For Quick Alerts
ALLOW NOTIFICATIONS  
For Daily Alerts

ಈ ವಿಧಾನ ಪಾಲಿಸಿದರೆ, 100% ತೆಳ್ಳಗಾಗುವಿರಿ

|

ದಪ್ಪಗಾಗುತ್ತಿದ್ದೇನೆ, ತೆಳ್ಳಗಾಗಲು ಏನು ಮಾಡಬೇಕೆನ್ನುವುದೇ ಹೆಚ್ಚಿನವರ ಚಿಂತೆಯಾಗಿರುತ್ತದೆ. ತೆಳ್ಳಗಾಗಲು ಈ ಮಾತ್ರೆ ತಿನ್ನಿ, ಈ ಪುಡಿ ತಿನ್ನಿ ಹೀಗೆ ಹಲವಾರು ಜಾಹೀರಾತುಗಳನ್ನು ನೋಡಿ ಅವುಗಳನ್ನು ತಿನ್ನಲು ಹೋಗಬೇಡಿ. ಏಕೆಂದರೆ ಇವುಗಳನ್ನು ತಿಂದರೆ ಒಂದು ವೇಳೆ ಅಡ್ಡ ಪರಿಣಾಮ ಬೀರಬಹುದು. ತೂಕ ಕಮ್ಮಿ ಮಾಡಲು ಸುಲಭ ಮಾರ್ಗ ಅನುಸರಿಸುವ ಬದಲು ಸ್ವಲ್ಪ ಶ್ರಮ ಪಟ್ಟರೂ ಪರ್ವಾಗಿಲ್ಲ, ವ್ಯಾಯಾಮದ ದಾರಿಯನ್ನು ಕಂಡು ಕೊಳ್ಲಿ. ಇದರಿಂದ ದೇಹದ ತೂಕ ಕಮ್ಮಿಯಾಗುವುದರ ಜೊತೆಗೆ ಇನ್ನು ಹಲವು ಪ್ರಯೋಜನಗಳನ್ನು ಕಂಡುಕೊಳ್ಳಬಹುದು.

ತೂಕ ಕಮ್ಮಿಯಾಗಲು ನಿಯಮಿತವಾದ ವ್ಯಾಯಾಮದ ಜೊತೆ ಆಹಾರಕ್ರಮ ಪಾಲಿಸಿ. ಎಣ್ಣೆ ಪದಾರ್ಥಗಳನ್ನು, ರುಚಿಯಾದ ಪದಾರ್ಥಗಳನ್ನು ದೂರವಿಡಿ ಎಂದು ಹೇಳುತ್ತಿಲ್ಲ. ಅವುಗಳನ್ನು ಮಿತಿಯಲ್ಲಿ ಅಪರೂಪಕ್ಕೆ ತಿನ್ನಿ. ದಿನನಿತ್ಯ ತಿನ್ನುವ ಆಹಾರದಲ್ಲಿ ಈ ಕೆಳಗಿನ ವಸ್ತುಗಳನ್ನು ಸೇರಿಸಿ, ಈ ರೀತಿ ಮಾಡಿದ್ದೇ ಆದರೆ 3-4 ತಿಂಗಳಿನಲ್ಲಿಯೇ ಸಾಕಷ್ಟು ತೂಕವನ್ನು ಕಳೆದುಕೊಳ್ಳುವಿರಿ ಎಂದು ದೃಢವಾಗಿ ಹೇಳಬಲ್ಲೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ದಿನಾ ಬೆಳಗ್ಗೆ ಬರೀ ಹೊಟ್ಟೆಯಲ್ಲಿ 1-2 ಎಸಳು ಬೆಳ್ಳುಳ್ಳಿ ತಿನ್ನಿ. ಪ್ರಾರಂಭದಲ್ಲಿ ತಿನ್ನಲು ಸ್ವಲ್ಪ ಕಷ್ಟವಾಗಬಹುದು. ಈ ರೀತಿಯಲ್ಲಿ ತಿಂದರೆ ದೇಹದ ತೂಕ ಕಮ್ಮಿಯಾಗುವುದು ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು.

ಮೊಟ್ಟೆ

ಮೊಟ್ಟೆ

ಪ್ರತೀದಿನ 1 ಮೊಟ್ಟೆ ತಿನ್ನಿ. ಮೊಟ್ಟೆ ಬೇಡದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಮೊಟ್ಟೆಯ ಹಳದಿಯನ್ನು ಯಾವಾಗಲೂ ತಿನ್ನಬೇಡಿ. ಬೆಳಗಿನ ಬ್ರೇಕ್ ಫಾಸ್ಟ್ ಆಗಿ ಮೊಟ್ಟೆ ತಿಂದರೆ ಹಳದಿ ತಿನ್ನಬಹುದು.

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ

ಅಡುಗೆಯಲ್ಲಿ ಸಾಸಿವೆ ಎಣ್ಣೆ ಬಳಸಿ. ಇದರಿಂದ ಅಡುಗೆಯೂ ರುಚಿಕರವಾಗಿರುತ್ತದೆ, ಬೇಗನೆ ದೇಹದ ತೂಕ ಕಮ್ಮಿ ಮಾಡಿಕೊಳ್ಳಬಹುದು.

ಗೋಧಿ

ಗೋಧಿ

ಗೋಧಿಯಿಂದ ಮಾಡಿದ ಪದಾರ್ಥಗಳನ್ನು ತಿನ್ನಿ. ಅನ್ನ ತಿನ್ನುವ ಅಭ್ಯಾಸವಿರುವವರು ಒಂದು ಹೊತ್ತು ಮಾತ್ರ ಅನ್ನ ತಿನ್ನಿ. ಬೆಳಗ್ಗೆ ಹಾಗೂ ರಾತ್ರಿ ಚಪಾತಿ ತಿನ್ನಿ.

ನವಣೆ, ರಾಗಿ

ನವಣೆ, ರಾಗಿ

ನವಣೆ, ರಾಗಿ, ಜೋಳ ಈ ರೀತಿಯ ಆಹಾರ ಪದಾರ್ಥಗಳು ದೇಹದ ತೂಕವನ್ನು ಹೆಚ್ಚಿಸುವುದಿಲ್ಲ . ಇವುಗಳನ್ನು ತಿಂದರೆ ದೇಹದಲ್ಲಿ ಶಕ್ತಿ ಹೆಚ್ಚುತ್ತದೆ.

ಹೆಸರು ಬೇಳೆ

ಹೆಸರು ಬೇಳೆ

ಹೆಸರು ಕಾಳನ್ನು ಮೊಳಕೆ ಬರಿಸಿ ತಿಂದರೆ ಒಳ್ಳೆಯದು. ಏನಾದರೂ ತಿನ್ನಬೇಕೆಂದು ಅನಿಸುವಾಗ ಹೆಸರುಬೇಳೆಯಿಂದ ತಯಾರಿಸಿದ ಸ್ನ್ಯಾಕ್ಸ್ ತಿನ್ನಬಹುದು. ಹೆಸರುಬೇಳೆಯಲ್ಲಿ ವಿಟಮಿನ್ ಎ, ಬಿ, ಸಿ ಮತ್ತು ಇ ಇದ್ದು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ.

ಮಜ್ಜಿಗೆ

ಮಜ್ಜಿಗೆ

ಮಜ್ಜಿಗೆಯಲ್ಲಿ ಕೊಬ್ಬಿನಂಶ ಕಡಿಮೆ ಇರುತ್ತದೆ. ಮಜ್ಜಿಗೆ ದೇಹದ ತೂಕವನ್ನು ಕಡಿಮೆ ಮಾಡುತ್ತದೆ, ಹಾಗೂ ದೇಹದಲ್ಲಿ ನೀರಿನಂಶವನ್ನು ಕಾಪಾಡಿ, ಸುಸ್ತನ್ನು ನಿವಾರಿಸುತ್ತದೆ.

ಸಿಟ್ರಸ್ ಇರುವ ಆಹಾರಗಳು

ಸಿಟ್ರಸ್ ಇರುವ ಆಹಾರಗಳು

ಸಿಟ್ರಸ್ ಆಹಾರಗಳನ್ನು ಪ್ರತೀದಿನ ತಿನ್ನಬೇಕು. ನಿಂಬೆ ಜ್ಯೂಸ್, ಕಿತ್ತಳೆ ಇವುಗಳು ದೇಹದಲ್ಲಿರುವ ಕೊಬ್ಬನ್ನು ಕರಗಿಸುತ್ತದೆ, ಆರೋಗ್ಯವನ್ನು ಹೆಚ್ಚಿಸುತ್ತದೆ.

ಕರಿಬೇವಿನ ಎಲೆ

ಕರಿಬೇವಿನ ಎಲೆ

ಬೆಳ್ಳುಳ್ಳಿ 1 ಎಸಳು ಹಾಗೂ ಸ್ವಲ್ಪ ಕರಿಬೇವಿನ ಎಲೆಯನ್ನು ದಿನಾ ಬೆಳಗ್ಗೆ ತಿನ್ನಿ. ಕೆಲವೇ ತಿಂಗಳಿನಲ್ಲಿ ತೂಕ ಕಮ್ಮಿಯಾಗದಿದ್ದರೆ ಮತ್ತೆ ಕೇಳಿ.

ಏಲಕ್ಕಿ, ಚಕ್ಕೆ, ಲವಂಗ

ಏಲಕ್ಕಿ, ಚಕ್ಕೆ, ಲವಂಗ

ಇವುಗಳನ್ನು ಹಾಕಿದ ಅಡುಗೆಯನ್ನು ತಿನ್ನಿ. ಏಕೆಂದರೆ ಇವುಗಳು ದೇಹದ ಕೊಬ್ಬನ್ನು ಕಡಿಮೆ ಮಾಡುವುದರ ಜೊತೆಗೆ ದೇಹಕ್ಕೆ ಅಗತ್ಯವಾದ ಅನೇಕ ಪೋಷಕಾಂಶಗಳನ್ನು ಒದಗಿಸುತ್ತದೆ.

English summary

Healthy Way To Reduce Weight | Tips For Weight Loss | ದೇಹದ ತೂಕವನ್ನು ಕಮ್ಮಿ ಮಾಡಲು ಆರೋಗ್ಯಕರ ವಿಧಾನ | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Well let me tell you that, there are few Indian foods that are the best sources of weight loss. Few healthy Indian foods will help you lose weight and also provide essential nutrients and vitamins that are required by the body.
X
Desktop Bottom Promotion