For Quick Alerts
ALLOW NOTIFICATIONS  
For Daily Alerts

ತೂಕ ಇಳಿಸುವ 14 ಗುಟ್ಟು, ಯಾರಿಗೂ ಹೇಳ್ಬೇಡಿ!

|

ಸಮತೂಕದ ಮೈಕಟ್ಟನ್ನು ಪ್ರತಿಯೊಬ್ಬರೂ ಬಯಸುತ್ತಾರೆ. ಸಮತೂಕದ ಮೈಕಟ್ಟನ್ನು ಪಡೆಯಲು ನಮ್ಮ ಪ್ರಯತ್ನ ಕೂಡ ಬೇಕು. ಆರೊಗ್ಯಕರ ಡಯಟ್, ವ್ಯಾಯಾಮ, ಸಣ್ಣಗಾಗಲು ಸರಿಯಾದ ಪ್ಲಾನ್ ಇವೆಲ್ಲಾ ಇದ್ದರೆ ಮಾತ್ರ ಸಮತೂಕವನ್ನು ಪಡೆಯಲು ಸಾಧ್ಯ.

ಈಗೀನ ಯುವ ಜನಾಂಗದವರು ತಮ್ಮ ಫಿಟ್ ನೆಸ್ ಕಾಪಾಡಲು ಜಿಮ್ ಗೆ ಹೋಗುತ್ತಾರೆ. ಸುಂದರವಾದ ಮೈಕಟ್ಟು ಪಡೆದು ಆಕರ್ಷಕವಾಗಿ ಕಾಣಬೇಕೆಂಬುದು ಅವರ ಗುರಿ. ಅಧಿಕ ತೂಕವನ್ನು ಕಮ್ಮಿ ಮಾಡಿಕೊಳ್ಳುವುದರಿಂದ ಸೌಂದರ್ಯ ಮಾತ್ರವಲ್ಲ, ಆರೋಗ್ಯ ಕೂಡ ಹೆಚ್ಚುತ್ತದೆ.

ಅಧಿಕ ದಪ್ಪವಾದರೆ ಒಬೆಸಿಟಿ, ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ ಈ ರೀತಿ ಕಾಯಿಲೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ತುಂಬಾ ತೆಳ್ಳಗಿದ್ದರೂ ತಲೆಸುತ್ತು, ಸುಸ್ತು ಕಂಡು ಬರುವುದು. ಸಮತೂಕವನ್ನು ಪಡೆಯಲು ಈ ಕೆಳಗಿನ ಟಿಪ್ಸ್ ನಿಮ್ಮ ಸಹಾಯಕ್ಕೆ ಬರುತ್ತವೆ:

ಪ್ಲಾನ್

ಪ್ಲಾನ್

ಯಾವುದೇ ಗುರಿ ತಲುಪಲು ಪ್ಲಾನ್ ಇರಬೇಕು. ಪ್ಲಾನ್ ಇಲ್ಲದೆ ಯಾವುದೇ ಕೆಲಸ ಮಾಡಿದರೂ ಪ್ಲಾಪ್ ಆಗುತ್ತೇವೆ. ಆದ್ದರಿಂದ ನಾವು ಸಮತೂಕದ ಮೈಕಟ್ಟು ಪಡೆಯಲು ಎಷ್ಟು ತೂಕ ಕಡಿಮೆ ಮಾಡಬೇಕು ಎಂಬ ಪ್ಲಾನ್ ಇರಬೇಕು. ಆ ಪ್ಲಾನ್ ನಲ್ಲಿ ಯಾವುದೆಲ್ಲಾ ಅಂಶ ಇರಬೇಕೆನ್ನುವುದಕ್ಕೆ ಮುಂದೆ ಓದಿ.

ನಿದ್ದೆ

ನಿದ್ದೆ

ಆರೋಗ್ಯವಾಗಿರಲು ನಿಗದಿತ ಪ್ರಮಾಣದ ನಿದ್ದೆ ಅಂದರೆ 6-8 ಗಂಟೆಗಳ ನಿದ್ದೆ ಅವಶ್ಯಕ. ನಿದ್ದೆಯಲ್ಲಿ ವ್ಯತ್ಯಾಸವಾದರೆ ಮಿತಿಮೀರಿ ದಪ್ಪಗಾಗುವುದು, ತುಂಬಾ ತೆಳ್ಳಗಾಗುವುದು ಈ ರೀತಿ ತೂಕದಲ್ಲಿ ವ್ಯತ್ಯಾಸ ಉಂಟಾಗುವುದು.

ಸ್ನ್ಯಾಕ್ಸ್

ಸ್ನ್ಯಾಕ್ಸ್

ಸ್ನ್ಯಾಕ್ಸ್ ತಿನ್ನುವಾಗ ಅಧಿಕ ಕೊಲೆಸ್ಟ್ರಾಲ್ ಇರುವ ಆಹಾರಗಳನ್ನು ಮುಟ್ಟಬೇಡಿ. ಡ್ರೈ ಫ್ರೂಟ್ಸ್, ನಟ್ಸ್ ಇವುಗಳು ಆರೊಗ್ಯಕರವಾದ ಸ್ನಾಕ್ಸ್ ಗಳಾಗಿವೆ.

ಎಷ್ಟು ತಿನ್ನುತ್ತೀರಿ?

ಎಷ್ಟು ತಿನ್ನುತ್ತೀರಿ?

ನಮ್ಮ ಇಷ್ಟದ ಆಹಾರವನ್ನು ಸ್ವಲ್ಪ ಜಾಸ್ತಿಯೇ ತಿನ್ನುತ್ತೇವೆ ಸಮತೂಕ ಬೇಕೆಂದು ಬಯಸುವವರು ಮಿತಿಯಲ್ಲಿ ತಿನ್ನಬೇಕು. ಅದರಲ್ಲೂ ಕೊಲೆಸ್ಟ್ರಾಲ್ ಕಡಿಮೆ ಇರುವ ಆಹಾರವನ್ನು ತಿನ್ನಬೇಕು. ಕೊಲೆಸ್ಟ್ರಾಲ್ ಇರುವ ನಿಮ್ಮ ಇಷ್ಟದ ಆಹಾರಗಳನ್ನು ಅಪರೂಪಕ್ಕೆ, ಮಿತಿಯಲ್ಲಿ ತಿಂದರೆ ದೇಹದ ತೂಕ ಹೆಚ್ಚುವುದಿಲ್ಲ.

ವ್ಯಾಯಾಮ

ವ್ಯಾಯಾಮ

ದಿನದಲ್ಲಿ 20-30 ನಿಮಿಷ ವ್ಯಾಯಾಮಕ್ಕೆ ಮೀಸಲಿಡಿ. ಆಫೀಸ್ ಹತ್ತಿರದಲ್ಲಿದ್ದರೆ ಸೈಕಲ್ ನಲ್ಲಿ ಹೋಗಬಹುದು. ಭಾರ ಎತ್ತುವುದು, ನಡೆಯುವುದು ಈ ರೀತಿಯ ವ್ಯಾಯಾಮಗಳನ್ನು ಮಾಡಿ.

ತಂಪು ಪಾನೀಯಗಳು

ತಂಪು ಪಾನೀಯಗಳು

ತಂಪು ಪಾನೀಯಗಳಲ್ಲಿ ಕೃತಕ ಸಿಹಿ ಬಳಸಿರುವುದರಿಂದ ಕ್ಯಾಲೋರಿ ಅಂಶವಿರುತ್ತದೆ. ತಂಪು ಪಾನೀಯಗಳನ್ನು ವಾರದಲ್ಲಿ 3-4 ಬಾರಿಯಂತೆ ಕುಡಿಯುವ ಅಭ್ಯಾಸವಿದ್ದರೆ ದೇಹದ ತೂಕ ಹೆಚ್ಚಾಗುವುದು.

ಊಟ ಬಿಡುವುದು

ಊಟ ಬಿಡುವುದು

ಇದು ತುಂಬಾ ಜನರು ಸಣ್ಣಗಾಗಲು ಪಾಲಿಸುವ ಮಾರ್ಗವಾಗಿದೆ. ಊಟ ಬಿಟ್ಟು ತೆಳ್ಳಗಾದರೆ ಕಾಯಿಲೆ ಬರುತ್ತದೆ. ಕ್ರಾಷ್ ಡಯಟ್ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.

ಸಂತೋಷ

ಸಂತೋಷ

ಸಂತೊಷದಿಂದ ಇದ್ದರೆ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಫ್ರೆಂಡ್ಸ್ ಜೊತೆ ಟ್ರಕ್ಕಿಂಗ್ ಹೋಗುವುದು ಮಾಡಿ. ಇದರಿಂದ ಮನಸ್ಸಿಗೆ ಖುಷಿ ಸಿಗುತ್ತದೆ , ಆರೋಗ್ಯವೂ ವೃದ್ಧಿಸುವುದು.

ಆಹಾರ

ಆಹಾರ

ಸಣ್ಣಗಾಗಲು ಪ್ರಯತ್ನಿಸುವವರು ಆಹಾರ ಬಿಡುವ ಬದಲು ಆರೋಗ್ಯಕರವಾದ ಆಹಾರ ತಿನ್ನಬೇಕು. ಸೊಪ್ಪು, ಅಧಿಕ ನಾರಿನಂಶ ಮತ್ತು ಪ್ರೊಟೀನ್ ಇರುವ ಆಹಾರಗಳನ್ನು ತಿನ್ನಬೇಕು.

 ಸರಳ ವಸ್ತುಗಳನ್ನು ಬಳಸಿ ವ್ಯಾಯಾಮ

ಸರಳ ವಸ್ತುಗಳನ್ನು ಬಳಸಿ ವ್ಯಾಯಾಮ

ವ್ಯಾಯಾಮವನ್ನು ಜಿಮ್ ಗೆ ಹೋಗಿಯೇ ಮಾಡಬೇಕಂತಿಲ್ಲ. ಜಿಮ್ ಗೆ ಹೋಗಲು ಇಷ್ಟಪಡದವರು ಮನೆಯಲ್ಲಿ ಸ್ಕಿಪಿಂಗ್ ಆಡುವುದು, ನಡೆಯುವುದು ಈ ರೀತಿ ಮಾಡುವುದರ ಮುಖಾಂತರ ಸಮತೂಕವನ್ನು ಪಡೆಯಬಹುದು.

ವ್ಯಾಯಾಮ ಮಾಡುವಾಗ ವಿಶ್ರಾಂತಿ ತೆಗೆದುಕೊಳ್ಳಬೇಡಿ

ವ್ಯಾಯಾಮ ಮಾಡುವಾಗ ವಿಶ್ರಾಂತಿ ತೆಗೆದುಕೊಳ್ಳಬೇಡಿ

ವ್ಯಾಯಾಮ 30 ನಿಮಿಷ ಮಡುವುದಾದರೆ ನಡುವಿನಲ್ಲಿ ಬಿಡುವು ತೆಗೆದುಕೊಳ್ಳಬೇಡಿ. ಮೈಯಲ್ಲಿ ಬೆವರು ಬರುವವರೆಗೆ ವ್ಯಾಯಾಮ ಮಾಡಿ.

ಪ್ರೊಟೀನ್

ಪ್ರೊಟೀನ್

ವ್ಯಾಯಾಮದ ನಂತರ ಪ್ರೊಟಿನ್ ಇರುವ ಪದಾರ್ಥಗಳನ್ನು ಸೇವಿಸಿ.

ಆರೋಗ್ಯಕರ ಕೊಲೆಸ್ಟ್ರಾಲ್ ಪದಾರ್ಥಗಳು

ಆರೋಗ್ಯಕರ ಕೊಲೆಸ್ಟ್ರಾಲ್ ಪದಾರ್ಥಗಳು

ಬೆಣ್ಣೆ ಹಣ್ಣು, ನೆಲ ಕಡಲೆ ಬೀಜದಲ್ಲಿ ಆರೋಗ್ಯಕರವಾದ ಕೊಲೆಸ್ಟ್ರಾಲ್ ಇರುತ್ತದೆ. ಒಮೆಗಾ 3 ಕೊಬ್ಬಿನಂಶವಿರುವ ಆಹಾರಗಳು ಆರೋಗ್ಯಕ್ಕೆ ಒಳ್ಳೆಯದು.

ನೀರು

ನೀರು

ಊಟದ ನಂತರ ಒಂದು ಲೋಟ ಬಿಸಿ ನೀರು ಕುಡಿಯುವುದು ಒಳ್ಳೆಯದು. ದಿನದಲ್ಲಿ 8-10 ಲೋಟ ನೀರು ಕುಡಿಯಿರಿ. ಜ್ಯೂಸ್ ಕುಡಿಯಿರಿ.

ಈ ಎಲ್ಲಾ ಅಂಶಗಳನ್ನು ಮಾಲಿಸಿದರೆ ಆರೋಗ್ಯಕರವಾಗಿ ದೇಹದ ತೂಕವನ್ನು ಕಡಿಮೆ ಮಾಡಿ ಸಮತೂಕವನ್ನು ಪಡೆಯಬಹುದು.

English summary

14 Fat Loss Secrets | Tips For Weight Loss | ತೂಕ ಕಡಿಮೆಯಾಗಬೇಕೆ? ಇಲ್ಲಿದೆ ಟಿಪ್ಸ್ | ತೂಕ ಕಡಿಮೆ ಮಾಡಲು ಟಿಪ್ಸ್

Try these 20 tips—including several surprises—to fire up your metabolism speed up your lean body transformation.
X
Desktop Bottom Promotion