For Quick Alerts
ALLOW NOTIFICATIONS  
For Daily Alerts

ಬಾಡಿ ಬಿಲ್ಡ್ ಮಾಡಬೇಕೆ? ಈ ಆಹಾರ ತಿನ್ನಿ

By Super
|

ಕೇವಲ ತೀವ್ರ ತಾಲೀಮು ನಡೆಸುವುದರಿಂದ ಮಾತ್ರ ದೇಹವನ್ನು ಸದೃಢವನ್ನಾಗಿಸಬಹುದು ಎಂದು ತಿಳಿದಿದ್ದರೆ ಅದು ತಪ್ಪು! ಯಾಕೆಂದರೆ ನಿಮ್ಮ ಉತ್ತಮ ಮೈಕಟ್ಟಿಗೆ ವ್ಯಾಯಾಮದಷ್ಟೇ ಮುಖ್ಯವಾಗಿ ನೀವು ಬಳಸುವ ಆಹಾರವೂ ಕೂಡ ಬಹಳ ಮುಖ್ಯವಾಗಿರುತ್ತದೆ. ಆರೋಗ್ಯಪೂರ್ಣ ಆಹಾರ ಮಾತ್ರ ನಿಮ್ಮ ನಿರೀಕ್ಷೆಯನ್ನು ಸತ್ಯ ಮಾಡಬಲ್ಲದು. ವ್ಯಾಯಾಮದ ಜೊತೆಗೆ ಸರಿಯಾದ ಆಹಾರವನ್ನು ಸೇವಿಸುತ್ತಾ ಬಂದರೆ ನೀವು ಬಾಡಿ ಬಿಲ್ಡರ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಇಂತಹ ಅತ್ಯಗತ್ಯವಾದ ಕೆಲವು ಆಹಾರಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ ನೋಡಿ:

1. ಓಟ್ಸ್

1. ಓಟ್ಸ್

ಇದರಲ್ಲಿ ಹೆಚ್ಚು ನಾರಿನ ಅಂಶವಿರುವುದರಿಂದ ಕೊಲೆಸ್ಟ್ರಾಲ್ ಮತ್ತು ಟೈಪ್ 2 ಮಧುಮೇಹವನ್ನು ಕಡಿಮೆ ಮಾಡುತ್ತದೆ. ಇದು ಸಂವರ್ಧನ ಪ್ರಕ್ರಿಯಯನ್ನು ಹೆಚ್ಚಿಸುತ್ತದೆ. ಅಪಚಯ ಹಾಗೂ ಕೊಬ್ಬು ಸಂಗ್ರಹಗಳನ್ನು ಕಡಿಮೆ ಮಾಡುತ್ತದೆ.

2. ಪ್ರೋಟೀನ್

2. ಪ್ರೋಟೀನ್

ಪ್ರೋಟೀನ್ ಅನ್ನು ತಾಲೀಮು ಮಾಡಿದ ನಂತರ ತಿಂದರೆ ದೇಹಕ್ಕೆ ತಕ್ಷಣಕ್ಕೆ ಶಕ್ತಿಯನ್ನು ನೀಡುತ್ತದೆ.

3. ಮೊಟ್ಟೆಗಳು

3. ಮೊಟ್ಟೆಗಳು

ಉತ್ತಮ ದೇಹಕ್ಕೆ ಸೇವಿಸಲೇಬೇಕಾದ ಆಹಾರ ಮೊಟ್ಟೆ. ಇದರಲ್ಲಿ ಎ,ಡಿ,ಈ, ಕೋಲೀನ್, ಆರೋಗ್ಯಕರ ಕೊಲೆಸ್ಟ್ರಾಲ್ ಮತ್ತು ಅಗತ್ಯ ಪ್ರೋಟೀನ್ ಗಳಿವೆ.

4. ಚೀಸ್

4. ಚೀಸ್

casein ಮತ್ತು ಪ್ರೋಟೀನ್ ನ ಶ್ರೀಮಂತ ಮೂಲವಾಗಿರುವ, ಚೀಸ್ ಬಾಡಿ ಬಿಲ್ಡಿಂಗ್ ಗೆ ಪವಾಡದಂತೆ ಕೆಲಸ ಮಾಡುತ್ತದೆ.

5. ಪೀನಟ್ ಬಟರ್ (ಕಡಲೇಕಾಯಿ ಬೆಣ್ಣೆ)

5. ಪೀನಟ್ ಬಟರ್ (ಕಡಲೇಕಾಯಿ ಬೆಣ್ಣೆ)

ಇದು ಪ್ರೋಟೀನ್, ಅಗತ್ಯ ಜೀವಸತ್ವಗಳು, ಮ್ಯಾಗ್ನಿಷಿಯಂ, ಫೈಬರ್, ಫೋಲೆಟ್ ಹೊಂದಿದ್ದು, ಇದನ್ನು ಮಿತವಾಗಿ ಸೇವಿಸಿದರೆ ಇದು ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.

6. ಏಡಿ ಮಾಂಸ

6. ಏಡಿ ಮಾಂಸ

ಏಡಿಯ ಮಾಂಸ ಮೂಳೆಯ ಆರೋಗ್ಯಕ್ಕೆ ಅತ್ಯುತ್ತಮ ಆಹಾರ. ಇದು ಸ್ನಾಯುಗಳ ಶಕ್ತಿ ಮತ್ತು ದೈಹಿಕ ಶಕ್ತಿಯನ್ನು ಹೆಚ್ಚಿಸುವ ಸತು ಮತ್ತು ಅಗತ್ಯ ಉತ್ಕರ್ಷಣ ನಿರೋಧಕಗಳ ಒಂದು ಉಗ್ರಾಣವಾಗಿದೆ.

7. ಮೃದ್ವಂಗಿಗಳು

7. ಮೃದ್ವಂಗಿಗಳು

ಅಗತ್ಯ ಖನಿಜಗಳು ಒಂದು ಉತ್ತಮ ಮೂಲವಾಗಿದೆ, ಇದನ್ನು ಪರಿಪೂರ್ಣ ಕಾಮೋತ್ತೇಜಕ ಎಂದು ಪರಿಗಣಿಸಲಾಗಿದೆ. ಇದು ಅಧಿಕ ಪೋಷಕಾಂಶಗಳನ್ನು ಹೊಂದಿದ್ದು ಟೆಸ್ಟೋಸ್ಟಿರೋನ್ ಹೆಚ್ಚಿಸಿ, ವೀರ್ಯಾಣುಗಳ ಸಂಖ್ಯೆಯನ್ನೂ ವೃದ್ಧಿಸುವುದು.

8. ಬಾಳೆಹಣ್ಣು

8. ಬಾಳೆಹಣ್ಣು

ಹೆಚ್ಚಿನ ಬಾಡಿ ಬಿಲ್ಡರ್ಸ್,ಪೋಷಕಾಂಶ ಭರಿತ ಬಾಳೆಹಣ್ಣನ್ನು ಹೆಚ್ಚಾಗಿ ಸೇವಿಸುತ್ತಾರೆ. ಪೊಟ್ಯಾಷಿಯಂ ಮತ್ತು ಕ್ಯಾಲ್ಸಿಯಂ ಹೊಂದಿರುವ ಬಾಳೆಹಣ್ಣು ಮೂಳೆಗಳ ಆರೋಗ್ಯಕ್ಕೆ ಅತ್ಯಗತ್ಯ.

9. ಮೆಣಸು

9. ಮೆಣಸು

ಮೆಣಸಿನಕಾಯಿಗಳು ಉರಿಯೂತಕ್ಕೆ ಒಂದು ನೈಸರ್ಗಿಕ ಪರಿಹಾರ. ಹಾಗೂ ಸೋಂಕುಗಳನ್ನು ತಡೆಯಲು ಸಹಾಯ ಮಾಡುತ್ತದೆ. ಬೀಟಾ-ಕೆರೋಟಿನ್ ಗಳನ್ನು ಹೊಂದಿದ್ದು, ಮೆಣಸಿನಕಾಯಿಗಳು ಚಯಾಪಚಯ ಕಾರ್ಯವನ್ನು ವರ್ಧಿಸುತ್ತವೆ. ಮತ್ತು ವೇಗವಾಗಿ ತೂಕ ಕಳೆದುಕೊಳ್ಳಲು ಸಹಾಯ.

10. ಸಿಹಿ ಗೆಣಸು

10. ಸಿಹಿ ಗೆಣಸು

ಸಿಹಿ ಗೆಣಸಿನಲ್ಲಿ ಕಾರ್ಬೋಹೈಡ್ರೇಟ್ ಗಳಿದ್ದು ಶಕ್ತಿಯನ್ನು ವೃದ್ಧಿಸುತ್ತದೆ.

11. ಅಂಜೂರದ ಹಣ್ಣುಗಳು

11. ಅಂಜೂರದ ಹಣ್ಣುಗಳು

ಸದೃಢ ಮೈಕಟ್ಟು ಹೊಂದಲು ಅಂಜೂರದ ಹಣ್ಣುಗಳನ್ನು ತಿನ್ನಲೇಬೇಕು. ಅಂಜೂರದ ಹಣ್ಣುಗಳು ದೇಹದ ಕ್ಷಾರ ಸಮತೋಲನವನ್ನು ನಿರ್ವಹಿಸುವ ಅಗತ್ಯ ಖನಿಜಗಳನ್ನು ಹೊಂದಿದೆ.

12. ಮಶ್ರೂಮ್ಸ್/ಅಣಬೆಗಳು

12. ಮಶ್ರೂಮ್ಸ್/ಅಣಬೆಗಳು

ಅಣಬೆ ಸ್ನಾಯುವಿನ ದ್ರವ್ಯರಾಶಿ ಹೆಚ್ಚಿಸುವ ರುಚಿಯಾದ ಮತ್ತು ಸಮಾನವಾಗಿ ಪೌಷ್ಟಿಕ ತರಕಾರಿಯಾಗಿದೆ.

13. ಸಾವಕ್ಕಿ (Quinoa)

13. ಸಾವಕ್ಕಿ (Quinoa)

ಅಕ್ಕಿ ಮತ್ತು ಅಂಟು ಸಂಯುಕ್ತಗಳ ಆರೋಗ್ಯಕರ ಪರ್ಯಾಯ ಆಹಾರವಾಗಿದೆ. ಇದಲ್ಲಿರುವ ಸಮೃದ್ಧ ಅಮೈನೊ ಆಮ್ಲದಿಂದಾಗಿ ಸ್ನಾಯು ಸದೃಢತೆಗೆ ಪರಿಪೂರ್ಣ ಆಹಾರವಾಗಿದೆ.

14. ಮಟನ್

14. ಮಟನ್

ಮಟನ್ ನಲ್ಲಿ ಪ್ರೊಟೀನ್ ಅಧಿಕವಾಗಿದ್ದು, ಮಸಲ್ ಬಿಲ್ಡ್ ಮಾಡುವವರು ಇದನ್ನು ಡಯಟ್ ನಲ್ಲಿ ಸೇರಿಸಿದರೆ ಒಳ್ಳೆಯದು.

15. ಸೋಯಾ

15. ಸೋಯಾ

ಸೋಯಾಬೀನ್ ಅಮೈನೋ ಆಸಿಡ್ ಇದ್ದು ಬಾಡಿ ಬಿಲ್ಡ್ ಮಾಡಲು ಸಹಕಾರಿಯಾಗಿದೆ.

16. ದವಸ ಧಾನ್ಯಗಳು (Lentils)

16. ದವಸ ಧಾನ್ಯಗಳು (Lentils)

ನಿಮಗೆ ಸದೃಢ ಮೈಕಟ್ಟು ಹೊಂದಬೇಕೆಂದಿದ್ದರೆ ಧಾನ್ಯಗಳನ್ನು ಸೇವಿಸಲೇಬೇಕು! ಇದರಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಜೊತೆಗೆ ಪ್ರೊಟೀನ್ ಹೇರಳವಾಗಿದ್ದು ಸ್ನಾಯುಗಳ ಆರೋಗ್ಯ ರಕ್ಷಿಸಲು ಸಹಾಯ ಮಾಡುತ್ತದೆ.

17. ಮೀನು

17. ಮೀನು

ಮೀನು ಒಮೆಗಾ 3 ಕೊಬ್ಬಿನಂಶವನ್ನು ಉತ್ತಮ ಪ್ರಮಾಣದಲ್ಲಿ ಹೊಂದಿದೆ. ಇದು ಉರಿಯೂತಕ್ಕೆ ಪರಿಹಾರವಾಗಿದ್ದು ತಾಲೀಮು ನಡೆಸಿದ ನಂತರ ಉಪಾಹಾರದಲ್ಲಿ ಸೇರಿಸುವುದು ಒಳ್ಳೆಯದು.

18. ಅನಾನಸ್ ಹಣ್ಣು

18. ಅನಾನಸ್ ಹಣ್ಣು

ಅನಾನಸ್, ಸೋಂಕುಗಳು ಮತ್ತು ಸ್ನಾಯು ಬೆಳವಣಿಗೆಗೆ ನೈಸರ್ಗಿಕ ಉತ್ಕರ್ಷಣ ನಿರೋಧಕಗಳಾಗಿವೆ.

19. ಡಾರ್ಕ್ ಚಾಕಲೇಟ್

19. ಡಾರ್ಕ್ ಚಾಕಲೇಟ್

ಚಾಕಲೇಟ್ ಆರೋಗ್ಯಕ್ಕೆ ಪ್ರಯೋಜನಕಾರಿಯಲ್ಲ ಎಂದು ಯಾರು ಹೇಳಿದ್ದು? ಕೆಲವು ಅಧ್ಯಯನಗಳ ಪ್ರಕಾರ, ಚಾಕಲೇಟ್ ನ ಸೇವನೆಯಿಂದ ದೇಹದಲ್ಲಿ ಉರಿಯೂತದಂತಹ ಅಪಾಯಗಳನ್ನು ತಗ್ಗಿಸುತ್ತದೆ ಎಂದು ಹೇಳಲಾಗಿದೆ. ಇದರಲ್ಲಿ ಉತ್ತಮ ರಕ್ತ ಪ್ರಸರಣೆಯ ಸಹಾಯಕ ಅಧಿಕ ಫ್ಲೇವೋನಾಯ್ಡ್ ಅಂಶವಿದೆ. ಇದು ಚಯಾಪಚಯ ಕ್ರಿಯೆಯನ್ನು ಸುಲಭಮಾಡುತ್ತದೆ.

20. ಮೊಸರು

20. ಮೊಸರು

ಮೊಸರು ಸಂಕೀರ್ಣ ಸಕ್ಕರೆ, ಅಮೈನೋ ಆಮ್ಲಗಳು ಮತ್ತು ಕರಗಬಲ್ಲ ಪ್ರೊಟೀನ್ ಗಳ ಅಗತ್ಯ ಮೂಲವಾಗಿದೆ. ಇದು ಚಯಾಪಚಯ /ಜೀರ್ಣ ಕ್ರಿಯೆ ಆರೋಗ್ಯಕ್ಕೆ ಸಹಾಯಕಾರಿ.

ಇಂತಹ ಹಲವಾರು ಆಹಾರಗಳು ಉತ್ತಮ ಗುಣಮಟ್ಟವನ್ನು ಹೊಂದಿದ್ದು ಸದೃಢ ದೇಹ ಆರೋಗ್ಯಕ್ಕೆ ಅತ್ಯಗತ್ಯವಾಗಿವೆ.

English summary

Must have 20 foods for body building

When you’re aiming towards a good physique, solely concentrating on intensive workout sessions will not be enough. A healthy diet is as important as exercise. Here is a list of 30 types of food that every bodybuilder must consume.
X
Desktop Bottom Promotion