For Quick Alerts
ALLOW NOTIFICATIONS  
For Daily Alerts

ವಿಶೇಷ ಲೇಖನ: ಮೂಳೆಗಳ ಆಯುಷ್ಯ ಹೆಚ್ಚಿಸಬೇಕೆ?

By Super
|
Tips To Strong Your Bone
ಸೆಪ್ಟಂಬರ್ 8. ಭೌತಚಿಕಿತ್ಸಾ ದಿನಾಚರಣೆ ದಿನ. ಈ ದಿನದ ವಿಶೇಷವಾಗಿ ಮೂಳೆಯ ಆರೋಗ್ಯವನ್ನು ಕಾಪಾಡುವುದು ಹೇಗೆ ಎಂದು ತಿಳಿಯೋಣ.

ಮಧ್ಯ ವಯಸ್ಸು ದಾಟುತ್ತಿದ್ದಂತೆ ಮೂಳೆಗೆ ಸಂಬಂಧಿಸಿದ ಸಮಸ್ಯೆಗಳು ನಮ್ಮನ್ನು ಕಾಡುವುದು ಸಾಮಾನ್ಯ. ಕೆಲಸ, ಆಹಾರಕ್ರಮ, ದೇಹದ ಹಾರ್ಮೋನುಗಳು, ದೈಹಿಕ ಚಟುವಟಿಕೆ, ಬದುಕಿನ ಶೈಲಿ ಕಾಯಿಲೆ ಮತ್ತು ಔಷಧಿಗಳ ಬಳಕೆಯಿಂದ ದೇಹದ ಮೂಳೆಗಳು ಸವೆಯುತ್ತಾ ಬರುತ್ತದೆ.

ಅದರಲ್ಲೂ ಅಸ್ಥಿ ರಂಧ್ರತೆ ಅಥವಾ ಆಸ್ಟಿಯೋಪೋರೋಸಿಸ್ ಇಂದು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಸಮಸ್ಯೆಯಾಗಿದೆ. ಇದರಿಂದಾಗಿ ಮೂಳೆಗಳ ಗಟ್ಟಿತನ ಮತ್ತು ಸಾಂದ್ರತೆ ಕಡಿಮೆಯಾಗುತ್ತದೆ. ಇದರಿಂದ ಮೂಳೆ ಸವೆತ, ಮೂಳೆ ಮುರಿಯುವ ಸಾಧ್ಯತೆಗಳು ಹೆಚ್ಚಾಗುತ್ತದೆ. ಇದರಿಂದಾಗಿ ಮೂಳೆ ನೋವು, ವೃದ್ಧರಲ್ಲಿ ಬೆನ್ನು ಬಾಗುವಿಕೆ, ಕೀಲುಗಳ ನೋವು, ಸೊಂಟ ನೋವು, ಮೂಳೆ ಮುರಿತ ಮುಂತಾದ ಸಮಸ್ಯೆಗಳು ಕಂಡು ಬರುತ್ತದೆ.

ದೇಹದಲ್ಲಿ ಕ್ಯಾಲ್ಷಿಯಂ ಖನಿಜಗಳ ಅಂಶ ಕಡಿಮೆಯಾಗುವುದೂ ಸಹ ಈ ಸಮಸ್ಯೆಗೆ ಕಾರಣವಾಗಿದೆ. ಕೇವಲ ಔಷಧಿಗಳಿಂದ ಈ ಸಮಸ್ಯೆಗಳನ್ನು ಸಂಪೂರ್ಣ ಗುಣಪಡಿಸಲು ಸಾಧ್ಯವಿಲ್ಲ. ಆದರೆ ನಿಯಮಿತ ವ್ಯಾಯಾಮ ಹಾಗೂ ಕ್ಯಾಲ್ಷಿಯಂ ಮತ್ತು ವಿಟಮಿನ್ ಡಿ ಹೊಂದಿರುವ ಪೌಷ್ಟಿಕ ಆಹಾರ ಸೇವನೆಯಿಂದ ಈ ಸಮಸ್ಯೆಯನ್ನು ತಡೆಗಟ್ಟಬಹುದು..

ಅದರಲ್ಲೂ ಮಹಿಳೆಯರಿಗೆ ಹೆರಿಗೆಯ ನಂತರ ಸ್ವಲ್ಪ ಅಧಿಕ ಕ್ಯಾಲ್ಸಿಯಂ ಬೇಕಾಗುತ್ತದೆ. ಮುಟ್ಟು ನಿಂತ ನಂತರ ಬೆನ್ನು ನೋವು, ಸೊಂಟ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೆ ಈ ರೀತಿ ಮೂಳೆ ಸಮಸ್ಯೆ ಬರುವುದನ್ನು ತಪ್ಪಿಸಬಹುದು. ಮುನ್ನೆಚ್ಚರಿಕೆಯ ಕ್ರಮಗಳೆಂದರೆ ಪ್ರತಿದಿನ ನಡೆಯುವ ವ್ಯಾಯಾಮ, ಈಜುವುದು, ಯೋಗ, ಕ್ಯಾಲ್ಸಿಯಂ ಇರುವ ಆಹಾರಗಳ ಸೇವನೆ ಮಾಡಿದರೆ ಮೂಳೆಗಳು ಸವೆಯುವುದನ್ನು ತಪ್ಪಿಸಬಹುದು.

ಧಾವಂತದ ಬದುಕಿನಲ್ಲಿ ವ್ಯಾಯಾಮಕ್ಕೂ ಒಂದಿಷ್ಟು ಸಮಯ ಮೀಸಲಿಟ್ಟರೆ ನಮ್ಮ ಮೂಳೆಗಳ ಆಯುಷ್ಯ, ಆರೋಗ್ಯ ಎರಡೂ ವೃದ್ಧಿಯಾಗುತ್ತದೆ. ಊಟ, ತಿಂಡಿ, ನಿದ್ದೆಯೊಂದಿಗೆ ವ್ಯಾಯಾಮಕ್ಕೂ ನಮ್ಮ ದಿನಚರಿಯಲ್ಲಿ ಸಮಯ ಕೊಟ್ಟರೆ ಆರೋಗ್ಯಕ್ಕೆ ಒಳ್ಳೆಯದು.

English summary

Tips To Strong Your Bone | Tips for Health | ಮೂಳೆಯನ್ನು ಬಲಪಡಿಸುವ ವಿಧಾನ | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Sept.8 world physical therapy day. To day we are giving special article on how to strengthen strengthen bone, for that what precaution we have to take. Read on...
X
Desktop Bottom Promotion