For Quick Alerts
ALLOW NOTIFICATIONS  
For Daily Alerts

ಹೊಟ್ಟೆ ಬೊಜ್ಜು ಕರಗಿಸಲು ದಿ ಬೆಸ್ಟ್ ಟಿಪ್ಸ್

|

ಹೊಟ್ಟೆ ಬೊಜ್ಜು ಸುಲಭದಲ್ಲಿ ಬಂದು ಬಿಡುತ್ತದೆ, ಆದರೆ ಅದನ್ನು ಹೋಗಿಸುವುದು ಮಾತ್ರ ಅಷ್ಟು ಸುಲಭವಲ್ಲ. ಹೊಟ್ಟೆ ಬೊಜ್ಜು ಒಂಥರಾ ನಮ್ಮ ಶತ್ರು ಇದ್ದ ಹಾಗೇ, ನಮ್ಮ ಅಂದ, ಆತ್ಮ ವಿಶ್ವಾಸ ಎಲ್ಲವನ್ನೂ ಕುಗ್ಗಿಸಿ ಬಿಡುತ್ತದೆ. ನಮ್ಮ ಆಕರ್ಷಕ ಮೈಮಾಟವನ್ನೇ ಹಾಳು ಮಾಡಿ ಬಿಡುತ್ತದೆ. ಹೊಟ್ಟೆ ಬೊಜ್ಜು ಬಂದರೆ ಅದನ್ನು ಹೋಗಲಾಡಿಸಲು ಕಷ್ಟ ಪಡುವುದಕ್ಕಿಂತ, ಅದನ್ನು ಬರದಂತೆ ತಡೆಯುವ ಮುನ್ನೆಚ್ಚರಿಕೆ ಕ್ರಮಗಳು ಬೆಸ್ಟ್ ಅಲ್ಲವೇ?

ಇಲ್ಲಿ ನಾವು ಹೊಟ್ಟೆ ಬೊಜ್ಜು ಬರುವುದನ್ನು ತಡೆಯಲು ದಿ ಬೆಸ್ಟ್ ಟಿಪ್ಸ್ ನೀಡಿದ್ದೇವೆ ನೋಡಿ:

 ಬಿಸಿ ನೀರು ಸೂಪರ್

ಬಿಸಿ ನೀರು ಸೂಪರ್

ಪ್ರತೀ ಊಟದ ನಂತರ ಬಿಸಿ ನೀರು ಕುಡಿಯಿರಿ. ಬೆಳಗ್ಗೆ ಒಂದು ಲೋಟ ಬಿಸಿ ನೀರಿಗೆ ಸ್ವಲ್ಪ ನಿಂಬೆ ರಸ ಹಿಂಡಿ ಕುಡಿದರೆ ಹೊಟ್ಟೆ ಬೊಜ್ಜು ಕರಗುವುದು.

ಉಪ್ಪನ್ನು ಕಡಿಮೆ ತಿನ್ನಿ

ಉಪ್ಪನ್ನು ಕಡಿಮೆ ತಿನ್ನಿ

ಉಪ್ಪನ್ನು ಕಡಿಮೆ ತಿಂದರೆ ಒಳ್ಳೆಯದು. ಹೆಚ್ಚು ಉಪ್ಪು ತಿಂದರೆ ಮೈ ತೂಕ ಹೆಚ್ಚಾಗುವುದು, ಸ್ಲಿಮ್ ಆದ ಮೈ ಕಟ್ಟು ಬೇಕೆಂದು ಬಯಸುವವರು ಉಪ್ಪನ್ನು ಕಡಿಮೆ ಪ್ರಮಾಣದಲ್ಲಿ ತಿನ್ನಿ, ಅಲ್ಲದೆ ಉಪ್ಪು ಆರೋಗ್ಯಕ್ಕೂ ಒಳ್ಳೆಯದಲ್ಲ. ಬಿಪಿ ಉಂಟು ಮಾಡುತ್ತದೆ.

ಜೇನು

ಜೇನು

ಸಕ್ಕರೆ ಬದಲು ನೈಸರ್ಗಿಕ ಸಿಹಿ ಪದಾರ್ಥವಾದ ಜೇನನ್ನು ಬಳಸಿ. ಇದನ್ನು ಬೆಳಗ್ಗೆ ನಿಂಬೆ ಪಾನೀಯಾ ಜೊತೆ ಮಿಕ್ಸ್ ಮಾಡಿ ಕುಡಿದರೆ ಹೆಚ್ಚಿದ ಮೈ ತೂಕವೂ ಕಡಿಮೆಯಾಗುವುದು.

ಚಕ್ಕೆ ಕಾಫಿ ಅಥವಾ ಚಕ್ಕೆ ಹಾಕಿ ಕುಡಿಯಿರಿ

ಚಕ್ಕೆ ಕಾಫಿ ಅಥವಾ ಚಕ್ಕೆ ಹಾಕಿ ಕುಡಿಯಿರಿ

ಚಕ್ಕೆ ಬೇಗನೆ ಹೊಟ್ಟೆ ಬೊಜ್ಜನ್ನು ಕರಗಿಸುವ ಸಾಮರ್ಥ್ಯ ಹೊಂದಿದೆ. ಚಕ್ಕೆ ಹಾಕಿ ಕಾಫಿ ಅಥವಾ ಟೀ ಮಾಡಿ ಕುಡಿದರೆ ಹೊಟ್ಟೆ ಬೊಜ್ಜು ಬೇಗನೆ ಕರಗುವುದು.

ಡ್ರೈ ಫ್ರೂಟ್ಸ್

ಡ್ರೈ ಫ್ರೂಟ್ಸ್

ನಿಮ್ಮ ಮೈ ತೂಕವನ್ನು ಕಡಿಮೆ ಮಾಡಬೇಕೆಂದರೆ ಒಳ್ಳೆಯ ಕೊಬ್ಬಿನಂಶವಿರುವ ಆಹಾರ ತಿನ್ನಬೇಕು. ಬಾದಾಮಿ, ವಾಲ್ ನಟ್ಸ್ ಇವೆಲ್ಲಾ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು.

ಬೆಣ್ಣೆ ಹಣ್ಣು

ಬೆಣ್ಣೆ ಹಣ್ಣು

ಬೆಣ್ಣೆ ಹಣ್ಣಿನಲ್ಲಿ ಒಳ್ಳೆಯ ಕೊಬ್ಬಿನಂಶವಿದೆ. ಅಲ್ಲದೆ ಇದು ತ್ವಚೆ ಸೌಂದರ್ಯವನ್ನೂ ಹೆಚ್ಚಿಸುತ್ತದೆ, ಈ ರೀತಿಯ ಒಳ್ಳೆಯ ಕೊಬ್ಬಿನಂಶ ನಿಮ್ಮ ಹೊಟ್ಟೆಯನ್ನು ಬೇಗನೆ ತುಂಬುವುದರಿಂದ ಅತೀ ಹೆಚ್ಚು ತಿನ್ನುವ ಅಭ್ಯಾಸವನ್ನು ನಿಯಂತ್ರಿಸುತ್ತದೆ.

ಕಿತ್ತಳೆ. ನಿಂಬೆ ಹಣ್ಣು

ಕಿತ್ತಳೆ. ನಿಂಬೆ ಹಣ್ಣು

ಬೆಳಗ್ಗೆ ದಿನಾ ಒಂದು ಕಿತ್ತಳೆ ತಿನ್ನಿ, ಜೀರ್ಣಕ್ರಿಯೆಗೆ ಸಹಾಯ ಮಾಡಿ ಸೊಂಟ ಮತ್ತು ಹೊಟ್ಟೆಯ ಸುತ್ತ ಬೊಜ್ಜು ಬೆಳೆಯುವುದನ್ನು ತಡೆಯುತ್ತದೆ.

ಮೊಸರು

ಮೊಸರು

ದಿನಾ ಸ್ವಲ್ಪ ಮೊಸರು ತಿನ್ನಿ. ಇದು ದೇಹಕ್ಕೆ ಅಗತ್ಯವಾದ ಪೋಷಕಾಂಶವನ್ನು ನೀಡುತ್ತದೆ, ಮೊಸರು ತಿಂದರೆ ಜೀರ್ಣಕ್ರಿಯೆ ಸರಿಯಾಗಿ ನಡೆಯುವುದು. ಸಮತೂಕ ಹೊಂದಲು ಜೀರ್ಣಕ್ರಿಯೆ ಸರಿಯಾಗಿ ನಡೆಯುವುದು ಕೂಡ ಅವಶ್ಯಕ.

ಗ್ರೀನ್ ಟೀ

ಗ್ರೀನ್ ಟೀ

ಗ್ರೀನ್ ಟೀ ಹೊಟ್ಟೆ ಬೊಜ್ಜು ಕರಗಿಸುವಲ್ಲಿ ರಿಯಲೀ ವಂಡರ್ ಫುಲ್. ದಿನಾ ಒಂದು ಲೋಟ ಗ್ರಿನ್ ಟೀ ಕುಡಿಯಿರಿ, ಇದರಲ್ಲಿ antioxidants ಇರುವುದರಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚುವುದು.

ಮೀನು

ಮೀನು

ಗ್ರಿಲ್ ಮಾಡಿದ ಮೀನು, ಮೀನಿನ ಸಾರು ಇವುಗಳು ಮೈ ತೂಕ ಹೆಚ್ಚಿಸುವುದಿಲ್ಲ, ಆದರೆ ನಮ್ಮನ್ನು ಆರೋಗ್ಯವಂತರನ್ನಾಗಿ ಮಾಡುತ್ತದೆ.

 ಬೆಳ್ಳುಳ್ಳಿ

ಬೆಳ್ಳುಳ್ಳಿ

ಎರಡು ಎಸಳು ಹಸಿ ಬೆಳ್ಳುಳ್ಳಿ ತಿಂದರೆ ಹೊಟ್ಟೆ ಬೊಜ್ಜು ಬೇಗನೆ ಕರಗುವುದು. ಪ್ರತೀದಿನ ತಿನ್ನುತ್ತಿದ್ದರೆ ಹೊಟ್ಟೆ ಬೊಜ್ಜು ಬೆಳೆಯುತ್ತದೆ ಎಂಬ ಟೆನ್ಷನ್ ಇರುವುದಿಲ್ಲ. ಬೆಳ್ಳುಳ್ಳಿ ಆರೊಗ್ಯಕ್ಕೂ ತುಂಬಾ ಒಳ್ಳೆಯದು.

ಶುಂಠಿ

ಶುಂಠಿ

ಶುಂಠಿ ಟೀ ಕುಡಿಯಿರಿ ಒಳ್ಳೆಯದು. ಅಡುಗೆಗೆ ಶುಂಠಿ ಹಾಕಿ, ಶುಂಠಿ ಹೊಟ್ಟೆಯಲ್ಲಿರುವ ಕೊಬ್ಬನ್ನು ಕರಗಿಸುವ ಸಾಮರ್ಥ್ಯ ಹೊಂದಿದೆ.

English summary

Get Rid Of Lower Belly Fat

To get rid of lower belly fat, there are a few tips and tricks you can incorporate in your diet to speed up the process. Here are some of the foods which help you get rid of lower belly fat.
X
Desktop Bottom Promotion