For Quick Alerts
ALLOW NOTIFICATIONS  
For Daily Alerts

ನಿಮ್ಮ ಮೈ ತೂಕ ಕಮ್ಮಿಯಾಗದಿರಲು 7 ಕಾರಣಗಳು

By Super
|

ನೀವು ತೂಕವನ್ನು ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ, ಆದರು ತೂಕ ಇಳಿಮುಖವಾಗುತ್ತಿಲ್ಲವೆ ? ನೀವು ತೂಕವನ್ನು ಲೆಕ್ಕ ಹಾಕಿ ಹಾಕಿ ಸೋತು ಹೋಗಿದ್ದೀರಾ? ಪಥ್ಯ ಮಾಡಿ ಮಾಡಿ ಆಯಾಸಗೊಂಡಿದ್ದೀರಾ? ಎಷ್ಟೆಲ್ಲಾ ಪ್ರಯತ್ನಿಸಿದರೂ ತೂಕ ಕಮ್ಮಿಯಾಗಿಲ್ಲವೇ? ತೂಕದ ವಿಷಯವು ಡಯಟ್, ವ್ಯಾಯಾಮಕ್ಕಿಂತ ಹೆಚ್ಚಾಗಿ ನಿಮ್ಮ ಸಾಮಾನ್ಯ ಆರೋಗ್ಯವನ್ನು ಹೆಚ್ಚು ಅವಲಂಭಿಸಿದೆ ಎಂಬುದನ್ನು ಮರೆಯಬೇಡಿ.

ಇಲ್ಲಿದೆ ನಿಮ್ಮ ತೂಕವನ್ನು ಇಳಿಸಿಕೊಳ್ಳಲು ಸಾಧ್ಯವಾಗದೆ ಇರುವುದಕ್ಕೆ ಇರುವ 7 ಕಾರಣಗಳು

ನಿದ್ದೆ ಸರಿಯಾಗಿ ಮಾಡದಿರುವುದು

ನಿದ್ದೆ ಸರಿಯಾಗಿ ಮಾಡದಿರುವುದು

ನೀವು ಚೆನ್ನಾಗಿ ನಿದ್ದೆ ಮಾಡದಿದ್ದರೆ ನಿಮ್ಮ ದೇಹದಲ್ಲಿರುವ ಹಾರ್ಮೋನುಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಅವುಗಳು ನಿಮ್ಮ ದೇಹದ ಜೈವಿಕ ಕ್ರಿಯೆಗಳ ಮೇಲೆ ಪರಿಣಾಮ ಬೀರಿ ನಿಮ್ಮ ತೂಕ ಏರುವಂತೆ ಮಾಡುತ್ತದೆ. ಇದರ ಜೊತೆಗೆ ನಿದ್ರಾಹೀನತೆ ಇರುವಂತಹವರು ಸಂಜೆ ತಿಂಡಿ(ಸ್ನ್ಯಾಕ್ಸ್) ಅಥವಾ ಕಾಫಿಯನ್ನು ಸೇವಿಸುವ ಅಭ್ಯಾಸವಿರಿಸಿಕೊಂಡಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ.

ಹಾಗಾಗಿ ಪ್ರತಿದಿನವು ನಿರ್ದಿಷ್ಟ ಸಮಯಕ್ಕೆ ಮಲಗಿ, ಬೆಳಗ್ಗೆ ವ್ಯಾಯಾಮ ಅಥವಾ ನಡಿಗೆಗೆ ತಪ್ಪದೆ ಹೋಗಿ, ವಾರಾಂತ್ಯದಲ್ಲಿ ಸಹ ತಪ್ಪಿಸಬೇಡಿ.

ಖಿನ್ನತೆ

ಖಿನ್ನತೆ

ಇಲ್ಲಿ ಎರಡು ರೀತಿಯ ಸಮಸ್ಯೆಯನ್ನು ನಾವು ನೋಡಬಹುದು. ಖಿನ್ನತೆಯಿಂದ ಬಳಲುವವರು ತಮ್ಮ ಖಿನ್ನತೆಯಿಂದಾಗಿ ಹೆಚ್ಚು ಆಹಾರ ಸೇವಿಸುತ್ತಾರೆ. ಮತ್ತೊಂದು ರೀತಿಯಲ್ಲಿ ಖಿನ್ನತೆಯಿಲ್ಲದವರು ಖುಷಿಯಿಂದಾಗಿ, ಆಸೆ ಬುರುಕತನದಿಂದಾಗಿ ಹೆಚ್ಚು ಆಹಾರ ಸೇವಿಸುತ್ತಾರೆ.

ಅದಕ್ಕಾಗಿಯೇ ಹೇಳುವುದು ಆಸೆಯೇ ದುಃಖಕ್ಕೆ ಮೂಲ. ನಿಮ್ಮ ಕಣ್ಣು ಬೇಕೆನಿಸಿದ್ದನ್ನೆಲ್ಲ ತಿನ್ನುವ ಬದಲು, ನಿಮ್ಮ ಹೊಟ್ಟೆಗೆ ಹಿತವೆನಿಸುವ ಹಣ್ಣು, ಒಣ ಹಣ್ಣು ಮತ್ತು ಬೀಜಗಳನ್ನು ತಿನ್ನಿ. ಇದರಿಂದ ನಿಮ್ಮ ಹಸಿವು ನೀಗುತ್ತದೆ. ಹಾಗು ನಿಮ್ಮ ಕೆಟ್ಟ ಆಹಾರ ತಿನ್ನುವ ಚಾಳಿಯು ತಪ್ಪುತ್ತದೆ. ಇದನ್ನು ಬಿಟ್ಟು ಸ್ನ್ಯಾಕ್ಸ್,ಜಂಕ್ ಫುಡ್ ಎಂದು ತಿಂದರೆ ನಿಮ್ಮ ಡಾಕ್ಟರ್ ನಿಮಗೆ ಮಾತ್ರೆಗಳನ್ನು ತಿನ್ನಿಸುವ ಕಾಲ ದೂರವೇನಿಲ್ಲ ಎಂದು ತಿಳಿಯಿರಿ.

ಒತ್ತಡ

ಒತ್ತಡ

ಯಾವಾಗ ನಿಮ್ಮ ದೇಹದಲ್ಲಿನ ಅಡ್ರೆನಲಿನ್ ( ಒತ್ತಡದ ಹಾರ್ಮೋನ್) ಹೆಚ್ಚುತ್ತದೊ ಆಗ ದೇಹವು ಕೊಲೆಸ್ಟ್ರಾಲನ್ನು ಹೆಚ್ಚು ಉತ್ಪಾದಿಸುತ್ತದೆ. ಯಾವಾಗ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೊ, ಆಗ ಸಹಜವಾಗಿ ಹೊಟ್ಟೆ ಹಸಿವು ಕಾಣಿಸಿಕೊಳ್ಳುತ್ತದೆ. ಯಾವಾಗ ನೀವು ಒತ್ತಡಕ್ಕೆ ಒಳಗಾಗುತ್ತೀರೋ ಆಗ ನೀವು ತತ್‍ಕ್ಷಣಕ್ಕೆ ದೊರೆಯುವ ಊಟ, ಕ್ಯಾಲೋರಿ ಹೆಚ್ಚಿರುವ ಸ್ನ್ಯಾಕ್ಸ್ ಅಥವಾ ಆಲ್ಕೋಹಾಲ್‍ ಸೇವಿಸಲು ಪ್ರಾರಂಭಿಸುತ್ತೀರ. ಅಲ್ಲದೆ ಒತಡವು ನಿಮ್ಮಲ್ಲಿ ಜಡತ್ವವನ್ನುಂಟು ಮಾಡುತ್ತದೆ. ಈ ಎಲ್ಲ ವಿಚಾರಗಳು ಸೇರಿ ನಿಮ್ಮ ಸೊಂಟದ ಸುತ್ತಳತೆಯನ್ನು ಹೆಚ್ಚು ಮಾಡುತ್ತವೆ.

ನಿಮಗೆ ಯಾವುದೇ ತೆರನಾದ ಒತ್ತಡಗಳಿದ್ದರು ಸಮಯಕ್ಕೆ ಸರಿಯಾಗಿ ಊಟಮಾಡಿ, ಆರೋಗ್ಯಕರವಾದ ಆಹಾರವನ್ನು ಸೇವಿಸಿ. ಒತ್ತಡಕ್ಕೆ ಒಳಗಾಗುವ ಜನರು ವಾರಾಂತ್ಯಗಳನ್ನು ಹಾಸಿಗೆಯಲ್ಲಿಯೇ ಸೋಮಾರಿಯಾಗಿ ಕಾಲ ಕಳೆಯುತ್ತಾರೆ. ಇದರಿಂದ ಪರಿಸ್ಥಿತಿ ಮತ್ತಷ್ಟು ವಿಷಮವಾಗುತ್ತದೆ. ಒಂದು ವೇಳೆ ನೀವು ಹಾಸಿಗೆಯಿಂದ ಎದ್ದ ಅರ್ಧಗಂಟೆಯ ಒಳಗೆ ಏನನ್ನಾದರು ಸೇವಿಸದೆ ಇದ್ದಲ್ಲಿ, ನಿಮ್ಮ ದೇಹವು ವೇಗವಾಗಿ ಪ್ರತಿಕ್ರಿಯಿಸಲು ಪ್ರಾರಂಭಿಸುತ್ತದೆ. ಅಲ್ಲದೆ ಅದು ಮತ್ತಷ್ಟು ತಿನ್ನುವ ಕಾತರವನ್ನು ಹೆಚ್ಚಿಸುತ್ತದೆ.

ಥೈರಾಯ್ಡ್

ಥೈರಾಯ್ಡ್

ಹೈಪೊ ಥೈರಾಯ್ಡಿಸಂ ಅಥವಾ ಅಂಡರ್ ಆಕ್ಟಿವ್ ಥೈರಾಯ್ಡ್ ನಿಮ್ಮ ದೇಹದ ಜೈವಿಕ ಕ್ರಿಯೆಯನ್ನು ನಿಧಾನಗೊಳಿಸುತ್ತದೆ.ಬಹುತೇಕ ಮಂದಿಯಲ್ಲಿ ಇದರ ಸಮಸ್ಯೆ ಉಂಟಾದಾಗ ತೂಕದಲ್ಲಿ ಏರುಪೇರಾಗಿರುವುದು ಈಗಾಗಲೇ ಸಾಬೀತಾಗಿದೆ. ಇದಕ್ಕೆ ಚಿಕಿತ್ಸೆ ಪಡೆಯುವುದರಿಂದ ಹಾರ್ಮೋನುಗಳನ್ನು ನಿಯಂತ್ರಣದಲ್ಲಿಡಬಹುದು. ಹಾಗು ನಿಮ್ಮ ತೂಕವನ್ನು ಸುಸ್ಥಿತಿಗೆ ತರಬಹುದು.

ಹೈಪೊ ಥೈರಯ್ಡಿಸಂನ ಲಕ್ಷಣಗಳು ಇಂತಿವೆ;- ಸುಸ್ತು, ಮಲಬದ್ಧತೆ, ನೋವು, ಒಣ ಚರ್ಮ, ಸತ್ವರಹಿತ ಕೂದಲು ಮತ್ತು ಶೀತ ಭಾದೆ. ಇವುಗಳಲ್ಲಿ ಯಾವುದಾದರು ಒಂದು ಸಮಸ್ಯೆ ನಿಮ್ಮನ್ನು ನಿರಂತರವಾಗಿ ಕಾಡುತ್ತಿದ್ದರೆ ಮೊದಲು ವೈಧ್ಯರ ಬಳಿ ಹೋಗಿ ರಕ್ತ ಪರೀಕ್ಷಿಸಿಕೊಳ್ಳಿ.

ಪಿಸಿಒಎಸ್ ಸಿಂಡ್ರೊಮ್

ಪಿಸಿಒಎಸ್ ಸಿಂಡ್ರೊಮ್

ಹಲವಾರು ಮಹಿಳೆಯರು ಪಾಲಿಸಿಸ್ಟಿಕ್ ಓವರಿ ಸಿಂಡ್ರೊಮ್ ಅಥವಾ ಪಿಸಿಒಎಸ್ ಸಿಂಡ್ರೊಮ್‍ನಿಂದ ಬಳಲುತ್ತಿರುತ್ತಾರೆ. ದೇಹದಲ್ಲಿರುವ ಅಧಿಕ ಪ್ರಮಾಣದ ಟೆಸ್ಟೊಸ್ಟೆರೋನ್ ತೂಕದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಇದರಿಂದಾಗಿ ದೇಹವು ತನ್ನಲ್ಲಿರುವ ಕ್ಯಾಲೋರಿಗಳನ್ನು ಸಮರ್ಥವಾಗಿ ಸದ್ಬಳಕೆ ಮಾಡಿಕೊಳ್ಳುವುದಿಲ್ಲ.

ರೋಗಿಗಳಿಗೆ ಮೆಟ್‍ಫಾರ್ಮಿನ್ ಚಿಕಿತ್ಸೆ ನೀಡಲಾಗುತ್ತದೆ. ಇದು ದೇಹದಲ್ಲಿರುವ ಹಾರ್ಮೊನ್‍ಗಳ ಸಮತೋಲನವನ್ನು ನಿವಾರಿಸುವ ಇನ್ಸುಲಿನ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಇವರಿಗೆ ಆಹಾರ ಸೇವಿಸುವ ಅಭ್ಯಾಸವನ್ನು ತಿಳಿಸಿಕೊಡಲಾಗುತ್ತದೆ. ಇದನ್ನು ನಿರಂತರವಾಗಿ ಪ್ರಯತ್ನಿಸಿದರೆ ಅದೇ ಅಭ್ಯಾಸವಾಗುತ್ತದೆ. ಜೊತೆಗೆ ವ್ಯಾಯಾಮವನ್ನು ಸಹ ತಪ್ಪದೆ ಮಾಡಬೇಕು. ಪಿಸಿಒಎಸ್ ಸಿಂಡ್ರೊಮ್‍ನ ಇನ್ನಿತರ ಲಕ್ಷಣಗಳು ಎಂದರೆ;- ದೇಹದ ಮೇಲೆ ವಿಪರೀತವಾಗಿರುವ ಕೂದಲುಗಳು, ಅನಿಯಮಿತ ಮುಟ್ಟು, ಸಂತಾನ ಹೀನತೆ, ಕೂದಲು ಉದುರುವುದು ಮತ್ತು ಮೊಡವೆಗಳಾಗುವುದು ಇದರ ಲಕ್ಷಣವಾಗಿದೆ.

ರಾತ್ರಿ ತಡವಾಗಿ ಊಟ ಮಾಡುವುದು

ರಾತ್ರಿ ತಡವಾಗಿ ಊಟ ಮಾಡುವುದು

ಸಂಶೋಧನೆಗಳ ಪ್ರಕಾರ ರಾತ್ರಿ ತಡವಾಗಿ ಊಟ ಮಾಡುವವರು ಅಂದರೆ ಮಲಗುವುದಕ್ಕಿಂತ ಮೊದಲು ಒಂದು ಗಂಟೆ ಅಥವಾ ಎರಡು ಗಂಟೆ ಮೊದಲು ತಿನ್ನುವವರು, ಅದಕ್ಕಿಂತ ಮೊದಲು ಊಟ ಮಾಡುವವರಿಗಿಂತ ಹೆಚ್ಚಿನ ತೂಕವನ್ನು ಹೊಂದಿರುತ್ತಾರೆ ಎಂದು ಧೃಡಪಟ್ಟಿದೆ. ಏಕೆಂದರೆ ಮಲಗುವ ಸಮಯದಲ್ಲಿ ನಿಮ್ಮ ದೇಹಕ್ಕೆ ನೀವು ಯಾವುದೇ ಕೆಲಸ ನೀಡುತ್ತಿಲ್ಲವೆಂದು ತಿಳಿದುಕೊಳ್ಳುವ ದೇಹವು ತನ್ನಲ್ಲಿರುವ ಕ್ಯಾಲೋರಿಗಳನ್ನು ಉಳಿಸಿಕೊಂಡು, ಅವುಗಳನ್ನು ಕೊಬ್ಬಾಗಿ ಪರಿವರ್ತಿಸುತ್ತದೆ.

ಘನ ಆಹಾರವನ್ನು ಮಧ್ಯಾಹ್ನ ಸೇವಿಸಿ. ಆನಂತರ ಸಣ್ಣ ಪ್ರಮಾಣದ ಲಘು ಉಪಾಹಾರವನ್ನು ಸಂಜೆ ಸೇವಿಸಿ. ಅದರಲ್ಲಿಯು ಇದು ಮಲಗುವ ಮೂರು ಗಂಟೆಗಳ ಮೊದಲು ಸೇವಿಸಿ. ಸೂರ್ಯಾಸ್ತಮಾನದ ನಂತರ ನಮ್ಮ ದೇಹದ ಜೀರ್ಣ ಶಕ್ತಿಯ ವೇಗವು ಕುಂಠಿತಗೊಳ್ಳುತ್ತದೆ.

ಕಾರ್ಬೋ ಹೈಡ್ರೆಟ್‍ಗಳ ಪ್ರಮಾಣವನ್ನು ಸಮತೋಲನದಲ್ಲಿಡಿ

ಕಾರ್ಬೋ ಹೈಡ್ರೆಟ್‍ಗಳ ಪ್ರಮಾಣವನ್ನು ಸಮತೋಲನದಲ್ಲಿಡಿ

ನಮಗೆಲ್ಲ ತಿಳಿದಿರುವಂತೆ ನಮ್ಮ ಆರೋಗ್ಯದ ದೃಷ್ಟಿಯಿಂದ ನಮಗೆ ಸಮತೋಲನದಲ್ಲಿರುವ ಆಹಾರ ಬೇಕು. ಆದರೆ ನಮ್ಮಲ್ಲಿ ಅನೇಕರು ತೂಕ ಕಡಿಮೆ ಮಾಡಲು ಕಾರ್ಬೋ ಹೈಡ್ರೆಟ್‍ಗಳನ್ನು ಸೇವಿಸುವುದನ್ನು ಕಡಿಮೆ ಮಾಡುತ್ತಾರೆ. ಆದರೆ ತಿಳಿದಿರಲಿ ನೀವು ಯಾವುದನ್ನು ಕಡಿಮೆ ಮಾಡುತ್ತೀರೋ, ಅದನ್ನೆ ನಿಮ್ಮ ದೇಹವು ಬಯಸಲು ಪ್ರಯತ್ನಿಸುತ್ತದೆಯೆಂದು. ನಮ್ಮ ದೇಹದಲ್ಲಿ ಶಕ್ತಿ ಸಂಚಯವಾಗಲು ಕಾರ್ಬೋ ಹೈಡ್ರೆಟ್‍ಗಳ ಅವಶ್ಯಕತೆ ತೀರ ಹೆಚ್ಚಿದೆಯೆಂದು ಎಂದೆಂದಿಗೂ ಮರೆಯಬಾರದು.

English summary

7 Reasons Why You are Not Losing Weight | Weight Loss Tips | ನಿಮ್ಮ ತೂಕ ಕಮ್ಮಿಯಾಗದಿರಲು 7 ಕಾರಣಗಳು | ಡಯಟ್ ಗೆ ಕೆಲ ಸಲಹೆಗಳು

Trying to lose weight, but cannot? Do you keep piling on the kilos, no matter how many diets you try? The problem may have more to do with your general health than with your food. Here are seven reasons that could be getting in the way of your weight loss routine.
X
Desktop Bottom Promotion