For Quick Alerts
ALLOW NOTIFICATIONS  
For Daily Alerts

ತಲೆನೋವು ತರುವ ಆಹಾರಗಳು

By Madhumati Hiremath
|

ತಲೆನೋವು ತರುವ ಆಹಾರ

ತಲೆಯಲ್ಲಿನ ಅಸ್ವಸ್ಥತೆ ಅಥವಾ ಒತ್ತಡ ತರಹದ ಸಂವೇದನೆಯನ್ನು ತಲೆನೋವು ಎನ್ನಬಹುದು. ತಲೆನೋವಿನ ಸಾಮಾನ್ಯ ವಿಧವೆಂದರೆ, ಮೈಗ್ರೇನ್. ಸಾಮಾನ್ಯವಾಗಿ ತಲೆಯ ಒಂದು ಬದಿಯಲ್ಲಿ ಸಂಭವಿಸುವ ತಲೆನೋವನ್ನು ಮೈಗ್ರೇನ್ ಎಂದು ವಿವರಿಸಬಹುದು.
ಮೈಗ್ರೇನಿಗೆ ನಾನಾ ಕಾರಣಗಳಿರಬಹುದು. ವಂಶಪಾರಂಪರ್ಯವಾಗಿಯೂ ಬರುವ ಈ ಮೈಗ್ರೇನ್ ತಲೆನೋವು, ಶೇಕಡಾ 30 ರಷ್ಟು ಜನರಿಗೆ ಆಹಾರ - ಪಾನೀಯಗಳ ವ್ಯತ್ಯಾಸದಿಂದಲೂ ಸಂಭವಿಸುತ್ತದೆ. ಇವುಗಳನ್ನು ಹೊರತುಪಡಿಸಿ ವಿವಿಧ ಗ್ರಂಥಿಗಳ ಸ್ರವಿಕೆಯಲ್ಲಾಗುವ ಬದಲಾವಣೆ, ಒತ್ತಡ, ಅನಿಯಮಿತ ನಿದ್ರೆ, ಖಿನ್ನತೆಗಳಿಂದಲೂ ಮೈಗ್ರೇನ್ ಸಂಭವಿಸಬಹುದು.
ನೀವು ಕೂಡ ಮೇಲಿಂದ ಮೇಲೆ ತಲೆನೋವು ಅಥವಾ ಮೈಗ್ರೇನ್ ನಿಂದ ಬಳಲುತ್ತಿದ್ದೀರೇ? ಈ ಸಮಸ್ಯೆ ನಿಮ್ಮದೊಬ್ಬರದೆಂದು ತಿಳಿಯ ಬೇಡಿ ಇತ್ತೀಚೆಗೆ ಅನೇಕರು ಇಂತಹ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಸೈನಸಿಟಿಸ್ , ವೃತ್ತಿ ಅಥವಾ ಕೌಟುಂಬಿಕ ಒತ್ತಡ ಮತ್ತು ಮಾನಸಿಕ ಒತ್ತಡಗಳ ಕಾರಣದಿಂದ ತೆಲೆನೋವು ಬರುವುದು ಸಹಜ. ಆದರೆ ಕೆಲವರಿಗೆ ಅವರು ಅನುಸರಿಸುವ ಆಹಾರಪದ್ದತಿಯಿಂದಲೂ ತಲೆನೋವು ಕಾಣಿಸಿಕೊಳ್ಳುತ್ತದೆ.
ಹೌದು. ನಿಮ್ಮ ದೇಹಕ್ಕೆ, ನಿಮ್ಮ ಸ್ವಾಸ್ಥ್ಯಕ್ಕೆ ಹೊಂದಿಕೊಳ್ಳುವಂತಹ ಆಹಾರ ಪದ್ದತಿಯನ್ನು ಅನುಸರಿಸುವದೊಂದೇ ಇದಕ್ಕಿರುವ ದಾರಿ. ಈ ನಿಮ್ಮ ದಾರಿಯನ್ನು ಸುಗಮಗೊಳಿಸಲೆಂದೇ ಆಹಾರಕ್ರಮ ಹೇಗಿರಬೇಕೆಂಬ ಕೆಲವು ಸಲಹೆಗಳನ್ನು ಹೊತ್ತುತಂದಿದ್ದೇವೆ.

ಈ ಸಲಹೆಗಳ ಸದುಪಯೋಗಪಡೆದು ನಿ+ಮ್ಮಗೆ ತೆಲೆನೋವಿನಿಂದ ಮುಕ್ತಿಸಿಕ್ಕರೆ ನಮ್ಮ ಪ್ರಯತ್ನ ಸಾರ್ಥಕ.

1 .ಪಥ್ಯ

1 .ಪಥ್ಯ

ಇದ್ದಕ್ಕಿದ್ದಂತೆ ದಿನದ ಆಹಾರಕ್ರಮದಲ್ಲಿ ಬದಲಾವಣೆ ಮಾಡಿಕೊಂಡರೆ, ಅತ್ಯಂತ ಕಡಿಮೆ ಕ್ಯಾಲೋರಿಯುಳ್ಳ ಆಹಾರ ಸೇವಿಸಲು ಪ್ರಾರಂಭಿಸಿದರೆ(ಹಠಾತ್ ಪಥ್ಯ) ಸಾಮಾನ್ಯವಾಗಿ ತಲೆನೋವು ಕಾಣಿಸಿಕೊಳ್ಳುತ್ತದೆ. ಅಲ್ಲದೇ ಊಟ ಬಿಡುವುದು ಅಥವಾ ಊಟಗಳ ಮಧ್ಯ ಹೆಚ್ಚು ಸಮಯಗಳ ಅಂತರವನ್ನು ಕಾಯ್ದುಕೊಳ್ಳುವದರಿಂದಲೂ ತಲೆನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ದೇಹಕ್ಕೆ ಬೇಕಾಗಿರುವದಕ್ಕಿಂತ ಕಡಿಮೆ ಪ್ರಮಾಣದಲ್ಲಿ ನೀರು ಕುಡಿಯುವದರಿಂದಲೂ ಸಹ ತಲೆನೋವು ಬರುತ್ತದೆ.

2. ತೈರಮಿನ್

2. ತೈರಮಿನ್

ತೈರಮಿನ್ ಎಂಬುದೊಂದು ಅಮೈನೊ ಆಸಿಡ್. ಇದು

ಮಿದುಳಿನಲ್ಲಿನ ಸಿರೊಟೋನಿನ್ ಮಟ್ಟವನ್ನು ಕುಂಟಿತಗೊಳಿಸುವ ಮೂಲಕ ರಕ್ತನಾಳಗಳನ್ನು ಹಿಗ್ಗಿಸುವದರಿಂದ ತಲೆನೋವು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ತೈರಮಿನ್ ಯುಕ್ತ ಖಾದ್ಯಗಳಾದ ಕೆಂಪು ವೈನ್,ಚೀಜ್, ಚಾಕೋಲೇಟ್, ಅಲ್ಕೋಹಾಲ್ ಯುಕ್ತ ಪೇಯಗಳು, ಸಂಸ್ಕರಿಸಿದ ಮಾಂಸಗಳನ್ನು ವರ್ಜಿಸುವುದು ಯೋಗ್ಯ.

3. ಅಲ್ಕೋಹಾಲ್ ಯುಕ್ತ ಪಾನೀಯಗಳು

3. ಅಲ್ಕೋಹಾಲ್ ಯುಕ್ತ ಪಾನೀಯಗಳು

ಡಾ ದುಬೆ ಹೇಳುವಂತೆ, ಕೆಂಪು ವೈನ್ ನಲ್ಲಿ ತೈರಮಿನ್ ಮತ್ತು ಫೆನೊಲ್ ಎಂದು ಕರೆಯಲ್ಪಡುವ ಫ್ಯಟೋರಾಸಾಯನಿಕವಿರುತ್ತಿದ್ದು ಇದು ಮೈಗ್ರೇನನ್ನು ಪಚೋಧಿಸುತ್ತದೆ. ಕೆಲವು ಜನರಿಗೆ, ಯಾವುದೇ ರೀತಿಯ ಮದ್ಯವನ್ನು ಕುಡಿದರೂ ಮೈಗ್ರೇನ್ ಭಾಧಿಸಬಹುದು. ಬಿಯರ್ನ ಇತರ ಸಂಯುಕ್ತಗಳಾದ ವೈನ್ ಮತ್ತು ವಿಸ್ಕಿಗಳಲ್ಲಿರುವ ಸಿರೊಟೋನಿನ್ ಮಟ್ಟವು ಸಹ ( ಸಂತೋಷದ ಹಾರ್ಮೋನ್ ) ಮೆದುಳಿನಲ್ಲಿ ಮೈಗ್ರೇನ್ ಪ್ರಚೋದಕವಾಗಬಲ್ಲವು.

4. ಚಾಕೋಲೇಟ್

4. ಚಾಕೋಲೇಟ್

ಚಾಕೋಲೇಟ್ ಗಳಲ್ಲಿ ಕೂಡ ತೈರಮಿನ್ ಅಂಶವಿರುವದರಿಂದ ಅವು ಸಹ ಮೈಗ್ರೇನ್ ಪ್ರಚೋದಕಗಳಂತೆ ವರ್ತಿಸಬಹುದು. ಆದರೆ ಹೆಚ್ಚು ಮಹಿಳೆಯರು ಒತ್ತಡ ಮತ್ತು ಗ್ರಂಥಿಗಳ ಸ್ರವಿಕೆಯ ಬದಲಾವಣೆಯ ಸಮಯದಲ್ಲೇ ಚಾಕೋಲೇಟ್ ಗಾಗಿ ಹಂಬಲಿಸುವದರಿಂದ ಈ ಎಲ್ಲಾ ಅಂಶಗಳು ಒಟ್ಟಿಗೇ ಸೇರಿ ತಲೆನೋವು ತರಿಸುವ ಸಾಧ್ಯತೆ ಇದೆ. ಕೊಬ್ಬಿನಂಶ ಹೆಚ್ಚಿರುವ ಚಾಕೋಲೇಟ್ ಪ್ರೀಯರಿಗಂತೂ ತಲೆನೋವು ಆಗಾಗ ಬರುತಲೇ ಇರುತ್ತದೆ.

5 ಕಾಫಿ

5 ಕಾಫಿ

ಕಾಫಿ ಸೇವನೆಯನ್ನು ಹಠಾತ್ತಾಗಿ ನಿಲ್ಲಿಸಿ ಬಿಟ್ಟರೆ ಕೆಲವರಿಗೆ ತಲೆನೋವು ಬರಬಹುದು. ಕಾಫಿಯು ತಾತ್ಕಾಲಿಕವಾಗಿ ಮಾನಸಿಕ ಜಾಗರೂಕತೆ ಮತ್ತು ಏಕಾಗ್ರತೆ ಹೆಚ್ಚಿಸುವದರಿಂದ ಹೆಚ್ಚು ಜನರಿಗೆ ಇದು ಚಟವಾಗಿ ಪರಿಣಮಿಸಿರುತ್ತದೆ. ಯಾವುದೇ ಚಟವನು ಹಠಾತ್ತನೆ ನಿಲ್ಲಿಸಿದರೆ ಸಾಮಾನ್ಯವಾಗಿ ತಲೆನೋವುಗಳು, ಕಿರಿಕಿರಿ ಮತ್ತು ಇತರ ಋಣಾತ್ಮಕ ಲಕ್ಷಣಗಳು ಉಂಟಾಗಬಹುದು. ಇವು ತೀವ್ರತೆಯಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆಯಾಗಿರುತ್ತವೆ.

6 ಶುಗರ್

6 ಶುಗರ್

ನಮ್ಮೆಲ್ಲರ ಆರೋಗ್ಯಕ್ಕೂ ನೈಸರ್ಗಿಕ ಸಕ್ಕರೆ ತುಂಬಾ ಮುಖ್ಯ. ಕಾರಣ ಎಲ್ಲಾ ಸಸ್ಯಗಳ ಮತ್ತು ಪ್ರಾಣಿಗಳ ಶಕ್ತಿ

ರಾಸಾಯನಿಕವಾಗಿ ಸಕ್ಕರೆಯ ರೂಪದಲ್ಲಿ ಶೇಖರಿತವಾಗಿರುತ್ತದೆ. ನೈಸರ್ಗಿಕ ಸಕ್ಕರೆಯ ಎಲ್ಲಾ ರೂಪದಲ್ಲೂ ಒಂದೇ ತರನಾದ ಮೌಲ್ಯವಿರುತ್ತದೆ( ಪ್ರತೀಗ್ರಾಂಗೆ ನಾಲ್ಕು ಕ್ಯಾಲೊರಿ) . ಕೃತಕ ಸಿಹಿಗಿಂತ ನೈಸರ್ಗಿಕ ಸಕ್ಕರೆ ಉತ್ತಮವಾದುದು. ದೇಸಾಯಿಯವರು ಹೇಳುವಂತೆ ನೂರರಲ್ಲಿ ಒಂದೆರಡು ಭಾಗದಷ್ಟು ಜನರಿಗೆ ಕೃತಕ ಸಿಹಿಯಿಂದಲೂ ತಲೆನೋವು ಬರುತ್ತದೆಯಂತೆ.

ಆದ್ದರಿಂದ ನೀವೂ ಸಹ ಪದೇ ಪದೇ ನಿಮ್ಮನ್ನು ಭಾಧಿಸುವ ತಲೆನೋವು ಅಥವಾ ಮೈಗ್ರೇನ್ ಗೆ ಕಾರಣ ತಿಳಿಯಿರಿ. ಮತ್ತು ಅದರಂತೆ ಆಹಾರೋಪಚಾರ ಮಾಡಿಕೊಳ್ಳಿ.

English summary

Foods that can give you a headache

A headache is a discomfort or a pressure-like sensation in the head. A migraine is a common type of headache that usually occurs on one side of the head.
Story first published: Monday, December 9, 2013, 13:19 [IST]
X
Desktop Bottom Promotion