For Quick Alerts
ALLOW NOTIFICATIONS  
For Daily Alerts

ಸ್ಲಿಮ್ ಅಂಡ್ ಫೀಟ್ ದೇಹ ನೀಡುವ ಜೀವನಶೈಲಿ

By ಪೂರ್ಣಿ
|

ಕೆಲವು ದಿನಗಳ ಹಿಂದೆ ಕೊಂಡು ತಂದ ಡ್ರೆಸ್ ಟೈಟ್ ಆದಾಗ ಯಾರಿಗಾದರೂ ಬೇಜಾರಾಗುತ್ತದೆ. ಮೈ ತೂಕ ಹೆಚ್ಚಾಗುತ್ತಿದೆ, ನಿಯಂತ್ರಣದಲ್ಲಿ ಇಡಬೇಕು ಎಂದು ಬಯಸುತ್ತೇವೆ, ಆದರೆ ಪುರುಸೊತ್ತು ಇಲ್ಲ ಎಂದು ಮೈ ತೂಕ ಕಮ್ಮಿ ಮಾಡುವ ಪ್ರಯತ್ನವನ್ನು ಕೈ ಬಿಡುತ್ತೇವೆ. ಆದರೆ ಬರೀ ಸೌಂದರ್ಯದ ದೃಷ್ಟಿಯಿಂದ ಮಾತ್ರವಲ್ಲ, ಆರೋಗ್ಯದ ದೃಷ್ಟಿಯಿಂದಲೂ ಸುಂದರವಾಗಿ ಕಾಣುವುದು ಅವಶ್ಯಕವಾಗಿದೆ.

ನೀವು ಸ್ಲಿಮ್ ಅಂಡ್ ಫಿಟ್ ದೇಹ ನಿಮ್ಮದಾಗಿರಬೇಕು ಎಂದು ಬಯಸುವುದಾದರೆ ಈ ಕೆಳಗಿನ ಜೀವನ ಶೈಲಿ ನಿಮ್ಮದಾಗಿಸಿಕೊಳ್ಳಿ:

ಸರಿಯಾಗಿ ನಿದ್ದೆ ಮಾಡಿ

ಸರಿಯಾಗಿ ನಿದ್ದೆ ಮಾಡಿ

ಹಬ್ಬದ ಸಂಭ್ರಮವನ್ನು ಸರಿಯಾಗಿ ಸವಿಯಬೇಕಾದರೆ ನೀವು ಆರೋಗ್ಯವಂತರಾಗಿರಬೇಕು ಹಾಗೂ ಬಹಳ ಉಲ್ಲಾಸದಿಂದಿರಬೇಕು. ಇದಕ್ಕಾಗಿ ಸರಿಯಾದ ನಿದ್ದೆ ಬಹಳ ಅವಶ್ಯಕ. ಹಾಗಾಗಿ ಪ್ರತಿ ರಾತ್ರಿ ಬೇಗನೆ ನಿದ್ದೆ ಮಾಡಿ ಮತ್ತು ಪ್ರತಿ ರಾತ್ರಿ ಸುಮಾರು ಆರರಿಂದ ಎಂಟು ಗಂಟೆಗಳ ನಿದ್ದೆ ಬೇಕು. ಇದರಿಂದಾಗಿ ನಿಮ್ಮ ಮುಖದ ಮೇಲೆ ದಣಿವು ಕಾಣಿಸದು, ಮೈ ಕೈ ನೋವು ಇರದು ಹಾಗೂ ಜೀರ್ಣಕ್ರಿಯೆಯೂ ಬಹಳ ಸರಿಯಾಗಿ ಇರುತ್ತದೆ.

ವ್ಯಾಯಾಮಗಳನ್ನು ರೂಢಿಸಿಕೊಳ್ಳಿ

ವ್ಯಾಯಾಮಗಳನ್ನು ರೂಢಿಸಿಕೊಳ್ಳಿ

ಸರಿಯಾಗಿ ವ್ಯಾಯಾಮ ಮಾಡುವುದು ದೇಹದಲ್ಲಿನ ಅನಗತ್ಯ ಬೊಜ್ಜನ್ನು ಕರಗಿಸಲು ಮತ್ತು ನಿಮ್ಮನ್ನು ಮತ್ತಷ್ಟು ಫಿಟ್ ಆಗಿ ಕಾಣಿಸಲು ಸಹಾಯಕ. ಒಂದೆರಡು ವಾರದಲ್ಲಿ ನೀವು ಒಂದೆರಡು ಪೌಂಡ್ ಕಡಿಮೆಯಾಗುವುದರಲ್ಲಿ ಅನುಮಾನವೇ ಇಲ್ಲ. ಹೆಚ್ಚಿನ ತೂಕ ಇಳಿಕೆ ಆಗದಿದ್ದರೂ ತೂಕ ಹೆಚ್ಚಾಗುವುದಂತೂ ಖಂಡಿತ ನಿಲ್ಲುತ್ತದೆ.

ಐದರಿಂದ ಆರು ದಿನಗಳು ಜಿಮ್ ಗೆ ಹೋಗಲೇ ಬೇಕೆಂಬ ನಿರ್ಧಾರ ಮಾಡಿ

ಐದರಿಂದ ಆರು ದಿನಗಳು ಜಿಮ್ ಗೆ ಹೋಗಲೇ ಬೇಕೆಂಬ ನಿರ್ಧಾರ ಮಾಡಿ

ಪ್ರತಿ ವಾರ ಎಷ್ಟು ದಿನಗಳು ಜಿಮ ನಲ್ಲಿ ಹೋಗಿ ವರ್ಕ್ ಔಟ್ ಮಾಡಬೇಕೆಂದು ಮೊದಲೇ ನಿರ್ಧರಿಸಿ ಹಾಗೂ ಅದರಂತೆ ಮಾಡಿ. ಇದರ ಪ್ರಭಾವ ಒಂದೆರಡು ವಾರಗಳಲ್ಲೇ ನಿಮಗೆ ತಿಳಿಯುವುದರಲ್ಲಿ ಅನುಮಾನವಿಲ್ಲ.

ಶುದ್ಧವಾದ ಆಹಾರ ಸೇವಿಸಿ

ಶುದ್ಧವಾದ ಆಹಾರ ಸೇವಿಸಿ

ಕಡಿಮೆ ಅವಧಿಯಲ್ಲಿ ಆಕರ್ಷಕವಾಗಿ ಕಾಣಿಸಲು ಆಹಾರ ಕ್ರಮದ ಮೇಲೂ ನಿಗಾ ಇಡಬೇಕಾದ ಅಗತ್ಯವಿದೆ. ಇದರ ಪ್ರಕಾರ ಕರಿದ ತಿಂಡಿಗಳು, ಎಣ್ಣೆ ಇರುವ ತಿಂಡಿಗಳು, ಹೆಚ್ಚು ಸಕ್ಕರೆಯ ಅಂಶ ಇರುವ ಆಹಾರ, ಸಂಸ್ಕರಿಸಿದ ಹಿಟ್ಟಿನಿಂದ ಮಾಡಿದ ಆಹಾರವನ್ನೂ ಆದಷ್ಟು ದೂರವಿಡಿ. ದಿನಕ್ಕೆರಡು ಅಥವಾ ಮೂರು ಬಾರಿಯಷ್ಟೆ ಆಹಾರ ಸೇವನೆ ಮಾಡಿ ಆಗಾಗ ತಿನ್ನುವುದನ್ನು ಕಡಿಮೆ ಮಾಡಿ.

ಹೆಚ್ಚಿನ ಉಪ್ಪಿನ ಅಂಶ ಇರುವ ಆಹಾರ ಬೇಡ

ಹೆಚ್ಚಿನ ಉಪ್ಪಿನ ಅಂಶ ಇರುವ ಆಹಾರ ಬೇಡ

ಹೆಚ್ಚಿನ ಜನರಲ್ಲಿ ಹೆಚ್ಚು ಉಪ್ಪು ತಿಂದ ಕೂಡಲೆ ಹೆಚ್ಚಿನ ನೀರು ಸೇವನೆ ಸಹಜವಾದ ಸಂಗತಿ. ನಿಮ್ಮ ಜೊತೆ ಹೀಗಾಗುವುದಿಲ್ಲ ಎಂದಾದರೂ ಹೆಚ್ಚಿನ ಉಪ್ಪಿನ ಅಂಶ ಇರುವ ಆಹಾರವನ್ನು ಆದಷ್ಟು ಕಡಿಮೆ ಮಾಡಿ. ಇದು ನಿಮ್ಮ ಮೂಳೆಗಳಿಗೆ ಹಾನಿ ಉಂಟುಮಾಡುತ್ತದೆ.

ಬಿಳಿ ಸಕ್ಕರೆಯನ್ನು ಆದಷ್ಟು ಕಡಿಮೆ ಮಾಡಿ

ಬಿಳಿ ಸಕ್ಕರೆಯನ್ನು ಆದಷ್ಟು ಕಡಿಮೆ ಮಾಡಿ

ಉಪ್ಪು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಚಿಂತೆಯಿಲ್ಲ ಆದರೆ ಸಕ್ಕರೆಯ ಪ್ರಮಾಣ ಹೆಚ್ಚಾಗಿ ನಿಮ್ಮ ದೇಹ ಸೇರಿದರೆ ಒಳ್ಳೆಯದಲ್ಲ. ಇದು ಅನಗತ್ಯ ಕ್ಯಾಲರಿಗಳನ್ನು ನಮ್ಮ ದೇಹಕ್ಕೆ ಸೇರಿಸುವ ಜೊತೆಗೆ ನಮ್ಮ ದೇಹದಲ್ಲಿನ ಪೋಷಕಾಂಶಗಳನ್ನು ತೆಗೆಯುತ್ತದೆ.

ತರಕಾರಿಗಳನ್ನು ಸೇವಿಸಿ

ತರಕಾರಿಗಳನ್ನು ಸೇವಿಸಿ

ಹಣ್ಣುಗಳನ್ನು ತಿನ್ನುತ್ತೇನೆ ಎನ್ನುವುದು ತರಕಾರಿ ಸೇವಿಸದೇ ಇರಲು ಎಂದಿಗೂ ಕಾರಣವಾಗಬಾರದು. ಇವು ನಿಮ್ಮ ದೇಹದ ಕೊಬ್ಬಿನ ಅಂಶವನ್ನು ಕರಗಿಸಲು ಬಹಳ ಸಹಕಾರಿ. ಪ್ರತಿ ಬಾರಿ ಊಟದ ಜೊತೆಯಲ್ಲೂ ಸ್ವಲ್ಪ ಪ್ರಮಾಣದ ತರಕಾರಿಗಳನ್ನು ಸೇವಿಸಲು ಮರೆಯದಿರಿ. ಟೊಮೆಟೊ, ಕ್ಯಾರೆಟ್ ಗಳು, ಪ್ರತಿದಿನ ಸೇವಿಸಿದರೆ ಉತ್ತಮ. ಆದರೆ ಇದನ್ನು ಸುಟ್ಟು ಹಾಕಿ ತಿನ್ನಬೇಡಿ ಹಾಗೆ ಮಾಡಿದಾಗ ಇದರಲ್ಲಿನ ಸತ್ವಗಳೆಲ್ಲವೂ ಮಾಯವಾಗುತ್ತವೆ.

ದಿನಕ್ಕೆ ಕನಿಷ್ಠ ಒಂದಾದರೂ ಹಣ್ಣು ತಿನ್ನಿ

ದಿನಕ್ಕೆ ಕನಿಷ್ಠ ಒಂದಾದರೂ ಹಣ್ಣು ತಿನ್ನಿ

ಕೆಲವು ಆರೋಗ್ಯಕರ ಆಹಾರ ಪದ್ಧತಿಗಳು ಹಣ್ಣುಗಳನ್ನು ಸೂಚಿಸುತ್ತವೆಯಾದರೂ ಹೆಚ್ಚಿನ ಪ್ರಮಾಣದಲ್ಲಲ್ಲ. ದಿನಕ್ಕೆ ಒಂದು ಹಣ್ಣು ಸೇವಿಸಿದರೆ ಸಾಕು ನಿಮ್ಮ ಆರೋಗ್ಯ ಬಹಳ ಉತ್ತಮವಾಗಿರುತ್ತದೆ. ಇದರಲ್ಲೂ ಹಲವು ಸಂಶೋಧನೆಗಳು ನಡೆದು ವಿರೋಧಾಭಿಪ್ರಾಯಗಳು ಇವೆ, ಕೆಲವರ ಆರೋಗ್ಯ ಮತ್ತು ದೇಹ ಪ್ರಕೃತಿಗೆ ಹೊಂದಿಕೊಂಡು ನಮ್ಮ ಆಹಾರ ಇರಬೇಕು ಹೆಚ್ಚಿನ ಹಣ್ಣುಗಳು ಸೇವನೆ ಆರೋಗ್ಯಕ್ಕೆ ಹಾನಿಕರವಾದ ಪಕ್ಷದಲ್ಲಿ ಅದನ್ನು ಹೆಚ್ಚಿನ ತರಕಾರಿಗಳಿಗೆ ಬದಲಾಯಿಸಿಕೊಳ್ಳಿ. ದಿನಕ್ಕೆ ಒಂದು ಸೇಬು, ಪಪ್ಪಾಯಿ ಹಣ್ಣು ಅಥವಾ ದಾಳಿಂಬೆ ನಮ್ಮ ಆರೋಗ್ಯಕ್ಕೆ ಬಹಳ ಉತ್ತಮ.

ಹೆಚ್ಚು ನೀರು ಕುಡಿಯಿರಿ

ಹೆಚ್ಚು ನೀರು ಕುಡಿಯಿರಿ

ಬರಿ ನೀರು ಕುಡಿಯುವುದಲ್ಲ ಅದನ್ನು ಸರಿಯಾದ ರೀತಿಯಲ್ಲಿ ಕುಡಿಯುವುದು ಬಹಳ ಮುಖ್ಯ, ಬೆಳಗ್ಗೆ ಎದ್ದು ನೀರು ಕುಡಿಯಬೇಕೆಂಬ ಹಟಕ್ಕೆ ಬಿದ್ದವರಂತೆ ಒಂದೆರಡು ಬಾಟಲಿ ನೀರು ಒಂದೇ ಸಲಕ್ಕೆ ಕುಡಿಯಬಾರದು. ಸ್ವಲ್ಪ ಹೊತ್ತು ಸಮಯಾವಕಾಶ ಬಿಟ್ಟು ಕುಡಿಯಿರಿ ಒಂದೇ ಸಲಕ್ಕೆ ಹೆಚ್ಚು ನೀರು ಕುಡಿಯಬಾರದು. ಪ್ರತಿ ಅರ್ಧ ಗಂಟೆ ಅಥವಾ ಒಂದು ಗಂಟೆ ಅಂದಾಜಿಗೊಮ್ಮೆ 200 ಎಮ್.ಎಲ್ ನೀರು ಕುಡಿದರೆ ಉತ್ತಮ. ಇದು ನಿಮ್ಮ ಜೀರ್ಣಕ್ರಿಯೆಯನ್ನೂ ಹಾಗೂ ಶಕ್ತಿಯನ್ನೂ ನೀಡುತ್ತದೆ.

ಡಾರ್ಕ್ ಚಾಕೋಲೆಟ್ ಸೇವಿಸಿ

ಡಾರ್ಕ್ ಚಾಕೋಲೆಟ್ ಸೇವಿಸಿ

ಡಾರ್ಕ್ ಚಾಕೋಲೆಟ್ ಗಳು ನಮ್ಮ ಆರೋಗ್ಯಕ್ಕೆ ಉಪಯುಕ್ತ ಎನ್ನಲು ಹಲವು ಕಾರಣಗಳನ್ನು ಕೊಡಬಹುದು. ಹಾಗೂ ನಮ್ಮಲ್ಲಿ ಇದನ್ನು ತಿನ್ನಬೇಕೆಂಬ ಬಯಕೆಗಳು ಬಹಳ ಇವೆ ಎನ್ನಲು ಮತ್ತಷ್ಟು ಕಾರಣಗಳನ್ನು ನೀಡಬಹುದಾಗಿದೆ. ಈ ಹಸಿವನ್ನು ಆರೋಗ್ಯಕರ ರೀತಿಯಲ್ಲಿ ದೂರವಾಗಿಸಲು ಪ್ರತಿ ಊಟದ ಸ್ವಲ್ಪ ಪ್ರಮಾಣದ ಡಾರ್ಕ್ ಚಾಕೋಲೆಟ್ ಅನ್ನು ಸೇವಿಸುವುದು ಬಹಳ ಅಗತ್ಯವಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಆಂಟಿಓಕ್ಸಿಡೆಂಟ್ ಇದೆ ಇದು ನಮ್ಮ ದೇಹದ ಸಕ್ಕರೆಯ ದಾಹವನ್ನು ಬೇಗನೆ ತೀರಿಸುತ್ತದೆ.

ಪ್ರೋಟೀನ್ ಸೇವನೆಯ ಬಗ್ಗೆ ಗಮನ ಕೊಡಿ: ಎರಡು ವಾರಗಳಲ್ಲಿ ಫಿಟ್ ಆಗಬೇಕೆಂಬ ನಿಮ್ಮ ಆಸೆಗೆ ಪ್ರೋಟೀನ್ ಸೇವನೆ ಬಹಳ ಅಗ್ತ್ಯ ಹಾಗು ನಿರ್ಣಾಯಕ ಪಾತ್ರ ವಹಿಸುತ್ತದೆ. ನಮ್ಮ ದೇಹದ ತೂಕಕ್ಕೆ ಅನುಗುಣವಾಗಿ ಇದನ್ನು ಲೆಕ್ಕ ಹಾಕಬಹುದಾಗಿದೆ. ಪ್ರತಿ ಒಂದು ಕಿಲೋ ದೇಹ ತೂಕಕ್ಕೆ 0.8 ರಿಂದ 2 ಕಿಲೋ ಪ್ರೊಟೀನ್ ಸೇವನೆ ಅಗತ್ಯವಾಗಿದೆ.

 ಪ್ರೊಟೀನ್

ಪ್ರೊಟೀನ್

ಸಣ್ಣ ಅವಧಿಯಲ್ಲಿ ನೀವು ಈ ಗುರಿ ಮುಟ್ಟಬೇಕಾದ ಕಾರಣ ಸರಿಯಾದ ಪ್ರಮಾಣದ ಸೇವನೆ ಅಗತ್ಯ. ಮಸೂರ ಅಥವಾ ಕಾಳುಗಳು ಅನ್ನದ ಜೊತೆ ಸರಿಯಾದ ಪ್ರಮಾಣದಲ್ಲಿ ದೇಹ ಸೇರುತ್ತಿರಬೇಕು. ಆದರೆ ಇದು ಮೊಸರು, ಪ್ರಾಣಿ ಜನ್ಯ ಆಹಾರಗಳು, ಬೀಜಗಳು ಮತ್ತು ಸೋಯಾಬೀನ್ ನಷ್ಟು ನಮ್ಮ ದೇಹದ ಪ್ರೊಟೀನ್ ಅಗತ್ಯವನ್ನು ನೀಗಿಸಲಾರವು. ಹಾಗಾಗಿ ಸಣ್ಣ ಅವಧಿಯಲ್ಲಿ ಈ ಗುರಿಯನ್ನು ಮುಟ್ಟಲು ಹೆಚ್ಚಿನ ಪ್ರಮಾಣದಲ್ಲಿ ಈ ಆಹಾರವನ್ನು ಸೇವಿಸಬೇಕು.

ಉತ್ತಮ ಗುಣಮಟ್ಟದ ಎಣ್ಣೆಯ ಬಳಕೆ ಬಹಳ ಅಗತ್ಯ

ಉತ್ತಮ ಗುಣಮಟ್ಟದ ಎಣ್ಣೆಯ ಬಳಕೆ ಬಹಳ ಅಗತ್ಯ

ಆಲೀವ್ ಎಣ್ಣೆ, ಕನೋಲಾ ಎಣ್ಣೆ, ಸಾಸಿವೆ ಎಣ್ಣೆಯನ್ನು ಬಳಸಬಹುದು. ಕೊಬ್ಬರಿ ಎಣ್ಣೆಯೂ ಬಳಸಬಹುದಾದರೂ ಇದು ಹೆಚ್ಚಿನ ಪ್ರಮಾಣದ ಕೊಬ್ಬಿನ ಅಂಶಗಳನ್ನು ಹೊಂದಿರುವ ಕಾರಣ ಇದರ ಬಳಕೆಯನ್ನು ಆದಷ್ಟು ಕಡಿಮೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.

ಪ್ರತಿದಿನ ತೂಕ ನೋಡುವ ಅಭ್ಯಾಸ ಬಿಟ್ಟು ಬಿಡಿ

ಪ್ರತಿದಿನ ತೂಕ ನೋಡುವ ಅಭ್ಯಾಸ ಬಿಟ್ಟು ಬಿಡಿ

ಪ್ರತಿ ದಿನ ತೂಕ ನೋಡಿ ಏನೂ ಪರಿಣಾಮ ಆಗಿಲ್ಲ ಎಂದು ಮರುಗುವ ಬದಲಿ ನಿಮ್ಮ ಒಳಗಿನ ಅನಿಸಿಕೆಯನ್ನು ಹೆಚ್ಚು ಗೌರವಿಸಿ. ಎರಡು ವಾರಗಳಲ್ಲಿ ಮ್ಯಾಜಿಕ್ ಮಾಡಿ ದೇಹ ತೂಕ ಕಡಿಮೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ತೂಕವನ್ನು ಪರೀಕ್ಷೆ ಮಾಡುವುದನ್ನು ಬಿಟ್ಟು ನಿಮಗೆ ಈಗ ಹೇಗೆ ಅನ್ನಿಸುತ್ತಿದೆ.. ಚರ್ಮದ ಮೇಲೆ, ಕೂದಲಿನ ಮೇಲೆ, ಉಗುರಿನಲ್ಲಿ ಏನಾದರೂ ಪ್ರಭಾವ ಆಗಿದೆಯೇ ಮುಂತಾದುವುಗಳನ್ನು ನೋಡಿ. ಇವುಗಳು ಕಣ್ಣಿಗೆ ಕಾಣುವ ಸಾಕ್ಷಿಗಳು ಇವುಗಳ ಮೇಲೆ ಹೆಚ್ಚು ಅವಲಂಬಿತರಾಗಿ. ನೀವು ಎಂದೂ ವ್ಯಾಯಾಮವೇ ಮಾಡಿಲ್ಲ ಅಥವಾ ಆರೋಗ್ಯಕರ ಆಹಾರ ಸೇವನೆಯನ್ನೇ ಮಾಡಿಲ್ಲ ಎಂದಾದಲ್ಲಿ ಎರಡು ವಾರಗಳಲ್ಲಿ ಒಂದೆರಡು ಕಿಲೋ ತೂಕ ಕಡಿಮೆ ಆಗಬಹುದು ಅಷ್ಟೇ.

ಧೂಮಪಾನಕ್ಕೆ ವಿದಾಯ ಹೇಳಿ

ಧೂಮಪಾನಕ್ಕೆ ವಿದಾಯ ಹೇಳಿ

ಧೂಮಪಾನ ಈ ಮೇಲೆ ಹೇಳಿದ ಎಲ್ಲಾ ಅಂಶಗಳಿಂದಲೂ ಹೆಚ್ಚಿನ ಪ್ರಭಾವವನ್ನು ನಿಮ್ಮ ದೇಹದ ಮೇಲೆ ಬೀರುತ್ತದೆ, ಇದು ನಿಮ್ಮ ದೇಹತೂಕದ ಮೇಲೆ ನೇರವಾದ ಪ್ರಭಾವವನ್ನೂ ಬೀರದೇ ಇದ್ದರೂ ದುಷ್ಪರಿಣಾಮ ಬಹಳ ಹೆಚ್ಚಾಗಿದೆ. ನಿಮ್ಮ ಜೀರ್ಣಕ್ರಿಯೆ, ನಿದ್ದೆ ಹಾಗೂ ಶಕ್ತಿಯ ಆಗತ್ಯಗಳನ್ನು ಧೂಮಪಾನದ ಜೊತೆಗೆ ಸರಿಯಾಗಿ ತಾಳೆ ನೋಡಲು ಸಾಧ್ಯವಿಲ್ಲ.

ಮನಸ್ಸಿಗೆ ಸಮಾಧಾನ ಬಹಳ ಅಗತ್ಯ

ಮನಸ್ಸಿಗೆ ಸಮಾಧಾನ ಬಹಳ ಅಗತ್ಯ

ಹೆಚ್ಚಿನ ಒತ್ತಡ ನಿಮ್ಮನ್ನು ಮತ್ತಷ್ಟು ಅನಾರೋಗಿಯನ್ನಾಗಿ ಮಾಡುತ್ತದೆ. ಹೆಚ್ಚಿನ ಒತ್ತಡ ನಿಮ್ಮಲ್ಲಿದ್ದರೆ ನಿಮ್ಮ ದೇಹ ತೂಕ ಹೆಚ್ಚಾಗುವ ಮೂಲಕ ಅದು ಮೊದಲಾಗಿ ತಿಳಿಯುತ್ತದೆ. ಹೆಚ್ಚು ತಿನ್ನುತ್ತೀರಿ, ಕರಿದ ತಿಂಡಿಗಳ ದಾಸರಾಗುತ್ತೀರಿ, ನಿದ್ದೆ ಕಡಿಮೆಯಾಗುತ್ತದೆ, ಇವೆಲ್ಲವೂ ನಿಮ್ಮ ಆಂತರಿಕ ಆರೋಗ್ಯ ವ್ಯವಸ್ಥೆಯನ್ನು ಹದಗೆಡಿಸುತ್ತದೆ ಹಾಗೂ ಇದರಿಂದಾಗಿ ಹಾರ್ಮೋನ್ ಗಳ ಕಾರ್ಯ ಸರಿಯಾಗಿ ನಡೆಯುವುದಿಲ್ಲ.

ಇದು ನಿಮ್ಮ ದೇಹದ ಮೇಲೆ ಅಡ್ಡ ಪರಿಣಾಮಗಳನ್ನು ಮಾಡುತ್ತದೆ ಇದರಿಂದಾಗಿ ನೀವು ತೂಕವನ್ನು ಹೆಚ್ಚಿಸಿಕೊಳ್ಳುತ್ತೀರಿ. ಇಲ್ಲಿ ಸಣ್ಣ ಸಣ್ಣ ಬದಲಾವಣೆಗಳನು ಮತ್ತು ಅಭ್ಯಾಸಗಳನ್ನು ಹೊಂದುವುದು ಬಹಳ ಸಹಕಾರಿ ಅವುಗಳೆಂದರೆ ಸಂಗೀತ ಕೇಳುವುದು, ಚಲನಚಿತ್ರ ನೋಡುವುದು, ನಿಮ್ಮ ಆತ್ಮೀಯ ಗೆಳೆಯರ ಭೇಟಿ, ಏನಾದರೂ ಮನಸ್ಸಿಗೆ ಖುಷಿ ಕೊಡುವ ಬರವಣಿಗೆ, ನಿಧಾನ ಉಸಿರಾಟದ ಅಭ್ಯಾಸ ಇತ್ಯಾದಿ. ಪ್ರತಿ ದಿನ ಒತ್ತಡ ಕಡಿಮೆ ಮಾಡುವ ಏನಾದರೂ ಒಂದು ಕೆಲಸವನ್ನಾದರೂ ಮಾಡಿ.

ಮದ್ಯಪಾನದಿಂದ ದೂರವಿರಿ

ಮದ್ಯಪಾನದಿಂದ ದೂರವಿರಿ

ಮಿತಿಯಲ್ಲಿ ಸೇವಿಸಿದರೆ ಮದ್ಯಪಾನ ಅಷ್ಟೊಂದು ಬಾಧಕವಲ್ಲ ಆದರೆ ಇದನ್ನು ಮಿತಿಯಲ್ಲಿ ಕುಡಿಯಲು ಇರುವ ಸಾಧ್ಯತೆಗಳು ಬಹಳ ಕಡಿಮೆ. ಇದರಿಂದಾಗಿ ನಿಮ್ಮ ದೇಹಕ್ಕೆ ಹೆಚ್ಚಿನ ಸಕ್ಕರೆಯ ಅಂಶ ಸೇರುತ್ತದೆ, ಹ್ಯಾಂಗ್ ಓವರ್ ಕೂಡ ಬಹಳವೇ ಹೆಚ್ಚಾಗಿರುತ್ತದೆ. ಅನಗತ್ಯ ಕ್ಯಾಲರಿಗಳು ದೇಹ ಸೇರುತ್ತವೆ.

ಕಡಿಮೆ ಕ್ಯಾಲರಿ ಇರುವ ಮದ್ಯಪಾನವೂ ನಿಮ್ಮ ಆರೋಗ್ಯಕ್ಕೆ ಹಾನಿಕರ. ಇದು ನೀವು ಸೇವಿಸಿದ ಆಹಾರದ ಜೀರ್ಣಕ್ರಿಯೆಯನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ನಿಮ್ಮ ದೇಹದಲ್ಲಿ ಹೆಚ್ಚಿನ ಕೊಬ್ಬಿನ ಅಂಶ ಶೇಖರಣೆ ಆಗುತ್ತಾ ಹೋಗುತ್ತದೆ.

ಹೆಚ್ಚಿನ ಪಿಷ್ಟದ ಆಹಾರ ಬೇಡ

ಹೆಚ್ಚಿನ ಪಿಷ್ಟದ ಆಹಾರ ಬೇಡ

ಇದರ ಉಲ್ಲೇಖ ಈ ಮೊದಲೇ ಆಗಿದ್ದರೂ ಇನ್ನೊಮ್ಮೆ ಈ ಅಂಶಕ್ಕೆ ಒತ್ತು ನೀಡುವ ಅಗತ್ಯವಿದೆ. ಅನ್ನ ಮತ್ತು ಆಲೂಗೆಡ್ಡೆಗಳು ನಮ್ಮ ದೇಹಕ್ಕೆ ಅನಗತ್ಯ ಕೊಬ್ಬನ್ನು ಸೇರಿಸುತ್ತವೆ. ಇವನ್ನು ಸೇವಿಸುವುದನ್ನು ಕಡಿಮೆ ಮಾಡಿ.

ನಿಮ್ಮ ಆಹಾರ ಸೇವನೆಯ ಬಟ್ಟಲುಗಳನ್ನು ಬದಲಾಯಿಸಿ: ದೊಡ್ಡ ಬಟ್ಟಲು ದೊಡ್ಡ ತಟ್ಟೆ ಇವನ್ನೆಲ್ಲ ಸ್ವಲ್ಪ ಬದಿಗಿಡಿ. ಈ ಎರಡು ವಾರಗಳ ಫಿಟ್ನೆಸ್ ತಂತ್ರ ಇಂತಹ ಕೆಲವು ಸಣ್ಣ ಸಣ್ಣ ಬದಲಾವಣೆಗಳಿಲ್ಲದೆ ಪೂರ್ಣಗೊಳ್ಳುವುದಿಲ್ಲ. ಸಣ್ಣ ಸಣ್ಣ ಬಟ್ಟಲುಗಳು ನಿಮ್ಮ ಆಹಾರ ಸೇವನೆಯ ಭಾಗವನ್ನೂ ಕಡಿಮೆ ಮಾಡುತ್ತವೆ. ಸಣ್ಣ ಪ್ಲೇಟಿನಲ್ಲಿ ತುಂಬಾ ಅನ್ನ ಹಾಕಿಕೊಂಡರೆ ನಿಮ್ಮ ಮನಸ್ಸಿಗೆ ಇದರಲ್ಲಿ ಬಹಳ ಅನ್ನವಿದೆ ಹೆಚ್ಚಿನ ಆಹಾರವಿದೆ ಎಂದು ನಿಮಗೆ ಅನ್ನಿಸುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ. ಬಹಳ ಕಡು ಬಣ್ಣದ ಮಣ್ಣಿನ ಪಾತ್ರೆಗಳು ಆಹಾರವನ್ನು ತಟ್ಟೆಯ ಬಣ್ಣದ ಜೊತೆಗೆ ಸರಿಯಾಗಿ ಹೊಂದಿಕೆಯಾಗದ ಕಾರಣ ಆಹಾರ ಸೇವನೆಯನ್ನು ಕಡಿಮೆ ಮಾಡುತ್ತವೆ. ಇದೇನಿದು ಎಂದು ಕೇಳುತ್ತೀರಾ ? ನೀವೇ ಪ್ರಯತ್ನಿಸಿ ನೋಡಿ.

ಸನ್ ಸ್ಕ್ರೀನ್ ಅನ್ನು ಮರೆಯಬೇಡಿ

ಸನ್ ಸ್ಕ್ರೀನ್ ಅನ್ನು ಮರೆಯಬೇಡಿ

ಭಾರತದಲ್ಲಿ ಈ ಅವಧಿಯಲ್ಲಿ ಬಹಳ ಬಿಸಿಲನ ಅವಧಿಯಾಗಿರುತ್ತದೆ. ಹೊಸ ವರ್ಷದ ತನಕ ಇವೇ ಪರದೆಗಳು ಮತ್ತು ಸನ್ ಕ್ರೀಮ್ ಇರಲಿ ಎಂದು ಸುಮ್ಮನೆ ಕೂರಬೇಡಿ. ದೀಪಾವಳಿಯಿಂದಲೇ ಇದನ್ನು ಆರಂಭಿಸಿ. ಇದು ಕೇವಲ ಮಹಿಳೆಯರಿಗೆ ಎಂದು ಪುರುಷರು ಸುಮ್ಮನಿರಬೇಡಿ. ಇದು ಎಲ್ಲರಿಗೂ ಒಂದೇ. ಎರಡು ವಾರಗಳ ನಿಗಾ ಬಹಳ ಬದಲಾವಣೆ ತರುವುದರಲ್ಲಿ ಅನುಮಾನವಿಲ್ಲ.

English summary

20 Tips To Get Fit And Healthy Body

Do you want fit and smart body. These 20 things you can do to get fit body, 20 tips that will help you look fitter and hotter.
X
Desktop Bottom Promotion