For Quick Alerts
ALLOW NOTIFICATIONS  
For Daily Alerts

ತೂಕ ಇಳಿಕೆಯಲ್ಲಿ ಸಹಾಯ ಮಾಡುವ ಹರ್ಬ್ಸ್

By Super
|

ಸ್ಥೂಲಕಾಯ ಅನ್ನುವುದು ಭಾರತದಲ್ಲಿ ಅದರಲ್ಲೂ ಮಹಿಳೆಯರಲ್ಲಿ ತುಂಬಾ ಸಾಮಾನ್ಯವಾಗಿಬಿಟ್ಟಿದೆ. ಅದರಿಂದ ಮುಕ್ತಿ ಪಡೆಯಲು ಹಲವಾರು ರೀತಿಯ ಕಸರತ್ತುಗಳನ್ನೂ ನಾವು ಮಾಡುತ್ತಿರುತ್ತೇವೆ. ಗ್ರಾಹಕರ ಅಗತ್ಯ ಹಾಗು ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡ ನೂರಾರು ಕಂಪನಿಗಳು ಬೊಜ್ಜು,ಸ್ಥೂಲಕಾಯಗಳನ್ನು ಹೋಗಲಾಡಿಸುವಂಥಹ ಅನೇಕ ಉತ್ಪನ್ನಗಳನ್ನು ಮಾರುಕಟ್ಟೆಗೆ ಇಟ್ಟಿವೆ. ಆದರೆ ಇವೆಲ್ಲವುಗಳಿಂದ ಪರಿಣಾಮಕ್ಕಿಂತ ದುಷ್ಪರಿಣಾಮಗಳೇ ಹೆಚ್ಚೆಂಬುದು ಇದನ್ನು ಪ್ರಯೋಗಿಸಿದ ಮಹಿಳೆಯರ ಅನುಭವದ ಮಾತು. ಆದ್ದರಿಂದಲೇ ಅವರು ಹರ್ಬಲ ಪ್ರಾಡಕ್ಟ್ ಸಸ್ಯಾಧಾರಿತ ಉತ್ಪನ್ನಗಳು) ಗಳತ್ತ ವಾಲುತ್ತಿದ್ದಾರೆ.

ಆದರೆ ಎಷ್ಟೇ ಸಸ್ಯಾಧಾರಿತವೆಂದರೂ ಅವು ನೈಸರ್ಗಿಕ ಪದಾರ್ಥಗಳಾಗಲಾರವು. ಭಾರತದ ನೆಲದಲ್ಲಿ ಔಷಧಿ ಸಸ್ಯಗಳಿಗೆ ಕೊರತೆ ಇಲ್ಲ. ಕರಿ ಮೆಣಸು ಕಾಳಿನಿಂದ ಹಿಡಿದು ಅರಿಶಿಣದವರೆಗೆ ಇಲ್ಲಿ ಎಲ್ಲವೂ ಸಿಗುತ್ತವೆ. ಇಂತಹ ಮಸಾಲೆಸಸ್ಯಗಳಿಂದ ಭಾರತೀಯ ಖಾದ್ಯಗಳಿಗೆ ಅದ್ಭುತ ಸುವಾಸನೆ ದೊರೆಯುವುದಲ್ಲದೇ, ಒಳ್ಳೆಯ ಆರೋಗ್ಯವೂ ಲಭಿಸುವುದು. ಈ ಮಸಾಲೆ ಸಸ್ಯಗಳಲ್ಲಿ ಜೀರ್ಣಕ್ರಿಯೆಯನ್ನು ಉತ್ತಮ ಪಡಿಸುವ ಸಾಮರ್ಥ್ಯವಿದ್ದು, ರುಚಿವತ್ತಾದ ಊಟದ ತೃಪ್ತಿಯನ್ನು ಇವು ನೀಡುತ್ತವೆ. ಈ ಮಸಾಲೆಗಳು ನಮ್ಮ ಪತ್ಯಕ್ಕೆ ಪುಷ್ಟಿನೀಡುತ್ತವೆ ಹಾಗೂ ಈ ಮೂಲಕ ನಮ್ಮ ತೂಕ ಹಾಗು ಮೈಕಟ್ಟಿನ ನಿರ್ವಹಣೆಯಲ್ಲೂ ಸಹಕಾರಿಯಾಗಿವೆ.

ಹಾಗಾದರೆ ತಡವೇಕೆ, ಈಗಿಂದಲೇ ನಿಮ್ಮ ದೈನಂದಿನ ಅಡಿಗೆಯಲ್ಲಿ ಇವುಗಳನ್ನು ಬಳಸಿ ನಿಮ್ಮ ತೂಕವನ್ನು ರಿ-ನ್ಯೂ ಮಾಡಿಕೊಳ್ಳಿ.

1: ದಾಲ್ಚಿನ್ನಿ

1: ದಾಲ್ಚಿನ್ನಿ

ದಾಲ್ಚಿನ್ನಿಯು ತೂಕತಗ್ಗಿಸುವಲ್ಲಿ ಸಹಕರಿಸುವ ಮಸಾಲೆಗಳಲ್ಲಿ ಮುಖ್ಯವಾದುದು. ಇದು ನಮ್ಮ ರಕ್ತದಲ್ಲಿನ ಸಕ್ಕರೆ ಅಂಶವನ್ನು ದೃಡವಾಗಿಡುವದಲ್ಲದೇ, ಹಸಿವಿನ ಪ್ರಮಾಣವನ್ನು ತಗ್ಗಿಸಿ ಬಹಳ ಕಾಲದವರೆಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡಬಲ್ಲದು. ಮೆಟಬೊಲಿಸಮ್ ಅನ್ನು ಚುರುಕುಗೊಳಿಸಿ ಬೊಜ್ಜನ್ನು ಶೀಘ್ರಗತಿಯಲ್ಲಿ ಕರಗಿಸಲು ಸಹಾಯಕಾರಿಯಾಗಬಲ್ಲದು.

2: ಶುಂಠಿ

2: ಶುಂಠಿ

ಒಳದೇಹವನ್ನು ಶುದ್ಧೀಕರಿಸುವ ಅತ್ಯುತ್ತಮ ಪದಾರ್ಥ ಶುಂಠಿ. ಜಠರದಲ್ಲಿನ ಆಹಾರದ ತುಣುಕುಗಳನ್ನು ತೆಗೆಯುವಲ್ಲಿ ಹಾಗು ಬೊಜ್ಜು ಸಂಗ್ರಹಗಳನ್ನು ನಿಯಂತ್ರಿಸಿ ತೂಕವನ್ನು ನಿರ್ವಹಿಸುವಲ್ಲಿ ಶುಂಠಿ ಬಹು ಸಹಾಯಕಾರಿ.

3: ಏಲಕ್ಕಿ

3: ಏಲಕ್ಕಿ

ಎಲಕ್ಕಿಯು ನಿಮ್ಮ ಚಯಾಪಚಯ ( ಮೆಟಾಬೊಲಿಸಮ್)ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಅಲ್ಲದೆ ಬೊಜ್ಜನ್ನು ಕರಗಿಸುವಲ್ಲಿ ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

4: ಅರಿಶಿಣ

4: ಅರಿಶಿಣ

ಹಳದಿ ಮಿಶ್ರಿತ ಕೇಸರಿ ಬಣ್ಣದ ಈ ಮಸಾಲೆಯಲ್ಲಿ ಅನೇಕ ತೂಕ ಇಳಿಸುವ ಗುಣಗಳಿವೆ. ಸ್ಥೂಲದ ಕೋಶಗಳನ್ನು ಕಡಿಮೆ ಮಾಡುವುದರಿಂದ ದೇಹದ ತೂಕವನ್ನು ನಿಯಂತ್ರಿಸುವಲ್ಲಿ ಅರಿಶಿಣ ಸಹಾಯಕಾರಿ.

5: ಅಕೈಬೆರ್ರಿ

5: ಅಕೈಬೆರ್ರಿ

ಅಕೈಬೆರಿಯ ರಸ ಅಥವಾ ಒಣಗಿದ ಬೆರಿಯ ಪುಡಿಯು ತೂಕ ತಗ್ಗಿಸಿಕೊಳ್ಳುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ. ಈ ಬೆರ್ರಿಗಳು ದೇಹದಲ್ಲಿ ಬೊಜ್ಜು ನಿರ್ಮಾಣವಾಗುವುದನ್ನು ತಪ್ಪಿಸುತ್ತವೆ. ಇವುಗಳಲ್ಲಿ ಅಗಾಧವಾದ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿವೆ.

6: ನೆತ್ತೆಲ್ ಎಲೆಗಳು(Nettle leaf)

6: ನೆತ್ತೆಲ್ ಎಲೆಗಳು(Nettle leaf)

ಈ ಎಲೆಯಲ್ಲಿ ಅತಿ ಹೆಚ್ಚು ಪೌಷ್ಟಿಕಾಂಶಗಳಿದ್ದು, ಉತ್ಕರ್ಷಣ ನಿರೋಧಕ ಜೀವಸತ್ವಗಳಾದ ಸಿ ಮತ್ತು ಎ ಜೀವಸತ್ವಗಳಿಂದ ತುಂಬಿವೆ. ಇವು ರಕ್ತವನ್ನು ಶುದ್ಧೀಕರಿಸುವದಲ್ಲದೇ ದೇಹದಲ್ಲಿನ ಕೊಬ್ಬನ್ನು ಕರಗಿಸುವಲ್ಲಿ ನೆರವು ಮಾಡುತ್ತವೆ.

7: ಗ್ವಾರಾನಾ(Guarana)

7: ಗ್ವಾರಾನಾ(Guarana)

ಗ್ವಾರಾನಾ ಮೂತ್ರವರ್ಧಕ ಗುಣಲಕ್ಷಣಗಳನ್ನು ಹೊಂದಿದೆ. ಇದು ತೂಕ ಕಳೆದುಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ನರ ವ್ಯವಸ್ಥೆಯನ್ನು ಉತ್ತೇಜಿಸುವ ಕಾರ್ಯ ಮಾಡುವ ಮೂಲಕ ಭಾವನಾತ್ಮಕ ಏರಿಳಿತಗಳಿಂದಾಗಿ( ಒತ್ತಡ ಅಥವಾ ಖಿನ್ನತೆಗೊಳಗಾದಾಗ ) ಅತಿಯಾಗಿ ತಿನ್ನುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ.

8: ಪೆಪ್ಪರ್ (Cayenne pepper)

8: ಪೆಪ್ಪರ್ (Cayenne pepper)

ಈ ಮಸಾಲೆಯು ಕ್ಯಾಪ್ಸೈಸಿನ್(capsaicin) ಎಂಬ ಸಂಯುಕ್ತ ಪದಾರ್ಥವನ್ನು ಒಳಗೊಂಡಿದ್ದು, ಇದು ಹಸಿವನ್ನು ನಿಯಂತ್ರಿಸುವುದರ ಮೂಲಕ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ. ಕೇನ್ ಮೆಣಸಿನ ಪುಡಿಯು ನಮ್ಮ ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸುವ ಮೂಲಕ ದೇಹವು ಹೆಚ್ಚಿನ ಕ್ಯಾಲೋರಿಗಳನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

9: ಜೀರಿಗೆ

9: ಜೀರಿಗೆ

ಜೀರಿಗೆ ನಿಮ್ಮ ಪಚನ ಪ್ರಕ್ರಿಯೆಯನ್ನು ಉತ್ತಮ ಗೊಳಿಸಿ, ನಿಮ್ಮಲ್ಲಿಯ ಶಕ್ತಿ ಉತ್ಪಾದನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅಲ್ಲದೆ ಇದು ನಿಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯಕಾರಿ.

10: ಗಿನ್ಸೆಂಗ್ (Ginseng)

10: ಗಿನ್ಸೆಂಗ್ (Ginseng)

ಗಿನ್ಸೆಂಗ್ ನಮ್ಮ ಚಯಾಪಚಯ ವೇಗವನ್ನು ಹೆಚ್ಚಿಸಿ, ಶಕ್ತಿ ಬಿಡುಗಡೆಯ ಮಟ್ಟವನ್ನು ಉತ್ತಮಗೊಳಿಸುತ್ತದೆ.

11: ಕರಿಮೆಣಸು

11: ಕರಿಮೆಣಸು

ಪಿಪೆರಿನೆ ಎಂಬ ಸಂಯುಕ್ತವಿರುವ ಈ ಮಸಾಲೆಯನ್ನು ಸಾಮಾನ್ಯವಾಗಿ ನಾವು ಬಳಸುತ್ತೇವೆ. ಅದರಲ್ಲಿನ ಈ ಸಂಯುಕ್ತ ಪದಾರ್ಥವು ನಮ್ಮ ಚಯಾಪಚಯವನ್ನು ಉತ್ತೇಜಿಸುತ್ತದೆ. ಹಾಗೂ ನಿಮ್ಮ ಜೀರ್ಣವ್ಯವಸ್ಥೆಯನ್ನು ಸುಧಾರಿಸುವದಲ್ಲದೆ ವೇಗವಾಗಿ ಕೊಬ್ಬು ಕರಗಿಸುವಲ್ಲಿ ಸಹಾಯ ಮಾಡುತ್ತವೆ.

12: ಡ್ಯಾಂಡೆಲಿಯನ್ ಗಳು(Dandelions)

12: ಡ್ಯಾಂಡೆಲಿಯನ್ ಗಳು(Dandelions)

ಈ ಹೂವು ನಮ್ಮ ದೇಹವನ್ನು ಶುದ್ಧೀಕರಿಸುವಲ್ಲಿ ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಯನ್ನು ನಿಧಾನಗೊಳಿಸುವ ಮೂಲಕ ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವ ಅನುಭವ ನೀಡುತ್ತದೆ. ಇದರಲ್ಲಿ ಉತ್ತಮ ಪೌಷ್ಟಿಕಾಂಶಗಳೂ ಇರುವದರಿಂದ ಈ ಹೂವನ್ನು ತಿನ್ನಲು ಪ್ರಾರಂಭಿಸಿ, ಕೆಲಕಾಲದಲ್ಲೇ ನಿಮ್ಮ ಹಳೆಯ ಜೀನ್ಸ್ ಹಾಕಿಕೊಳ್ಳಬಹುದು.

13: ಅಗಸೆ ಕಾಳು

13: ಅಗಸೆ ಕಾಳು

ಅಗಸೆಯು ಹಸಿವನ್ನು ನಿಗ್ರಹಿಸಿ ಯಾವಾಗಲೂ ಹೊಟ್ಟೆ ತುಂಬಿರುವಂತೆ ನೋಡಿಕೊಳ್ಳುತ್ತದೆ. ಆದ್ದರಿಂದ ನೀಮ್ಮ ಅತಿಯಾದ ಸೇವನೆ ಕಡಿಮೆಯಾಗಿ, ನಿಮ್ಮ ತೂಕವೂ ಕಡಿಮೆಯಾಗುವುದು.

14: ಗೌರ್ ಗಮ್

14: ಗೌರ್ ಗಮ್

ಗೌರ್ ಗಮ್ ಮಧುಮೇಹವನ್ನು ನಿಯಂತ್ರಿಸುತ್ತದೆ. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಿ, ದೀರ್ಘಕಾಲದವರೆಗೆ ಹೊಟ್ಟೆತುಂಬಿದ ಅನುಭವ ನೀಡುತ್ತದೆ.

15: ಗಾರ್ಸಿನಿಯ (Garcinia)

15: ಗಾರ್ಸಿನಿಯ (Garcinia)

ಈ ಹಣ್ಣು ಹಸಿವಿನ ನಿಗ್ರಹವನ್ನು ಉತ್ತೇಜಿಸುತ್ತದೆ ಮತ್ತು ಕೊಬ್ಬಿನ ಉತ್ಪಾದನೆ ಹಾಗು ಸಂಗ್ರಹಣೆಯನ್ನು ಪ್ರತಿಬಂಧಿಸುತ್ತದೆ.

16: ಸಾಸಿವೆ

16: ಸಾಸಿವೆ

ತೂಕ ಇಳಿಸುವವರಿಗೆ ಸಾಸಿವೆ ಅತ್ಯುತ್ತಮ ಸಸ್ಯ. ಇದು ದೇಹದ ಚಯಾಪಚಯ ಕ್ರಿಯೆಯನ್ನು ಚುರುಕು ಗೊಳಿಸುತ್ತದೆ.

17: ತೆಂಗಿನಕಾಯಿ ಎಣ್ಣೆ

17: ತೆಂಗಿನಕಾಯಿ ಎಣ್ಣೆ

ತೆಂಗಿನ ಎಣ್ಣೆಯು ನಿಮ್ಮ ಚಯಾಪಚಯದ ವೇಗ ಹೆಚ್ಚಿಸಲು ನೆರವಾಗುವುದು. ಇದರಿಂದ ಶಕ್ತಿ ಬಿಡುಗಡೆಯಾಗುವ ಮೂಲಕ ತೂಕ ನಷ್ಟವಾಗುವುದು.

18: ಬಡೇ ಸೋಂಪು

18: ಬಡೇ ಸೋಂಪು

ಈ ಸಣ್ಣ ಬೀಜಗಳು ಜೀರ್ಣಿಸುವಿಕೆಗೆ ಸಹಾಯ ಮಾಡುತ್ತವೆ ಮತ್ತು ಇದರಿಂದ ನಿಮ್ಮ ಹಸಿವನ್ನು ನಿಯಂತ್ರಿಸುತ್ತವೆ. ಜೊತೆಗೆ, ಈ ಬೀಜಗಳು ಯಕೃತ್ತನ್ನು ಶುಚಿಯಾಗಿಡುವಲ್ಲಿಯೂ ಪ್ರಮುಖಪಾತ್ರವಹಿಸುತ್ತವೆ.

19: ಸೆಲ್ಲಿಯಂ (Psyllium)

19: ಸೆಲ್ಲಿಯಂ (Psyllium)

ಇದು ತೂಕ ಇಳಿಸಲು ಅತ್ಯಂತ ಸುರಕ್ಷಿತ ಮಾರ್ಗ.ಈ ಕಾಳುಗಳು ದೀರ್ಘಕಾಲದವರೆಗೆ ನಿಮ್ಮ ಹೊಟ್ಟೆತುಂಬಿರುವಂತೆ ನೋಡಿಕೊಳ್ಳುವದಲ್ಲದೇ ಸಾಮಾನ್ಯ ಶರ್ಕರಗಳ ಹೀರಿಕೆಯ ಗತಿಯನ್ನು ನಿಧಾನಗೊಳಿಸುತ್ತದೆ.

20: ದಾಸವಾಳದ ಹೂ

20: ದಾಸವಾಳದ ಹೂ

ದಾಸವಾಳದ ಹೂ , ಕೊಬ್ಬಿನೊಂದಿಗೆ ಹೋರಾಡುವಂತಹ ಪದಾರ್ಥಗಳಾದಕ್ರೋಮಿಯಂ,ಆಸ್ಕೋರ್ಬಿಕ್ ಆಮ್ಲ ಮತ್ತು ಹೈಡ್ರೋಕ್ಸಿಸಿಟ್ರಿಕ್ ಆಮ್ಲ (HCA)ಗಳಿಂದ ತುಂಬಿದೆ.

ಮೇಲೆ ಹೇಳಿದ ಎಲ್ಲಾ ಪದಾರ್ಥಗಳೂ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಹೆಚ್ಚಿನವು ನಿಮ್ಮ ಅಡುಗೆಮನೆಯಲ್ಲೇ ಸಿಗುತ್ತವೆ. ನಮ್ಮಲ್ಲಿ ಸಿಗುವ ಉತ್ಪನ್ನಗಳ ಸದ್ಭಳಕೆ ಮಾಡಿಕೊಂಡು ನಾವೂ ಲತಾಂಗಿಯರಾಗೋಣ.

English summary

Top 20 herbs for weight loss

Research has also shown that herbs and spices have the potential to boost metabolism, promote satiety (read: contentment), aid weight management and improve the overall quality of a diet. So spruce up your daily cooking with a dash of spice and attain your desired weight loss. 
Story first published: Monday, August 19, 2013, 11:50 [IST]
X
Desktop Bottom Promotion