For Quick Alerts
ALLOW NOTIFICATIONS  
For Daily Alerts

ಸೊಂಟದ ಕೊಬ್ಬನ್ನು ಇಳಿಸುತ್ತೆ ಈ ಸರಳ ಮದ್ದು

|
10 Tips To Reduce Belly Fat
ಬೆಳಗಿನಿಂದ ಸಾಯಂಕಾಲದವರೆಗೆ ಕೂತು ಕೆಲಸ ಮಾಡಿ, ನಡೆಯುವುದು, ಓಡುವುದು ಹೀಗೆ ಯಾವುದೇ ದೈಹಿಕ ವ್ಯಾಯಾಮ ಮಾಡದಿದ್ದರೆ ಹೊಟ್ಟೆ ಬೆಳೆಯುವುದು ಸೊಂಟದ ಸುತ್ತಳತೆ ದೊಡ್ಡದಾಗುವುದು ಸಹಜ. ಕೆಲವೊಂದು ಸರಳ ಸೂತ್ರಗಳನ್ನು ಅನುಸರಿಸಿದರೆ ಬೊಜ್ಜು ಬರುವುದನ್ನು ತಡೆಯಬಹುದು. ಆ ಸೂತ್ರಗಳ ಬಗ್ಗೆ ತಿಳಿಯಲು ಮುಂದೆ ಓದಿ:

1. ಎರಡು ಚಮಚ ಜೇನನ್ನು ಹರ್ಬಲ್ ಅಥವಾ ಗ್ರೀನ್ ಟೀ ಹಾಕಿ ಕುಡಿಯುವುದು ಒಳ್ಳೆಯದು. ಹರ್ಬಲ್ ಅಥವಾ ಗ್ರೀನಾ ಟೀಗೆ ಹಾಕಿ ಕುಡಿದರೆ ದೇಹದಲ್ಲಿರುವ ಅಧಿಕ ಬೊಜ್ಜನ್ನು ಕರಗಿಸಲು ಸಹಾಯ ಮಾಡುತ್ತದೆ.

2. ಅಡುಗೆಯಲ್ಲಿ ಬೆಳ್ಳುಳ್ಳಿ, ಚಕ್ಕೆ, ಲವಂಗ ಬಳಸುವುದು ಒಳ್ಳೆಯದು.

3. ಮಧ್ಯಾಹ್ನ ಹೊತ್ತು ಮಲಗುವ ಅಭ್ಯಾಸ ಒಳ್ಳೆಯದಲ್ಲ. ಮಧ್ಯಾಹ್ನ ನಿದ್ದೆ ಬರುತ್ತಿದ್ದರೆ ಸ್ವಲ್ಪ ಹೊತ್ತು ನಡೆದಾಡಬೇಕು. ಆಗ ನಿದ್ದೆ ಬರುವುದಿಲ್ಲ. ಇದರಿಂದ ಮೈಭಾರ ಹೆಚ್ಚುವುದನ್ನು ತಡೆಯಬಹುದು.

4. ಹೊಟ್ಟೆ ಮತ್ತು ಸೊಂಟಕ್ಕೆ ಲವಣ ತೈಲ ಹಚ್ಚಿ 15 ನಿಮಿಷ ಬಿಟ್ಟು ಸ್ನಾನ ಮಾಡಬೇಕು. ಈ ಲವಣ ತೈಲ ಸೊಂಟ ಮತ್ತು ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

5. ಅಧಿಕ ಉಪ್ಪು, ಕೊಬ್ಬಿನ ಪದಾರ್ಥಗಳು, ಐಸ್ ಕ್ರೀಮ್, ಕುರುಕಲು ತಿಂಡಿಗಳು ಇವುಗಳನ್ನು ಮಿತಿಮೀರಿ ತಿನ್ನಲು ಹೋಗಬಾರದು. ಅಧಿಕ ನೀರು ಕುಡಿಯುವುದು ಒಳ್ಳೆಯದು.

6. ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ಬಿಸಿನೀರನ್ನು ಕುಡಿದರೆ ಹೊಟ್ಟೆಯ ಬೊಜ್ಜು ಕಡಿಮೆಯಾಗುವುದು.

7. ವರಡಿ (Varadi) ಎಂಬ ಟಾನಿಕ್ ಅನ್ನು ಒಂದು ಲೋಟ ಬಿಸಿ ನೀರಿನಲ್ಲಿ 15ml ನಂತೆ ಮಿಶ್ರಣ ಮಾಡಿ ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲ ತೆಗೆದುಕೊಳ್ಳಬೇಕು. ಇದನ್ನು ಕುಡಿದ ನಂತರ 15 ನಿಮಿಷ ವಿಶ್ರಾಂತಿ ತೆಗೆದುಕೊಳ್ಳಬೇಕು. ಈ ರೀತಿ ಮಾಡುತ್ತಾ ಬಂದರೆ ಹೊಟ್ಟೆಯ ಬೊಜ್ಜು ಕಡಿಮೆಯಾಗುವುದು.

8. ಹುರುಳಿಕಾಳನ್ನು ಪುಡಿ ಮಾಡಿ ಮೊಸರಿನ ಜೊತೆ ಮಿಶ್ರ ಮಾಡಿ ಹೊಟ್ಟೆ ಮತ್ತು ಸೊಂಟದ ಸುತ್ತ ಹಚ್ಚಿ , ಹಚ್ಚುವಾಗ ಮೇಲ್ಮುಖವಾಗಿ ಹಚ್ಚಿ, ಅರ್ಧ ಗಂಟೆಯ ಬಳಿಕ ಸ್ನಾನ ಮಾಡಬೇಕು. ಈ ರೀತಿ ಮಾಡುತ್ತಾ ಬಂದರೆ ಸೊಂಟದ ಸುತ್ತಳತೆ ಕಡಿಮೆಯಾಗವುದು.

9. ಹುರುಳಿಕಾಳು, ಹೆಸರುಕಾಳು, ಗೋಧಿ ಇವುಗಳಿಂದ ತಯಾರಿಸಿದ ಆಹಾರ ಪದಾರ್ಥಗಳ ಸೇವನೆ ಒಳ್ಳೆಯದು.

10. ಕಾರ್ಬೋಹೈಡ್ರೇಟ್ ಆಹಾರ ಮತ್ತು ಪದಾರ್ಥಗಳನ್ನು ಹೆಚ್ಚಾಗಿ ತಿನ್ನಬಾರದು. ಅಧಿಕ ಕೊಬ್ಬಿನಂಶವಿರುವ ಮಾಂಸವನ್ನು ತಿನ್ನಬಾರದು. ಮೀನು, ವಾರಕ್ಕೊಮ್ಮೆ ಸ್ಕಿನ್ ಲೆಸ್ ಚಿಕನ್ ತಿನ್ನಬಹುದು. ಪ್ರತಿನಿತ್ಯ 30 ನಿಮಿಷ ವ್ಯಾಯಾಮ ಮಾಡಬೇಕು. ಆರೋಗ್ಯಕರ ಆಹಾರಕ್ರಮ ಪಾಲಿಸಬೇಕು. ಈ ರೀತಿ ಮಾಡಿದ್ದೇ ಆದರೆ ಬೊಜ್ಜು ಬರುವುದಿಲ್ಲ ಮತ್ತು ಗಟ್ಟಿಮುಟ್ಟಾಗಿ ಇರಬಹುದು.

English summary

10 Tips To Reduce Belly Fat | Tips For Health | ಸೊಂಟದ ಬೊಜ್ಜು ಕಡಿಮೆ ಮಾಡಲು 10 ಸಲಹೆಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Belly fat is a result of lack of exercise, sleep, unhealthy food habit. There are many ways to lose belly fat, which is based on diet and lifestyle regulations.
X
Desktop Bottom Promotion