For Quick Alerts
ALLOW NOTIFICATIONS  
For Daily Alerts

ತುಂಬಾ ತೆಳ್ಳಗಿನ ಮೈ ಕಟ್ಟು ಕೂಡ ಆಕರ್ಷಕವಲ್ಲ!

By Super
|

ದೇಹದ ತೂಕ ಹೆಚ್ಚಿದ್ದರೆ ಹೇಗೆ ತೊಂದರೆಯೂ ಹಾಗೆಯೇ ಕಡಿಮೆ ತೂಕ ಕೂಡ ಸಮಸ್ಯೆಗೆ ದಾರಿ.ಆದ್ದರಿಂದ ತೂಕವನ್ನು ಸಮಪ್ರಮಾಣದಲ್ಲಿ ಕಾಪಾಡಿಟ್ಟುಕೊಳ್ಳುವುದು ಒಳ್ಳೆಯದು.ಹಣ್ಣುಗಳಲ್ಲಿ ಪ್ರೋಟಿನ್ ಮತ್ತು ವಿಟಮಿನ್ಸ್ ಹೆಚ್ಚಿರುವ ಹಣ್ಣುಗಳು ದಪ್ಪವಾಗಲು ಸಹಾಯ ಮಾಡುತ್ತದೆ. ಹಣ್ಣುಗಳಲ್ಲಿ ಫ್ರಕ್ಟೋಸ್ ಎಂಬ ಸಕ್ಕರೆಯಂಶವಿರುತ್ತದೆ.ಈ ಸಕ್ಕರೆ ಅಂಶ ದೇಹದ ತೂಕ ಹೆಚ್ಚಿಸುವಲ್ಲಿ ಸಹಕಾರಿ.

ದೇಹದ ತೂಕ ಹೆಚ್ಚು ಮಾಡುವ ಹಣ್ಣುಗಳು:

1.ಬಾಳೆಹಣ್ಣು:

1.ಬಾಳೆಹಣ್ಣು:

ಬಾಳೆಹಣ್ಣು ನಲ್ಲಿ ಕ್ಯಾಲೋರಿ ಅಧಿಕವಾಗಿರುವುದರಿಂದ ಪ್ರತೀದಿನ 3-4ಬಾಳೆಹಣ್ಣು ತಿನ್ನುವುದರಿಂದ ದೇಹದ ತೂಕ ಹೆಚ್ಚುತ್ತದೆ.ಬಾಳೆ ಹಣ್ಣಿನ ಜೊತೆ ಒಂದು ಲೋಟ ಹಾಲು ಕುಡಿದರೆ ಇದರ ಪರಿಣಾಮವನ್ನು ಅತಿಬೇಗ ಕಾಣಬಹುದು.

2.ಅವಕಾಡೋ/ಬೆಣ್ಣೆ ಹಣ್ಣು

2.ಅವಕಾಡೋ/ಬೆಣ್ಣೆ ಹಣ್ಣು

ಇದರಲ್ಲಿ ನಾರಿನಂಶ ಹೆಚ್ಚಿರುವುದರಿಂದ ಹೆಚ್ಚು ತಿನ್ನುವುದರಿಂದ ಕ್ಯಾಲೋರಿಯನ್ನು ಹೆಚ್ಚಿಸುತ್ತದೆ.ಬೆಣ್ಣೆ ಹಣ್ಣು ದೇಹದ ತೂಕ ಹೆಚ್ಚಿಸುವಲ್ಲಿ ಸಹಾಯಕವಾಗುತ್ತದೆ.

3.ಮಾವಿನಹಣ್ಣು

3.ಮಾವಿನಹಣ್ಣು

ಮಾವಿನ ಹಣ್ಣು ಹಣ್ಣುಗಳ ರಾಜ.ವರ್ಷದ ಕೆಲವೇ ತಿಂಗಳುಗಳು ದೊರಕುವ ಈ ಹಣ್ಣಿನಲ್ಲಿ ಫೈಬರ್ (ನಾರಿನಂಶ) ಅಧಿಕವಾಗಿದ್ದು.ಇದನ್ನು ಯಥೇಚ್ಛವಾಗಿ ಸೇವಿಸಿದರೆ ಮೈಕೈ ತುಂಬಿಕೊಂಡು ದಪ್ಪವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

4.ಒಣಕರ್ಜೂರ

4.ಒಣಕರ್ಜೂರ

ಕರ್ಜೂರ ದಲ್ಲಿ ಸಿಹಿ ಅಂಶ ಹೇರಳವಾಗಿದ್ದು ಪ್ರತಿದಿನ ಸ್ವಲ್ಪ ಒಣ ಕರ್ಜೂರವನ್ನು ಹಾಲು ಅಥವಾ ನೀರಿನಲ್ಲಿ ನೆನೆಸಿ ಬೆಳಗ್ಗೆ ಮುಂಜಾನೆ ತಿನ್ನುವುದರಿಂದ ದೇಹದ ತೂಕ ಅತಿ ಬೇಗ ಹೆಚ್ಚುತ್ತದೆ.

5.ಒಣ ದ್ರಾಕ್ಷಿ

5.ಒಣ ದ್ರಾಕ್ಷಿ

ಒಣಗಿದ ದ್ರಾಕ್ಷಿ ಹಣ್ಣುಗಳು ಸಿಹಿಯಾಗಿರುತ್ತವೆ ಮತ್ತು ತಿನ್ನಲೂ ಕೂಡ ಸೊಗಸು ಮತ್ತೆ ಮತ್ತೆ ತಿನ್ನಬೇಕೆನಿಸುತ್ತದೆ.ದ್ರಾಕ್ಷಿ ಹಣ್ಣನ್ನು ನೀರಿನಲ್ಲಿ ನೆನೆಸಿ ಇಟ್ಟಾಗ ಚೆನ್ನಾಗಿ ಊದಿಕೊಳ್ಳುತ್ತವೆ.ಹಾಗೆ ಅದನ್ನು ತಿಂದಾಗಲು ಅಷ್ಟೇ ಬೇಗ ಪರಿಣಾಮ ಬೀರುತ್ತದೆ.

6.ಸೇಬುಹಣ್ಣು

6.ಸೇಬುಹಣ್ಣು

ಸೇಬುವಿನಲ್ಲಿ ಸಕ್ಕರೆ ಅಂಶ ಹೆಚ್ಚಿರುವುದರಿಂದ ಪ್ರತಿದಿನ ಒಂದಕ್ಕಿಂತ ಹೆಚ್ಚು ಸೇಬುವನ್ನು ತಿಂದರೆ ಆರೋಗ್ಯಯುತವಾಗಿ ದಪ್ಪವಾಗುತ್ತಾರೆ.

7.ಅಂಜೂರ:

7.ಅಂಜೂರ:

ಅಂಜೂರ ಹಣ್ಣಿನಲ್ಲಿ ಹೆಚ್ಚು ಸಕ್ಕರೆ ಅಂಶ ಹೆಚ್ಚಿದೆ.ಒಣ ಅಂಜೂರವನ್ನು ರಾತ್ರಿ ಹಾಲಿನಲ್ಲಿ ನೆನೆಸಿ ಬೆಳಗ್ಗೆ ತಿಂದರೆ ತೂಕ ಹೆಚ್ಚಿಸುತ್ತದೆ.ಅಂಜೂರದ ಮಿಲ್ಕ್ ಶೇಕ್ ಮಾಡಿ ಕುಡಿದರೂ ಕೂಡ ತೂಕ ಹೆಚ್ಚಿಸಿಕೊಳ್ಳಬಹುದು

8.ಸಪೋಟ

8.ಸಪೋಟ

ಸಪೋಟ ಹಣ್ಣಿನಲ್ಲಿ ಕೂಡ ಸಕ್ಕರೆ ಅಂಶ ಹೆಚ್ಚಿದೆ ಮತ್ತು ಪ್ರತಿದಿನ ಒಂದು ಲೋಟ ಸಪೋಟ ಮಿಲ್ಕ್ ಶೇಕ್ ಕುಡಿದರೆ ದೇಹದ ತೂಕ ದುಪ್ಪಟ್ಟು ಆಗುವುದು ಖಂಡಿತ.

10.ಒಣ ಆಪ್ರಿಕಾಟ್ ಹಣ್ಣು

10.ಒಣ ಆಪ್ರಿಕಾಟ್ ಹಣ್ಣು

ಒಣ ಆಪ್ರಿಕಾಟ್ ಹಣ್ಣಿನಲ್ಲಿ ನಾರಿನಂಶ ಸಕ್ಕರೆ ಅಂಶಗಳು ಹೆಚ್ಚಿರುವುದರಿಂದ ಇದು ದೇಹ ತುಕ ಹೆಚ್ಚಿಸುವಲ್ಲಿ ಸಹಕಾರಿ ಅದರಲ್ಲೂ ಒಣ ಆಪ್ರಿಕಾಟ್ ಅನ್ನು ನೆನೆಸಿ ತಿನ್ನುವುದರಿಂದ ತೂಕ ಹೆಚ್ಚಿಸಿಕೊಳ್ಳಬಹುದು.

10.ಚೆರ್ರಿಹಣ್ಣು

10.ಚೆರ್ರಿಹಣ್ಣು

ಚೆರ್ರಿ ಹಣ್ಣಿನಲ್ಲಿ ಅತಿ ಹೆಚ್ಚು ಸಕ್ಕರೆ ಅಂಶವಿದೆ ಎಂದು ಸಾಬೀತಾಗಿದೆ.ಅತಿಯಾಗಿ ಚೆರ್ರಿ ಹಣ್ಣು ಸೇವಿರುವುದರಿಂದ ಕೂಡ ದೇಹ ತೂಕ ಹೆಚ್ಚುತ್ತದೆ.

11.ಹಲಸಿನಹಣ್ಣು

11.ಹಲಸಿನಹಣ್ಣು

ಹಸಿದಾಗ ಹಲಸು ಎಂಬ ಮಾತಿದೆ ಹಾಗೆ ಹಲಸಿನ ಹಣ್ಣಿನಲ್ಲಿ ನಾರಿನಂಶ ಮತ್ತು ಕ್ಯಾಲೋರಿ ಹೆಚ್ಚು. ಇದು ತೂಕ ಹೆಚ್ಚುವಲ್ಲಿ ಸಹಕಾರಿ.

12. ಕಪ್ಪುದ್ರಾಕ್ಷಿ

12. ಕಪ್ಪುದ್ರಾಕ್ಷಿ

ಕಪ್ಪು ದ್ರಾಕ್ಷಿ ಯಲ್ಲಿ ಅಲ್ಕೋಹಾಲ್ ಗುಣ ಅಧಿಕವಾಗಿದ್ದು ಇದರ ಜ್ಯೂಸ್ ಕುಡಿದರೆ ದೇಹದ ತೂಕ ಬೇಗ ಹೆಚ್ಚುತ್ತದೆ .

13. ಪಿಸ್ತಾ

13. ಪಿಸ್ತಾ

ಪಿಸ್ತಾ ಕೂಡ ಒಂದು ಹಣ್ಣಾಗಿದ್ದು ಇದನ್ನು ಒಣಗಿಸಿ ಡ್ರೈ ಫ್ರೂಟ್ ಆಗಿ ಬಳಸುತ್ತಾರೆ ಇದನ್ನು ಹಾಲಿನಲ್ಲಿ ನೆನೆಸಿ ಸೇವಿಸುವುದರಿಂದ ತೂಕ ಹೆಚ್ಚಿಸಿಕೊಳ್ಳಬಹುದು.

14.ಪೀಚ್

14.ಪೀಚ್

ಪೀಚ್ ಹಣ್ಣಿನಲ್ಲಿ ಕಾರ್ಬೋಹೈಡ್ರೇಟ್ ಮತ್ತು ವಿಟಮಿನ್ ಹೆಚ್ಚು ಇರುವುದರಿಂದ ಉತ್ತಮ ದೇಹ ತೂಕ ನೀಡುವಲ್ಲಿ ಸಹಕಾರಿ.

English summary

Top Fruits For Weight Gain

How over fat is not good for health, being a very slim is not good for health. If your weight is below average then you need to put your weight.
X
Desktop Bottom Promotion