For Quick Alerts
ALLOW NOTIFICATIONS  
For Daily Alerts

ಮಧುಮೇಹ ರೋಗ: ಸ್ವಲ್ಪ ಯಾಮಾರಿದರೂ- ಜೀವಕ್ಕೆ ಸಂಚಕಾರ!

By Manu
|

ಸಾವಿಲ್ಲದ ಮನೆಯಿಂದ ಸಾಸಿವೆ ತಂದು ಕೊಡು ಎಂದು ಗೌತಮ ಬುದ್ಧ ಹೇಳಿದ್ದನಂತೆ. ಅದೇ ರೀತಿಯಲ್ಲಿ ಇಂದಿನ ದಿನಗಳಲ್ಲಿ ಮಧುಮೇಹವಿಲ್ಲದ ಮನೆಯಿದ್ದರೆ ತೋರಿಸು ಎಂದು ನಾವು ಹೇಳಬಹುದಾಗಿದೆ. ಯಾಕೆಂದರೆ ಆಧುನಿಕ ಜೀವನಶೈಲಿ, ಒತ್ತಡ ಮತ್ತು ಹಲವಾರು ಸಮಸ್ಯೆಗಳಿಂದ ಮಧುಮೇಹವೆನ್ನುವುದು ಪ್ರತಿಯೊಬ್ಬರಲ್ಲೂ ಕಾಣಿಸಿಕೊಳ್ಳುತ್ತಾ ಇದೆ.

ದೇಹದಲ್ಲಿ ತುಂಬಿರುವ ಬೊಜ್ಜು ಮತ್ತು ಅನುವಂಶೀಯತೆಯಿಂದ ಮಧುಮೇಹ ಕಾಣಿಸಿಕೊಳ್ಳಬಹುದು. ಮಧುಮೇಹ ಇರುವವರು ಸರಿಯಾದ ಆಹಾರಕ್ರಮ ಮತ್ತು ವ್ಯಾಯಾಮ ಮಾಡುತ್ತಿರಬೇಕು. ಮಧುಮೇಹ ಇರುವಂತಹ ವ್ಯಕ್ತಿಗಳ ರಕ್ತದಲ್ಲಿ ಸಕ್ಕರೆ ಅಂಶವು ಹೆಚ್ಚಾಗುತ್ತದೆ ಮತ್ತು ಇದರ ಪರಿಣಾಮ ಮಧುಮೇಹ ಕಾಣಿಸಿಕೊಳ್ಳುತ್ತದೆ.
ಇದನ್ನೂ ಓದಿ - ಮಧುಮೇಹಿಗಳೇ, ವೈದ್ಯರಲ್ಲಿ ತಪ್ಪದೇ ಈ ಪ್ರಶ್ನೆಗಳನ್ನು ಕೇಳಿ...

ಅತಿಯಾದ ಬಾಯಾರಿಕೆ, ಪದೇ ಪದೇ ಮೂತ್ರ ವಿಸರ್ಜನೆ, ಬಾಯಿ ಒಣಗುವುದು, ಗಾಯಗಳು ನಿಧಾನವಾಗಿ ಒಣಗುವುದು, ಅತಿಯಾಗಿ ಬೆವರುವುದು, ನಿಶ್ಯಕ್ತಿ ಮತ್ತು ಹಸಿವು ಹೆಚ್ಚಾಗುವುದು ಇತ್ಯಾದಿಗಳು ಮಧುಮೇಹದ ಪ್ರಮುಖ ಲಕ್ಷಣಗಳಾಗಿವೆ. ಆದರೆ ಕೆಲವರು ಈ ಲಕ್ಷಣಗಳನ್ನು ಕಡೆಗಣಿಸುತ್ತಾರೆ. ಇದರಿಂದ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು. ಇದು ಬೇರೆ ರೋಗಗಳಿಗೂ ರಹದಾರಿಯಾಗಬಹುದು...

ಕಿಡ್ನಿ ವೈಫಲ್ಯ

ಕಿಡ್ನಿ ವೈಫಲ್ಯ

ಮಧುಮೇಹವನ್ನು ನಿಯಂತ್ರಿಸದೆ ಇದ್ದಲ್ಲಿ ಕಿಡ್ನಿಗಳು ವೈಫಲ್ಯಕ್ಕೆ ಒಳಗಾಗಬಹುದು. ಅತಿಯಾದ ಸಕ್ಕರೆ ಮಟ್ಟವು ದೇಹಕ್ಕೆ ವಿಷಕಾರಿಯಾಗಿ ಕಿಡ್ನಿಯಲ್ಲಿ ಕೆಲವು ನರಗಳಿಗೆ ಹಾನಿಯನ್ನು ಉಂಟು ಮಾಡುತ್ತದೆ. ಇದರಿಂದಾಗಿ ಕಿಡ್ನಿ ವೈಫಲ್ಯ ಉಂಟಾಗುತ್ತದೆ.

ನರ ವೈಫಲ್ಯ

ನರ ವೈಫಲ್ಯ

ರಕ್ತದಲ್ಲಿ ಅತಿಯಾದ ಸಕ್ಕರೆ ಮಟ್ಟವು ರಕ್ತ ಸಂಚಾರ ಮಾಡುವ ಸಣ್ಣ ರಕ್ತನಾಳಗಳಿಗೆ ಹಾನಿ ಉಂಟು ಉಂಟುಮಾಡುತ್ತದೆ. ಈ ನರಗಳು ಕಾಲಿನಲ್ಲಿ ಇರುವಂತಹ ನರಕೋಶಳಿಗೆ ರಕ್ತ ಹಾಗೂ ಪೋಷಕಾಂಶಗಳನ್ನು ಸರಬರಾಜು ಮಾಡುತ್ತದೆ. ನರಕೋಶಗಳಿಗೆ ರಕ್ತಸರಬರಾಜು ಆಗದೆ ಇರುವಾಗ ಮರಗಟ್ಟುವಿಕೆ ಉಂಟಾಗುತ್ತದೆ.

ಕೆಳಭಾಗದ ಅಂಗಾಂಗಗಳಲ್ಲಿ ಸ್ಪರ್ಶತೆ ಇಲ್ಲದಿರುವುದು

ಕೆಳಭಾಗದ ಅಂಗಾಂಗಗಳಲ್ಲಿ ಸ್ಪರ್ಶತೆ ಇಲ್ಲದಿರುವುದು

ಮಧುಮೇಹವು ಹೆಚ್ಚಾದಾಗ ಕಾಲುಗಳಿಗೆ ರಕ್ತಸಂಚಾರವು ಕಡಿಮೆಯಾಗುತ್ತಾ ಹೋಗುತ್ತದೆ. ಇದರ ಪರಿಣಾಮವಾಗಿ ಕಾಲುಗಳಲ್ಲಿ ನಿಸ್ತೇಜತನ ಉಂಟಾಗುತ್ತದೆ. ಉರಿಯ ಅನುಭವ, ನೋವು, ಪಾದ ಹಾಗೂ ಬೆರಳುಗಳಲ್ಲಿ ಜುಮ್ಮೆನಿಸುವ ಅನುಭವವಾಗುವುದು ಇತ್ಯಾದಿ.

ಅಜೀರ್ಣ ಸಮಸ್ಯೆಗೆ

ಅಜೀರ್ಣ ಸಮಸ್ಯೆಗೆ

ರಕ್ತದಲ್ಲಿ ಅತಿಯಾದ ಸಕ್ಕರೆಯಿದ್ದರೆ ಅದು ಜೀರ್ಣ ವ್ಯವಸ್ಥೆಗೆ ಹೋಗುವ ನರಗಳಿಗೆ ಹಾನಿ ಉಂಟು ಮಾಡುತ್ತದೆ. ಇದರಿಂದ ವಾಕರಿಕೆ, ವಾಂತಿ, ಭೇದಿ ಮತ್ತು ಅಜೀರ್ಣ ಉಂಟಾಗುತ್ತದೆ.

ಇದನ್ನೂ ಓದಿ -ಮಧುಮೇಹಿಗಳು ಸೇವಿಸಬಹುದಾದ 7 ಸಿಹಿ ಹಣ್ಣುಗಳು

ಮಧುಮೇಹದ ಪಾದಗಳು

ಮಧುಮೇಹದ ಪಾದಗಳು

ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾದಾಗ ಪಾದಗಳಿಗೆ ರಕ್ತಸಂಚಾರವು ಕಡಿಮೆಯಾಗುತ್ತದೆ. ಇದರಿಂದ ಗ್ಯಾಂಗ್ರೀನ್ ಮತ್ತು ಪಾದದ ಸೋಂಕು ಉಂಟಾಗಬಹುದು. ಮಧುಮೇಹವಿರುವವರಲ್ಲಿ ಗಾಯಗಳು ನಿಧಾನವಾಗಿ ಗುಣವಾಗುವ ಕಾರಣದಿಂದ ಕಾಲು, ಬೆರಳು ಮತ್ತು ಸಂಪೂರ್ಣ ಪಾದಕ್ಕೆ ಸೋಂಕು ಹರಡಬಹುದು.

ಇದನ್ನೂ ಓದಿ- ಮಧುಮೇಹಿಗಳೇ ಪಾದಗಳತ್ತ ನಿರ್ಲಕ್ಷ್ಯ ಮಾಡಬೇಡಿ!

ಹಲ್ಲುಗಳು ಉದುರುವುದು

ಹಲ್ಲುಗಳು ಉದುರುವುದು

ರಕ್ತದಲ್ಲಿ ಸಕ್ಕರೆಯಂಶವು ಹೆಚ್ಚಾಗಿದ್ದರೆ ಅದರಿಂದ ಹಲ್ಲುಗಳು ಹಾಗೂ ವಸಡಿಗೆ ರಕ್ತಸಂಚಾರವು ಕಡಿಮೆಯಾಗುತ್ತದೆ. ಒಸಡು ಹಾಗೂ ಹಲ್ಲಿನಲ್ಲಿರುವಂತಹ ನರಗಳು ದುರ್ಬಲಗೊಂಡು ಹಲ್ಲುಗಳು ಉದುರಬಹುದು ಮತ್ತು ವಸಡಿನಲ್ಲಿ ನೋವು ಕಾಣಿಸಿಕೊಳ್ಳಬಹುದು.

English summary

What Happens If You Don't Pay Attention To Diabetes

Diabetes is a common problem these days. People who are obese and who have a family history of diabetes are at more risk. Take a look at some complications of advanced diabetes. Sometimes people ignore the symptoms of diabetes or don't take the medications. This can cause the following complications.
Story first published: Wednesday, May 17, 2017, 19:59 [IST]
X
Desktop Bottom Promotion