ಸರಿಯಾದ ರೀತಿ ಗೊತ್ತಿಲ್ಲದೆ ಈ ವ್ಯಾಯಾಮ ಮಾಡಬೇಡಿ

By:
Subscribe to Boldsky

ವ್ಯಾಯಾಮ ಮಾಡಬೇಕು ಎಂದ ಕೂಡಲೆ ಕೇವಲ ಮೈ ಬಗ್ಗಿಸಬೇಕು ಎಂಬ ಅರ್ಥವಲ್ಲ. ಡಾಕ್ಟರ್ ಅಥವಾ ಇನ್ಯಾರೋ ತೂಕ ಇಳಿಸಲು ಫಿಟ್ ಆಗಿರಲು ವ್ಯಾಯಾಮ ಮಾಡಿ ಎಂದ ಕೂಡಲೆ ನಿಮಗೆ ಅನ್ನಿಸಿದಂತೆ ಯಾವುದೇ ಸರಿಯಾದ ವಿಧಾನಗಳನ್ನು ಪಾಲಿಸದೆ ವ್ಯಾಯಾಮ ಮಾಡಬೇಡಿ. ಪ್ರತಿಯೊಂದು ವ್ಯಾಯಾಮಕ್ಕೂ ತನ್ನದೇ ಆದ ಭಂಗಿಗಳು ಮತ್ತು ರೀತಿ ಇದೆ. ಇದನ್ನು ಪಾಲಿಸದೆ ಮಾಡಿದ ವ್ಯಾಯಾಮ ಏನೂ ಸಹಾಯ ಮಾಡದಿದ್ದರೂ ಪರವಾಗಿಲ್ಲ ನಿಮಗೆ ಇನ್ನೂ ಹೆಚ್ಚಿನ ಸಮಸ್ಯೆಗಳನ್ನು ತಂದಿಡದಿದ್ದರೆ ನೀವು ಪುಣ್ಯವಂತರು. ಕೇವಲ ಅಡ್ಡ ಪರಿಣಾಮಗಳು ಮಾತ್ರವಲ್ಲ ನಿಮಗೆ ಏನಾದರೂ ಗಾಯಗಳಾಗುವ ಸಾಧ್ಯತೆಗಳೂ ಇಲ್ಲದಿಲ್ಲ.

ಹೀಗಾಗಿ ವ್ಯಾಯಾಮ ಮಾಡಲು ನೀವು ನಿರ್ಧರಿಸಿದಿರಿ ಎಂದಾದರೆ ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯದೇ ಆದರೆ ಸರಿಯಾದ ಮಾರ್ಗದರ್ಶಕರ ಸಹಾಯ ಪಡೆಯದುಕೊಳ್ಳಿ. ಇಲ್ಲವಾದಲ್ಲಿ ತೊಂದರೆ ತಪ್ಪಿದ್ದಲ್ಲ. ನಾವಿಲ್ಲಿ ನಿಮ್ಮ ಸಹಾಯಕ್ಕೆ ವ್ಯಾಯಾಮ ಮಾಡುವಾಗ ಮಾಡಬಾರದಾದ ಕೆಲವು ಭಂಗಿಗಳನ್ನು ನೀಡಿದ್ದೇವೆ. ಸರಿಯಾದ ಮಾರ್ಗದರ್ಶಕರು ಸಿಗುವ ವರೆಗೆ ಸರಿಯದ ಭಂಗಿಗಳನ್ನು ತಿಳಿಯುವವರೆಗೆ ಇವಿಷ್ಟನ್ನಾದರೂ ಮಾಡದಂತೆ ಗಮನ ಹರಿಸಿ.

1.ಪ್ರೆಸ್ಸಸ್

ಬೆಂಚ್ ಪ್ರೆಸ್ಸಸ್ ಅಥವಾ ಮಿಲಿಟರಿ ಪ್ರೆಸ್ಸಸ್ ಅನ್ನು ಮಾಡುತ್ತೀರಿ ಎಂದಾದರೆ ಬೆನ್ನನ್ನು ಬಿಲ್ಲಿನಂತೆ ಬಾಗಿಸಬೇಡಿ. ಇದು ಬೆನ್ನು ನೋವನ್ನು ತರುವ ಸಾಧ್ಯತೆಗಳಿವೆ. ನಿಮ್ಮ ಕಾಲು ನೆಲದ ಮೇಲ ಸರಿಯಾಗಿ ಊರಿರಬೇಕು. ಹಾಗೂ ನಿಮ್ಮ ಬೆನ್ನಿನ ಕೆಳಭಾಗವಷ್ಟೇ ಸ್ವಲ್ಪ ಬಾಗಿರಬೇಕು.

2.ಸ್ಕ್ವಾಟ್ಸ್

ನಿಮ್ಮ ದೇಹ ಸರಿಯಾದ ಸಮತೋಲನದಲ್ಲಿ ಇರಬೇಕಾದುದು ಈ ವ್ಯಾಯಾಮ ಮಾಡುವಾಗ ಇರಬೇಕಾದ ಆದ್ಯ ಕೆಲಸವಾಗಿದೆ, ಅದೂ ನೀವು ಬಾರ್ಬೆಲ್ ತೂಕವನ್ನು ಬಳಸುತ್ತೀರಿ ಎಂದಾದರೆ ಇದು ಮತ್ತು ಅವಶ್ಯಕ. ಎರಡೂ ಕಾಲುಗಳ ಮೇಲೆ ಸರಿಯಾಗಿ ತೂಕ ಬೀಳುವಂತೆ ಮಾಡಿ ಮತ್ತು ನಿಮ್ಮ ಮುಖ ವ್ಯಾಯಾಮದದ್ದುದ್ದಕ್ಕೂ ಮುಂದೆ ನೋಡುವ ಹಾಗಿರಲಿ. ನಿಮ್ಮ ಕಾಲುಗಳನ್ನು ಒಂದಕ್ಕೊಂದು ಸಿಕ್ಕಿಹಾಕದಂತೆ ಹಾಗೂ ಬೆನ್ನನ್ನು ಸ್ವಲ್ಪವೇ ಬಾಗುವಂತೆ ಎಚ್ಚರಿಕೆ ವಹಿಸಿ.

3.ಪುಷ್ ಅಪ್ಸ್

ಇದು ಅತ್ಯಂತ ಸರಳವಾದ ವ್ಯಾಯಾಮವಾದರೂ ಇದರಲ್ಲೂ ಹಲವು ಬಾರಿ ತಪ್ಪುಗಳಾಗುವ ಸಾಧ್ಯತೆ ಇದೆ. ಸಮತಟ್ಟಾದ ನೆಲ ಇಲ್ಲದೇ ಎಂದಿಗೂ ಪುಷ್ ಅಪ್ಸ್ ಅನ್ನು ಪ್ರಯತ್ನಿಸಬೇಡಿ. ನಿಮ್ಮ ಭುಜದ ಅಗಲಕ್ಕಿಂತ ಸ್ವಲ್ಪವೇ ಅಗಲಕ್ಕೆ ನಿಮ್ಮ ಕೈಗಳನ್ನು ನೆಲಕ್ಕೆ ಊರಿ. ದೇಹ ನೇರವಾಗಿ ಇರುವಂತೆ ನೋಡಿಕೊಳ್ಳಿ.

4.ಕ್ರಂಚಸ್

ಕ್ರಂಚಸ್ ವ್ಯಾಯಾಮ ಮಾಡುವ ವೇಳೆ ಹಲವು ಜನರಿಗೆ ತಮ್ಮ ಕೈಗಳನ್ನು ಕುತ್ತಿಗೆಯ ಹಿಂಭಾಗದಲ್ಲಿ ಇಡುವ ಅಭ್ಯಾಸವಿದೆ. ಈ ಭಂಗಿಯಲ್ಲಿ ಯಾವುದೇ ಸಮಸ್ಯೆಯಿಲ್ಲ ಆದರೆ ನೀವು ನಿಮ್ಮ ಕೈಯ ಸಹಾಯದಿಂದ ನಿಮ್ಮ ಕುತ್ತಿಗೆಯನ್ನು ದೂಡಲು ಆರಂಭಿಸಿದಾಗ ನಿಮಗೆ ಕುತ್ತಿಗೆ ನೋವು ಬಾರದಿರದು.

5.ಎಕ್ಸ್ ಟೆಂಡ್

ಹೆಚ್ಚಿನ ವ್ಯಾಯಾಮ ಮಾಡುವಾಗ ಜನರು ತಮ್ಮ ಸ್ನಾಯುಗಳನ್ನು ಹೆಚ್ಚು ಹೊರಚಾಚುವುದಿಲ್ಲ. ನಿಮ್ಮ ಮೂಳೆಗಳ ಗಂಟುಗಳು ಚಲನೆ ಇರದೇ ಇರುವ ಕಾರಣ ಇದನ್ನು ಸಾಧ್ಯವಾದಷ್ಟು ಮಾಡಬೇಡಿ. ನಿಮ್ಮ ದೇಹದ ಭಾಗಗಳನ್ನು ಸರಿಯಾಗಿ ವಿಸ್ತರಿಸುವ ಮೂಲಕ ಎಲ್ಲಾ ವ್ಯಾಯಾಮಗಳನ್ನು ಮಾಡಿ.

6.ಪುಲ್ ಅಪ್ಸ್

ನಿಮ್ಮ ಭುಜ, ಕುತ್ತಿಗೆ ಮತ್ತು ಕೈಗಳಿಗೆ ಬಹಳವೇ ಶಕ್ತಿಯನ್ನು ನೀಡುವ ವ್ಯಾಯಾಮ ಪುಲ್ ಅಪ್ಸ್ ಆಗಿದೆ. ಪ್ರತಿಯೊಂದು ಪುಲ್ ಅಪ್ ಆದ ಮೇಲೆ ನಿಮ್ಮ ಕೈಗಳನ್ನು ಸರಿಯಾಗಿ ಲಾಕ್ ಮಾಡಿಕೊಳ್ಳಿ ಹಾಗೂ ದೇಹವನ್ನು ಸ್ವಲ್ಪವೂ ಸಡಿಲವಾಗಿ ಬಿಡಬೇಡಿ. ಪುಲ್ ಅಪ್ಸ್ ಮಾಡುವಾಗ ದೇಹವನ್ನು ಆದಷ್ಟು ಬಿಗಿಯಾಗಿಡಲು ನೋಡಿ ಹಾಗೂ ದೇಹವನ್ನು ನೇರವಾಗಿಡಿ.

7.ಡೆಡ್ ಲಿಫ್ಟ್ಸ್

ಡೆಡ್ ಲಿಫ್ಟ್ ವ್ಯಾಯಾಮ ಮಾಡುವಾಗ ನಿಮ್ಮ ಬೆನ್ನು ಬಹಳವೇ ನೋವನ್ನು ಅನುಭವಿಸುವುದು ಸುಳ್ಳಲ್ಲ. ನಿಮ್ಮ ಬೆನ್ನು ಮತ್ತು ಮೊಣಕಾಲನ್ನು ಸರಳವಾಗಿಡುವುದು ಈ ವ್ಯಾಯಾಮ ಮಾಡುವಾಗ ಅನುಸರಿಸಬೇಕಾದ ಮೊದಲ ಮಾರ್ಗವಾಗಿದೆ.

8. ನಿಧಾನವೇ ಪ್ರಧಾನ

ತೂಕವನ್ನು ಬಳಸಿ ವ್ಯಾಯಾಮ ಮಾಡುವಾಗ ನೀವು ಆರಾಮವಾಗಿ ಮಾಡುತ್ತೀರಿ ಎಂಬುದರ ಬಗ್ಗೆ ಗಮನವಿರಲಿ. ನಿಮ್ಮ ಚಲನೆಗಳು ಸತತವಾಗಿರಬೇಕು ನಡುವಲ್ಲಿ ಯಾವುದೇ ತಡೆಗಳು ಬಾರದಂತೆ ನೋಡಿಕೊಳ್ಳಿ.

ವ್ಯಾಯಾಮಗಳು ನಿಮ್ಮ ದೇಹಕ್ಕೆ ಹೆಚ್ಚಿನ ಬಲ ಮತ್ತು ದೇಹಕ್ಕೆ ಆಕಾರವನ್ನು ನೀಡುವ ಸಲುವಾಗಿ ಇದೆ. ಆದರೆ ಇದನ್ನೇ ಸರಿಯಾದ ರೀತಿಯಲ್ಲಿ ಮಾಡದಿದ್ದರೆ ಒಳಿತನ್ನು ಮಾಡುವ ಬದಲು ಇವೇ ನಿಮ್ಮ ಸಮಸ್ಯೆಗಳನ್ನು ಹೆಚ್ಚಿಸುತ್ತವೆ. ವ್ಯಾಯಾಮ ಮಾಡುವುದು ಅಗತ್ಯ ಹಾಗೆಯೇ ಸರಿಯಾಗಿ ಮಾಡುವುದು ಇನ್ನೂ ಬಹಳ ಅಗತ್ಯ ಎಂಬುದನ್ನು ಮರೆಯದಿರಿ.

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Monday, September 16, 2013, 14:37 [IST]
English summary

Postures to Avoid When Exercising

People often don’t realize that exercises must be done whilst maintaining a proper posture. Exercises done with a bad posture have a negative effect on the body and can even lead to serious injuries.
Please Wait while comments are loading...
Subscribe Newsletter