For Quick Alerts
ALLOW NOTIFICATIONS  
For Daily Alerts

ಈ ಹಾಡು ಕೇಳುತ್ತಾ ಫಿಟ್ ಬಾಡಿ ನಿಮ್ಮದಾಗಿಸಬಹುದು!

|

ಇಂದು ವಿಶ್ವ ಸಂಗೀತ ದಿನ. "Music is a Universal language of Mankind" - Henry Wadsworth Longfellow ಹೇಳಿರುವ ಈ ಮಾತನ್ನು ಪ್ರತಿಯೊಬ್ಬರು ಒಪ್ಪುತ್ತೇವೆ. ಸಂಗೀತಗೆ ಭಾಷೆಗಳ ನಿರ್ಬಂಧವಿಲ್ಲ, ಮಧುರವಾದ ಸಂಗೀತ ಕಿವಿಗೆ ಬಿದ್ದರೆ ಆ ಭಾಷೆ ನಮಗೆ ಗೊತ್ತಿಲ್ಲದಿದ್ದರೂ ಅದನ್ನು ಆಲಿಸುತ್ತೇವೆ. ನೋವಾದಾಗ, ಖುಷಿಯಾದಾಗ, ಒಂಟಿಯಾದಾಗ ನಮ್ಮ ಭಾವನೆಗಳಿಗೆ ಸ್ಪಂದಿಸುವ ಶಕ್ತಿ ಸಂಗೀತಕ್ಕೆ ಇದೆ.

ಕೆಲವೊಂದು ಹಾಡುಗಳು ನಮ್ಮ ಮೂಡ್ ಬದಲಾಗಿಸುತ್ತದೆ, ಕೆಲವೊಂದು ಹಾಡು ಕೇಳಿದರೆ ಮನಸ್ಸು ಹುಚ್ಚೆದ್ದು ಕುಣಿದರೆ, ಮತ್ತೆ ಕೆಲವು ಹಾಡು ಕೇಳುತ್ತಿದ್ದರೆ ತುಂಬಾ ಎಮೋಷನಲ್ ಆಗುತ್ತೇವೆ, ಪ್ರೀತಿ-ಪ್ರೇಮದ ಹಾಡುಗಳಂತೂ ನಮ್ಮನ್ನು ಪ್ರಣಯ ಲೋಕಕ್ಕೆ ಕೊಂಡೊಯ್ಯುತ್ತದೆ.

ಆದರೆ ಇಲ್ಲಿ ನಾವು ಈ ರೀತಿಯ ಹಾಡುಗಳ ಬಗ್ಗೆ ಮಾತನಾಡುತ್ತಿಲ್ಲ. ನಿಮ್ಮ ಬಾಡಿಯನ್ನು ಫಿಟ್ ಆಗಿಡುವ ಹಾಡುಗಳ ಬಗ್ಗೆ ಹೇಳುತ್ತಿದ್ದೇವೆ? ಬಾಡಿಯನ್ನು ಫಿಟ್ ಆಗಿಡುವ ಹಾಡುಗಳೇ ಎಂದು ಆಶ್ಚರ್ಯ ಪಡಬೇಡಿ? ಈ ಹಾಡುಗಳನ್ನು ಕೇಳಿದ ತಕ್ಷಣ ನಿಮ್ಮ ತೂಕ ಕರಗುವುದಿಲ್ಲ, ಆದರೆ exercise ಮಾಡುವಾಗ ಈ ಹಾಡುಗಳನ್ನು ಕೇಳುತ್ತಿದ್ದರೆ ಮತ್ತಷ್ಟು ಹುರುಪಿನಿಂದ, ಎಂಜಾಯ್ ಮಾಡುತ್ತಾ ವ್ಯಾಯಾಮ ಮಾಡುವಿರಿ. ವ್ಯಾಯಾಮ ಮಾಡುವಾಗ ನಿಮ್ಮಲ್ಲಿ ಜೋಶ್ ತುಂಬುವ 10 ಇಂಗ್ಲೀಷ್ ಹಾಡುಗಳ ಪಟ್ಟಿ ನೀಡಿದ್ದೇವೆ ನೋಡಿ:

ಆಯಾಸ ನಿವಾರಿಸುವ ಹಾಡು

ಆಯಾಸ ನಿವಾರಿಸುವ ಹಾಡು

"Welcome to the Jungle," Guns N' Roses. ಈ ಹಾಡನ್ನು ಕೇಳುತ್ತಿದ್ದರೆ ವ್ಯಾಯಾಮ ಮಾಡುವಾಗ ಆಯಾಸವೇ ಉಂಟಾಗುವುದಿಲ್ಲ.

ವ್ಯಾಯಾಮ ಮಾಡುವಾಗ ಜೋಶ್ ತುಂಬುವ ಹಾಡು

"Hookah Bar", Khiladi 786-ಈ ಹಾಡು ಕೇಳುತ್ತಿದ್ದರಂತೂ ವ್ಯಾಯಾಮ ಮಾಡಿದ್ದು ಇವತ್ತಿಗೆ ಸಾಕು ಅಂತ ಅನಿಸುವ ಬದಲು ಒಂದು ರೌಂಡ್ ಅಧಿಕ ಮಾಡೋಣವೆಂದು ಅನಿಸುವುದು.

 ಕಾಲುಗಳಿಗೆ ದಣಿವೇ ಆಗುವುದಿಲ್ಲ

ಕಾಲುಗಳಿಗೆ ದಣಿವೇ ಆಗುವುದಿಲ್ಲ

"Sexy and I Know It," LMFAO-ಈ ಹಾಡನ್ನು ಕೇಳುತ್ತಿದ್ದಂತೆ ನಿಮ್ಮ ಕಾಲುಗಳು ಕುಣಿಯಲಾರಂಭಿಸುತ್ತದೆ. ಸ್ಕಿಪ್ಪಿಂಗ್ ನಂತಹ ವ್ಯಾಯಾಮ ಮಾಡುವಾಗ ಇದನ್ನು ಹಾಕಿ ಎಂಜಾಯ್ ಮಾಡುತ್ತಾ ವ್ಯಾಯಾಮ ಮಾಡಿ.

ಎನರ್ಜಿ ಬೂಸ್ಟಿಂಗ್ ಸಾಂಗ್

ಎನರ್ಜಿ ಬೂಸ್ಟಿಂಗ್ ಸಾಂಗ್

"Aadat ", Jal- ಎನರ್ಜಿ ಬೂಸ್ಟಿಂಗ್ ಸಾಂಗ್ ಇದಾಗಿದೆ. ಒಬ್ಬರೇ ವ್ಯಾಯಾಮ ಮಾಡುವುದಾದರೆ ಈ ರೀತಿಯ ಹಾಡುಗಳನ್ನು ಹಾಕಿದರೆ ಬೋರಾಗುವುದಿಲ್ಲ.

 ಬೊಜ್ಜೂ ಕೂಡ ಕರಗುವುದು

ಬೊಜ್ಜೂ ಕೂಡ ಕರಗುವುದು

"Til I Collapse", Eminem ಎಂಬ ಹಾಡು ಕೇಳುತ್ತಾ ವ್ಯಾಯಾಮ ಮಾಡುತ್ತಿದ್ದರೆ ಮನಸ್ಸಿಗೆ ಹುರುಪು ತುಂಬುವುದು.

ಕಿವಿಗೆ ಹಿಂಪು, ದೇಹಕ್ಕೆ ಹಿತ

ಕಿವಿಗೆ ಹಿಂಪು, ದೇಹಕ್ಕೆ ಹಿತ

"Angrezi Beat", Honey Singh

ತನ್ಮಯತೆ

ತನ್ಮಯತೆ

"Gimme Shelter", The Rolling Stones

 ಒನ್ಸ್ ಮೋರ್

ಒನ್ಸ್ ಮೋರ್

"Another One Bites the Dust" Queen _ಈ ಹಾಡು ಕೇಳುತ್ತಿದ್ದರೆ ಬೇಗನೆ ಸುಸ್ತು ಕಾಡುವುದಿಲ್ಲ, ಸ್ವಲ್ಪ ಹೊತ್ತು ಅಧಿಕವೇ ವ್ಯಾಯಾಮ ಮಾಡುವಿರಿ.

ಚಿರ ಯೌವನಕ್ಕಾಗಿ

ಚಿರ ಯೌವನಕ್ಕಾಗಿ

"Smells Like Teen Spirit", Nirvana- ನಿಯಮಿತವಾದ ವ್ಯಾಯಾಮ ಚಿರಯೌವನ ನೀಡುವುದು.

ಮನಸ್ಸಿಗೆ ಮುದ ನೀಡುವುದು

ಮನಸ್ಸಿಗೆ ಮುದ ನೀಡುವುದು

"Pistah!" Neram- ಹಾಡು ಮತ್ತು ವ್ಯಾಯಾಮ ನಿಮ್ಮ ಮಾನಸಿಕ ಹಾಗೂ ದೈಹಿಕ ಸ್ವಾಸ್ಥ್ಯ ಹೆಚ್ಚಿಸುವುದು.

English summary

Top 10 Workout Songs To Get A Fit Body

Everybody has their own set of workout music. The only requirement is for the songs to be familiar and upbeat. Some people prefer listening to Adele or Kelly Clarkson while others might choose Psy or Flo Rida. Here are the top 10 workout songs from Boldsky to get a fit body.
X
Desktop Bottom Promotion