For Quick Alerts
ALLOW NOTIFICATIONS  
For Daily Alerts

ಸ್ಲಿಮ್ ಮತ್ತು ಫಿಟ್ ಆಗಲು ಏಳು ದಾರಿಗಳು

By ಲೇಖಕ
|

ತೂಕ ಕಳೆದುಕೊಳ್ಳುವಲ್ಲಿ ನಮ್ಮ ಪ್ರಯತ್ನಗಳಿಗೇಕೆ ನಮ್ಮ ಶರೀರ ಸ್ಪಂದಿಸುತ್ತಿಲ್ಲ ಎಂಬ ನಿಟ್ಟಿನಲ್ಲಿ ಯೋಚಿಸಿದರೆ ಇದಕ್ಕೆ ಉತ್ತರ ದೊರಕುತ್ತದೆ. ನಾವು ಸೇವಿಸುವ ಆಹಾರದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪೌಷ್ಠಿಕಾಂಶಗಳಿರುವುದು, ನಾವು ಮಾಡಿದ ವ್ಯಾಯಾಮ ಶೇಖರಗೊಂಡ ಕೊಬ್ಬನ್ನು ಕರಗಿಸದೇ ಅಂದು ಸಿಕ್ಕ ಆಹಾರದ ಪಾತ್ರವನ್ನಷ್ಟೇ ಕಬಳಿಸಿರುವುದು ಇದಕ್ಕೆ ಕಾರಣಗಳು. ಈ ನಿಟ್ಟಿನಲ್ಲಿ ಅತ್ಯಂತ ಸೂಕ್ತವಾದ ಸಲಹೆಯನ್ನು ವಿವರಿಸಲಾಗಿದೆ ಮುಂದೆ ಓದಿ...

1.ಹೆಚ್ಚು ಸಣ್ಣ ಸಣ್ಣ ಭೋಜನಗಳನ್ನು ಮಾಡಿ

1.ಹೆಚ್ಚು ಸಣ್ಣ ಸಣ್ಣ ಭೋಜನಗಳನ್ನು ಮಾಡಿ

ನೀವು ಸೇವಿಸುವಷ್ಟೇ ಆಹಾರವನ್ನು ಸೇವಿಸಿ, ಸ್ವಲ್ಪವೂ ಆಹಾರವನ್ನು ಕಡಿಮೆ ಮಾಡದೆ ನಿಮ್ಮ ದೇಹದ ತೂಕ ಕಡಿಮೆಯಾದರೆ ಹೇಗಿರುತ್ತದೆ? ಆದರೆ ಇದು ಸಾಧ್ಯವೇ ಎಂಬ ಪ್ರಶ್ನೆಯೇ? ಖಂಡಿತ ಸಾಧ್ಯ. ಬೆಳಗ್ಗಿನ ಉಪಾಹಾರವನ್ನು ಒಂದೇ ಬಾರಿ ಸೇವಿಸುವ ಬದಲಿಗೆ ಮೂರು - ನಾಲ್ಕು ಬಾರಿ ಸೇವಿಸಿದರೆ ಮೂವತ್ತು ಶೇಕಡಾ ಕ್ಯಾಲರಿಗಳು ಕಡಿಮೆ ಯಾಗುತ್ತವೆ ಎಂದು ಸಂಶೋಧನೆ ಹೇಳಿರುವ ಸತ್ಯ. ನಿಗದಿತ ಮಧ್ಯಂತರಗಳಲ್ಲಿ ಆಹಾರ ಸೇವಿಸಿದಾಗ ನಮ್ಮ ದೇಹದಲ್ಲಿ ಇನ್ಸುಲಿನ್ ಕಡಿಮೆ ಪ್ರಮಾಣದಲ್ಲಿ ಸ್ರವಿಸುತ್ತದೆ ಇದರಿಂದಾಗಿ ಹಸಿವು ಆಗುವ ಪ್ರಮಾಣ ಬಹುತೇಕ ಕಡಿಮೆ ಆಗುತ್ತದೆ. ಹಾಗೂ ಕಡಿಮೆ ಆಹಾರ ಸೇವನೆಯಾಗುತ್ತದೆ. ಹಾಗಾಗಿ ದಿನಕ್ಕೆ ಮೂರರ ಬದಲಿಗೆ ಐದು ಅಥವಾ ಆರು ಬಾರಿ ಆಹಾರ ಸೇವನೆ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.

2. ಗುರಿಗಳು ಸತ್ಯಕ್ಕೆ ಸಮೀಪವಾಗಿರಲಿ

2. ಗುರಿಗಳು ಸತ್ಯಕ್ಕೆ ಸಮೀಪವಾಗಿರಲಿ

ತೂಕ ಕಡಿಮೆ ಮಾಡಲು ಒಂದು ಯೋಜನೆಯನ್ನು ಹಾಕಿಕೊಳ್ಳುವುದು ಬಹಳ ಉತ್ತಮ. ಆದರೆ ನೀವು ಹಾಕಿದ ಯೋಜನೆ ಸತ್ಯಕ್ಕೆ ಸಮೀಪವಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ. ಒಂದೇ ತಿಂಗಳಲ್ಲಿ 5 ಕೆ.ಜಿ ಕಡಿಮೆಯಾಗಬೇಕು ಎಂದು ಪ್ರಯತ್ನಿಸಲು ಹೊರಡಿ ಬೇರೇನಾದರೂ ಸಮಸ್ಯೆಗಳನ್ನು ತಂದುಕೊಳ್ಳುವ ಬದಲು ಪ್ರತಿ ತಿಂಗಳು ಸ್ವಲ್ಪ ಸ್ವಲ್ಪವೇ ತೂಕ ಕಡಿಮೆ ಮಾಡಿದರೆ ಒಳ್ಳೆಯದಲ್ಲವೇ? ಸಾಕಷ್ಟು ಸಮಯ ತೆಗೆದುಕೊಳ್ಳಿ. ತೂಕ ಹೆಚ್ಚಾದಾಗ ಇಂದಿನಿಂದ ನಾಳೆಗೆ ಹೆಚ್ಚಾಗಿತ್ತೇ? ಅಲ್ಲ ಅಲ್ಲವೇ ಅದೇ ರೀತಿ ಕಡಿಮೆ ಮಾಡುವಾಗಲೂ ಒಂದೇ ದಿನ ಅಥವಾ ತಿಂಗಳಲ್ಲಿ ಆಗಬೇಕು ಎಂದುಕೊಳ್ಳಬೇಡಿ.

3.ಭೋಜನದ ನಂತರ ಏನನ್ನೂ ತಿನ್ನಬೇಡಿ

3.ಭೋಜನದ ನಂತರ ಏನನ್ನೂ ತಿನ್ನಬೇಡಿ

ಭೋಜನದ ನಂತರ ಆಹಾರ ಸೇವನೆಯೇ ಹೆಚ್ಚಿನ ಜನರಲ್ಲಿ ತೂಕ ಹೆಚ್ಚು ಮಾಡುವ ಶತ್ರುವಾಗಿದೆ. ಒಮ್ಮೆ ಆಹಾರ ಸೇವಿಸಿದ ಮೇಲೆ ಜೀರ್ಣವಾಗಲು ಸಮಯ ಕೊಡಿ. ನಿಮಗೆ ನಿಮ್ಮ ಆಸೆಯನ್ನು ಹತ್ತಿಕ್ಕಲು ಆಗುತ್ತಿಲ್ಲ ಎಂದಾದರೆ ಆಹಾರ ಸೇವಿಸಿದ ಕೂಡಲೆ ಬ್ರಷ್ ಮಾಡಿ ಇದು ತಿನ್ನುವ ಆಸೆಯನ್ನು ಕಡಿಮೆ ಮಾಡುತ್ತದೆ. ಅಥವಾ ತಿಂಡಿ ಪೊಟ್ಟಣಗಳನ್ನು ಅಡಗಿಸಿಡಿ.

4. ಖರೀದಿಗೆ ಹೋಗುವ ಮುನ್ನ ಹೊಟ್ಟೆ ತುಂಬಾ ಆಹಾರ ಸೇವಿಸಿ ಹೋಗಿ

4. ಖರೀದಿಗೆ ಹೋಗುವ ಮುನ್ನ ಹೊಟ್ಟೆ ತುಂಬಾ ಆಹಾರ ಸೇವಿಸಿ ಹೋಗಿ

ಖರೀದಿಗೆ ಹೋದಾಗ ಅಥವಾ ಮಾಲ್ ಗೆ ಶಾಪಿಂಗ್ ಗೆ ಹೋದಾಗ ಖಾಲಿ ಹೊಟ್ಟೆ ಇಟ್ಟುಕೊಂಡು ಎಂದೂ ಹೋಗಬೇಡಿ. ಇದು ನೋಡಿದ್ದನ್ನೆಲ್ಲವನ್ನೂ ತೆಗೆದುಕೊಳ್ಳುವ ಹಾಗೂ ಅಲ್ಲೇ ಸೇವಿಸುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಇದರ ಬದಲಿಗೆ ಹೊಟ್ಟೆ ತುಂಬಿರುವಾಗ ಹೋದರೆ ಹೆಚ್ಚೇನು ತಿಂಡಿಗಳು ಬೇಕೆನಿಸುವುದಿಲ್ಲ. ಜೊತೆಗೆ ಅಗತ್ಯ ಸಾಮಗ್ರಿಗಳ ಪಟ್ಟಿ ಕೂಡ ಜೊತೆಗಿರಲಿ ಇದು ನಿಮ್ಮ ಖರೀದಿಯ ಮೇಲೆ ಮಿತಿಯನ್ನು ಸಾಧಿಸುತ್ತದೆ.

5.ವ್ಯಾಯಾಮವನ್ನು ಆಸಕ್ತಿದಾಯಕವನ್ನಾಗಿಸಿ

5.ವ್ಯಾಯಾಮವನ್ನು ಆಸಕ್ತಿದಾಯಕವನ್ನಾಗಿಸಿ

ತೂಕ ಕಡಿಮೆ ಮಾಡಬೇಕು ಎಂದು ಅನ್ನಿಸಿದ ದಿನದಿಂದ ನಾಲ್ಕು ದಿನಗಳ ವರೆಗೆ ಇರುವ ಉತ್ಸಾಹ ಮತ್ತೆ ಇರುವುದಿಲ್ಲ. ಇದಕ್ಕೆ ಕಾರಣ ಅದೇ ವ್ಯಾಯಾಮಗಳನ್ನು ಮಾಡಿ ಬೇಸರ ಬಂದಿರುತ್ತದೆ. ಇದಕ್ಕಾಗಿ ಕೆಲವು ಸರಳ ಮಾರ್ಗಗಳನ್ನು ಬಳಸಿ ಉದಾಹರಣೆಗೆ ನಿಮಗೆ ವಾಕಿಂಗ್ ಇಷ್ಟ ಎಂದಾದರೆ ಪ್ರತಿದಿನ ಒಂದೇ ದಾರಿಯಲ್ಲಿ ನಡೆಯಬೇಡಿ. ವಾಕಿಂಗ್ ಗೆ ಹೋಗುವ ಸ್ಥಳಗಳನ್ನು ಬದಲಾಯಿಸಿ. ವ್ಯಾಯಾಮ ಮಾಡುವಾಗಿನ ಸ್ಥಳಗಳನ್ನೂ ಹೀಗೇ ಬದಲಾಯಿಸಿ ಅಥವಾ ಹೊಸ ಮ್ಯಾಟ್ ಅಥವಾ ಬಟ್ಟೆಗಳನ್ನು ತಂದು ಉತ್ಸಾಹ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿ.

6.ಸರಿಯಾಗಿ ನಿದ್ದೆ ಮಾಡಿ

6.ಸರಿಯಾಗಿ ನಿದ್ದೆ ಮಾಡಿ

ಅಸಮರ್ಪಕ ನಿದ್ದೆ ಹೆಚ್ಚು ಆಹಾರ ಸೇವಿಸುವಂತೆ ಮಾಡುತ್ತದೆ ಎಂದು ಸಂಶೋಧನೆಗಳು ಸಾಬೀತು ಮಾಡಿವೆ. ಹೆಚ್ಚಿನ ಆಹಾರ ಸೇವನೆಯಿಂದ ಏನಾಗುತ್ತದೆ ಎನ್ನುವುದು ನಿಮಗೆ ಗೊತ್ತೇ ಇದೆ. ಹಾಗಾಗಿ ನಿದ್ದೆಯನ್ನು ಸರಿಯಾಗಿ ಮಾಡಿ. ನಿದ್ದೆಯ ಅವಧಿಯನ್ನು ನಿಗದಿ ಪಡಿಸಿ ಅದೇ ಅವಧಿಯಲ್ಲಿ ಮಲಗುವಂತೆ ನೋಡಿಕೊಳ್ಳಿ. ಇದು ನಿಮ್ಮ ಉತ್ಸಾಹದ ಮೇಲೂ ಪ್ರಭಾವ ಬೀರುತ್ತದೆ. ಹೆಚ್ಚು ಉತ್ಸಾಹಿತರಾಗಿದ್ದಲ್ಲಿ ಹೆಚ್ಚು ಕೆಲಸ ಇದೂ ತೂಕ ಕಡಿಮೆ ಮಾಡುವ ಮಾರ್ಗವಾಗಿದೆ.

7.ಜಂಕ್ ಫುಡ್ ಗೆ ವಿದಾಯ ಹೇಳಿ

7.ಜಂಕ್ ಫುಡ್ ಗೆ ವಿದಾಯ ಹೇಳಿ

ಏನಾದರೂ ತಿನ್ನಬೇಕು ಎನ್ನುವ ಭಾವನೆ ಎಲ್ಲರಿಗೂ ಇದ್ದೇ ಇರುತ್ತದೆ ಮತ್ತು ನಾವು ಈ ಆಸೆಗೆ ಜಂಕ್ ಫುಡ್ ಮೂಲಕ ನೀರೆರೆಯುತ್ತೇವೆ. ಮನೆಯಲ್ಲಿ ನಾಲ್ಕು ಪ್ಯಾಕೆಟ್ ಆದರೂ ಇಂತಹ ತಿಂಡಿಗಳು ಇಲ್ಲದ ಮನೆಗಳು ಬಹಳ ವಿರಳ. ಇದನ್ನು ಸಾಧ್ಯವಾದಷ್ಟು ದೂರವಿಡಿ. ಈಗಾಗಲೇ ಸಾಕಷ್ಟು ಸೇವಿಸುತ್ತಿದ್ದರೆ ವಾರಕ್ಕಿಷ್ಟು ಎಂದು ಕಡಿಮೆ ಮಾಡಿ.

ಸಾಧಿಸಬೇಕಾದರೆ ಅದರೆಡೆಗೆ ಪ್ರಯತ್ನ ಬಹಳ ಮುಖ್ಯ

ಸಾಧಿಸಬೇಕಾದರೆ ಅದರೆಡೆಗೆ ಪ್ರಯತ್ನ ಬಹಳ ಮುಖ್ಯ

ಬದುಕಿನಲ್ಲಿ ಏನಾದರೂ ಸಾಧಿಸಬೇಕಾದರೆ ಅದರೆಡೆಗೆ ಪ್ರಯತ್ನ ಬಹಳ ಮುಖ್ಯ ಎಂಬುದನ್ನು ನೆನಪಿಡಿ. ತೂಕ ಕಡಿಮೆ ಮಾಡಬೇಕು ಎಂದು ನಿರ್ಧರಿಸಿದವರು ಈ ಏಳು ವಿಷಯಗಳನ್ನು ಇಂದಿನಿಂದಲೇ ಮಾಡಲು ನೆನಪಿಡಿ. ನಾಳೆ ಎಂದವನ ಮನೆ ಹಾಳು.

English summary

7 Habits That Can Help You Lose Weight

We tell you 7 daily habits that you should incorporate in your lifestyle so that you can watch the pounds drop off. Are you ready to lose?
X
Desktop Bottom Promotion