ್ಲಿ ಪಟ್ಟಿಮಾಡಲಾಗಿದೆ.

1. ಈರುಳ್ಳಿ

1. ಈರುಳ್ಳಿ

ಹೆಚ್ಚಿನ ಆಹಾರಗಳಲ್ಲಿ ಈ ಒಂದು ತರಕಾರಿಯನ್ನು ಬಳಸಲಾಗುತ್ತದೆ. ಪದಾರ್ಥಗಳಿಗೆ ಈರುಳ್ಳಿ ಹಾಕದೆ ಇರುವುದು ತುಂಬಾ ಕಷ್ಟ. ಆದರೆ ಹೊಟ್ಟೆ ಉಬ್ಬರ ಮತ್ತು ಗ್ಯಾಸ್ ಉಂಟು ಮಾಡುವುದನ್ನು ತಡೆಯಲು ಅದರ ಪ್ರಮಾಣವನ್ನು ಕಡಿಮೆ ಮಾಡಬಹುದು. ಈರುಳ್ಳಿಯಲ್ಲಿ ಹಲವಾರು ರೀತಿಯ ಆರೋಗ್ಯ ಗುಣಗಳಿರುವ ಕಾರಣ ಇದನ್ನು ಸಂಪೂರ್ಣವಾಗಿ ಕಡೆಗಣಿಸಲಾಗದು.

2. ಬ್ರಸಲ್ಸ್ ಮೊಗ್ಗುಗಳು

2. ಬ್ರಸಲ್ಸ್ ಮೊಗ್ಗುಗಳು

ಇದು ಕೋಸು, ಹೂಕೋಸು ಇತ್ಯಾದಿ ಜಾತಿಗೆ ಸೇರಿದ ತಳಿ. ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಎ, ಸಿ, ಫಾಲಿಕ್ ಆಮ್ಲ ಮತ್ತು ನಾರಿನಾಂಶವಿದೆ. ಇದು ಸಂಕೀರ್ಣ ಕಾರ್ಬೋಹೈಡ್ರೇಟ್ ಎಂಬ ಆಲಿಗೋಸ್ಯಾಕರೈಡುಗಳು ಹೊಂದಿದೆ, ಇದು ಜೀರ್ಣಕ್ರಿಯೆ ವೇಳೆ ಹೆಚ್ಚಿನ ಗ್ಯಾಸ್ ಉಂಟು ಮಾಡಿ ಹೊಟ್ಟೆ ಉಬ್ಬರಿಸುವಂತೆ ಮಾಡುತ್ತದೆ.

3. ಜೋಳ

3. ಜೋಳ

ಇದು ಹಲವಾರು ಪೋಷಕಾಂಶ ಮತ್ತು ಸುಕ್ರೋಸ್ ನ್ನು ಹೊಂದಿರುವ ಆಹಾರ. ಇದರಲ್ಲಿ ಹೆಚ್ಚಿನ ಪಿಷ್ಟ ಮತ್ತು ಸಕ್ಕರೆ ಅಂಶ ಒಳಗೊಂಡಿರುವ ಕಾರಣ ಜೀರ್ಣಕ್ರಿಯೆ ವೇಳೆ ಹೆಚ್ಚಿನ ಗ್ಯಾಸ್ ಉಂಟು ಮಾಡುತ್ತದೆ. ಇದು ಸಂಕೀರ್ಣ ಕಾಬ್ರೋಹೈಡ್ರೆಡ್ ಮತ್ತು ಹೆಚ್ಚಿನ ನಾರಿನಾಂಶ ಹೊಂದಿರುವ ಕಾರಣ ಇದನ್ನು ಜೀರ್ಣ ಮಾಡಿಕೊಳ್ಳುವುದು ತುಂಬಾ ಕಷ್ಟ ಮತ್ತು ಇದರಲ್ಲಿರುವ ನೈಸರ್ಗಿಕ ಸಕ್ಕರೆಯು ಜೀರ್ಣಕ್ರಿಯೆ ವೇಳೆ ಗ್ಯಾಸ್ ಉಂಟು ಮಾಡುತ್ತದೆ.

4. ಹೂಕೋಸು

4. ಹೂಕೋಸು

ಹೂಕೋಸು ಎನ್ನುವುದು ಎಲೆಕೋಸು ಕುಟುಂಬಕ್ಕೆ ಸೇರಿದ ತರಕಾರಿ. ಇದರಲ್ಲಿ ವಿಟಮಿನ್, ಖನಿಜಗಳು ಮತ್ತು ಸಸ್ಯಜನ್ಯಗಳು ನಿಮ್ಮ ಆರೋಗ್ಯಕ್ಕೆ ತುಂಬಾ ಲಾಭಕಾರಿ. ಈ ಎಲ್ಲಾ ಆರೋಗ್ಯಕಾರಿ ಗುಣಗಳ ಹೊರತಾಗಿಯೂ ಹೆಚ್ಚಿನವರು ಹೂಕೋಸು ಉಂಟುಮಾಡುವ ಗ್ಯಾಸ್ ನಿಂದಾಗಿ ಇದನ್ನು ತಿನ್ನುವುದಿಲ್ಲ. ಹೂಕೋಸಿನಲ್ಲಿರುವ ರಫ್ಫಿನೊಸ್ ಎನ್ನುವ ಸಕ್ಕರೆ ಅಂಶವನ್ನು ನಮ್ಮ ಜೀರ್ಣಕ್ರಿಯೆ ವ್ಯವಸ್ಥೆಯ ಕಿಣ್ವಗಳಿಗೆ ಬೇರ್ಪಡಿಸಲಾಗದೆ ಗ್ಯಾಸ್ ಉಂಟುಮಾಡುತ್ತದೆ.

5. ಎಲೆಕೋಸು

5. ಎಲೆಕೋಸು

ಎಲೆಕೋಸು ಆರೋಗ್ಯಕ್ಕೆ ತುಂಬಾ ಲಾಭವನ್ನುಂಟುಮಾಡುವಂತಹ ಕಾಬ್ರೋಹೈಡ್ರೆಟ್ ನಿಂದ ಸಮೃದ್ಧವಾಗಿದೆ. ಎಲೆಕೋಸಿನಲ್ಲಿರುವ ಕಾಬ್ರೋಹೈಡ್ರೆಡ್ ಗಳನ್ನು ಆಲಿಗೋಸ್ಯಾಕರೈಡುಗಳೆಂದು ಕರೆಯಲಾಗುತ್ತದೆ. ಆಲಿಗೋಸ್ಯಾಕರೈಡುಗಳನ್ನು ಜೀರ್ಣ ಮಾಡುವಾಗ ಗ್ಯಾಸ್ ಉಂಟಾಗುತ್ತದೆ.

6. ಬೀನ್ಸ್

6. ಬೀನ್ಸ್

ಬೀನ್ಸ್ ನಲ್ಲಿ ಸಾವಿರಾರು ವಿಧಗಳಿವೆ, ಪ್ರತಿಯೊಂದು ತನ್ನದೇ ಆದ ಆರೋಗ್ಯಕರ ಗುಣಗಳನ್ನು ಹೊಂದಿದೆ. ಬೀನ್ಸ್ ನಲ್ಲಿ ಬೀನ್ಸ್ ತ್ರಿವಳಿ ಸಕ್ಕರೆ ಸ್ಟಾಚ್ಯೊಸೆ, ಚತುರ್ಭಾಗ ಸಕ್ಕರೆ ರಫ್ಫಿನೊಸ್ ಮತ್ತು ಪಂಚಸಕ್ಕರೆ ವೆರ್ಬಸ್ಕೊಸೆ ಹೊಂದಿದ್ದು, ಇದನ್ನು ಜೀರ್ಣ ಮಾಡಲು ಸಾಧ್ಯವಿಲ್ಲ. ಈ ಸಕ್ಕರೆಗಳನ್ನು ಬೇರ್ಪಡಿಸಲು ಬೇಕಾಗುವ ಕಿಣ್ವಗಳು ನಮ್ಮಲಿಲ್ಲ.

7. ಗೆಣಸು

7. ಗೆಣಸು

ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಸೂಕ್ಷ್ಮ ಮತ್ತು ಕೆರಳಿಸುವ ಕರುಳಿನ ಲಕ್ಷಣಗಳನ್ನು ಹೊಂದಿದ್ದರೆ ಗೆಣಸು ತಿನ್ನುವುದರಿಂದ ನಿಮ್ಮ ಹೊಟ್ಟೆಯಲ್ಲಿ ಹೆಚ್ಚಿನ ಗ್ಯಾಸ್ ಉಂಟು ಮಾಡಬಹುದು. ಇದರಿಂದ ಹೊಟ್ಟೆಉಬ್ಬರ, ಕಿರಿಕಿರಿ, ವಾಯು, ಹೊಟ್ಟೆನೋವು ಮತ್ತು ಸೆಳೆತ ಉಂಟಾಗಬಹುದು. ಗೆಣಸಿನಲ್ಲಿ ಪಾಲಿಸ್ಯಾಕರೈಡ್ ಗಳೆಂಬ ಕಾಬ್ರೋಹೈಡ್ರೆಡ್ ಗಳಿವೆ. ಇದು ಒಂದು ರೀತಿಯ ಸಕ್ಕರೆಯಾಗಿದ್ದು, ಇದನ್ನು ಜೀರ್ಣಿಸುವುದು ಕಷ್ಟವಾಗಿರುವ ಕಾರಣ ಗ್ಯಾಸ್ ಉಂಟು ಮಾಡುತ್ತದೆ.

English summary

Vegetables That Cause Gas In Men

Vegetables are the healthiest part of your diet, which provides your body most of the essential nutrients in natural form. However there are some vegetables that come with all the goodies and some undesired side effects.
Story first published: Tuesday, December 3, 2013, 13:06 [IST]
X
Desktop Bottom Promotion