For Quick Alerts
ALLOW NOTIFICATIONS  
For Daily Alerts

ಸ್ಟ್ಯಾಮಿನ ವೃದ್ಧಿಗಾಗಿ 20 ವಂಡರ್ ಫುಲ್ ಟಿಪ್ಸ್

By Super
|

ತಾಕತ್ತು ಅಥವಾ ಸ್ಟ್ಯಾಮಿನ ಎಂಬ ಪದವು ಇತ್ತೀಚಿನ ದಿನಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ಈ ಸ್ಟ್ಯಾಮಿನದ ಬಗ್ಗೆ ಇಷ್ಟು ಚರ್ಚೆ ಏಕೆಂದರೆ ನಮ್ಮಲ್ಲಿ ಕಾಣುತ್ತಿರುವ ಇದರ ಕೊರತೆಯೇ ಮೂಲ ಕಾರಣ. ಈಗ ಎಲ್ಲರಲ್ಲಿ ಒಂದು ನಿರಾಸಕ್ತಿ, ಆಲಸಿತನವು ಮನೆ ಮಾಡಿರುವುದು ಎಲ್ಲರಿಗು ತಿಳಿದ ಸಂಗತಿಯಾಗಿದೆ. ನೆಟ್ಟಗೆ ಬಿಸಿಲಿನಲ್ಲಿ ಹತ್ತು ನಿಮಿಷ ನಿಲ್ಲಲಾಗದವರು, ಒಂದು ಕಿ.ಮೀ ದೂರ ನಡೆಯಲಾಗದವರು, ನೂರು ಮೀಟರ್ ಓಡಲಾಗದವರು, ಹತ್ತು ಕೆ,ಜಿ ಭಾರ ಹೊರಲು ಪರದಾಡುವವರು ಎಷ್ಟು ಜನ ಇಲ್ಲ ನಮ್ಮ ಮಧ್ಯೆ!. ನಮ್ಮ ಉದಾಹರಣೆಯನ್ನೆ ತೆಗೆದುಕೊಳ್ಳಿ, ಮನೆಯಿಂದ ಕೂಗಿದರೆ ಕೇಳುವಷ್ಟು ದೂರದಲ್ಲಿನ ಪ್ರಾವಿಷನ್ ಸ್ಟೋರಿಗೊ ಅಥವಾ ಸ್ನಾಕ್ಸ್ ಬಾರ್ ಇಲ್ಲವೇ ಬೇಕರಿಗೊ ಬೈಕ್‍ ಏರಿ ಹೋಗುವ ನಮಗೆ ನಿಜವಾಗಿಯೂ ಸ್ಟ್ಯಾಮಿನ ಇದೆಯೇ?

ಅದರಲ್ಲಿಯೂ ಒಬ್ಬ ಆಟಗಾರ ಅಥವಾ ಅಥ್ಲೆಟ್‍ಗೆ ಸ್ಟ್ಯಾಮಿನ ಎನ್ನುವುದು ನಿಜವಾಗಿಯೂ ಒಂದು ದೊಡ್ಡ ಆಸ್ತಿಯಾಗಿರುತ್ತದೆ. ಅವನ ದೈಹಿಕ ಶಕ್ತಿಗಿಂತ ಈ ಸ್ಟ್ಯಾಮಿನವು ಅವನ ಸಾಧನೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಸ್ಟ್ಯಾಮಿನ ಎಂದರೆ ಕೇವಲ ಶಕ್ತಿ ಮತ್ತು ಉತ್ಸಾಹದ ರೂಪವಲ್ಲ ಬದಲಿಗೆ ಇದು ರೋಗ ಮತ್ತು ಒತ್ತಡರಹಿತ ಜೀವನದ ಸಂಕೇತ. ಸ್ಟ್ಯಾಮಿನವು ಕೇವಲ ಆಟಗಾರರ ಸ್ವತ್ತಲ್ಲ, ಒಬ್ಬ ಸಮರ್ಥ ವ್ಯಕ್ತಿ ಎಂದು ಎನಿಸಿಕೊಳ್ಳಲು ಬೇಕಾದ ಸಾಮಾರ್ಥ್ಯವು ಸ್ಟ್ಯಾಮಿನದಿಂದಲೇ ಆರಂಭವಾಗುತ್ತದೆ ಎಂದು ಮರೆಯಬೇಡಿ. ನಿಮ್ಮ ಸ್ಟ್ಯಾಮಿನವನ್ನು ಹೆಚ್ಚಿಸಿಕೊಳ್ಳಬೇಕೆ? ಹಾಗಾದರೆ ನಾವು ನೀಡಿರುವ ಕೆಲವು ಸಲಹೆಗಳನ್ನು ಓದಿ. ಅವುಗಳನ್ನು ಪಾಲಿಸಿ.

1. ಒಂದು ದೈಹಿಕ ಪರೀಕ್ಷೆಯನ್ನು ಮಾಡಿಸಿ

1. ಒಂದು ದೈಹಿಕ ಪರೀಕ್ಷೆಯನ್ನು ಮಾಡಿಸಿ

ನಿಮಗೆ ನಿಮ್ಮ ಸ್ಟ್ಯಾಮಿನವನ್ನು ವೃದ್ಧಿಸಿಕೊಳ್ಳುವ ಬಯಕೆ ಇದೆಯೇ? ಹಾಗಾದರೆ ಮೊದಲು ಒಂದು ವೈಧ್ಯಕೀಯ ಪರೀಕ್ಷೆಯಿಂದ ಇದನ್ನು ಆರಂಭಿಸಿ. ಇದರಿಂದ ನೀವು ಫಿಟ್ ಆಗಿದ್ದೀರೋ ಅಥವಾ ಇಲ್ಲವೋ? ಎಂದು ತಿಳಿಯುತ್ತದೆ. ಒಂದು ವೇಳೆ ಗಾಯಗಳು, ಸುಸ್ತು ಅಥವಾ ಇನ್ಯಾವುದೋ ಸಮಸ್ಯೆಯಿದ್ದಲ್ಲಿ, ಅದರಿಂದ ಹೊರಬರುವ ಮಾರ್ಗವನ್ನು ನಾವು ಈ ಪರೀಕ್ಷೆ ಮಾಡಿಸುವುದರ ಮೂಲಕ ತಿಳಿದುಕೊಳ್ಳಬಹುದು.

2. ಸಮತೋಲಿತ ಡಯಟ್‍ನಿಂದ ಆರಂಭಿಸಿ

2. ಸಮತೋಲಿತ ಡಯಟ್‍ನಿಂದ ಆರಂಭಿಸಿ

ಆಹಾರ ಕ್ರಮವು ನಿಮ್ಮ ಸ್ಟ್ಯಾಮಿನದ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ನಿಮ್ಮ ಆಹಾರ ಕ್ರಮದ ಬಗ್ಗೆ ನಿಗಾವಹಿಸಿ. ಕಡಿಮೆ ಕೊಬ್ಬಿನ ಉತ್ಪನ್ನಗಳು, ಯಥೇಚ್ಛವಾದ ಹಣ್ಣು ಮತ್ತು ತರಕಾರಿಗಳು ಹಾಗು ಎಳೆ ಮಾಂಸದ ಸೇವನೆಯಿಂದ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದರಿಂದ ನಿಮ್ಮ ದೈಹಿಕ ಮತ್ತು ಮಾನಸಿಕ ಸ್ಟ್ಯಾಮಿನವನ್ನು ಹೆಚ್ಚಿಸಿಕೊಳ್ಳಬಹುದು.

3. ನಿಮ್ಮ ಅಚ್ಚು ಮೆಚ್ಚಿನ ಆಟದಲ್ಲಿ ಪಾಲ್ಗೋಳ್ಳಿ

3. ನಿಮ್ಮ ಅಚ್ಚು ಮೆಚ್ಚಿನ ಆಟದಲ್ಲಿ ಪಾಲ್ಗೋಳ್ಳಿ

ಸುಸ್ತು ಮತ್ತಿತರ ಸಮಸ್ಯೆಗಳಿಂದ ಹೊರಬಂದು ನಿಮ್ಮ ಸ್ಟ್ಯಾಮಿನದ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಯಾವುದಾದರು ಒಂದು ಹೊರಾಂಗಣ ಆಟದಲ್ಲಿ ಪಾಲ್ಗೋಳ್ಳಿ. ಇದು ಒಂದು ರೀತಿ ಏರೋಬಿಕ್ ವ್ಯಾಯಾಮದಂತೆ ನಿಮ್ಮ ಅನುಕೂಲಕ್ಕೆ ಬರುತ್ತದೆ. ಫುಟ್‍ಬಾಲ್, ಬ್ಯಾಸ್ಕೆಟ್‍ಬಾಲ್ ಮತ್ತು ಇನ್ನಿತರ ಓಡುವ ಆಟಗಳು ನಿಮ್ಮ ಹೃದಯವನ್ನು ಸದೃಢಗೊಳಿಸುತ್ತದೆ. ಇದರಿಂದಾಗಿ ನಿಮ್ಮ ದೇಹದ ಎಲ್ಲಾ ಅಂಗಗಳಿಗೂ ಪರಿಶುದ್ಧವಾದ ಆಮ್ಲಜನಕದ ಪೂರೈಕೆಯಾಗುತ್ತದೆ.

4. ನಿಧಾನವಾಗಿ ಪ್ರಾರಂಭಿಸಿ

4. ನಿಧಾನವಾಗಿ ಪ್ರಾರಂಭಿಸಿ

ನಿಮ್ಮ ಸ್ಟ್ಯಾಮಿನವನ್ನು ಹೆಚ್ಚಿಸಲು ಬಯಸಿದಾದಲ್ಲಿ, ಒಮ್ಮೆಗೆ ಪ್ರಾರಂಭಿಸಬೇಡಿ. ನಿಧಾನವಾಗಿ ಆರಂಭಿಸಿ, ಆದರೆ ನಿರಂತರವಾಗಿ ಪ್ರಯತ್ನಿಸಿ. ಓಡುವ ಅಥವಾ ನಡೆಯುವ ಅಭ್ಯಾಸವನ್ನು ಪ್ರಾರಂಭಿಸಿದರೆ ಒಮ್ಮೆಗೆ ಹೆಚ್ಚು ದೂರ ನಡೆಯುವುದು ಅಥವಾ ಓಡುವುದು ಬೇಡ. ಬದಲಿಗೆ ಕಡಿಮೆ ದೂರದಿಂದ ಆರಂಭಿಸಿ, ನಂತರ ದೂರವನ್ನು ಹೆಚ್ಚುಗೊಳಿಸಿಕೊಳ್ಳುತ್ತ ಬನ್ನಿ. ಇದನ್ನು ನಿಮ್ಮ ಸ್ಟ್ಯಾಮಿನ ಅಭಿವೃದ್ಧಿಯಾಗುವವರೆಗು ಯಾವುದೇ ಕಾರಣಕ್ಕು ಬಿಡದೆ ನಿರಂತರವಾಗಿ ಪ್ರಯತ್ನಿಸಿ.

5. ಕಾರ್ಡಿಯೋ ವ್ಯಾಸ್ಕುಲರ್ ವ್ಯಾಯಾಮವನ್ನು ಮಾಡಿ

5. ಕಾರ್ಡಿಯೋ ವ್ಯಾಸ್ಕುಲರ್ ವ್ಯಾಯಾಮವನ್ನು ಮಾಡಿ

ನಿಮ್ಮ ಸ್ಟ್ಯಾಮಿನವನ್ನು ಅಭಿವೃದ್ಧಿಪಡಿಸಿಕೊಳ್ಳಲು ಇರುವ ಅತ್ಯುತ್ತಮ ಮಾರ್ಗ ಕಾರ್ಡಿಯೋ ವ್ಯಾಸ್ಕುಲರ್ ವ್ಯಾಯಾಮ ಮಾಡುವುದು. ಈ ವ್ಯಾಯಾಮ ಮಾಡಲು ನಿಮ್ಮ ದಿನದಲ್ಲಿ ಸ್ವಲ್ಪ ಸಮಯವನ್ನು ಮೀಸಲಿಡುವುದು ಉತ್ತಮ. ಈ ವ್ಯಾಯಾಮದಲ್ಲಿ ಈಜುವುದು, ಓಡುವುದು ಮತ್ತು ನೆಗೆಯುವ ಮುಂತಾದ ಚಟುವಟಿಕೆಗಳು ಇರುತ್ತವೆ.

6. ನಿಮ್ಮ ’ಬಿಡುವಿನ

6. ನಿಮ್ಮ ’ಬಿಡುವಿನ" ದಿನಗಳನ್ನು ಕಡಿಮೆ ಮಾಡಿ

ನಿಮಗೆ ಸ್ಟ್ಯಾಮಿನ ಬೇಕಾಗಿದ್ದಲ್ಲಿ, ಮೊದಲು ಸೋಮಾರಿಯಂತೆ ವಿಶ್ರಾಂತಿ ತೆಗೆದುಕೊಳ್ಳುವ ನೆಪಗಳನ್ನು ಬಿಡಿ. ಸುಮ್ಮನೆ ರಜೆ ಎಂದು ಮಲಗಿ ಕಾಲ ಕಳೆಯಬೇಡಿ. ಅದರ ಬದಲಿಗೆ ಚಟುವಟಿಕೆಯಿಂದ ಇರುವ ಯಾವುದಾದರು ಒಂದು ಕೆಲಸ ಮಾಡಿ. ಆದರೆ ನಿಮಗೆ ಬಳಲಿಕೆಯಾಗಿದ್ದರೆ, ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳುವುದು ಒಳ್ಳೆಯದು.

7. ಕಡಿಮೆ ಕಡಿಮೆ ತಿನ್ನಿ

7. ಕಡಿಮೆ ಕಡಿಮೆ ತಿನ್ನಿ

ನಿಮ್ಮ ದೇಹಕ್ಕೆ ಬೇಕಾದ ಆಹಾರವನ್ನೆಲ್ಲ ಒಮ್ಮೆಗೆ ನೀಡುವುದರಿಂದ ಜೀರ್ಣಾಂಗಗಳ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ. ಇದರಿಂದ ನಿಮ್ಮ ಸ್ಟ್ಯಾಮಿನವು ಕುಂಠಿತಗೊಳ್ಳುತ್ತದೆ. ಅದಕ್ಕಾಗಿ ಆಗಾಗ್ಗೆ ಸ್ವಲ್ಪ ಸ್ವಲ್ಪ ಆಹಾರ ಸೇವಿಸಿ. ಇದರಿಂದ ಜಡತ್ವ ತೊಲಗುತ್ತದೆ, ಆಯಾಸವು ಆಗುವುದಿಲ್ಲ.

8. ನಿಮ್ಮ ದೇಹದಲ್ಲಿನ ನೀರಿನಂಶವನ್ನು ಅಧಿಕಗೊಳಿಸಿ

8. ನಿಮ್ಮ ದೇಹದಲ್ಲಿನ ನೀರಿನಂಶವನ್ನು ಅಧಿಕಗೊಳಿಸಿ

ಸುಸ್ತು ಮತ್ತು ನಿರ್ಜಲೀಕರಣವನ್ನು ಕಡಿಮೆ ಮಾಡಬೇಕೆಂದರೆ ಮೊದಲು ಹೆಚ್ಚು ಹೆಚ್ಚು ನೀರನ್ನು ಸೇವಿಸಿ. ಒಂದು ವೇಳೆ ನಿಮ್ಮ ದೇಹದಲ್ಲಿ ನೀರಿನಂಶ ಕಡಿಮೆಯಾದರೆ, ಅದು ನಿಮ್ಮ ರಕ್ತವನ್ನು ಹೆಪ್ಪುಗಟ್ಟಿಸುತ್ತದೆ. ಇದರಿಂದ ನಿಮ್ಮ ದೇಹದ ಜೀವಕೋಶಗಳಿಗೆ ಆಮ್ಲಜನಕದ ಕೊರತೆ ಕಾಡುತ್ತದೆ.

9. ನಿಮ್ಮ ಸೋಡಿಯಂ ಮಟ್ಟವನ್ನು ಕಾಪಾಡಿಕೊಳ್ಳಿ

9. ನಿಮ್ಮ ಸೋಡಿಯಂ ಮಟ್ಟವನ್ನು ಕಾಪಾಡಿಕೊಳ್ಳಿ

ಬಿಸಿಲಿನಲ್ಲಿ ದಿನ ಪೂರ್ತಿ ದಣಿಯುವಂತಹ ಕೆಲಸಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡಿದ್ದರೆ, ನಿಮಗೆ ಹೆಚ್ಚು ಬೆವರು ಬರುತ್ತದೆ.ಇದರ ಪರಿಣಾಮವಾಗಿ ನಿಮ್ಮ ದೇಹದಲ್ಲಿನ ಉಪ್ಪಿನ ಪ್ರಮಾಣ ಕುಸಿಯುತ್ತದೆ. ಹೀಗೆ ನಿಮ್ಮ ದೇಹದಲ್ಲಿ ಉಪ್ಪಿನ ಕೊರತೆಯಿಂದಾಗಿ ಎಲೆಕ್ಟ್ರೋಲೈಟ್ ಅಸಮತೋಲನವುಂಟಾಗುತ್ತದೆ. ಇದು ಮುಂದೆ ನಿಮ್ಮಲ್ಲಿ ತಲೆ ಸುತ್ತು ಮತ್ತು ಅಲಸಿತನವನ್ನು ಉಂಟು ಮಾಡುವುದಲ್ಲದೆ, ಸ್ಟ್ಯಾಮಿನವನ್ನು ಸಹ ಕಸಿದುಕೊಳ್ಳುತ್ತದೆ. ಇದನ್ನು ನಿಯಂತ್ರಿಸಲು ನಿಮ್ಮ ದೇಹಕ್ಕೆ ಅಗತ್ಯವಾದ ಸೋಡಿಯಂ ಅನ್ನು ಆಗಾಗ್ಗೆ ಸೇವಿಸುತ್ತಿರಿ. ಇದರಿಂದ ಮುಂದೆ ಆಗುವ ಅನಾಹುತವನ್ನು ತಡೆಗಟ್ಟಿ.

10. ಕಾರ್ಬೋಹೈಡ್ರೇಟ್ಸ್ ಆಯ್ಕೆ ಮಾಡಿಕೊಳ್ಳಿ

10. ಕಾರ್ಬೋಹೈಡ್ರೇಟ್ಸ್ ಆಯ್ಕೆ ಮಾಡಿಕೊಳ್ಳಿ

ನಿಮ್ಮ ಆಹಾರದಲ್ಲಿ ಯಥೇಚ್ಛವಾಗಿ ಕಾರ್ಬೋಹೈಡ್ರೇಟ್ಸ್ ಇರುವಂತೆ ನೋಡಿಕೊಳ್ಳಿ. ಇದರಿಂದ ನಿಮ್ಮ ದೇಹಕ್ಕೆ ಸ್ಟಾರ್ಚ್ ಮತ್ತು ಸಕ್ಕರೆ ದೊರೆತು ಸ್ನಾಯುಗಳ ಬಲ ಸಂವರ್ಧನೆಗೊಳ್ಳುತ್ತದೆ. ಹಾಗಾಗಿ ಧಾನ್ಯಗಳು, ಬ್ರೆಡ್, ಹಣ್ಣುಗಳು, ತರಕಾರಿಗಳು, ಪಾಸ್ತಾ ಮತ್ತು ಹಾಲಿನಂತಹ ಕಾರ್ಬೋಹೈಡ್ರೇಟ್ಸ್ ಹೆಚ್ಚಾಗಿರುವ ಆಹಾರಗಳನ್ನು ಸೇವಿಸಿ.

11. ನಿಮ್ಮ ಮಿತಿಗಳನ್ನು ಅರಿತುಕೊಳ್ಳಿ

11. ನಿಮ್ಮ ಮಿತಿಗಳನ್ನು ಅರಿತುಕೊಳ್ಳಿ

ಸ್ಟ್ಯಾಮಿನ ಹೆಚ್ಚಿಸಿಕೊಳ್ಳುವ ಸಲುವಾಗಿ ನಿಮ್ಮ ದೇಹಕ್ಕೆ ವಿಪರೀತ ಆಯಾಸವನ್ನು ನೀಡಬೇಡಿ. ಇದರಿಂದ ನಿಮ್ಮ ದೇಹಕ್ಕೆ ಯಾವುದಾದರು ಗಾಯ ಅಥವಾ ಸ್ನಾಯು ಸೆಳೆತಗಳಂತಹ ತೊಂದರೆ ಸಂಭವಿಸಬಹುದು. ಆದಷ್ಟು ನಿಮ್ಮ ಇತಿ- ಮಿತಿ ತಿಳಿದುಕೊಂಡು ಮುಂದಡಿ ಇಡಿ.

12. ದುಶ್ಚಟಗಳಿಂದ ದೂರವಿರಿ

12. ದುಶ್ಚಟಗಳಿಂದ ದೂರವಿರಿ

ನಮಗೆ ಒಳ್ಳೆಯ ಮತ್ತು ಕೆಟ್ಟ ಚಟಗಳು ಯಾವುವು ಎಂದು ತಿಳಿದಿರುತ್ತದೆ. ಅದರಲ್ಲಿ ಧೂಮಪಾನ, ಅಧಿಕ ಮಧ್ಯಪಾನ, ಕುರುಕಲು ತಿಂಡಿಗಳನ್ನು ತಿನ್ನುವ ಚಟ ಇತ್ಯಾದಿಗಳು ನಿಮಗಿದ್ದಲ್ಲಿ ಅವುಗಳನ್ನು ತೊರೆಯುವ ಪ್ರಯತ್ನ ಮಾಡಿ. ಈ ದುಶ್ಚಟಗಳಿಂದ ದೂರವಾದಲ್ಲಿ ನಿಮಗೆ ಆರೋಗ್ಯದ ಜೊತೆಗೆ ಸ್ಟ್ಯಾಮಿನ ಸಹ ದೊರೆಯುತ್ತದೆ.

13. ದಾಖಲೆಯನ್ನು ಇಡಿ

13. ದಾಖಲೆಯನ್ನು ಇಡಿ

ನೀವು ಸ್ಟ್ಯಾಮಿನವನ್ನು ಹೆಚ್ಚಿಸಿಕೊಳ್ಳಲು ಬಯಸಿದ್ದಲ್ಲಿ, ನಿಮ್ಮ ಪ್ರಗತಿಯ ಕುರಿತಾಗಿ ಒಂದು ದಾಖಲೆಯನ್ನು ಇಡಿ. ಇದರಿಂದ ನಿಮ್ಮ ಬೆಳವಣಿಗೆ ತಿಳಿಯುವುದರ ಜೊತೆಗೆ ಲೋಪ ದೋಷಗಳ ಪರಿಶೀಲನೆಗು ಸಹ ಉಪಯೋಗವಾಗುತ್ತದೆ.

14. ಕಾರ್ಡಿನಲ್ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸಿ

14. ಕಾರ್ಡಿನಲ್ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸಿ

ಯಾವುದೇ ವ್ಯಾಯಾಮ ಪ್ರಾರಂಭಿಸುವ ಮೊದಲು ಲಘು ಶಿಥಲೀಕರಣ ವ್ಯಾಯಾಮಗಳನ್ನು ( ವಾರ್ಮ್ ಅಪ್) ಮಾಡುವುದನ್ನು ಮರೆಯಬೇಡಿ. ಇದರಿಂದ ನಿಮ್ಮ ದೇಹಕ್ಕೆ ಅಗತ್ಯವಾದ ತಂಪು ದೊರೆಯುತ್ತದೆ. ಜೊತೆಗೆ ಯಾವುದೇ ಗಾಯಗಳು ಮತ್ತು ಸ್ನಾಯು ಸೆಳೆತ ಉಂಟಾಗದಂತೆ ಇದು ಕಾಪಾಡುತ್ತದೆ.

15. ವೇಯ್ಟ್ ಟ್ರೈನಿಂಗ್ ಅನ್ನು ಆರಂಭಿಸಿ

15. ವೇಯ್ಟ್ ಟ್ರೈನಿಂಗ್ ಅನ್ನು ಆರಂಭಿಸಿ

ವೇಯ್ಟ್ ಟ್ರೈನಿಂಗ್ ಸ್ಟ್ಯಾಮಿನವನ್ನು ಅಭಿವೃದ್ಧಿ ಮಾಡಲು ಹೇಳಿ ಮಾಡಿಸಿದ ವ್ಯಾಯಾಮವಾಗಿದೆ. ಮೊದಲು ಕಡಿಮೆ ತೂಕದಿಂದ ಆರಂಭಿಸಿ, ಹೆಚ್ಚು ತೂಕದ ಕಡೆಗೆ ಸಾಗಿ. ಆದಷ್ಟು ಈ ವ್ಯಾಯಾಮವನ್ನು ಆರಂಭಿಸಿದ ಎರಡು ವಾರಗಳ ನಂತರ ತೂಕವನ್ನು ಹೆಚ್ಚಿಸಿ. ಇದರಿಂದ ನಿಮ್ಮ ಸ್ನಾಯುಗಳಿಗೆ ಬಲ ಬರುವುದಷ್ಟೇ ಅಲ್ಲದೆ, ನಿಮ್ಮ ಸ್ಟ್ಯಾಮಿನವು ಹೆಚ್ಚಾಗುತ್ತದೆ.

16. ವಿಶ್ರಾಂತಿಯು ಪ್ರಧಾನ ಎಂಬುದನ್ನು ಮರೆಯಬೇಡಿ

16. ವಿಶ್ರಾಂತಿಯು ಪ್ರಧಾನ ಎಂಬುದನ್ನು ಮರೆಯಬೇಡಿ

ನಿಮ್ಮ ಸ್ಟ್ಯಾಮಿನವನ್ನು ಹೆಚ್ಚಿಸಿಕೊಳ್ಳಲು ವ್ಯಾಯಾಮದಷ್ಟೇ, ವಿಶ್ರಾಂತಿಯು ಸಹ ಮುಖ್ಯ ಎಂಬುದನ್ನು ಮರೆಯಬೇಡಿ. ಹಾಗಾಗಿ ಒಂದು ದಿನ ನಿಮ್ಮ ಎಲ್ಲಾ ತರಬೇತಿಗಳಿಂದ ನಿಮ್ಮ ದೇಹಕ್ಕೆ ಬಿಡುವು ನೀಡುವುದನ್ನು ಮರೆಯಬೇಡಿ.

17. ಆರೋಗ್ಯಕರವಾದ ತೂಕವನ್ನು ಕಾಪಾಡಿಕೊಳ್ಳಿ

17. ಆರೋಗ್ಯಕರವಾದ ತೂಕವನ್ನು ಕಾಪಾಡಿಕೊಳ್ಳಿ

ನಿಮ್ಮ ಎತ್ತರಕ್ಕೆ ತಕ್ಕಂತೆ, ತೂಕವಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಆದಷ್ಟು ಆರೋಗ್ಯಕರವಾದ ತೂಕವನ್ನು ಕಾಪಾಡಿಕೊಳ್ಳಿ. ತೂಕ ಹೆಚ್ಚಾದರೆ ಆಯಾಸ ಹೆಚ್ಚಾಗುತ್ತದೆ.

18. ಆದಷ್ಟು ಆರೋಗ್ಯಕಾರಿ ಉಪಾಹಾರವನ್ನು ಸೇವಿಸಿ

18. ಆದಷ್ಟು ಆರೋಗ್ಯಕಾರಿ ಉಪಾಹಾರವನ್ನು ಸೇವಿಸಿ

ನಿಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಹೊಂದಿರುವ ಆರೋಗ್ಯಕಾರಿ ಉಪಾಹಾರವನ್ನು ಸೇವಿಸಿ. ಅದು ಓಟ್ಸ್ ಆಗಿರಬಹುದು ಅಥವಾ ವೋಲ್ ವೀಟ್ ಟೋಸ್ಟ್ ಇರಬಹುದು. ಆದಷ್ಟು ಮ್ಯೆಗ್ನಿಶಿಯಂ, ಮ್ಯಾಂಗನೀಸ್, ಕ್ರೋಮಿಯಂ ಮತ್ತು ತಾಮ್ರಗಳು ಹೆಚ್ಚಾಗಿರುವ ಉಪಾಹಾರವನ್ನು ಸೇವಿಸಿ.

19. ಆರೋಗ್ಯಕರ ಕೊಬ್ಬನ್ನು ಸೇವಿಸಿ

19. ಆರೋಗ್ಯಕರ ಕೊಬ್ಬನ್ನು ಸೇವಿಸಿ

ಮೊದಲು ನೀವು ಒಳ್ಳೆಯ ಮತ್ತು ಕೆಟ್ಟ ಕೊಬ್ಬಿನ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳಬೇಕು. ನಿಮ್ಮ ದೇಹಕ್ಕೆ ಆರೋಗ್ಯಕಾರಿ ಕೊಬ್ಬು ಅವಶ್ಯಕತೆ ಇದೆಯೆಂಬುದನ್ನು ಮರೆಯಬೇಡಿ. ಫ್ಲಾಕ್ಸ್ ಬೀಜಗಳು,ಮೀನಿನೆಣ್ಣೆಯನ್ನು ನಿಮ್ಮ ಆಹಾರದಲ್ಲಿ ಸೇರಿಸಲು ಮರೆಯಬೇಡಿ. ಇವುಗಳು ಜೀವಕೋಶಗಳ ಕಾರ್ಯ ವೈಖರಿ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತವೆ. ಜೊತೆಗೆ ನಿಮ್ಮ ಸ್ಟ್ಯಾಮಿನವನ್ನು ಹೆಚ್ಚಿಸುತ್ತವೆ.

20. ಅಗತ್ಯ ಪ್ರಮಾಣದ ಪ್ರೊಟೀನ್ ಸೇವಿಸಿ

20. ಅಗತ್ಯ ಪ್ರಮಾಣದ ಪ್ರೊಟೀನ್ ಸೇವಿಸಿ

ನಿಮ್ಮ ದೇಹಕ್ಕೆ ಅಗತ್ಯವಿರುವಷ್ಟು ಪ್ರಮಾಣದ ಪ್ರೋಟಿನ್ ಸೇವಿಸುವುದನ್ನು ಮರೆಯಬೇಡಿ. ಅಮೈನೊ ಆಮ್ಲಗಳು ನಮ್ಮ ದೇಹ ಸುಸ್ಥಿತಿಯಲ್ಲಿ ಕೆಲಸ ಮಾಡಲು ಅತ್ಯಗತ್ಯ. ಮೊಟ್ಟೆಯ ಬಿಳಿ ಭಾಗ, ಕಡಿಮೆ ಕೊಬ್ಬಿನಂಶವಿರುವ ಹಾಲು ಮತ್ತು ಹೈನು ಉತ್ಪನ್ನಗಳು, ಮೀನು ಮತ್ತು ಕೋಳಿ ಮಾಂಸಗಳನ್ನು ನಿಮ್ಮ ಆಹಾರದಲ್ಲಿ ಸೇವಿಸುವುದನ್ನು ಮರೆಯಬೇಡಿ.

English summary

Top 20 tips to increase stamina

Stamina not only means having strength and energy to endure an activity for an extended period but also helps fight illness and stressful situations. Want to increase your stamina? Then, Try these stamina-boosting tips
X
Desktop Bottom Promotion