For Quick Alerts
ALLOW NOTIFICATIONS  
For Daily Alerts

ದೇಹದಾರ್ಢ್ಯ ಪಟುಗಳು ಸೇವಿಸಲೇಬೇಕಾದ ಆಹಾರಗಳು

By Hemanth P
|

ಪುರುಷರು ಯಾವಾಗಲೂ ಫಿಟ್ ಮತ್ತು ಸದೃಢ ದೇಹವನ್ನು ತುಂಬಾ ಪ್ರೀತಿಸುತ್ತಾರೆ. ಒಳ್ಳೆಯ ದೇಹದಾರ್ಢ್ಯವಿದ್ದರೆ ನಿಮ್ಮ ಆತ್ಮವಿಶ್ವಾಸ ಕೂಡ ಹೆಚ್ಚುತ್ತದೆ. ನೀವು ತುಂಬಾ ಬಲಿಷ್ಠರಾಗಿ ನಡೆಯುತ್ತೀರಿ, ನೀವು ಹೇಗೆ ಕಾಣುತ್ತೀರಿ ಎನ್ನುವ ಭಾವನೆ ನಿಮ್ಮಲ್ಲಿರುತ್ತದೆ. ಸಪೂರ ಮತ್ತು ಸೈಜ್ ಝೀರೋ ಮಹಿಳೆಯರಿಗೆ ಒಳ್ಳೆಯದು. ಆದರೆ ಒಳ್ಳೆಯ ದೇಹದಾರ್ಢ್ಯವಿರುವ ಪುರುಷರನ್ನು ಮಹಿಳೆಯರು ಇಷ್ಟಪಡುತ್ತಾರೆ.

ನೀವು ಒಳ್ಳೆಯ ದೇಹದಾರ್ಢ್ಯ ಹೊಂದಿದ್ದರೆ ಆಗ ಹೆಚ್ಚಿನ ಗಮನ ಸೆಳೆಯಬಲ್ಲಿರಿ. ಬಲಿಷ್ಠ ಮತ್ತು ದೇಹದಾರ್ಢ್ಯ ಹೊಂದಿರುವ ಹುಡುಗರನ್ನು ಯುವತಿಯರು ಪ್ರೀತಿಸುತ್ತಾರೆ. ಅವರು ಸಮರ್ಥರು ಮತ್ತು ಒಳ್ಳೆಯವರೆಂದು ಭಾವಿಸುತ್ತಾರೆ. ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಆಹಾರಕ್ರಮದಿಂದ ನಿಮಗೆ ವಯಸ್ಸಾಗುತ್ತಿದ್ದರೂ ಒಳ್ಳೆಯ ದೇಹದಾರ್ಢ್ಯವನ್ನು ಉಳಿಸಿಕೊಳ್ಳಬಹುದು.

ಡೊಳ್ಳು ಹೊಟ್ಟೆಯ ಅಥವಾ ಇಳಿ ಬಿದ್ದಿರುವ ಕೈಗಳನ್ನು ಹೊಂದಿರುವ ಜೀವನಶೈಲಿಯ ಪುರುಷರನ್ನು ಯಾರೂ ಇಷ್ಟಪಡುವುದಿಲ್ಲ. ಒಳ್ಳೆಯ ದೇಹದಾರ್ಢ್ಯ ಪಡೆಯಲು ಆರೋಗ್ಯಕರ ಪ್ರೋಟೀನ್ ಮತ್ತು ಪೌಷ್ಠಿಕಾಂಶಗಳ ಆಹಾರ ಕ್ರಮ ಪಾಲಿಸಬೇಕೆನ್ನುವುದು ತುಂಬಾ ಮುಖ್ಯ.

ಮೊಟ್ಟೆ, ಮಾಂಸ, ಬಾದಾಮಿ, ಮೊಳಕೆಕಾಳುಗಳು ಇತ್ಯಾದಿಯಲ್ಲಿರುವ ಪ್ರೋಟೀನ್ ದೇಹದಾರ್ಢ್ಯ ಮಾಡುವವರಿಗೆ ಹೆಚ್ಚಿನ ಪ್ರೋಟೀನ್ ಒದಗಿಸುತ್ತದೆ. ಈ ಆರೋಗ್ಯಕರ ಆಹಾರಗಳು ನಿಮ್ಮ ಆಹಾರಕ್ರಮಕ್ಕೆ ಹೆಚ್ಚಿನ ಪ್ರೋಟೀನ್ ಸೇರಿಸಿ ಅಗತ್ಯವಿಲ್ಲದ ಕೊಬ್ಬು ಮತ್ತು ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುತ್ತದೆ.

ನಿಮ್ಮ ದೇಹಕ್ಕೆ ಅಗತ್ಯವಿಲ್ಲದ ಕೊಬ್ಬನ್ನು ಕಡೆಗಣಿಸಲು ನೀವು ಅಕ್ಕಿ ಬದಲಿಗೆ ಗೋಧಿ ತಿನ್ನಬೇಕಾಗುತ್ತದೆ. ನೀವು ನಿಧಾನವಾಗಿ ದಹಿಸುವಂತಹ ಆಹಾರಗಳನ್ನು ತಿನ್ನಬೇಕು, ಇದು ದೀರ್ಘಾವಧಿಗೆ ಶಕ್ತಿ ಒದಗಿಸುತ್ತದೆ. ಓಟ್ಸ್, ಗೋಧಿ, ಕಂದು ಅಕ್ಕಿಯನ್ನು ತಿನ್ನಬೇಕು. ಇದು ಹೆಚ್ಚಿನ ಕಾಬ್ರೋಹೈಡ್ರೆಡ್ಸ್ ಮತ್ತು ಕೊಬ್ಬನ್ನು ದಹಿಸುತ್ತದೆ.

1. ಮೊಟ್ಟೆಯ ಬಿಳಿಭಾಗ

1. ಮೊಟ್ಟೆಯ ಬಿಳಿಭಾಗ

ಮೊಟ್ಟೆಯಲ್ಲಿ ಸ್ನಾಯುವಿನ ಬೆಳವಣಿಗೆ ಮತ್ತು ನಿರ್ವಹಣೆಗೆ ಬೇಕಾಗಿರುವ ಎಲ್ಲಾ ಎಂಟು ರೀತಿಯ ಅಮಿನೋ ಆಮ್ಲಗಳು ಒಳಗೊಂಡಿವೆ. ಇಷ್ಟು ಮಾತ್ರವಲ್ಲದೆ ಮೊಟ್ಟೆಯಲ್ಲಿ ವಿಟಮಿನ್, ಆಮ್ಲ ಮತ್ತು ಇತರ ಕೆಲವೊಂದು ಪೌಷ್ಠಿಕಾಂಶಗಳು ಗುಣಪಡಿಸಲು ಮತ್ತು ಸ್ನಾಯುವಿನ ಪುನರ್ ಬೆಳವಣಿಗೆಗೆ ನೆರವಾಗುತ್ತದೆ. ಮೊಟ್ಟೆಯ ಬಿಳಿಭಾಗವು ಕೊಬ್ಬು ರಹಿತ ಮತ್ತು ಇದು ನಿಮ್ಮ ಆಹಾರ ಕ್ರಮಕ್ಕೆ ಕೊಬ್ಬಿನ ಭಾಗವನ್ನು ಸೇರಿಸದು. ಮೊಟ್ಟೆಯ ಹಳದಿ ಭಾಗವು ಹೆಚ್ಚಿನ ಕೊಬ್ಬಿನಾಂಶ ಹೊಂದಿರುತ್ತದೆ.

2. ಓಟ್ ಮೀಲ್

2. ಓಟ್ ಮೀಲ್

ಬೆಳಗಿನ ಉಪಹಾರಕ್ಕೆ ಓಟ್ ಮೀಲ್ ಸೇವಿಸಿದರೆ ನಿಮ್ಮ ದಿನವನ್ನು ಉತ್ತಮವಾಗಿ ಆರಂಭಿಸಬಹುದು. ಇದರಲ್ಲಿ ಹೆಚ್ಚಿನ ನಾರಿನಾಂಶವು ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುತ್ತದೆ ಮತ್ತು ಸಂವರ್ಧನ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇದು ದೇಹದ ಗ್ಲೈಕೋಜೆನ್ ಅನ್ನು ಸಂಗ್ರಹಿಸಿ ಪುನಃ ತುಂಬಿಸಿಕೊಳ್ಳುತ್ತದೆ ಮತ್ತು ವ್ಯಾಯಾಮಕ್ಕೆ ಮೊದಲು ಇದು ಅತ್ಯುತ್ತಮ ಆಹಾರ.

3. ಹಾಲೊಡಕು ಪ್ರೋಟೀನ್

3. ಹಾಲೊಡಕು ಪ್ರೋಟೀನ್

ಹಾಲೊಡಕು ಪ್ರೋಟೀನ್ ಯಾವುದೇ ದೇಹದಾರ್ಢ್ಯ ಪಟುವಿಗೆ ಅತ್ಯುತ್ತಮ ಆಹಾರ. ಈ ಉನ್ನತ ಗುಣಮಟ್ಟದ ಪ್ರೋಟೀನ್ ನನ್ನು ವ್ಯಾಯಾಮದ ನಂತರ ತಕ್ಷಣ ಸೇವಿಸಲಾಗುತ್ತದೆ. ಒಂದು ಚಮಚದಷ್ಟು ಹಾಲೊಡಕು ಪ್ರೋಟೀನ್ ನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ನಿಮ್ಮ ದೇಹಕ್ಕೆ ತಕ್ಷಣ ಶಕ್ತಿ ನೀಡುತ್ತದೆ. ಇದು ಸ್ನಾಯುವಿನ ಅಪಚಯ ಕ್ರಿಯೆ ನಿಲ್ಲಿಸುತ್ತದೆ ಮತ್ತು ಜೀವವಸ್ತು ರಚಿತವಾಗುವ ಕ್ರಿಯೆಯನ್ನು ಉತ್ತೇಜಿಸುತ್ತದೆ.

4. ಕೆಂಪು ಮಾಂಸ

4. ಕೆಂಪು ಮಾಂಸ

ಬೀಫ್ ಅಥವಾ ಕೆಂಪು ಮಾಂಸವು ದೇಹದಾರ್ಢ್ಯಕ್ಕೆ ಒಳ್ಳೆಯ ಆಹಾರ. ಕೆಂಪು ಮಾಂಸದಲ್ಲಿ ಪ್ರೋಟೀನ್, ಖನಿಜಾಂಶ, ಸತು ಮತ್ತು ವಿಟಮಿನ ಬಿ ಹೇರಳವಾಗಿದೆ. ಮಾಂಸದಲ್ಲಿ ಕ್ಯಾಲರಿಯೂ ಹೆಚ್ಚಿದೆ. ದೇಹದಾರ್ಢ್ಯ ಮಾಡಲು ಬಯಸುವವರು ಇದನ್ನು ಗಂಭೀರವಾಗಿ ತಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುತ್ತಾರೆ.

5. ಬೀನ್ಸ್ ಮತ್ತು ದ್ವಿದಳ ಧಾನ್ಯ

5. ಬೀನ್ಸ್ ಮತ್ತು ದ್ವಿದಳ ಧಾನ್ಯ

ದೇಹದಾರ್ಢ್ಯವೆಂದರೆ ಕೇವಲ ಕೆಂಪು ಮಾಂಸ ಮತ್ತು ಮೊಟ್ಟೆ ಮಾತ್ರವಲ್ಲ. ಬೀನ್ಸ್ ಮತ್ತು ದ್ವಿದಳ ಧಾನ್ಯಗಳ ಪಾತ್ರವನ್ನು ಯಾರು ಕಡೆಗಣಿಸಲು ಸಾಧ್ಯವಿಲ್ಲ. ಇದಲ್ಲಿ ಪ್ರೋಟೀನ್ ಮತ್ತು ನಾರಿನಾಂಶ ಹೇರಳವಾಗಿದೆ. ಕಿಡ್ನಿ ಬೀನ್ಸ್ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದ್ದು, ಒಂದು ಕಪ್ ಕಿಡ್ನಿ ಬೀನ್ಸ್ ನಲ್ಲಿ 14 ಗ್ರಾಂ ಪ್ರೋಟೀನ್ ಮತ್ತು ನಾರಿನಾಂಶವಿದೆ.

6. ಮೀನು

6. ಮೀನು

ನಿಮ್ಮ ದೇಹಕ್ಕೆ ಪ್ರಮುಖವಾಗಿ ಕೊಬ್ಬಿನ ಆಮ್ಲವಾಗಿರುವ ಒಮೆಗಾ-3 ಬೇಕಾಗುತ್ತದೆ. ಇದು ನಿಮ್ಮ ದೇಹದ ಸ್ನಾಯುಗಳ ಬೆಳವಣಿಗೆಗೆ ನೆರವಾಗುತ್ತದೆ. ನೀವು ಇತರ ಟ್ರಾನ್ಸ್ ಕೊಬ್ಬುಗಳು ಮತ್ತು ಸ್ಯಾಚುರೇಟೆಡ್ ಕೊಬ್ಬುಗಳನ್ನು ಕಡೆಗಣಿಸಬೇಕು. ಆದರೆ ಮೀನಿನಲ್ಲಿರುವ ಪ್ರಮುಖವಾದ ಒಮೆಗಾ-3 ಕೊಬ್ಬಿನಾಮ್ಲವನ್ನು ಕಡೆಗಣಿಸಬಾರದು. ಸಾಲ್ಮನ್, ಟ್ಯೂನಾ, ಟ್ರೌಟ್ ಮತ್ತು ಸಾರ್ಡೀನ್ ಗಳು ಹೆಚ್ಚಿನ ಪ್ರೋಟೀನ್ ಮತ್ತು ಆರೋಗ್ಯಕಾರಿ ಕೊಬ್ಬನ್ನು ಹೊಂದಿದೆ.

7. ಕೋಸುಗಡ್ಡೆ

7. ಕೋಸುಗಡ್ಡೆ

ಒಳ್ಳೆಯ ದೇಹದಾರ್ಢ್ಯ ಬಯಸುವವರು ತಮ್ಮ ಆಹಾರ ಕ್ರಮದಲ್ಲಿ ಕೋಸುಗಡ್ಡೆ ಸೇರಿಸಿಕೊಳ್ಳಬೇಕು. ಇದರಲ್ಲಿರುವ ವಿಟಮಿನ್ ಸಿ ಯು ಜೀವಕೋಶವನ್ನು ದೀರ್ಘಾವಧಿಗೆ ಸಂರಕ್ಷಿಸುತ್ತದೆ ಮತ್ತು ಸಾಕಷ್ಟು ಕರಗುವ ಫೈಬರ್ ನ್ನು ಒದಗಿಸುತ್ತದೆ. ಇದರಿಂದ ನಿಮ್ಮ ಹೊಟ್ಟೆಯು ದೀರ್ಘಾವಧಿ ತನಕ ತುಂಬಿದಂತೆ ಭಾಸವಾಗುತ್ತದೆ. ಇದು ಚಯಾಪಚಯಾ ಕ್ರಿಯೆಯನ್ನು ಹೆಚ್ಚಿಸಿ ತೂಕ ನಷ್ಟವಾಗುವುದನ್ನ ತಡೆಯುತ್ತದೆ.

English summary

Must have foods for body building

Men love to have a fit and well built body with lots of muscles. As a man, you attain lot of self confidence with a well built and toned body. You will walk around feeling strong and good about how you look.
X
Desktop Bottom Promotion