For Quick Alerts
ALLOW NOTIFICATIONS  
For Daily Alerts

ಮಧುಮೇಹಿಗಳೇ ಈ ಆಹಾರಗಳ ಕಡೆ ಕಣ್ಣೆತ್ತಿಯೂ ನೋಡಬೇಡಿ!

By Jaya subramanya
|

ಮಧುಮೇಹವೆಂಬ ಕಾಯಿಲೆ ಹೊರನೋಟಕ್ಕೆ ಸಿಹಿ ಎಂದೆನಿಸಿದರೂ ಅದು ಮಾಡುವ ವೇದನೆ ಮಾತ್ರ ಅಪರಿಮಿತವಾದುದು. ಮೊದಲೆಲ್ಲಾ ವಯಸ್ಸಾದವರನ್ನು ಕಾಡುತ್ತಿದ್ದ ಈ ಕಾಯಿಲೆ ಈಗ ಹದಿಹರೆಯದವರಿಗೂ ಸಿಂಹ ಸ್ವಪ್ನವಾಗಿದೆ. ಬೇಕಾಬಿಟ್ಟಿ ಆಹಾರ ಸೇವನೆ, ವ್ಯಾಯಾಮದ ಕೊರತೆ ಮೊದಲಾದ ಕಾರಣಗಳಿಂದ ಇಂದು ಮಧುಮೇಹ ತನ್ನ ಕಬಂಧ ಬಾಹುವನ್ನು ಎಲ್ಲೆಡೆ ಚಾಚಿದೆ. ಮನೆ ಔಷಧ: ಮಧುಮೇಹವನ್ನು ನಿಯಂತ್ರಿಸುವ 'ಆಹಾರ ಪಥ್ಯ'

ಮಧುಮೇಹಿಯು ಈ ರೋಗ ಇರುವಿಕೆಯ ಸಮಯದಲ್ಲಿ ಹಲವಾರು ಸಮಸ್ಯೆಗಳನ್ನು ಕಂಡುಕೊಳ್ಳಬಹುದು. ಆಗಾಗ್ಗೆ ಮೂತ್ರವಿಸರ್ಜನೆ, ಅತಿಯಾದ ಬಾಯಾರಿಕೆ, ಹೆಚ್ಚು ಹಸಿವಾಗುವುದು, ತೂಕ ಇಳಿಕೆ ಇಲ್ಲವೇ ಏರಿಕೆ, ಲೈಂಗಿಕ ಅತೃಪ್ತಿ, ಗಾಯಗಳು ನಿಧಾನವಾಗಿ ಒಣಗುವುದು ಮೊದಲಾದವು ಇವುಗಳಲ್ಲಿ ಅತಿ ಸಾಮಾನ್ಯವಾದುದಾಗಿದೆ. ಮಧುಮೇಹದ ಲಕ್ಷಣಗಳನ್ನು ನೀವು ಸರಿಯಾಗಿ ನಿಯಂತ್ರಿಸಿಲ್ಲ ಎಂದಾದಲ್ಲಿ ಇದು ಪ್ರಾಣಾಂತಿಕವಾಗುವ ಸಂಭವ ಕೂಡ ಇದೆ. ಮಧುಮೇಹ ನಿಯಂತ್ರಿಸುವ ಪವರ್-ಮೆಂತೆ ಕಾಳಿನಲ್ಲಿದೆ!

ಹಾಗಿದ್ದರೆ ಮಧುಮೇಹಿಗಳು ಕೆಲವೊಂದು ಸೂತ್ರಗಳನ್ನು ಪಾಲಿಸುವುದರ ಮೂಲಕ ಇದರ ಹೆಚ್ಚುವರಿ ಪರಿಣಾಮಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಬಹುದಾಗಿದೆ. ಅವರು ಏನು ತಿನ್ನಬೇಕು ಏನು ತಿನ್ನಬಾರದು ಎಂಬುದನ್ನು ಅರಿತುಕೊಂಡು ಆಹಾರವನ್ನು ಆಯ್ಕೆಮಾಡಿಕೊಳ್ಳಬೇಕು. ಹಾಗಿದ್ದರೆ ಇಂದಿನ ಲೇಖನದಲ್ಲಿ ಅವರು ಯಾವ ರೀತಿಯ ಆಹಾರ ಪದಾರ್ಥಗಳನ್ನು ಸೇವಿಸಬಾರದು ಎಂಬುದನ್ನು ಕಂಡುಕೊಳ್ಳೋಣ.

ಬಿಳಿ ಬ್ರೆಡ್

ಬಿಳಿ ಬ್ರೆಡ್

ಬಿಳಿ ಬ್ರೆಡ್ ಹೆಚ್ಚು ಪ್ರಮಾಣದ ಕಾರ್ಬೋಹೈಡ್ರೇಟ್ಸ್ ಅನ್ನು ಒಳಗೊಂಡಿದ್ದು ಮಧುಮೇಹಿಗಳಿಗೆ ಇದು ಉತ್ತಮವಲ್ಲ, ಇದು ರಕ್ತದ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುತ್ತದೆ. ಬಿಳಿ ಬ್ರೆಡ್: ಹಣ ಕೊಟ್ಟು ಕಾಯಿಲೆ ಖರೀದಿಸಬೇಡಿ!

ಪಾಸ್ತಾ

ಪಾಸ್ತಾ

ನೀವು ಮಧುಮೇಹಿಯಾಗಿದ್ದು ಪಾಸ್ತಾವನ್ನು ಇಷ್ಟಪಡುವವರಾಗಿದ್ದಲ್ಲಿ, ಇದನ್ನು ನೀವು ತ್ಯಜಿಸಲೇ ಬೇಕು. ಏಕೆಂದರೆ ಪಾಸ್ತಾವು ಹೆಚ್ಚು ಪ್ರಮಾಣದ ಕೊಬ್ಬುಗಳನ್ನು ಒಳಗೊಂಡಿದ್ದು ಇದು ರಕ್ತದ ಸಕ್ಕರೆ ಪ್ರಮಾಣವನ್ನು ಹೆಚ್ಚಿಸಲಿದೆ.

ಸುಗಂಧಿತ ಮೊಸರು

ಸುಗಂಧಿತ ಮೊಸರು

ಬೇರೆ ಬೇರೆ ಸುಗಂಧ ಮತ್ತು ಸಿಹಿಯಿಂದ ಕೂಡಿರುವ ಮೊಸರಿನಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿರುತ್ತದೆ, ಇದನ್ನು ಕೃತಕ ಸಕ್ಕರೆಯಿಂದ ಮಾಡಿದ್ದರೂ ಕೂಡ ಮಧುಮೇಹಿಗಳು ಇದನ್ನು ಸೇವಿಸಬಾರದು. ಇದರಿಂದ ಮಧುಮೇಹವು ವಿಪರೀತ ಹಂತವನ್ನು ತಲುಪುತ್ತದೆ.

ಉಪಹಾರ ಸಿರಿಯಲ್

ಉಪಹಾರ ಸಿರಿಯಲ್

ಹೆಚ್ಚಿನ ವೈವಿಧ್ಯತೆಯ ಬ್ರೇಕ್‌ಫಾಸ್ಟ್ ಸಿರಿಯಲ್ ಸಿಹಿ ಮತ್ತು ಸುಗಂಧಿತವಾಗಿರುತ್ತದೆ ಇದು ನಿಮ್ಮ ರಕ್ತದ ಸಕ್ಕರೆ ಪ್ರಮಾಣವನ್ನು ಹೆಚ್ಚಿಸಲಿದೆ, ನೀವು ಮಧುಮೇಹಿಯಾಗಿದ್ದಲ್ಲಿ ಅವನ್ನು ಸಂಪೂರ್ಣವಾಗಿ ನಿಲ್ಲಿಸಿ. ಮಧುಮೇಹಿಗಳೇ, ನಿಮ್ಮ ಬೆಳಗಿನ ಉಪಹಾರ ಹೀಗಿರಬೇಕು....

ಜೇನು

ಜೇನು

ಕೆಲವು ಮಧುಮೇಹಿಗಳು ಸಕ್ಕರೆಯ ಬದಲಿಗೆ ಜೇನನ್ನು ಬಳಸಿಕೊಳ್ಳಬಹುದು ಎಂಬುದಾಗಿ ನಂಬಿದ್ದಾರೆ. ಅದಾಗ್ಯೂ ಜೇನು ಕೂಡ ಹೆಚ್ಚು ಪ್ರಮಾಣದ ಸಕ್ಕರೆಯನ್ನು ಒಳಗೊಂಡಿದೆ ಮತ್ತು ಸುಕ್ರೋಸ್ ಪ್ರಮಾಣ ಜೇನಲ್ಲಿ ಅಧಿಕವಾಗಿದೆ. ಇದು ಮಧುಮೇಹದ ರೋಗಲಕ್ಷಣವನ್ನು ವಿಪರೀತವಾಗಿಸಲಿದೆ.

ಒಣ ಹಣ್ಣುಗಳು

ಒಣ ಹಣ್ಣುಗಳು

ಒಣ ಹಣ್ಣುಗಳನ್ನು ಒಣಗಿಸುವ ಪ್ರಕ್ರಿಯೆಯಲ್ಲಿ ಸಕ್ಕರೆ ಪ್ರಮಾಣವನ್ನು ಬಳಸಿರುವುದರಿಂದ ಸಕ್ಕರೆ ಕಾಯಿಲೆ ಇರುವವರು ಇದನ್ನು ಸೇವಿಸಲೇಬಾರದು.

ಫ್ರೆಂಚ್ ಫ್ರೈಸ್

ಫ್ರೆಂಚ್ ಫ್ರೈಸ್

ಫ್ರೆಂಚ್ ಫ್ರೈಸ್ ಸಕ್ಕರೆ ಅಂಶವನ್ನು ಒಳಗೊಂಡಿರದೇ ಇದ್ದರೂ, ಇದು ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ ಅಂಶವನ್ನು ಒಳಗೊಂಡಿದೆ. ಇದು ನಿಮ್ಮ ರಕ್ತದ ಸಕ್ಕರೆ ಪ್ರಮಾಣವನ್ನು ಹೆಚ್ಚಿಸಲಿದ್ದು, ಮಧುಮೇಹದ ರೋಗಲಕ್ಷಣವನ್ನು ವಿಪರೀತವಾಗಿಸಲಿದೆ.

English summary

Stay Away! These Common Foods Can Worsen Diabetes Symptoms

If you are someone who is afflicted with the deadly disease - diabetes, then there are certain foods you must never touch. Diabetes is one of the most common disorders, most of us would already be aware of its causes and symptoms by now.
X
Desktop Bottom Promotion