For Quick Alerts
ALLOW NOTIFICATIONS  
For Daily Alerts

ಸೋಮಾರಿ ಹೆಂಗಸರಿಗೆ ದೈಹಿಕಧೃಡತೆಗೆ ಕೆಲ ಟಿಪ್ಸ್

|

ಕೆಲವು ಹೆಂಗಸರಿಗೆ ವ್ಯಾಯಾಮ ಮಾಡುವುದು ಎಂದರೆ ಸೋಮಾರಿತನ. ಈಚಿನ ದಿನಗಳಲ್ಲಿ ಅವರಿಗೆ ಜಿಮ್ ಅಥವ ಪಾರ್ಕುಗಳಿಗೆ ಹೋಗಲು ಕೂಡ ಸಮಯ ಸಿಗುತ್ತಿಲ್ಲ. ಆದ್ದರಿಂದ ಅವರುಗಳು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಧೃಡವಾಗಿ ಉಳಿಯಲು ಬೋಲ್ಡ್ ಸ್ಕೈ ಕೆಲವು ಸಲಹೆಗಳನ್ನು ನೀಡುತ್ತಿದೆ. ಪರಿಣಿತರ ಪ್ರಕಾರ ಈ ಸಲಹೆಗಳು ಸೋಮಾರಿ ಹೆಂಗಸರಿಗೆ ತಮ್ಮ ದೈಹಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ನೆರವು ನೀಡುತ್ತದೆ.

ಪರಿಣಿತರ ಪ್ರಕಾರ 18 ವರ್ಷ ಮೇಲ್ಪಟ್ಟವರು ತಮ್ಮ ಆರೋಗ್ಯದ ಕಡೆಗೆ ಗಮನ ನೀಡುವುದು ಅತ್ಯಗತ್ಯ. ಇಲ್ಲದೆ ಹೋದರೆ ಚಿಕ್ಕ ವಯಸ್ಸಿನಲ್ಲೇ ಹಲವು ರೋಗಗಳಿಗೆ ತುತ್ತಾಗಬೇಕಾಗುತ್ತದೆ.

ಸೋಮಾರಿ ಹೆಂಗಸರು ಕನಿಷ್ಠ ಪಕ್ಷ ಕೆಲವಾದರೂ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಉದಾಹರಣೆಗೆ ಹೆಂಗಸರ ಹೃದಯವು ಗಂಡಸರಿಗಿಂತ ಬಲಹೀನ. ಆದ್ದರಿಂದ ಇದನ್ನು ಕಾಪಾಡಿಕೊಳ್ಳಲು ಯಾವುದಾದರೂ ರೀತಿಯ ವ್ಯಾಯಾಮ ಅಥವ ಚಟುವಟಿಕೆ ಅತ್ಯಗತ್ಯ.

ಸೋಮಾರಿ ಹೆಂಗಸರಿಗೆ ದೈಹಿಕಧೃಡತೆಗೆ ಕೆಲವು ಟಿಪ್ಸ್

ದೈನಂದಿನ ಚಟುವಟಿಕೆಗಳು

ದೈನಂದಿನ ಚಟುವಟಿಕೆಗಳು

ನೀವು ಸರಿಯಾಗಿ ಗಮನಿಸಿದಿರಾದರೆ ನಿಮ್ಮ ದಿನನಿತ್ಯದ ಕೆಲಸಗಳಲ್ಲೇ ನಿಮ್ಮ ದೇಹಕ್ಕೆ ಒಂದಿಷ್ಟು ವ್ಯಾಯಾಮವನ್ನು ಒದಗಿಸಬಹುದು. ಉದಾಹರಣೆಗೆ ಎಲಿವೇಟರ್ ಅಥವ ಲಿಫ್ಟಿನ ಬದಲು ಮೆಟ್ಟಿಲುಗಳನ್ನು ಬಳಸುವುದು ಇವುಗಳಲ್ಲಿ ಒಂದು.

ಪಜಲ್ಸ್

ಪಜಲ್ಸ್

ದಿನವೊಂದಕ್ಕೆ ಒಂದು ಪಜಲ್ ಆಟ ನಿಮ್ಮ ಮನಸ್ಸನ್ನು ಚುರುಕುಗೊಳಿಸುತ್ತದೆ. ಇದರಿಂದ ನಿಮ್ಮ ಆರೋಗ್ಯಕ್ಕೂ ಪ್ರಯೋಜನಗಳುಂಟು.

ಸಾಕು ಪ್ರಾಣಿ

ಸಾಕು ಪ್ರಾಣಿ

ಒಂದು ನಾಯಿಯನ್ನು ಸಾಕಿಕೊಳ್ಳಿ. ಅದನ್ನು ವಾಕ್ ಕರೆದುಕೊಂಡು ನೆಪದಲ್ಲಿ ನೀವು ವಾಕಿಂಗ್ ಮಾಡಿಬರಬಹುದು. ಇದರಿಂದ ನಿಮ್ಮ ಆರೋಗ್ಯವು ಚೆನ್ನಾಗಿರುತ್ತದೆ.

ಆರೋಗ್ಯಕರ ಊಟ

ಆರೋಗ್ಯಕರ ಊಟ

ನಿಮ್ಮ ಊಟದ ಕಡೆ ಗಮನವಿರಲಿ. ಹೆಚ್ಚು ಕೊಬ್ಬಿನಂಶ ಅಥವ ಕ್ಯಾಲೊರಿಗಳಿರದ ಮತ್ತು ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿಸಿಡಬಲ್ಲ ಆಹಾರವನ್ನು ಬಳಸಿ.

ನೃತ್ಯ

ನೃತ್ಯ

ನಿಮ್ಮ ಇಷ್ಟದ ಹಾಡನ್ನು ಹಾಕಿಕೊಂಡು ನಿಮ್ಮ ದೇಹ ಬೆವರುವವರೆಗೆ ನಿಮ್ಮ ಮನಸೋ ಇಚ್ಛೆ ಕುಣಿಯಿರಿ. ದೇಹಕ್ಕೆ ಇದೊಂದು ಉತ್ತಮ ಚಟುವಟಿಕೆ.

ವಾಹನದ ಪಾರ್ಕಿಂಗ್

ವಾಹನದ ಪಾರ್ಕಿಂಗ್

ನಿಮ್ಮ ಆಫೀಸಿನಿಂದ ಸ್ವಲ್ಪದೂರದಲ್ಲೇ ನಿಮ್ಮ ವಾಹನವನ್ನು ಪಾರ್ಕ್ ಮಾಡಿ ನಡೆದು ಹೋಗಿ. ತಾಜಾ ಗಾಳಿ ಸೇವನೆಯು ನಿಮ್ಮ ದೈಹಿಕ ಧೃಡತೆಯನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಒತ್ತಡವನ್ನು ಕೂಡ ಕಡಿಮೆಗೊಳಿಸುತ್ತದೆ.

ಸಾರ್ವಜನಿಕ ಸಾರಿಗೆ

ಸಾರ್ವಜನಿಕ ಸಾರಿಗೆ

ನೀವು ಹೋಗಬೇಕೆಂದಿರುವ ಸ್ಥಳಕ್ಕೆ ಸಾರ್ವಜನಿಕ ಸಾರಿಗೆಯನ್ನು ಬಳಸಿ. ನೀವು ಇಳಿಯಬೇಕಿರುವ ಸ್ಥಳಕ್ಕಿಂತ ಒಂದು ಸ್ಟಾಪ್ ಮೊದಲೇ ಇಳಿದು ನಡೆದು ಹೋಗುವುದು ಉತ್ತಮ.

ನಿರ್ಜಲೀಕರಣವನ್ನು ತಪ್ಪಿಸಿ

ನಿರ್ಜಲೀಕರಣವನ್ನು ತಪ್ಪಿಸಿ

ಯಾವುದೇ ಕಾಲವಾದರೂ ನೀರನ್ನು ಚೆನ್ನಾಗಿ ಕುಡಿಯಿರಿ. ನೀರು ನಿಮ್ಮ ದೇಹದ ಶುದ್ಧಿಗೆ ಮತ್ತು ನಿಮ್ಮ ಚೈತನ್ಯವನ್ನು ಕಾಪಾಡಿಕೊಳ್ಳಲು ನೆರವು ನೀಡುತ್ತದೆ.

ಪ್ರಧಾನ ಆಹಾರ ಮುಖ್ಯವಾದುದು

ಪ್ರಧಾನ ಆಹಾರ ಮುಖ್ಯವಾದುದು

ನಾವು ತಿನ್ನುವ ಆಹಾರ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. ಆದ್ದರಿಂದ ನೀವು ತಿನ್ನುವ ಮುಖ್ಯ ಆಹಾರದ ಕಡೆ ಗಮನ ಅತ್ಯಗತ್ಯ. ಉದಾಹರಣೆಗೆ ಅನ್ನ. ಇದನ್ನು ಸೋಮಾರಿ ಹೆಂಗಸರು ಎಲ್ಲ ಚಟುವಟಿಕೆಗಳ ನಡುವೆಯು ತಪ್ಸದೆ ತಮ್ಮ ಆಹಾರ ಕ್ರಮದಲ್ಲಿ ಬಳಸುವುದು ಮುಖ್ಯ.

ಶಾಪಿಂಗ್

ಶಾಪಿಂಗ್

ಹೆಂಗಸರಿಗೆ ಶಾಪಿಂಗ್ ಇಷ್ಟ ಅಲ್ಲವೇ? ಶಾಪಿಂಗ್ ನಿಮ್ಮ ಆರೋಗ್ಯ ಮತ್ತು ದೈಹಿಕಧೃಡತೆಯನ್ನು ಕಾಪಾಡಿಕೊಳ್ಳಲು ನೆರವು ನೀಡುತ್ತದೆ.

English summary

Fitness Tips For Women Who Are Lazy

These days there are a lot of women who are pretty lazy when it comes to working out. In fact, women of today have no time to spend at the gym nor take a nice walk in the park. So, in order for you to stay fit and healthy,
Story first published: Friday, December 20, 2013, 13:06 [IST]
X
Desktop Bottom Promotion