For Quick Alerts
ALLOW NOTIFICATIONS  
For Daily Alerts

ಡಯಟ್ ಮಾಡದೆಯೇ ತೆಳ್ಳಗಾಗಬೇಕೆ?

By Super
|

ಘಟನೆ 1;- ಹೋಟೆಲ್‍ಗೆ ಹೋಗಿರುತ್ತೀರಿ, ಅಲ್ಲಿ ಒಂದು ತೂಕ ಅಳೆಯುವ ಡಿಜಿಟಲ್ ಯಂತ್ರವಿರುತ್ತದೆ. ಅದರಲ್ಲಿ ತೂಕ ಪರೀಕ್ಷೆ ಮಾಡಿದಾಗ, ನಿಮ್ಮ ತೂಕ ಇಂದಿನ ತಿಂಗಳಿಗಿಂತ ಹೆಚ್ಚಾಗಿರುತ್ತದೆ. ಓಹ್! ದೇವರೆ ಏನಪ್ಪ ಇದು ಎಂದುಕೊಂಡಿರುತ್ತೀರಿ. ಆಗ ಹೋಟೆಲ್‍ನಲ್ಲಿ ತಿನ್ನಲು, ಅಥವಾ ತಿಂದದ್ದನ್ನು ಅರಗಿಸಿಕೊಳ್ಳುವುದಕ್ಕಿಂತ ಇದೇ ನಿಮ್ಮ ತಲೆಯಲ್ಲಿ ತುಂಬಿಕೊಂಡಿರುತ್ತದೆ.

ಘಟನೆ 2;- ನೀವು ತುಂಬಾ ಇಷ್ಟ ಪಟ್ಟ, ನಿಮ್ಮ ಅಚ್ಚುಮೆಚ್ಚಿನ ಅದೃಷ್ಟದ ಉಡುಗೆ ಏಕೋ? ಏನೋ? ಇತ್ತೀಚೆಗೆ ಬಿಗಿಯಾಗಿ ಧರಿಸಲು ಕಷ್ಟವಾಗುತ್ತಿದೆಯೇ?

ಇವೆರಡು ತೂಕ ಹೆಚ್ಚಾದಾಗ ಆಗುವ ಕೆಲವು ವಿಚಾರಗಳಷ್ಟೇ! ಆಗಾದರೆ ನೀವು ನಿಮ್ಮ ತೂಕವನ್ನು ಇಳಿಸಿಕೊಳ್ಳಬಹುದಾ? ನಿಜವಾಗಿಯೂ ನೀವು ತೂಕವನ್ನು ಇಳಿಸಿಕೊಳ್ಳಬಹುದು. ಅದಕ್ಕಾಗಿ ಯಾವುದೇ ರೀತಿಯಾದ ಡಯಟ್ ಸಹ ಮಾಡಬೇಕಿಲ್ಲ.

ಒಂದು ಪೌಂಡ್ ಕೊಬ್ಬು = 3.500 ಕ್ಯಾಲೋರಿಗಳು. ಪ್ರತಿದಿನ 500 ಕ್ಯಾಲೋರಿಗಳನ್ನು ನೀವು ಕರಗಿಸಿದರೆ ಅಥವಾ ತಿನ್ನುವುದನ್ನು ಕಡಿಮೆ ಮಾಡಿದರೆ, ಪ್ರತಿ ವಾರಕ್ಕೆ ಒಂದು ಪೌಂಡ್ ತೂಕವನ್ನು ಕರಗಿಸಬಹುದು. ನಿಮ್ಮ ಪ್ರಸ್ತುತ ತೂಕವನ್ನು ಉಳಿಸಿಕೊಳ್ಳಬೇಕೆಂದರೆ ಪ್ರತಿದಿನ 100 ಕ್ಯಾಲೋರಿಗಳನ್ನು ಸೇವಿಸುವುದನ್ನು ಕಡಿಮೆ ಮಾಡಿದರೆ ಸಾಕು. ಏಕೆಂದರೆ ಬಹುಪಾಲು ವಯಸ್ಕರು ಪ್ರತಿ ವರ್ಷ 1-2 ಪೌಂಡ್ ಬೆಳೆಯುತ್ತಾರೆ.

ಇವುಗಳಲ್ಲಿ ಯಾವುದಾದರು ಒಂದು ಅಥವಾ ಇನ್ನಿತರ ತಂತ್ರಗಳನ್ನು ಪ್ರಯತ್ನಿಸಿ ನೋಡಿ, ತೂಕ ಖಡಾಖಂಡಿತವಾಗಿ ಕಡಿಮೆಯಾಗುತ್ತದೆ, ಅದೂ "ಡಯಟ್" ಇಲ್ಲದೇನೆ!:

ಪ್ರತಿದಿನ ಉಪಾಹಾರವನ್ನು ಸೇವಿಸಿ

ಪ್ರತಿದಿನ ಉಪಾಹಾರವನ್ನು ಸೇವಿಸಿ

ತೂಕ ಹೆಚ್ಚಿಸಿಕೊಂಡವರೆಲ್ಲ ಮೊದಲು ಮಾಡುವ ಕೆಲಸ ಬೆಳಗಿನ ಉಪಾಹಾರವನ್ನು ತ್ಯಜಿಸಿ ಬಿಡುವುದು. ಆದರೆ ಇದು ನಿಜಕ್ಕು ಒಳ್ಳೆಯದಲ್ಲ, ಹೀಗೆ ಮಾಡುವವರು ತಮಗೆ ತಿಳಿದೊ ಅಥವಾ ತಿಳಿಯದೆಯೋ ದಿನಪೂರ್ತಿ ಏನಾದರು ತಿನ್ನುತ್ತಲೋ ಅಥವಾ ಉಳಿದ ಊಟವನ್ನು ಹೆಚ್ಚಾಗಿ ಸೇವಿಸುತ್ತಿರುತ್ತಾರೆ. ಇದನ್ನು ಸಂಶೋಧನೆಗಳು ಸಹ ಪುಷ್ಟೀಕರಿಸಿವೆ. ಇದರಿಂದ ತಿಳಿದು ಬಂದ ವಿಚಾರವೇನೆಂದರೆ " ಪ್ರತಿದಿನ ಉಪಾಹಾರ ಸೇವಿಸುವವರು, ಉಪಾಹಾರ ಸೇವಿಸದವರಿಗಿಂತ ಕಡಿಮೆ ಬಿಎಮ್‍ಐ ಹೊಂದಿರುತ್ತಾರೆ. ಹಾಗಾಗಿ ಆಫೀಸ್‍ಗೆ ಇರಲಿ ಶಾಲೆಗೆ ಹೋಗುವುದಿರಲಿ, ಬೆಳಗ್ಗೆ ಒಂದು ಬಟ್ಟಲು ಧಾನ್ಯದಿಂದ ತಯಾರಿಸಿದ ಗಂಜಿ ಹಾಗು ಹಣ್ಣನ್ನು ಸೇವಿಸಿ. ಇದರ ಜೊತೆಗೆ ಕಡಿಮೆ ಕೊಬ್ಬಿರುವ ಹೈನು ಪದಾರ್ಥಗಳನ್ನು ಮತ್ತು ಪೋಷಕಾಂಶ ಭರಿತವಾದ ಆಹಾರದಿಂದ ನಿಮ್ಮ ದಿನವನ್ನು ಆರಂಭಿಸಿ.

ಆಹಾರವನ್ನು ಜಗಿದು ತಿನ್ನಿ

ಆಹಾರವನ್ನು ಜಗಿದು ತಿನ್ನಿ

ತಿನ್ನುವ ಮೊದಲು ಟೈಮರ್ ಅನ್ನು 20 ನಿಮಿಷಗಳಿಗೆ ಸೆಟ್ ಮಾಡಿ. ಊಟವನ್ನು ಯಾವುದೇ ತೊಂದರೆ ಇಲ್ಲದೆ ನಿಧಾನವಾಗಿ ತಿನ್ನಿ. . ತೂಕ ಇಳಿಸಿಕೊಳ್ಳಬೇಕೆಂದರೆ ಯಾವುದೇ ಡಯಟ್‍ಗೆ ಅಂಟಿಕೊಳ್ಳದೆ, ಮೊದಲು ಈ ಹವ್ಯಾಸವನ್ನು ಬೆಳೆಸಿಕೊಳ್ಳಿ. ನಿಮ್ಮ ಟೈಮರಿನ ಘಂಟೆ ಮೊಳಗುವವರೆಗು ತಿನ್ನುವುದನ್ನು ನಿಲ್ಲಿಸಬೇಡಿ.

ಹೆಚ್ಚು ನಿದ್ರಿಸಿ, ಕಡಿಮೆ ತೂಕ ಹೊಂದಿ

ಹೆಚ್ಚು ನಿದ್ರಿಸಿ, ಕಡಿಮೆ ತೂಕ ಹೊಂದಿ

ಮಿಚಿಗನ್ ವಿಶ್ವವಿದ್ಯಾನಿಲಯದ ಸಂಶೋಧಕರು ಇತ್ತೀಚೆಗೆ ನಡೆಸಿದ ಒಂದು ಅದ್ಯಯನದ ಪ್ರಕಾರ, ದಿನ ಒಂದು ಗಂಟೆ ಹೆಚ್ಚಾಗಿ ನಿದ್ರಿಸುವುದರಿಂದ ವರ್ಷಕ್ಕೆ ಸುಮಾರು 14 ಪೌಂಡ್ ತೂಕ ಕಡಿಮೆ ಮಾಡಿಕೊಳ್ಳಬಹುದು ಎಂದು ತಿಳಿದು ಬಂದಿದೆ. ಇವರ ಅಂಕಿ ಅಂಶಗಳ ಪ್ರಕಾರ ಪ್ರತಿ ವ್ಯಕ್ತಿಯು ಪ್ರತಿ ದಿನ 2,500 ಕ್ಯಾಲೋರಿ ಸೇವಿಸುತ್ತಾನೆ. ನಿದ್ದೆಯು, ನಾವು ಜಡವಾಗಿ ಕಾಲ ಕಳೆಯುವ ಸಮಯವನ್ನು ತುಂಬಿಕೊಡುತ್ತದೆ. ಜೊತೆಗೆ ಈ ಅವಧಿಯಲ್ಲಿ ನಾವು ಗೊತ್ತು ಗುರಿಯಿಲ್ಲದೆ ತಿನ್ನುವ ಚಟಕ್ಕೆ ಬ್ರೇಕ್ ಹಾಕುತ್ತದೆ. ಇದರಿಂದ ನಮ್ಮ ದೇಹಕ್ಕೆ 6% ಕ್ಯಾಲೋರಿ ಕಡಿಮೆ ಆಹಾರ ಸೇರುತ್ತದೆ.

ಅಧಿಕ ಪ್ರಮಾಣದಲ್ಲಿ ತರಕಾರಿಗಳನ್ನು ಸೇವಿಸಿ

ಅಧಿಕ ಪ್ರಮಾಣದಲ್ಲಿ ತರಕಾರಿಗಳನ್ನು ಸೇವಿಸಿ

ಈ ದಿನ ರಾತ್ರಿ ಊಟಕ್ಕೆ ಒಂದು ತರಕಾರಿಯ ಬದಲಿಗೆ ಮೂರು ತರಕಾರಿಯನ್ನು ಬಳಸಿ. ನೀವು ಆರಾಮವಾಗಿ ಆ ಮೂರನ್ನು ತಿನ್ನುತ್ತೀರಿ. ತಿನ್ನುವುದರಲ್ಲಿ ಎಲ್ಲರೂ ವಿವಿಧ ಪ್ರಯೋಗಗಳನ್ನು ಮಾಡಲು ಬಯಸುತ್ತಾರೆ. ಹೆಚ್ಚಾಗಿ ತರಕಾರಿ ಮತ್ತು ಹಣ್ಣುಗಳನ್ನು ಸೇವಿಸುವುದರಿಂದ ತೂಕವನ್ನು ಇಳಿಸಿಕೊಳ್ಳಬಹುದು.

ಸೂಪ್ ಕುಡಿಯಿರಿ, ದಪ್ಪಗಾಗುವುದನ್ನು ತಡೆಯಿರಿ

ಸೂಪ್ ಕುಡಿಯಿರಿ, ದಪ್ಪಗಾಗುವುದನ್ನು ತಡೆಯಿರಿ

ಊಟ ಮಾಡುವ ಮೊದಲು ಸೂಪ್ ಕುಡಿಯಿರಿ.ಇದರಿಂದ ನಿಮ್ಮ ತಿನ್ನುವ ಅಭಿಲಾಷೆ ಕಡಿಮೆಯಾಗುತ್ತದೆ. ಆದರೆ ಕ್ರೀಮ್ ಭರಿತ ಸೂಪ್‍ಗಳನ್ನು ಸೇವಿಸಬೇಡಿ. ಇದರಲ್ಲಿ ಹೆಚ್ಚಿನ ಕೊಬ್ಬು ಮತ್ತು ಕ್ಯಾಲೋರಿಗಳು ಹೆಚ್ಚಾಗಿರುತ್ತವೆ.

ನಿಮ್ಮ ಅಚ್ಚು ಮೆಚ್ಚಿನ ಹಳೆಯ ಬಟ್ಟೆಯನ್ನು ಆಗಾಗ ನೋಡುತ್ತಿರಿ

ನಿಮ್ಮ ಅಚ್ಚು ಮೆಚ್ಚಿನ ಹಳೆಯ ಬಟ್ಟೆಯನ್ನು ಆಗಾಗ ನೋಡುತ್ತಿರಿ

ನಿಮಗೆ ಕಾಣುವಂತಹ ಜಾಗದಲ್ಲಿ ನಿಮ್ಮ ಹಳೆಯ ಶರ್ಟ್, ಸ್ಕರ್ಟ್ ಅಥವಾ ಇನ್ಯಾವುದೋ ಬಿಗಿಯಾಗಿರುವ ಬಟ್ಟೆಯನ್ನು ತೂಗು ಹಾಕಿ. ಇವು ನಿಮ್ಮನ್ನು ಪ್ರೋತ್ಸಾಹಿಸುವ ಪ್ರೇರಕಗಳಾಗಿ ನೆರವಾಗುತ್ತವೆ. ನಿಜಕ್ಕು ಇದು ನಿಮಗೆ ಅಚ್ಚರಿ ತರುವಂತೆ ನಿಮ್ಮ ಮೇಲೆ ಪ್ರಭಾವ ಬೀರುತ್ತವೆ. ನಿಮ್ಮ ಗುರಿ ತಲುಪಿದ ನಂತರ ಬಹುಮಾನ ರೂಪವಾಗಿ, ಹಿಂದಿನ ವರ್ಷದ ಪಾರ್ಟಿ ವೇರ್ ಅನ್ನು ಹಾಕಿಕೊಂಡು ಯಾವುದಾದರು ಪಾರ್ಟಿಗೆ ಹೋಗಿ. ಪವಾಡವನ್ನು ನೋಡಿ, ತೂಕ ಕಡಿಮೆಯಾಗುವುದರ ಜೊತೆಗೆ ನಿಮ್ಮ ವಯಸ್ಸು ಕಡಿಮೆಯಾದಂತೆ ಕಾಣುತ್ತದೆ.

ಉತ್ತಮವಾದ ಫಿಜ್ಜಾವನ್ನು ಆಯ್ಕೆ ಮಾಡಿಕೊಳ್ಳಿ

ಉತ್ತಮವಾದ ಫಿಜ್ಜಾವನ್ನು ಆಯ್ಕೆ ಮಾಡಿಕೊಳ್ಳಿ

ಮಾಂಸಹಾರಿ ಫಿಜ್ಜಾ ಬದಲಿಗೆ ತರಕಾರಿಗಳನ್ನು ಹೊಂದಿರುವ ಫಿಜ್ಜಾವನ್ನು ಆಯ್ಕೆ ಮಾಡಿಕೊಳ್ಳಿ. ಇದರಿಂದ ನಿಮ್ಮ ಊಟದಲ್ಲಿ ನೀವು 100 ಕ್ಯಾಲೋರಿಗಳಷ್ಟು ಉಳಿತಾಯ ಮಾಡಬಹುದು.

ಸಕ್ಕರೆ ಅಂಶವನ್ನು ಕಡಿಮೆ ಮಾಡಿ

ಸಕ್ಕರೆ ಅಂಶವನ್ನು ಕಡಿಮೆ ಮಾಡಿ

ಪ್ರತಿದಿನ ಸೋಡಾ ಅಥವಾ ಮತ್ತಿತರ ಸಕ್ಕರೆಯಂಶವಿರುವ ಪಾನೀಯದ ಬದಲಿಗೆ ನೀರು ಅಥವಾ ಝೀರೊ-ಕ್ಯಾಲೋರಿಯಿರುವ ಹಣ್ಣಿನ ರಸವನ್ನು ಸೇವಿಸಿ. 10 ಟೀ ಸ್ಪೂನ್‍ಗಿಂತ ಹೆಚ್ಚಿನ ಸಕ್ಕರೆ ಅಂಶವಿರುವ ಪಾನೀಯಗಳನ್ನು ಸೇವಿಸಲು ಹೋಗಲೆ ಬೇಡಿ.

ಉದ್ದಕ್ಕೆ ಇರುವ, ತೆಳುವಾದ ಗಾಜಿನ ಗ್ಲಾಸ್ ಅನ್ನು ಬಳಸಿ

ಉದ್ದಕ್ಕೆ ಇರುವ, ತೆಳುವಾದ ಗಾಜಿನ ಗ್ಲಾಸ್ ಅನ್ನು ಬಳಸಿ

ಪಾರದರ್ಶಕವಾಗಿರುವ, ತೆಳುವಾದ, ಉದ್ದನೆಯ ಗಾಜಿನ ಗ್ಲಾಸ್ ಅನ್ನು ಬಳಸಿ. ಇದರಿಂದ ನೀವು ಸೇವಿಸುವ ಹಣ್ಣಿನ ರಸ,ಸೋಡಾ, ವೈನ್ ಅಥವಾ ಮುಂತಾದ ಪಾನೀಯಗಳನ್ನು ಸುಮಾರು 25%-30% ಕಡಿಮೆ ಸೇವಿಸುತ್ತೀರಿ.

ಆಲ್ಕೋಹಾಲನ್ನು ಕಡಿಮೆ ಸೇವಿಸಿ

ಆಲ್ಕೋಹಾಲನ್ನು ಕಡಿಮೆ ಸೇವಿಸಿ

ಆಲ್ಕೋಹಾಲ್‍ನ ಪ್ರತಿ ಗ್ರಾಮ್‍ನಲ್ಲಿ ಕಾರ್ಬೋಹೈಡ್ರೇಟ್ ಮತ್ತು ಪ್ರೋಟಿನ್‍ಗಳಿಗಿಂತ ಹೆಚ್ಚಿನ ಪ್ರಮಾಣದ ಕ್ಯಾಲೋರಿಗಳು ಇರುತ್ತವೆ. ಇದು ನಿಮ್ಮ ಪ್ರಙ್ಞೆಯನ್ನು ಹಾಳು ಮಾಡಿ, ಚಿಪ್ಸ್, ಕಡಲೆ ಬೀಜ ಮುಂತಾದ ಕುರುಕಲು ತಿಂಡಿಗಳನ್ನು ತಿನ್ನುವಂತೆ ಮಾಡುತ್ತದೆ.

ಗ್ರೀನ್ ಟೀ ಕುಡಿಯಿರಿ

ಗ್ರೀನ್ ಟೀ ಕುಡಿಯಿರಿ

ತೂಕ ಕಳೆದುಕೊಳ್ಳಬೇಕು ಎಂದು ಬಯಸುವವರು ಗ್ರೀನ್ ಟೀ ಕುಡಿಯುವುದು ಉತ್ತಮ. ಇದು ತೂಕ ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ.

ಯೋಗ ಮಾಡಿ

ಯೋಗ ಮಾಡಿ

ತೂಕ ಕಡಿಮೆ ಮಾಡಿಕೊಳ್ಳಲು ಬಯಸುವ ಹೆಂಗಸರಿಗೆ ಯೋಗ ಒಂದು ಅತ್ಯಂತ ಸರಳ ಮತ್ತು ಸುಲಭವಾದ ಮಾರ್ಗವಾಗಿರುತ್ತವೆ. ಯೋಗವು ಆಹಾರವನ್ನು ಸೇವಿಸುವ ಕ್ರಮಕ್ಕೆ ಒಂದು ಕ್ರಮಬದ್ಧತೆ ತಂದು ಕೊಡುತ್ತದೆ. ಯೋಗವು ಮನಸ್ಸಿನಲ್ಲಿ ಒಂದು ಸ್ಥಿತ ಪ್ರಙ್ಞೆಯ ಮನೋಭಾವವನ್ನು ತಂದು ಕೊಡುವುದರಿಂದ ಆಹಾರವನ್ನು ಜೊ ಯೋಚನೆ ಮಾಡಿ ಸೇವಿಸುತ್ತವೆ. ಜೊತೆಗೆ ಯೋಗದಿಂದ ಪ್ರಶಾಂತವಾದ ಮನಸ್ಥಿತಿ ಸಹ ದೊರೆಯುತ್ತದೆ. ಇದರಿಂದ ಸಹ ನಾವು ಕಂಡಾಪಟ್ಟೆ ತಿನ್ನುವುದು ಕಡಿಮೆಯಾಗುತ್ತದೆ.

ಮನೆ ಊಟಮಾಡಿ

ಮನೆ ಊಟಮಾಡಿ

ವಾರದಲ್ಲಿ ಐದು ದಿನವಾದರು ಮನೆಯಲ್ಲಿಯೇ ಅಡುಗೆ ಮಾಡಿ. ಒಂದು ಗ್ರಾಹಕರ ವರದಿಯ ಸರ್ವೇಯ ಪ್ರಕಾರ " ತೂಕ ಇಳಿಸಿಕೊಳ್ಳುವವರು" ಈ ಅಭ್ಯಾಸದಿಂದ ಯಶಸ್ಸನ್ನು ಕಂಡಿದ್ದಾರಂತೆ. ಜೊತೆಗೆ ಅಡುಗೆ ಕೆಲಸ ಮಾಡುವದು ಒಂದು ವ್ಯಾಯಾಮ ಎಂದು ಭಾವಿಸಿ, ಕೆಲವು ಕ್ಯಾಲೋರಿಗಳು ಕರಗುತ್ತವೆ.

ತಿನ್ನುವಾಗ

ತಿನ್ನುವಾಗ "ಬಿಡುವು"ಕೊಡಿ

ಸುಮಾರು ಜನ ಊಟ ಮಾಡುವಾಗ ಬಿಟ್ಟು, ಬಿಟ್ಟು ತಿನ್ನುವ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ನೀವೆ ಒಮ್ಮೆ ಪರೀಕ್ಷಿಸಿ, ಹೀಗೆ ಊಟ ಮಾಡುವವರು ಇತರರಿಗಿಂತ ಕಡಿಮೆ ಊಟವನ್ನು ಸೇವಿಸುತ್ತಾರೆ. ಬಿಟ್ಟು ಬಿಟ್ಟು ಊಟ ಮಾಡುವವರು, ಇತರರ ಜೊತೆಗೆ ಮಾತನಾಡುತ್ತ, ಕಡಿಮೆ ಸೇವಿಸಲು ಕಾರಣ. ಅವರ ಹೊಟ್ಟೆ ತುಂಬಿದ ಅನುಭವವನ್ನು ಕೊಡುವುದೇ ಆಗಿರುತ್ತದೆ. ನೀವು ಈ ಅಭ್ಯಾಸವನ್ನು ಪಾಲಿಸಿ

ಸ್ಟ್ರಾಂಗ್ ಮಿಂಟ್ ಗಮ್ ಅನ್ನು ಅಗಿಯಿರಿ

ಸ್ಟ್ರಾಂಗ್ ಮಿಂಟ್ ಗಮ್ ಅನ್ನು ಅಗಿಯಿರಿ

ಒಂದು ವೇಳೆ ನಿಮಗೆ ಏನಾದರು ತಿನ್ನಬೇಕು ಎಂಬ ಬಯಕೆ ಉಂಟಾದಲ್ಲಿ ಯಾವುದಾದರು ಸ್ಟ್ರಾಂಗ್ ಫ್ಲೇವರಿನ ಶುಗರ್ ಲೆಸ್ ಚ್ಯೂಯಿಂಗ್ ಗಮ್ ಅಗಿಯಿರಿ. ಕೆಲಸ ಮುಗಿದ ನಂತರ ರಾತ್ರಿಯೂಟ ಮಾಡುವುದು, ಪಾರ್ಟಿಯಲ್ಲಿ ಬೆರೆಯುವುದು, ಟಿವಿ ನೋಡುವುದು, ಇಂಟರ್ ನೆಟ್‍ನಲ್ಲಿ ಸರ್ಫಿಂಗ್ ಮುಂತಾದವು ನಿಮ್ಮ ತಿನ್ನುವ ಚಪಲವನ್ನು ಹೆಚ್ಚಿಸುತ್ತವೆ. ಚ್ಯೂಯಿಂಗ್ ಗಮ್ ಅಗಿಯುವುದರಿಂದ ನಿಮಗೆ ಇತರ ಆಹಾರಗಳು ಅಷ್ಟಾಗಿ ರುಚಿಸದೆ, ಅವುಗಳನ್ನು ನೀವು ಕಡಿಮೆ ಸೇವಿಸುತ್ತೀರಿ.

ನಿಮ್ಮ ತಟ್ಟೆಯ ಗಾತ್ರದಲ್ಲಿ ಬದಲಾವಣೆ ತನ್ನಿ

ನಿಮ್ಮ ತಟ್ಟೆಯ ಗಾತ್ರದಲ್ಲಿ ಬದಲಾವಣೆ ತನ್ನಿ

12 ಇಂಚಿನ ತಟ್ಟೆಯ ಬದಲಿಗೆ 10 ಇಂಚಿನ ತಟ್ಟೆಯನ್ನು ಬಳಸಿ. ಇದರಿಂದ ನಿಮ್ಮ ಆಹಾರ ಸೇವನೆಯ ಪ್ರಮಾಣ ಆಟೊ ಮೆಟಿಕ್ ಆಗಿ ಕಡಿಮೆಯಾಗುವುದನ್ನು ನೀವೇ ಗಮನಿಸುವಿರಿ. ಕಾರ್ನೆಲ್ಸ್ ಬ್ರೈನ್ ವಾನ್‍ಸಿಂಕ್, ಪಿಎಚ್‍ಡಿ ಯವರು ತಮ್ಮ ಅಧ್ಯಯನದಲ್ಲಿ ಈ ಅಂಶವನ್ನು ಕುರಿತು ವಿವರವಾಗಿ ವಿವರಿಸಿದ್ದಾರೆ. ಅವರ ಪ್ರಕಾರ ತಟ್ಟೆ ಬಟ್ಟಲುಗಳು ದೊಡ್ಡದಾಗಿದ್ದಷ್ಟು, ಜನರು ಅದಕ್ಕೆ ಹೆಚ್ಚಾಗಿ ಆಹಾರವನ್ನು ಬಡಿಸುತ್ತಾರಂತೆ.

ನೀವು ಬಡಿಸಿಕೊಳ್ಳುವ ಆಹಾರದ ಪ್ರಮಾಣವನ್ನು ತಗ್ಗಿಸಿ

ನೀವು ಬಡಿಸಿಕೊಳ್ಳುವ ಆಹಾರದ ಪ್ರಮಾಣವನ್ನು ತಗ್ಗಿಸಿ

ಮನೆಯಲ್ಲಾಗಲಿ ಅಥವಾ ರೆಸ್ಟೌರೆಂಟ್‍ ಆಗಲಿ ನಮಗೆ ಅಗತ್ಯವಾದ ಆಹಾರ ಪ್ರಮಾಣಕ್ಕಿಂತ ಹೆಚ್ಚಿಗೆ ಬಡಿಸಲು ಅವಕಾಶ ಕೊಡಬೇಡಿ. ಆದಷ್ಟು ಕಡಿಮೆ ಹಾಕಿಸಿಕೊಂಡು ಊಟಮಾಡಿ. ಹೀಗೆ ಶೇ.10% ರಿಂದ 20% ಕಡಿಮೆ ಮಾಡಿದ್ದಾದಲ್ಲಿ ನಿಮ್ಮ ತೂಕ ಸುಲಭವಾಗಿ ಇಳಿದು ಹೋಗುತ್ತದೆ. ಆದಷ್ಟು ಪಲ್ಯ ಮುಂತಾದವುಗಳನ್ನು ಬಟ್ಟಲಿನಲ್ಲಿ ಹಾಕಿಸಿಕೊಳ್ಳಬೇಡಿ. ನಿಮ್ಮ ತಟ್ಟೆಯಲ್ಲಿ ಯಾವುದೇ ತೆರನಾದ ಅಳತೆ ಮಾಡಬಹುದಾದ ವಸ್ತುಗಳು ಇರದಂತೆ ನೋಡಿಕೊಳ್ಳಿ.

ನಿಮ್ಮ ಆಹಾರವನ್ನು ಅತಿಯಾಗಿ ಬೇಯಿಸಬೇಡಿ

ನಿಮ್ಮ ಆಹಾರವನ್ನು ಅತಿಯಾಗಿ ಬೇಯಿಸಬೇಡಿ

ನಿಮ್ಮ ಆಹಾರವನ್ನು ಅತಿಯಾಗಿ ಬೇಯಿಸುವುದರಿಂದ ಅವುಗಳಲ್ಲಿರುವ ಪೋಷಕಾಂಶಗಳು ಕಡಿಮೆಯಾಗುತ್ತವೆ. ಇದರಿಂದ ನಿಮ್ಮ ದೇಹಕ್ಕೆ ಕಡಿಮೆ ಪೋಷಕಾಂಶ ಸೇರುತ್ತದೆ. ಆಗ ಇದನ್ನು ಸರಿದೂಗಿಸಿಕೊಳ್ಳಲು ದೇಹವು ಇತರೆ ಕುರುಕಲು ತಿಂಡಿಗಳ ಕಡೆಗೆ ವಾಲಲು ಶುರು ಮಾಡುತ್ತದೆ. ಹಾಗಾಗಿ ಆದಷ್ಟು ಸುಶಿ ಮತ್ತು ಸಲಾಡ್‍ಗಳನ್ನು ಸೇವಿಸಿ. ಹಬೆಯಲ್ಲಿ ಬೇಯಿಸಿದ, ಸುಟ್ಟ ಆಹಾರ ಮತ್ತು ತರಕಾರಿಗಳನ್ನು ಸೇವಿಸಿ. ಮೈಕ್ರೋ ವೇವ್ ಓವೆನ್‍ನಲ್ಲಿ ಆಹಾರಗಳನ್ನು ಬಿಸಿ ಮಾಡುವುದನ್ನು ನಿಯಂತ್ರಿಸಿ.

ಊಟಕ್ಕೆ ಮೊದಲು ಹಣ್ಣುಗಳನ್ನು ಸೇವಿಸಿ

ಊಟಕ್ಕೆ ಮೊದಲು ಹಣ್ಣುಗಳನ್ನು ಸೇವಿಸಿ

ಊಟಕ್ಕೆ ಅರ್ಧ ಗಂಟೆ ಮೊದಲು ಹಣ್ಣನ್ನು ಸೇವಿಸುವುದು ಉತ್ತಮ. ಇದರಿಂದ ಹಣ್ಣುಗಳು ಬೇಗ ಜೀರ್ಣವಾಗುತ್ತವೆ. ಖಾಲಿ ಹೊಟ್ಟೆಯಲ್ಲಿ ಹಣ್ಣುಗಳನ್ನು ಸೇವಿಸುವುದರಿಂದ ನಿಮ್ಮ ಜಠರದಲ್ಲಿರುವ ವಿಷಕಾರಿ ಅಂಶಗಳು ತೊಲಗಿ ಹೋಗುತ್ತವೆ. ಇದರಿಂದಾಗಿ ನಿಮ್ಮ ದೇಹಕ್ಕೆ ಅಗತ್ಯವಾದ ಶಕ್ತಿಯು ಲಭಿಸಿ, ನಿಮ್ಮ ತೂಕ ಕಡಿಮೆಯಾಗುತ್ತದೆ.

ರೆಡ್ ಸಾಸ್ ತೆಗೆದುಕೊಳ್ಳಿ

ರೆಡ್ ಸಾಸ್ ತೆಗೆದುಕೊಳ್ಳಿ

ಕ್ರೀಮ್ ಇರುವ ಇತರ ಸಾಸ್‍ಗಳಿಗಿಂತ ಟೊಮಾಟೊ ಸಾಸ್ ಉತ್ತಮವಾದ ಆಯ್ಕೆಯಾಗಿರುತ್ತದೆ. ಇದರಲ್ಲಿ ಕಡಿಮೆ ಕ್ಯಾಲೋರಿಗಳು ಇರುತ್ತವೆ. ಆದರೆ ಸೇವಿಸುವಾಗ ಪ್ರಮಾಣ ಬದ್ಧತೆಯ ಬಗ್ಗೆ ಮಾತ್ರ ಮರೆಯಬೇಡಿ.

ಮಾಂಸಾಹಾರವನ್ನು ತ್ಯಜಿಸಿ

ಮಾಂಸಾಹಾರವನ್ನು ತ್ಯಜಿಸಿ

ಆದಷ್ಟು ಸಸ್ಯಾಹಾರವನ್ನು ಸೇವಿಸುವುದರಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಸಸ್ಯಾಹಾರಿಗಳು ಮಾಂಸಾಹಾರಿಗಳಿಗಿಂತ ಕಡಿಮೆ ತೂಕವನ್ನು ಹೊಂದಿರುತ್ತಾರೆ. ಇದಕ್ಕೆ ಹಲವಾರು ಕಾರಣಗಳು ಇರಬಹುದು. ಆದರೆ ಇದರಲ್ಲಿ ಲೆಗ್ಯುಮೆಗಳು ಪ್ರಧಾನ ಪಾತ್ರವನ್ನುವಹಿಸುತ್ತವೆ. ಬೀನ್ ಬರ್ಗರ್, ಲೆಂಟಿಲ್ ಸೂಪ್ ಮತ್ತು ಇನ್ನಿತರ ಲೆಗುಮೆ ಇರುವ ಆಹಾರಗಳಲ್ಲಿ ನಾರಿನಂಶ ಅಧಿಕವಾಗಿರುತ್ತದೆ.

ಪ್ರತಿದಿನ 100 ಕ್ಯಾಲೋರಿಯನ್ನು ಕರಗಿಸಿ

ಪ್ರತಿದಿನ 100 ಕ್ಯಾಲೋರಿಯನ್ನು ಕರಗಿಸಿ

ವರ್ಷದಲ್ಲಿ ಅಂದಾಜು 10 ಪೌಂಡ್ ಕಡಿಮೆ ಮಾಡಬೇಕಂದಾದಲ್ಲಿ, ಪ್ರತಿದಿನ 100 ಕ್ಯಾಲೋರಿಯನ್ನು ಕರಗಿಸಿ. ಪ್ರತಿದಿನ ಒಂದು ಮೈಲಿ ನಡೆಯಿರಿ ಅಂದರೆ 20 ನಿಮಿಷ ನಿರಂತರವಾಗಿ ನಡೆಯಿರಿ. ಕಳೆ ಕೀಳುವುದೋ ಅಥವಾ ಗಿಡ ನೆಡುವ ಕೆಲಸಗಳನ್ನು 20 ನಿಮಿಷ ಮಾಡಿ. ನಿಮ್ಮ ಲಾನ್‍ನಲ್ಲಿರುವ ಹುಲ್ಲನ್ನು 20 ನಿಮಿಷ ಕತ್ತರಿಸಿ. 30 ನಿಮಿಷಗಳ ಕಾಲ ಮನೆಯನ್ನು ಸ್ವಚ್ಛಗೊಳಿಸಿ. ಹತ್ತು ನಿಮಿಷಗಳ ಕಾಲ ಜಾಗ್ ಮಾಡಿ. ಇವುಗಳಲ್ಲಿ ಯಾವುದಾದರು ಒಂದು ಕೆಲಸವನ್ನು ಮಾಡುತ್ತ ಬನ್ನಿ.

ರಾತ್ರಿ ಎಂಟು ಗಂಟೆಯ ನಂತರ ಊಟ ಮಾಡಬೇಡಿ

ರಾತ್ರಿ ಎಂಟು ಗಂಟೆಯ ನಂತರ ಊಟ ಮಾಡಬೇಡಿ

ಆದಷ್ಟು ರಾತ್ರಿ ಎಂಟು ಗಂಟೆಯ ಒಳಗಾಗಿ ನಿಮ್ಮ ಊಟವನ್ನು ಸೇವಿಸಿ. ಇದರಿಂದ ಸಂಜೆ ಅಂದರೆ ರಾತ್ರಿ ಊಟಕ್ಕಿಂತ ಮೊದಲು ನೀವು ಯಾವುದಾದರು ಕುರುಕಲು ತಿಂಡಿ ತಿನ್ನುವ ಚಟವನ್ನು ನಿಯಂತ್ರಿಸಬಹುದು. ಒಂದು ವೇಳೆ ಇದು ನಿಮ್ಮಿಂದ ಸಾಧ್ಯವಾಗದೇ ಹೋದಲ್ಲಿ ಯಾವುದಾದರು ಒಂದು ಹರ್ಬಲ್ ಟೀಯನ್ನು ಸೇವಿಸಿ. ನಂತರ ಹಲ್ಲುಜ್ಜಿ, ಬಾಯಿಯನ್ನು ತೊಳೆಯಿರಿ. ಇದರಿಂದ ನಿಮ್ಮ ತಿನ್ನುವ ಬಯಕೆಗೆ ಕಡಿವಾಣ ಬೀಳುತ್ತದೆ.

ಆಹಾರ ಸೇವಿಸಿದ ದಿನಚರಿ ಇಡಿ

ಆಹಾರ ಸೇವಿಸಿದ ದಿನಚರಿ ಇಡಿ

ನೀವು ಸೇವಿಸಿದ ಆಹಾರವನ್ನು ಚಾಚೂ ತಪ್ಪದೆ ಒಂದೆಡೆ ಬರೆದಿಡಿ. ಇದು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದನ್ನು ಬರೆಯಲು ತುಂಬಾ ಸಮಯ ಬೇಕಾಗುವುದಿಲ್ಲ. ಆದರೆ ಇದರಿಂದ ನಿಮಗೆ ನಿಮ್ಮ ಆಹಾರ ಕ್ರಮದ ಮೇಲೆ ಒಂದು ಹಿಡಿತ ದೊರೆಯುತ್ತದೆ.

ಸಂಭ್ರಮಾಚರಣೆ ಮಾಡಿ

ಸಂಭ್ರಮಾಚರಣೆ ಮಾಡಿ

ನೀವು ತೂಕ ಕಳೆದು ಕೊಳ್ಳಲು ಇಡುವ ಪ್ರತಿ ಹೆಜ್ಜೆಗು, ಪ್ರತಿ ಗೆಲುವಿಗು ನಿಮ್ಮದೇ ಆದ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿ. ಹಾಗೆಂದು ಅತಿಯಾಗಿ ತಿನ್ನುವುದೋ ಅಥವಾ ಕುಡಿಯುವುದೋ ಮಾಡಬೇಡಿ. ಬದಲಿಗೆ ಮೈ ಮನಗಳಿಗೆ ಮುದ ನೀಡುವಂತಹ ಒಂದು ಚಟುವಟಿಕೆಯನ್ನು ಮಾಡಿ.

English summary

25 Ways to Lose Weight Without Dieting

To keep pounds off permanently, it's best to lose weight slowly. And many experts say you can do that without going on a "diet." Instead, the key is making simple tweaks to your lifestyle.
X
Desktop Bottom Promotion