For Quick Alerts
ALLOW NOTIFICATIONS  
For Daily Alerts

ತಿಂಗಳೊಳಗೆ 'ಟೈಪ್-2 ಮಧುಮೇಹ' ನಿಯಂತ್ರಣಕ್ಕೆ! ಇಲ್ಲಿದೆ ನೋಡಿ ಟಿಪ್ಸ್

By Manu
|

ಒಂದು ವೇಳೆ ಮಧುಮೇಹದ ಬಗ್ಗೆ ನಿಮಗೆ ಇನ್ನೂ ತಿಳಿದಿರದಿದ್ದಲ್ಲಿ ಕೆಲವು ಮಾಹಿತಿಗಳನ್ನು ತಿಳಿದಿರುವುದು ಒಳ್ಳೆಯದು. ಮಧುಮೇಹದಲ್ಲಿ ಟೈಪ್-1 ಮತ್ತು ಟೈಪ್-2 ಎಂಬ ಎರಡು ಬಗೆಗಳಿವೆ. ಮೊದಲನೆಯ ವಿಧದಲ್ಲಿ ಇನ್ಸುಲಿನ್ ಉತ್ಪಾದನೆ ಕಡಿಮೆಯಾಗಿದ್ದು ಇದನ್ನು ಇಂಜೆಕ್ಷನ್ ಮೂಲಕ ಪಡೆದುಕೊಳ್ಳಬೇಕಾಗುತ್ತದೆ. ಮಧುಮೇಹವನ್ನು ನಿಯಂತ್ರಿಸಲು ಅದ್ಭುತ ನೈಸರ್ಗಿಕ ಜ್ಯೂಸ್

ಎರಡನೆಯ ವಿಧದಲ್ಲಿ ಇನ್ಸುಲಿನ್ ಉತ್ಪತ್ತಿಯಾದರೂ ಇದನ್ನು ಬಳಸಿಕೊಳ್ಳಲು ಅಸಮರ್ಥವಾಗುತ್ತದೆ. ಇದರಲ್ಲಿ ಟೈಪ್-2 ಮಧುಮೇಹವನ್ನು ಶಾಶ್ವತವಾಗಿ ಇಲ್ಲವಾಗಿಸಲು ಸಾಧ್ಯವಿಲ್ಲ. ಆದರೆ ಇದನ್ನು ನಿಯಂತ್ರಣದಲ್ಲಿರಿಸುವ ಮೂಲಕ ಸಾಮಾನ್ಯ ಜೀವನ ನಡೆಸಬಹುದು. ಆದರೆ ಈ ನಿಯಂತ್ರಣ ಅಂದುಕೊಂಡಷ್ಟು ಸುಲಭವಲ್ಲ.

ಏಕೆಂದರೆ ಈ ಮಧುಮೇಹದೊಂದಿಗೆ ದೇಹದಲ್ಲಿ ಇನ್ನೂ ಕೆಲವಾರು ತೊಂದರೆಗಳಿದ್ದು ಈ ತೊಂದರೆಗಳನ್ನು ಸರಿದೂಗಿಸಿಕೊಂಡು ಹೋಗುವುದು ವೈದ್ಯರಿಗೂ ದೊಡ್ಡ ಸವಾಲೊಡ್ಡುತ್ತದೆ. ಮಧುಮೇಹದ ಅಡ್ಡಪರಿಣಾಮಗಳಾಗಿಯೂ ಕೆಲವು ತೊಂದರೆಗಳು ಇರುತ್ತವೆ ಅಥವಾ ಇನ್ನೊಂದರ್ಥದಲ್ಲಿ ಹೇಳುವುದಾದರೆ ಈಗಾಗಲೇ ಇರುವ ಕೆಲವು ತೊಂದರೆಗಳು ಮಧುಮೇಹವಿದ್ದಾಗ ಸುಲಭವಾಗಿ ಉಲ್ಬಣಗೊಳ್ಳುತ್ತವೆ. ಏನೇ ಹೇಳಿ ಮಧುಮೇಹ ನಿಯಂತ್ರಣಕ್ಕೆ ಮನೆಮದ್ದೇ ಸೂಕ್ತ

ಉದಾಹರಣೆಗೆ ಮೂತ್ರಪಿಂಡದ ವೈಫಲ್ಯ ಹಾಗೂ ದೃಷ್ಟಿ ಕಡಿಮೆಯಾಗುವುದು. ಇತರ ಲಕ್ಷಣಗಳೆಂದರೆ ರಕ್ತದಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ, ತೂಕದಲ್ಲಿ ಇಳಿಕೆ, ಮೂತ್ರದ ಪ್ರಮಾಣದಲ್ಲಿ ಹೆಚ್ಚಳ, ರೋಗ ನಿರೋಧಕ ಶಕ್ತಿ ಕುಂಠಿತಗೊಳ್ಳುವುದು, ದೃಷ್ಟಿ ಮಂಜಾಗುವುದು, ಸತತ ಹಸಿವು, ಪಾದಗಳಲ್ಲಿ ಸಂವೇದನೆ ಇಲ್ಲದೇ ಹೋಗುವುದು, ಇತ್ಯಾದಿ. ಟೈಪ್‌-2 ಮಧುಮೇಹಕ್ಕೆ, ಇಲ್ಲಿದೆ ನೋಡಿ ಆಯುರ್ವೇದ ಚಿಕಿತ್ಸೆ

ಒಂದು ವೇಳೆ ಮಧುಮೇಹವನ್ನು ನಿಯಂತ್ರಿಸದೇ ಇದ್ದಲ್ಲಿ ಕೆಲವು ಸೂಕ್ಷ್ಮ ಅಂಗಗಳು ವೇಗವಾಗಿ ಶಿಥಿಲಗೊಳ್ಳುತ್ತಾ ವಿಫಲಗೊಂಡು ಮರಣಕ್ಕೆ ಕಾರಣವಾಗಬಹುದು. ಆದ್ದರಿಂದ ಟೈಪ್-2 ಮಧುಮೇಹವಿರುವ ರೋಗಿಗಳು ತಮ್ಮ ನಿತ್ಯದ ಜೀವನಕ್ರಮವನ್ನು ಆರೋಗ್ಯಕರವಾಗಿ ಇರಿಸಿಕೊಳ್ಳುವುದು ತುಂಬಾ ಅಗತ್ಯವಾಗಿದೆ. ಇದಕ್ಕೆ ನೆರವಾಗಲು ಒಂದು ನೈಸರ್ಗಿಕ ಪೇಯವಿದ್ದು ಟೈಪ್-2 ಮಧುಮೇಹಿಗಳು ಸಾಮಾನ್ಯ ಜೀವನವನ್ನು ಸಾಗಿಸಲು ನೆರವಾಗುತ್ತದೆ...

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

ಅರಿಶಿನ ಪುಡಿ: ಎರಡು ಚಿಕ್ಕಚಮಚಅಜೀರ್ಣ, ಗಂಟಲು ಬೇನೆ, ಕೆಮ್ಮು-ಶೀತವೇ? ಅರಿಶಿನವೇ ಸಾಕು!

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

ಕ್ಯಾರೆಟ್ ಜ್ಯೂಸ್: ಕಾಲು ಕಪ್

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

ಕಿತ್ತಳೆ ಜ್ಯೂಸ್: ಕಾಲು ಕಪ್

ಅರಿಶಿನದ ಪ್ರಯೋಜನಗಳು

ಅರಿಶಿನದ ಪ್ರಯೋಜನಗಳು

ಅರಿಶಿನವನ್ನು ಅಡುಗೆಯಲ್ಲಿ ಮುನ್ನೆಚ್ಚರಿಕೆಯಿಂದ ಬಳಸಲಾಗುತ್ತದೆ. ಬ್ಯಾಕ್ಟೀರಿಯಾ ವಿರೋಧಿ ಗುಣ ಹಾಗೂ ಉರಿಯೂತ ಶಮನಕಾರಿ ಗುಣವನ್ನು ಹೊಂದಿರುವಂತಹ ಅರಿಶಿನವು ಸದ್ದಿಲ್ಲದೆ ಮಧುಮೇಹ ಕಾಯಿಲೆಗಳನ್ನು ನಿಯಂತ್ರಿಸುತ್ತದೆ

ಕ್ಯಾರೆಟ್ ಜ್ಯೂಸ್‌

ಕ್ಯಾರೆಟ್ ಜ್ಯೂಸ್‌

ಒಂದು ಲೋಟ ಕ್ಯಾರೆಟ್ ಜ್ಯೂಸ್‌ನಲ್ಲಿ ತುಂಬಾ ಕಡಿಮೆ ಕ್ಯಾಲರಿಯಿದೆ ಮತ್ತು ಅದರಲ್ಲಿರುವ ಸಕ್ಕರೆಯಲ್ಲಿ ಪ್ರಮುಖ ಪೋಷಕಾಂಶ ಹಾಗೂ ಖನಿಜಾಂಶಗಳಿವೆ. ಇದರಿಂದ ಸಕ್ಕರೆ ಅಂಶವನ್ನು ನಿಯಂತ್ರಿಸಿ ಮಧುಮೇಹವನ್ನು ಸರಿಯಾಗಿಟ್ಟುಕೊಳ್ಳಲು ನೆರವಾಗುವುದು.

ತಯಾರಿಕಾ ವಿಧಾನ

ತಯಾರಿಕಾ ವಿಧಾನ

*ಮೇಲಿನ ಎಲ್ಲಾ ಸಾಮಾಗ್ರಿಗಳನ್ನು ಒಂದು ಲೋಟದಲ್ಲಿ ಹಾಕಿ ಚೆನ್ನಾಗಿ ಕಲಕಿ ಮಿಶ್ರಣ ಮಾಡಿ.

*ಈ ಪೇಯವನ್ನು ಪ್ರತಿದಿನ ಬೆಳಿಗ್ಗೆದ್ದ ಬಳಿಕ ಉಪಾಹಾರಕ್ಕೂ ಮುನ್ನ, ಪ್ರಥಮ ಆಹಾರವಾಗಿ ಸತತವಾಗಿ ಮೂರು ತಿಂಗಳ ಕಾಲ ಸೇವಿಸಿ.

English summary

Turmeric Smoothie To Fight Type 2 Diabetes Symptoms!

Living with a serious disorder like type 2 diabetes is definitely not easy, as it comes with various challenges and health complications that a person has to deal with on a daily basis. The symptoms include high blood sugar levels, weight loss, increased urine production, weakened immune system, blurred vision, constant hunger, numbness of the feet, etc.
X
Desktop Bottom Promotion