ಯಾವ ಬಗೆಯ ಮೀನಿನ ಅಡುಗೆ ಹೆಚ್ಚು ಆರೋಗ್ಯಕರ?

By:

ಸಮುದ್ರಾಹಾರ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅನ್ನುವುದು ನಮಗೆಲ್ಲಾ ತಿಳಿದಿರುವ ವಿಷಯ. ಅದರಲ್ಲೂ ಮೀನು ಅತೀ ಹೆಚ್ಚಾಗಿ ತಿನ್ನುವ ಸಮುದ್ರಾಹಾರವಾಗಿದೆ. ಮೀನಿನಲ್ಲಿ ಒಮೆಗಾ 3 ಅಂಶ ಹಾಗೂ ಇತರ ಖನಿಜಾಂಶಗಳು ಇರುವುದರಿಂದ ಪೋಷಕಾಂಶದ ಕೊರತೆ ಉಂಟಾಗುವುದಿಲ್ಲ.

ಮೀನು ಆರೋಗ್ಯಕರ, ಆದರೆ ಅದನ್ನು ಸರಿಯಾದ ವಿಧಾನದಲ್ಲಿ ಮಾಡಿ ತಿನ್ನದಿದ್ದರೆ ಅದು ಆರೋಗ್ಯಕರವಲ್ಲ. ಮೀನನ್ನು ತುಂಬಾ ಬೇಯಿಸಿದರೆ ಅದರಲ್ಲಿ ಒಮೆಗಾ 3 ಅಂಶ ನಷ್ಟವಾಗುತ್ತದೆ. ಇದನ್ನು ಕರಿದರೆ ಇದರಲ್ಲಿರುವ ಖನಿಜಾಂಶಗಳು ನಾಶವಾಗುತ್ತದೆ. ಆದ್ದರಿಂದ ಮೀನಿನ ಸಂಪೂರ್ಣ ಪ್ರಯೋಜವನ್ನು ಪಡೆಯಲು ಅದನ್ನು ಹೇಗೆ ಬೇಯಿಸಬೇಕೆಂದು ತಿಳಿದಿರಬೇಕು.

ಮೀನಿನಿಂದ ಯಾವ ರೀತಿಯ ಅಡುಗೆ ತಯಾರಿಸಿದರೆ ಹೆಚ್ಚು ಆರೋಗ್ಯಕರ ಎಂದು ನೋಡೋಣ ಬನ್ನಿ:

ಮಸಾಲೆ ಮೀನು

 ಚಿಲ್ಲಿ, ಟೊಮೆಟೊ ಸಾಸ್ ಹಾಕಿ ಮಾಡುವ ಮಸಾಲೆ ಮೀನು ಅಡುಗೆ ಹೆಚ್ಚು ಆರೋಗ್ಯಕರ. ಈ ಅಡುಗೆಗೆ 1 ಚಮಚ ಎಣ್ಣೆಯಷ್ಟೇ ಬಳಸುತ್ತೇವೆ. ಇದು ಬಾಯಿಗೂ ರುಚಿ, ಆರೋಗ್ಯಕ್ಕೂ ಒಳ್ಳೆಯದು.

ಹಬೆಯಲ್ಲಿ ಬೇಯಿಸಿದ ಮೀನು

ಮೀನಿಗೆ ಉಪ್ಪು , ಮಸಾಲೆ ಹಾಕಿ, ಬಾಳೆ ಎಲೆಯಲ್ಲಿ ಇಟ್ಟು, ಹಬೆಯಲ್ಲಿ ಬೇಯಿಸಿದರೆ ತಿನ್ನಲೂ ರುಚಿ, ಆರೋಗ್ಯಕ್ಕೂ ಒಳ್ಳೆಯದು. ಇದನ್ನು ಮಾಡಿಸಲು ಎಣ್ಣೆ ಸ್ವಲ್ಪವೂ ಬೇಕಾಗಿಲ್ಲ.

ಸಾರು

ಸಂಬಾರ ಪದಾರ್ಥಗಳನ್ನು ಹಾಕಿ ರುಬ್ಬಿ ಮಾಡುವ ಮೀನಿನ ಅಡುಗೆ ತಿನ್ನಲು ತುಂಬಾ ರುಚಿಯಾಗಿರುತ್ತದೆ, ಈ ರೀತಿ ಮಾಡಿದ ಮೀನಿನ ಅಡುಗೆಯನ್ನು ತಿಂದರೆ ಸಂಬಾರ ಪದಾರ್ಥಗಳಲ್ಲಿ ಹಾಗೂ ಮೀನಿನಲ್ಲಿರುವ ಪೋಷಕಾಂಶ ದೇಹವನ್ನು ಸೇರುತ್ತದೆ.

ಸೂಪ್

ಮೀನಿನ ಸೂಪ್ ತಯಾರಿಸಬಹುದು. ಈ ಸೂಪ್ ಅನ್ನು ಮೀನನ್ನು ಬೇಯಿಸಿ , ಟೊಮೆಟೊ ಪೇಸ್ಟ್ ಮಾಡಿ ಅದರಲ್ಲಿ ಹಾಕಿ ತಯಾರಿಲಾಗುವುದು. ಮೀನಿನ ಸೂಪ್ ಕೂಡ ಆರೋಗ್ಯಕರವಾದ ಅಡುಗೆಯಾಗಿದೆ. ಮೀನಿನ ಸೂಪ್ ಗೆ ವಾಸನೆ ಕಮ್ಮಿಯಿರುವ ದೊಡ್ಡ ಮೀನನ್ನು ಬಳಸಲಾಗುವುದು.

ಗ್ರಿಲ್ಡ್ ಮೀನು

ಗ್ರಿಲ್ಡ್ ಮಾಡಿದ ಮೀನು ತಿನ್ನಲು, ರುಚಿ ಆರೋಗ್ಯಕ್ಕೆ ಒಳ್ಳೆಯದು. ಇದನ್ನು ಡಯಟ್ ಮಾಡುವವರು ಹಾಗೂ ಆಟಗಾರರು ತಮ್ಮ ಫಿಟ್ ನೆಸ್ ಕಾಪಾಡಿಕೊಳ್ಳಲು ತಿನ್ನುತ್ತಾರೆ.

 

See next photo feature article

ಎಣ್ಣೆ ಹಾಕದೆ ಫ್ರೈ ಮಾಡಿದ ಮೀನು

ಮೀನನ್ನು ಎಣ್ಣೆ ಹಾಕದೆ ಫ್ರೈ ಮಾಡಬಹುದು. ಇದರಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಇದ್ದು, ನಾವು ಬೇಡದ ಕೊಲೆಸ್ಟ್ರಾಲ್ ಸೇರಿಸಿ ಮಾಡುವ ಬದಲು , ಎಣ್ಣೆ ಹಾಕದೆ ಫ್ರೈ ಮಾಡಿ ತಿನ್ನಿ.

ಆರೋಗ್ಯಕರ ರೀತಿಯಲ್ಲಿ ಮೀನನ್ನು ತಿನ್ನಿ, ಫಿಟ್ ನೆಸ್ ನಿಂದ ಆರೋಗ್ಯವಾಗಿರಿ.

 

Read more about: ಮೀನು, ಸಾರು, ಅಡುಗೆ, fish, curry, cookery
English summary

7 Healthy Ways To Cook Fish |Tips For Health | ಮೀನಿನಲ್ಲಿರುವ ಪೋಷಕಾಂಶಗಳು ಹಾಳಾಗದಂತೆ ಮಾಡುವ ಅಡುಗೆಯ ವಿಧಾನ | ಆರೋಗ್ಯಕ್ಕಾಗಿ ಕೆಲ ಸಲಹೆ

The best way to cook fish is obviously to boil it.There are other options like steaming fish or grilling it. Here are some of the healthiest ways to cook fish so as to retain its nutrients.
Story first published: Wednesday, February 27, 2013, 11:35 [IST]
Please Wait while comments are loading...
Subscribe Newsletter