For Quick Alerts
ALLOW NOTIFICATIONS  
For Daily Alerts

ಮಹಿಳೆಯರು ದಪ್ಪಗಾದರೆ ಕಂಡು ಬರುವ ತೊಂದರೆಗಳು

|

ಒಬೆಸಿಟಿ ಪುರುಷರ ಹಾಗೂ ಮಹಿಳೆಯರ ಮೇಲೆ ಭಿನ್ನ ರೀತಿಯ ಪರಿಣಾಮ ಬೀರುತ್ತದೆ. ಪುರುಷರಿಗೆ ಒಬೆಸಿಟಿ ದೈಹಿಕ ಸ್ವಾಸ್ಥ್ಯ ಮಾತ್ರ ಹಾಳು ಮಾಡುತ್ತದೆ, ಆದರೆ ಮಹಿಳೆಯರಲ್ಲಿ ದೈಹಿಕ ಸ್ವಾಸ್ಥ್ಯದ ಜೊತೆ ಮಾನಸಿಕ ಸ್ವಾಸ್ಥ್ಯ ಕೂಡ ಹಾಳು ಮಾಡುತ್ತದೆ.

ಪುರುಷರಿಗಿಂತ ಮಹಿಳೆಯರು ಒಬೆಸಿಟಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮದುವೆಯಾಗಿ ಮಕ್ಕಳಾದ ಬಳಿಕ ಹೆಚ್ಚಿನ ಹೆಣ್ಣು ಮಕ್ಕಳು ತುಂಬಾ ದಪ್ಪಗಾಗುತ್ತಾರೆ. ಹೀಗೆ ದಪ್ಪಗಾಗುತ್ತಿರುವಾಗ ದೇಹದ ತೂಕ ಕಮ್ಮಿ ಮಾಡುವತ್ತ ಗಮನ ಹರಿಸದಿದ್ದರೆ ಒಬೆಸಿಟಿ ಬಂದು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುವುದು ಎಚ್ಚರ!

ಒಬೆಸಿಟಿ ಬಂದರೆ ಮಹಿಳೆಯರಲ್ಲಿ ಈ ಕೆಳಗಿನ ಸಮಸ್ಯೆಗಳು ಕಂಡು ಬರುವುದು, ಆದ್ದರಿಂದ ತುಂಬಾ ತೂಕ ಹೆಚ್ಚಾಗಲು ಬಿಡಿಬೇಡಿ.

ಅನಿನಿಯಮಿತ ಮುಟ್ಟು

ಅನಿನಿಯಮಿತ ಮುಟ್ಟು

ಇದ ದಪ್ಪಗಿರುವವರಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆಯಾಗಿದೆ. ಯೌವನ ಪ್ರಾಯದಲ್ಲಿ ಮಹಿಳೆಯರಿಗೆ ಪ್ರತೀ ತಿಂಗಳು ಮುಟ್ಟಾಗುವುದು ಆರೋಗ್ಯದ ದೃಷ್ಟಿಯಿಂದ ಅವಶ್ಯಕ. ಅನಿಯಮಿತ ಮುಟ್ಟು ಗರ್ಭಧಾರಣೆಯಾಗುವುದನ್ನು ತಡೆಯುತ್ತದೆ, ಮನಸ್ಸಿನ ಸ್ವಾಸ್ಥ್ಯದ ಮೇಲೂ ಪರಿಣಾಮ ಬೀರುತ್ತದೆ.

 ಹೃದಯಾಘಾತ

ಹೃದಯಾಘಾತ

ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಹೃದಯಘಾತ ಪ್ರಮಾಣ ಕಡಿಮೆ. ಆದರೆ ಹೈದಯಾಘಾತ ಆದ ಮಹಿಳೆಯರ ಸಂಖ್ಯೆಯಲ್ಲಿ ಒಬೆಸಿಟಿ ಮಹಿಳೆಯರ ಸಂಖ್ಯೆ ಅಧಿಕ.

ಸುಸ್ತು

ಸುಸ್ತು

ದಪ್ಪಗಾಗುತ್ತಿದ್ದಂತೆ ದೇಹದಲ್ಲಿ ಲವಲವಿಕೆ ಕಡಿಮೆಯಾಗಿ ಸುಸ್ತು ಕಂಡು ಬರುವುದು. ಸ್ನಾಯುಗಳು ಬಲಹೀನವಾಗುವುದು.

ಅಧಿಕ ರಕ್ತದೊತ್ತಡ

ಅಧಿಕ ರಕ್ತದೊತ್ತಡ

ದೇಹದಲ್ಲಿ ಬೇಡದ ಕೊಲೆಸ್ಟ್ರಾಲ್ ಹೆಚ್ಚಾಗಿ ಅಧಿಕ ರಕ್ತದೊತ್ತಡ ಉಂಟಾಗುವುದು. ಅಧಿಕ ರಕ್ತದೊತ್ತಡವೇ ಹೃದಯಘಾತಕ್ಕೆ ಕಾರಣ.

ಮೈಕೈನೋವು

ಮೈಕೈನೋವು

ಮೈ ತೂಕ ಹೆಚ್ಚಾದಂತೆ ಮೈಕೈ ನೋವು ಕಂಡು ಬರುವುದು, ಯಾವ ಬಾಮ್ ಗೂ ಈ ನೋವನ್ನು ಕಮ್ಮಿ ಮಾಡಲು ಸಾಧ್ಯವಿಲ್ಲ.

 ಪಾದಗಳಲ್ಲಿ ಬಿರುಕು

ಪಾದಗಳಲ್ಲಿ ಬಿರುಕು

ದೇಹದ ತೂಕ ಹೆಚ್ಚಾದಂತೆ ಪಾದಗಳ ಮೇಲೆ ಹೆಚ್ಚಿನ ಒತ್ತಡ ಬಿದ್ದು ಪಾದಗಳಲ್ಲಿ ಬಿರುಕು ಮತ್ತು ನೋವು ಕಂಡು ಬರುವುದು.

ಪಾಲಿ ಸಿಸ್ಟಿಕ್ ಓವರಿ

ಪಾಲಿ ಸಿಸ್ಟಿಕ್ ಓವರಿ

ಗರ್ಭದಲ್ಲಿ ಚಿಕ್ಕ ಗಡ್ಡೆಗಳು ಉಂಟಾಗುತ್ತದೆ. ಇದು ಬಂದರೆ ಅನಿಯಮಿತ ಮುಟ್ಟಿನ ಸಮಸ್ಯೆ ಮತ್ತು ಗರ್ಭಧಾರಣೆಗೆ ಅಡಚಣೆ ಉಂಟಾಗುವುದು.

ಬಂಜೆತನ

ಬಂಜೆತನ

ಹಾರ್ಮೋನ್ ಗಳಲ್ಲಿ ವ್ಯತ್ಯಾಸ ಉಂಟಾಗಿ ಕೂದಲು ಉದುರುವುದು, ತ್ವಚೆ ಸೌಂದರ್ಯ ಕಮ್ಮಿಯಾಗುವುದು, ಅನಿಯಮಿತ ಮುಟ್ಟು, ಮಾನಸಿಕ ಸ್ವಾಸ್ಥ್ಯ ಹಾಳಾಗುವುದು ಮುಂತಾದ ತೊಂದರೆ ಕಾಣಿಸಿಕೊಳ್ಳುವುದು.

ಸ್ಟ್ರೆಚ್ ಮಾರ್ಕ್ಸ್

ಸ್ಟ್ರೆಚ್ ಮಾರ್ಕ್ಸ್

ಹೊಟ್ಟೆ, ಕೈ, ಕಾಲುಗಳಲ್ಲಿ ಸ್ಟ್ರೆಚ್ ಮಾರ್ಕ್ಸ್ ಬಿದ್ದು ತ್ವಚೆ ಸೌಂದರ್ಯ ಹಾಳಾಗುವುದು.

 ಖಿನ್ನತೆ ಕಾಡುವುದು

ಖಿನ್ನತೆ ಕಾಡುವುದು

ಮೈ ತೂಕ ಹೆಚ್ಚಾದಂತೆ ಮಹಿಳೆಯರಲ್ಲಿ ಖಿನ್ನತೆ ಸಮಸ್ಯೆ ಕಂಡು ಬರುವುದು.

 ಗ್ಯಾಲ ಸ್ಟೋನ್

ಗ್ಯಾಲ ಸ್ಟೋನ್

ಒಬೆಸಿಟಿ ಇರುವವರಿಗೆ ಜೀರ್ಣಕ್ರಿಯೆಯಲ್ಲಿ ತೊಂದರೆ ಕಂಡು ಬರುವುದು. ಇದರಿಂದ ಗ್ಯಾಲ ಸ್ಟೋನ್ ಕೂಡ ಉಂಟಾಗುವುದು.

English summary

Effects Of Obesity In Women | Tips For Health

The effects of obesity in women are also psychological. Increased fat content in the body leads to ugly stretch marks and cracked heels. This leads to depression in women. Here are some of the effects that obesity have in women.
X
Desktop Bottom Promotion