ತೆಳ್ಳಗಾಗಲು ಜಿಮ್ ಏಕೆ? ಅಡುಗೆ ಮನೆಯೇ ಸಾಕು!

By:
Subscribe to Boldsky

Weight Loss From Food Ingredients
ತೂಕ ಕಡಿಮೆಯಾಗಬೇಕೆಂದು ಯಾವುದೇ ಜಿಮ್‌ಗೆ ಹೋಗಬೇಕಾಗಿಲ್ಲ, ಮನೆಯ ಅಡುಗೆ ಮನೆಯೇ ಸಾಕು! ಹೌದು, ನಾವು ದಿನನಿತ್ಯ ಅಡುಗೆಗೆ ಬಳಸುವ ಕೆಲವು ಸಾಧನಗಳನ್ನು ಬಳಸಿ ದೇಹದ ತೂಕ ಕಡಿಮೆ ಮಾಡಬಹುದು. ಈ ಅಡುಗೆ ಸಾಮಾಗ್ರಿಗಳು ದೇಹದಲ್ಲಿರುವ ಅಧಿಕ ಬೊಜ್ಜನ್ನು ಕಡಿಮೆ ಮಾಡಿ ಆರೋಗ್ಯ ಹೆಚ್ಚಿಸಲು ತುಂಬಾ ಸಹಕಾರಿಯಾಗಿದೆ. ಆ ಸಾಮಾಗ್ರಿಗಳ ಪಟ್ಟಿ ನೋಡಿ ಇಲ್ಲಿದೆ, ಇವುಗಳನ್ನು ಬಳಸಿ ತೆಳ್ಳಗಿನ ಮೈಕಟ್ಟು ಪಡೆಯಿರಿ.

ಅರಿಶಿಣ: ಒಂದು ಚಿಕ್ಕ ತುಂಡು ಅರಿಶಿಣ ದಿನಾ ತಿಂದರೆ ಹೃದಯದ ಸ್ವಾಸ್ಥ್ಯಕ್ಕೆ ತುಂಬಾ ಒಳ್ಳೆಯದು. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಇದನ್ನು ತಿನ್ನುತ್ತಾ ಬಂದರೆ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಇದು ದೇಹದಲ್ಲಿ ರಕ್ತ ಸಂಚಲನ ಸರಾಗವಾಗಿ ನಡೆಯಲು ತುಂಬಾ ಸಹಕಾರಿಯಾಗಿದೆ.

ಚಕ್ಕೆ: ಚಕ್ಕೆ ಜೀರ್ಣಕ್ರಿಯೆ ಹೆಚ್ಚಿಸುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ, ಜೀರ್ಣಕ್ರಿಯೆ ಸರಿಯಾಗಿ ನಡೆಯುವಂತೆ ಮಾಡಿ ದೇಹದಲ್ಲಿರುವ ಅಧಿಕ ಕೊಬ್ಬನ್ನು ಕಡಿಮೆ ಮಾಡುತ್ತದೆ.

ಹಸಿಮೆಣಸಿನ ಕಾಯಿ: ಮೆಣಸಿನ ಕಾಯಿ ತಿಂದರೆ ಕೊಬ್ಬು ಕರಗಿಸಲು ಸಹಕಾರಿಯಾಗಿದೆ, ತುಂಬಾ ಸಪ್ಪೆ ಊಟ ಮಾಡಿದರೂ ಆರೋಗ್ಯಕ್ಕೆ ಒಳ್ಳೆಯದಲ್ಲ, ತುಂಬಾ ಖಾರದ ಊಟ ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ.

ಕರಿಬೇವಿನ ಎಲೆ: ಕರಿ ಬೇವಿನ ಎಲೆ ಪ್ರತಿದಿನ ತಿನ್ನುತ್ತಾ ಬಂದರೆ ದೇಹದ ತೂಕ ಕಡಿಮೆಯಾಗುತ್ತದೆ. ಇದು ದೇಹದಲ್ಲಿರುವ ಕಶ್ಮಲಗಳನ್ನು ಹೋಗಲಾಡಿಸಿ, ಅಧಿಕ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸುತ್ತದೆ. ಸ್ವಲ್ಪ ಗುಂಡಗೆ ಇರುವವರು ಪ್ರತಿ ಹೊತ್ತಿನ ಊಟದ ಜೊತೆ 5-6 ಕರಿಬೇವಿನ ಎಲೆ ತಿನ್ನುತ್ತಾ ಬಂದರೆ ಸಮತೂಕವನ್ನು ಪಡೆಯಬಹುದು.

ಬೆಳ್ಳುಳ್ಳಿ: ಬೆಳ್ಳುಳ್ಳಿಯನ್ನು ಗಂಧಕದ ಅಂಶ ಹೆಚ್ಚಾಗಿರುವುದರಿಂದ ಕೊಲೆಸ್ಟ್ರಾಲ್ ಮತ್ತು ಅನಾರೋಗ್ಯಕರ ಕೊಬ್ಬನ್ನು ಕಡಿಮೆ ಮಾಡಲು ಸಹಕಾರ ಮಾಡುತ್ತದೆ.

ಸಾಸಿವೆ ಎಣ್ಣೆ: ಅಡುಗೆಗೆ ಸಾಸಿವೆ ಎಣ್ಣೆ ಬಳಸುವುದು ತುಂಬಾ ಒಳ್ಳೆಯದು. ಇದರಲ್ಲಿ antioxidants ಅಂಶ ಇರುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು.

ಎಲೆಕೋಸು: ಎಲೆಕೋಸನ್ನು ಹಸಿಯಾಗಿ ತಿಂದರೆ ತೂಕ ಕಡಿಮೆಯಾಗಲು ತುಂಬಾ ಸಹಕಾರಿ. ಎಲೆಕೋಸಿನಿಂದ ತಯಾರಿಸಿದ ಅಡುಗೆ ಪದಾರ್ಥಗಳ ಸೇವನೆ ಒಳ್ಳೆಯದು.

ಹೆಸರು ಕಾಳು: ಮೊಳಕೆ ಬರಿಸಿದ ಹೆಸರುಕಾಳಿನಲ್ಲಿ ವಿಟಮಿನ್ ಎ, ಬಿ, ಸಿ ಮತ್ತು ಇ ಹಾಗೂ ಅನೇಕ ಖನಿಜಾಂಶಗಳಿರುತ್ತದೆ. ಇದರಲ್ಲಿರುವ ಕ್ಯಾಲ್ಸಿಯಂ, ಕಬ್ಬಿಣದಂಶ, ಅಧಿಕ ನಾರಿನಂಶ ಕೊಲೆಸ್ಟ್ರಾಲ್ ಪ್ರಮಾಣವನ್ನ ಕಡಿಮೆ ಮಾಡಲು ಸಹಕಾರಿಯಾಗಿದೆ. ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡುವಲ್ಲಿ ಸಹಕಾರಿಯಾಗಿದೆ.

ಜೇನು: ಬೆಳಗ್ಗಿನ ಜಾವ ಒಂದು ಚಮಚ ಜೇನನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿ ಕುಡಿದರೆ ದೇಹದ ತೂಕ ಕಡಿಮೆಯಾಗುವುದು.

ಮಜ್ಜಿಗೆ: ಮಜ್ಜಿಗೆಯಲ್ಲಿ ಅಧಿಕ ಕೊಬ್ಬಿನಂಶವಿರುವುದಿಲ್ಲ. ಇದನ್ನು ಪ್ರತಿನಿತ್ಯ ಸೇವಿಸಿದರೆ ದೇಹಕ್ಕೆ ಅಗತ್ಯವಾದ ಪೋಷಕಾಂಶದ ಜೊತೆ ಸಮತೂಕದ ಮೈಕಟ್ಟು ಪಡೆಯಬಹುದು.

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Read more about: ಬೊಜ್ಜು, ಆಹಾರ, fat, food
Story first published: Friday, July 13, 2012, 13:02 [IST]
English summary

Weight Loss From Food Ingredients | Tips For Health | ಆಹಾರ ಸಾಮಾಗ್ರಿಗಳಿಂದ ತೂಕ ಕಡಿಮೆ ಮಾಡುವುದು | ಆರೋಗ್ಯಕ್ಕಾಗಿ ಕೆಲ ಸಲಹೆ

People will do so many thing for weight loss, But the wounder is you can control your weight by using food ingredients. Here are name of those ingredients.
Please Wait while comments are loading...
Subscribe Newsletter