For Quick Alerts
ALLOW NOTIFICATIONS  
For Daily Alerts

ಮೊಸರಿನ ಡಯಟ್ ನಿಂದ ಸ್ಲಿಮ್ ಆಗೋದು ಸುಲಭ

|
Yogurt Low Carb Diet
ಫ್ರೆಂಚ್ ಮಹಿಳೆಯರು ಅಷ್ಟು ಸ್ಲಿಮ್ ಮತ್ತು ಸುಂದರವಾಗಿರಲು ಕಾರಣ ಏನು ಎಂದು ಒಮ್ಮೆಯಾದರೂ ಅನ್ನಿಸಿರುತ್ತೆ. ಆದರೆ ಅವರ ಡಯಟ್ ಸೀಕ್ರೆಟ್ ಈಗ ಬಹಿರಂಗಗೊಂಡಿದೆ. ಅವರು ಅನುಸರಿಸುವ ಮೊಸರಿನ ಡಯಟ್ ಇದಕ್ಕೆಲ್ಲಾ ಕಾರಣವಂತೆ. ರುಚಿಕರವೆನಿಸುವ ಮತ್ತು ಆರೋಗ್ಯಕ್ಕೂ ಒಳಿತಾಗಿರುವ ಮೊಸರನ್ನು ಉಪಯೋಗಿಸಿಕೊಂಡು ಡಯಟ್ ಮಾಡಿದರೆ ಕಡಿಮೆ ಅವಧಿಯಲ್ಲಿ ಸ್ಲಿಮ್ ಆಗುವುದು ಸಾಧ್ಯವಿದೆ.

ಮೊಸರು ಹಾಲಿನ ಉತ್ಪನ್ನವಾಗಿದ್ದು, ಲ್ಯಾಕ್ಟೋಸ್ (ಕಾರ್ಬೊಹೈಡ್ರೇಟ್) ಹೊಂದಿದೆ. ಆದರೆ ಹಾಲನ್ನು ಮೊಸರಾಗಿ ಪರಿವರ್ತನೆಗೊಳಿಸುವ ಬ್ಯಾಕ್ಟೀರಿಯಾ ಈ ಲ್ಯಾಕ್ಟೋಸನ್ನು ಪೂರ್ಣ ಹೀರಿಕೊಂಡು ಹುಳಿಮಾಡಿ ಸಕ್ಕರೆ ಅಂಶವನ್ನೂ ಕಡಿಮೆ ಮಾಡುತ್ತದೆ ಎನ್ನಲಾಗಿದೆ. ಪ್ರತಿ 12 ಗ್ರಾಂ ಮೊಸರಿನಲ್ಲಿ 8 ಗ್ರಾಂ ಕಾರ್ಬ್ ಕಡಿಮೆಯಾಗುವುದರಿಂದ ಮೊಸರು ಡಯಟ್ ಗೆ ಹೆಚ್ಚು ಸೂಕ್ತ.

ಕಡಿಮೆ ಕಾರ್ಬ್ ಮೊಸರಿನ ಡಯಟ್ ಹೇಗೆ ಕೆಲಸ ಮಾಡುತ್ತೆ?
ದೇಹದಲ್ಲಿರುವ ಅಧಿಕ ಕ್ಯಾಲೊರಿ ಕರಗಿಸಲು ಮೊಸರಿನ ಡಯಟ್ ಕನಿಷ್ಠ 10-15 ದಿನಗಳನ್ನು ತೆಗೆದುಕೊಳ್ಳುತ್ತೆ. ಇದರಿಂದ ಆರೋಗ್ಯಕ್ಕೂ ಹೆಚ್ಚು ಉಪಯೋಗ ಪಡೆಯಬಹುದು. ಇದು ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ ಹೆಚ್ಚಿಸಲು, ಚರ್ಮವನ್ನು ಕಾಂತಿಗೊಳಿಸಲು ಸಹಾಯಕ. ಮೊಸರಿನಲ್ಲಿ ಆರೋಗ್ಯಕ್ಕೆ ಅವಶ್ಯಕವಾದ ಶಕ್ತಿಯನ್ನು ನೀಡುವ ಸಾಮರ್ಥ್ಯವಿದೆ.

ಮೊಸರಿನ ಡಯಟ್ ಗೆ ಏನೇನು ಅವಶ್ಯಕ?
ದಿನಕ್ಕೆ ಸುಮಾರು 500 ಗ್ರಾಂ ನಷ್ಟು ಮೊಸರು ಸೇವನೆ ಸಾಕು.
* ಹಣ್ಣು- 300 ಗ್ರಾಂ (ಸಿಟ್ರಸ್ ಹಣ್ಣು, ದಾಳಿಂಬೆ, ಸೇಬು, ಕಡಿಮೆ ಸಕ್ಕರೆ ಅಂಶ ಹೊಂದಿರುವ ಹಣ್ಣು)
* ತರಕಾರಿ: 300 ಗ್ರಾಂ (ಬೀನ್ಸ್, ಎಲೆಕೋಸು, ಟೊಮೆಟೊ, ಸೌತೆ, ಮೂಲಂಗಿ, ಕ್ಯಾರೆಟ್ ಮುಂತಾದುವು)

ಮೊಸರಿನ ಡಯಟ್ ಪಾಲಿಸುವುದು ಹೇಗೆ?

ಬೆಳಗ್ಗೆ:
1. ಸಕ್ಕರೆಯಿಲ್ಲದ ಗ್ರೀನ್ ಟೀ
2. ಚಿಕ್ಕ ಬಟ್ಟಲಿನಲ್ಲಿ ಹಣ್ಣಿನೊಂದಿಗೆ ಮೊಸರು
3. ಸಕ್ಕರೆಯಿಲ್ಲದ ಕಿತ್ತಳೆ ಅಥವಾ ದಾಳಿಂಬೆ ಜ್ಯೂಸ್ 1 ಗ್ಲಾಸ್

ಮಧ್ಯಾಹ್ನದ ಊಟ:
* ಒಂದು ಬಟ್ಟಲು ಚೆನ್ನಾಗಿ ಬೇಯಿಸಿದ ಅನ್ನದೊಂದಿಗೆ ಮೊಸರಿನ ಸೇವನೆ
* ಕಡಿಮೆ ಸಕ್ಕರೆಯಂಶ ಹೊಂದಿರುವ ಹಣ್ಣಿನ ಜ್ಯೂಸ್

ರಾತ್ರಿಗೆ:
1. ಯಾವುದಾದರೂ ಹರ್ಬ್ ಟೀ
2. ಮೊಸರು ಬೆರೆಸಿದ ಆಪಲ್ ಜ್ಯೂಸ್
3. ಸಾಂಬಾರು ಪದಾರ್ಥದೊಂದಿಗೆ ಒಗ್ಗರಣೆ ಮಾಡಿದ ತರಕಾರಿ ಮಿಶ್ರಣದ ಸಲಾಡ್

ದೇಹಕ್ಕೆ ಅಗತ್ಯವಿರುವ ಪೋಷಕಾಂಶ ನೀಡುವುದರೊಂದಿಗೆ ಡಯಟ್ ಮಾಡುವ ಒಳ್ಳೆ ಉಪಾಯ ಮೊಸರಿನ ಡಯಟ್. ಈ ಡಯಟ್ ನೊಂದಿಗೆ ವ್ಯಾಯಾಮವನ್ನೂ ಮಾಡಿದರೆ ಫಲಿತಾಂಶ ಪಡೆಯುವುದರಲ್ಲಿ ಸಂಶಯವಿಲ್ಲ.

English summary

Yogurt Low Carb Diet | French Diet Secret | ಮೊಸರಿನ ಕಡಿಮೆ ಕಾರ್ಬೊಹೈಡ್ರೇಟ್ ಡಯಟ್ | ಫ್ರೆಂಚ್ ಡಯಟ್

Ever wondered why the French women look so beautiful and slim? Well, here is their diet secret. The tasty and healthy yogurt can bring you down to shape in less time. Today, we will discuss more briefly on the yogurt diet and how it promotes weight loss. Take a look.
Story first published: Monday, November 28, 2011, 12:23 [IST]
X
Desktop Bottom Promotion