For Quick Alerts
ALLOW NOTIFICATIONS  
For Daily Alerts

ಮಧುಮೇಹ ಟೈಪ್ 1 ಮತ್ತು ಟೈಪ್ 2: ಏನು ವ್ಯತ್ಯಾಸ?

By Arshad
|

ಮಧುಮೇಹ ಅಥವಾ ಸಕ್ಕರೆ ಕಾಯಿಲೆಯ ಬಗ್ಗೆ ಹೆಚ್ಚಿನವರು ತಿಳಿದುಕೊಂಡಿರುವ ತಪ್ಪು ತಿಳಿವಳಿಕೆಯೆಂದರೆ ಸಕ್ಕರೆ ತಿನ್ನುವುದರಿಂದ ಸಕ್ಕರೆ ಕಾಯಿಲೆ ಬರುತ್ತದೆ. ಇಂದಿಗೂ ಸಕ್ಕರೆ ಹೆಚ್ಚಿರುವ ಚಹಾ ಕುಡಿದರೆ 'ಸಕ್ಕರೆ ಕಾಯಿಲೆ ಬರಬೇಕಂತ ಇಷ್ಟು ಸಕ್ಕರೆ ಹಾಕಿದ್ದೀಯೇನು?' ಎಂದು ಗದರಿಸುವವರೂ ಇದ್ದಾರೆ. (ಸಕ್ಕರೆ ಆರೋಗ್ಯಕ್ಕೆ ಒಳ್ಳೆಯದಲ್ಲ ಆದಷ್ಟು ಮಿತವಾಗಿ ಬಳಸಿ) ಮನೆ ಔಷಧ: ಮಧುಮೇಹವನ್ನು ನಿಯಂತ್ರಿಸುವ 'ಆಹಾರ ಪಥ್ಯ'

ವಾಸ್ತವವಾಗಿ ಸಕ್ಕರೆಯ ಸೇವನೆಗೂ ಸಕ್ಕರೆ ಕಾಯಿಲೆ ಬರುವುದಕ್ಕೂ ಸಂಬಂಧವಿಲ್ಲ. ಆದರೆ ಕಾಯಿಲೆ ಬಂದ ಬಳಿಕ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಬೇಕಾದುದು ಮಾತ್ರ ಅನಿವಾರ್ಯ, ಎಂಬುದನ್ನು ಮಾತ್ರ ಮರೆಯಬೇಡಿ... ಮಧುಮೇಹ ನಿಯಂತ್ರಿಸುವ ಪವರ್-ಮೆಂತೆ ಕಾಳಿನಲ್ಲಿದೆ!

ಮಧುಮೇಹವೆಂದರೆ ಇದರಲ್ಲಿ ಒಟ್ಟು ಮೂರು ಬಗೆಯವು ಇವೆ. ಟೈಪ್ 1, ಟೈಪ್ 2 ಹಾಗೂ ಗರ್ಭಾವಸ್ಥೆಯಲ್ಲಿ ಕಾಡುವ ತಾತ್ಕಾಲಿಕ ಅವಧಿಯ ಮಧುಮೇಹ (gestational diabetes). ಈ ಮೂರನೆಯ ವಿಧದ ಮಧುಮೇಹ ಹೆರಿಗೆಯ ಬಳಿಕ ತನ್ನಿಂತಾನೇ ಸರಿಯಾಗುತ್ತದೆ. ಆದರೆ ಉಳಿದ ಎರಡು ಬಗೆಯವು ಮಾತ್ರ ಜೀವಿತಾವಧಿಯಲ್ಲಿ ಜೊತೆಯಾಗಿರುತ್ತವೆ...

ಮಧುಮೇಹವೆಂದರೇನು?

ಮಧುಮೇಹವೆಂದರೇನು?

ಮಧುಮೇಹದ ಬಗೆಗಳ ಬಗ್ಗೆ ತಿಳಿದುಕೊಳ್ಳುವ ಮುನ್ನ ಮಧುಮೇಹವೆಂದರೇನು ಎಂಬುದನ್ನು ಅರಿತುಕೊಳ್ಳುವುದು ಉತ್ತಮ. ನಮ್ಮ ನಿತ್ಯದ ಕೆಲಸಕ್ಕೆ ಆಹಾರದ ಮೂಲಕ ಸಕ್ಕರೆ ಅಥವಾ ಗ್ಲೂಕೋಸ್ ರಕ್ತದ ಮೂಲಕ ನಮ್ಮ ಜೀವಕೋಶಗಳಿಗೆ ತಲುಪಿ ಬಳಸಲ್ಪಡುತ್ತದೆ. ಆದರೆ ಸಕ್ಕರೆ ತನ್ನಿಂತಾನೇ ಬಳಸಲ್ಪಡಲು ಸಾಧ್ಯವಿಲ್ಲ. ಇದಕ್ಕೆ ನಮ್ಮ ಮೇದೋಜೀರಕ ಗ್ರಂಥಿ (pancreas) ಇನ್ಸುಲಿನ್ ಎಂಬ ಕಿಣ್ವವನ್ನು ಸ್ರವಿಸುತ್ತದೆ. ಈ ಇನ್ಸುಲಿನ್ ನಮ್ಮ ರಕ್ತದಲ್ಲಿ ಬೆರೆತ ಬಳಿಕವೇ ಸಕ್ಕರೆಯನ್ನು ಜೀವಕೋಶಗಳು ಬಳಸಿಕೊಳ್ಳಲು ಸಾಧ್ಯ.

ಟೈಪ್ 1 ಮಧುಮೇಹ

ಟೈಪ್ 1 ಮಧುಮೇಹ

ಒಂದು ವೇಳೆ ಮೇದೋಜೀರಕ ಗ್ರಂಥಿ ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಅನ್ನು ಉತ್ಪಾದಿಸದೇ ಇದ್ದರೆ? ಆಗ ರಕ್ತದಲ್ಲಿ ಲಭ್ಯವಿರುವ ಸಕ್ಕರೆಯನ್ನು ಜೀವಕೋಶಗಳನ್ನು ಬಳಸಿಕೊಳ್ಳಲು ಸಾಧ್ಯವಾಗದೇ ಸಕ್ಕರೆ ಮೂತ್ರದ ಮೂಲಕ ವ್ಯರ್ಥವಾಗಿ ಹರಿದು ಹೋಗುತ್ತದೆ. ಇದೇ ಟೈಪ್ 1 ಮಧುಮೇಹ.

ಪರಂಗಿಯವರ ಕಾಯಿಲೆ ಎಂದೂ ಕರೆಯಲಾಗುತ್ತಿತ್ತು..!

ಪರಂಗಿಯವರ ಕಾಯಿಲೆ ಎಂದೂ ಕರೆಯಲಾಗುತ್ತಿತ್ತು..!

ಈ ಮೂತ್ರಕ್ಕೆ ಇರುವೆಗಳು ಮುತ್ತುವುದನ್ನು ನೋಡಿಯೇ ಇದಕ್ಕೆ ಸಕ್ಕರೆ ಕಾಯಿಲೆ ಎಂಬ ಹೆಸರು ಬಂದಿದೆ. ಹಿಂದೆ ಈ ಕಾಯಿಲೆ ಮೊದಲು ಬ್ರಿಟಿಷರಿಗೇ ಹೆಚ್ಚಾಗಿ ಕಾಡುತ್ತಿದ್ದುದರಿಂದ ಈ ಕಾಯಿಲೆಗೆ ಪರಂಗಿಯವರ ಕಾಯಿಲೆ ಎಂದೂ ಕರೆಯಲಾಗುತ್ತಿತ್ತು. ಮೇದೋಜೀರಕ ಗ್ರಂಥಿ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳಲು ದೇಹದ ರೋಗ ನಿರೋಧಕ ಶಕ್ತಿ ಉಡುಗುವುದು (auto-immune) ಪ್ರಮುಖ ಕಾರಣವಾಗಿದೆ.

ಟೈಪ್ 2 ಮಧುಮೇಹ

ಟೈಪ್ 2 ಮಧುಮೇಹ

ಒಂದು ವೇಳೆ ಮೇದೋಜೀರಕ ಗ್ರಂಥಿ ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಅನ್ನು ಉತ್ಪಾದಿಸಿದರೂ ಇದನ್ನು ಬಳಸಿಕೊಳ್ಳಲು ಸಾಧ್ಯವಾಗದೇ ಸಕ್ಕರೆ ಹಾಗೇ ವ್ಯರ್ಥವಾಗಿ ಹೋಗುವುದೇ ಟೈಪ್ 2 ಮಧುಮೇಹ. ಈ ವಿಧಕ್ಕೆ ಸ್ಪಷ್ಟವಾದ ಕಾರಣವನ್ನು ಕೊಡಲು ಸಾಧ್ಯವಿಲ್ಲ. ವೈದ್ಯರ ಅನುಭವವನ್ನು ಪರಿಗಣಿಸಿ ಇದಕ್ಕೆ ಸ್ಥೂಲಕಾಯ, ಚಾಲನಾರಹಿತ ಜೀವನ ಮತ್ತು ಅನುವಂಶೀಯತೆಯನ್ನು ಕಾರಣವಾಗಿ ನೀಡಬಹುದು. ಅಧ್ಯಯನ ವರದಿ: ಟೈಪ್ 2 ಮಧುಮೇಹ, ಪುರುಷರ ಸಂಖ್ಯೆಯೇ ಜಾಸ್ತಿ!

ಟೈಪ್ 1 vs ಟೈಪ್ 2

ಟೈಪ್ 1 vs ಟೈಪ್ 2

ಟೈಪ್ 1 ಮಧುಮೇಹವಿರುವ ವ್ಯಕ್ತಿಗಳು ಇನ್ಸುಲಿನ್ ಅನ್ನು ಪ್ರತಿದಿನ ತಮ್ಮ ರಕ್ತದಲ್ಲಿ ಸೇರಿಸಿಕೊಳ್ಳುವ ಮೂಲಕ ಈ ಕೊರತೆಯನ್ನು ತುಂಬಿಕೊಳ್ಳಬಹುದು. ಆದರೆ ಟೈಪ್ 2 ಮಧುಮೇಹವಿರುವ ವ್ಯಕ್ತಿಗಳಿಗೆ ಇದನ್ನು ನಿಯಂತ್ರಿಸುವುದು ಅಷ್ಟು ಸುಲಭವಲ್ಲ. ಇದನ್ನು ಸೂಕ್ತ ಆಹಾರ ಕ್ರಮ, ವ್ಯಾಯಾಮ, ತೂಕದಲ್ಲಿ ನಿಯಂತ್ರಣ ಮತ್ತು ಸೂಕ್ತ ಔಷಧಿಗಳ ಮೂಲಕ ನಿಯಂತ್ರಣದಲ್ಲಿರಿಕೊಳ್ಳುವುದೇ ಜಾಣತನದ ಮತ್ತು ಸರಿಯಾದ ಮಾರ್ಗ. ಇದರಲ್ಲಿ ಯಾವೊಂದನ್ನು ಅನುಸರಿಸುವುದರಲ್ಲಿ ತಪ್ಪಿದರೂ ಇದನ್ನೇ

ನೆಪವಾಗಿಸಿಕೊಂಡು ರಕ್ತದಲ್ಲಿ ಸಕ್ಕರೆಯ ಪ್ರಮಾಣ ಥಟ್ಟನೇ ಏರಿಬಿಡುತ್ತದೆ.

ಇನ್ಸುಲಿನ್ ಇಂಜೆಕ್ಷನ್ನುಗಳು!

ಇನ್ಸುಲಿನ್ ಇಂಜೆಕ್ಷನ್ನುಗಳು!

ಅಷ್ಟೇ ಅಲ್ಲ, ಭಾವನಾತ್ಮಕವಾಗಿ ರಕ್ತದ ಬಡಿತ ಹೆಚ್ಚುವ ಸಮಯದಲ್ಲಿ (ಆವೇಶ, ಸಿಟ್ಟು, ದುಃಖ ಇತ್ಯಾದಿ) ಸಹಾ ರಕ್ತದ ಸಕ್ಕರೆಯ ಪ್ರಮಾಣ ಏರುಪೇರಾಗುವುದನ್ನು ಗಮನಿಸಲಾಗಿದೆ. ಒಂದು ವೇಳೆ ಈ ಕ್ರಮಗಳಿಗೂ ಮಧುಮೇಹ ಬಗ್ಗದೇ ಇದ್ದರೆ ಇವರಿಗೂ ಔಷಧಿ ಮತ್ತು ಇನ್ಸುಲಿನ್ ಇಂಜೆಕ್ಷನ್ನುಗಳು ಅನಿವಾರ್ಯವಾಗುತ್ತವೆ.

ಈ ಎರಡರಲ್ಲಿ ಯಾವುದು ಹೆಚ್ಚು ಮಾರಕ?

ಈ ಎರಡರಲ್ಲಿ ಯಾವುದು ಹೆಚ್ಚು ಮಾರಕ?

ಈ ಎರಡರಲ್ಲಿ ಯಾವುದು ಹೆಚ್ಚು ಮಾರಕ ಎಂದು ಹೆಚ್ಚಿನವರು ಕೇಳುವ ಪ್ರಶ್ನೆ. ವಾಸ್ತವವಾಗಿ ನಿಯಂತ್ರಣದಲ್ಲಿರಿಸಿದರೆ ಎರಡೂ ಕ್ಷೇಮವೇ. ಆದರೆ ಟೈಪ್ 2 ಮಧುಮೇಹವನ್ನು ನಿಯಂತ್ರಣದಲ್ಲಿರಿಸಲು ಹೆಚ್ಚಿನ ಆರೈಕೆಯ ಅವಶ್ಯಕತೆ ಇದೆ. ಟೈಪ್ 1 ಮಧುಮೇಹಿಗಳ ದೇಹದಲ್ಲಿ ಸಕ್ಕರೆಯ ಪ್ರಮಾಣ ಕೆಲವೊಮ್ಮೆ ಅಗತ್ಯಕ್ಕೂ ಕಡಿಮೆಯಾಗುವ ಸಂಭವವಿದೆ. ಈ ಸಮಯದಲ್ಲಿ ವ್ಯಕ್ತಿಗೆ ತಲೆ ತಿರುಗಿ ಬೀಳುವಂತಾಗುತ್ತದೆ.

ಈ ಎರಡರಲ್ಲಿ ಯಾವುದು ಹೆಚ್ಚು ಮಾರಕ?

ಈ ಎರಡರಲ್ಲಿ ಯಾವುದು ಹೆಚ್ಚು ಮಾರಕ?

ಈ ಸಮಯದಲ್ಲಿ ಆರೈಕೆಯ ಕೊರತೆಯಾದರೆ ಪ್ರಣಾಪಾಯವೂ ಸಂಭವಿಸಬಹುದು. ತಕ್ಷಣವೇ ಕೊಂಚ ಸಕ್ಕರೆಯನ್ನು ಸೇವಿಸುವ ಮೂಲಕ ಸಾಮಾನ್ಯ ಸ್ಥಿತಿಗೆ ಮರಳಬಹುದು. ಇನ್ಸುಲಿನ್ ಪ್ರಮಾಣ ಕೊಂಚ ಹೆಚ್ಚಾದರೂ ಇದು ಸಕ್ಕರೆಯ ಪ್ರಮಾಣವನ್ನು ಇಳಿಸುವುದೇ ಇದಕ್ಕೆ ಕಾರಣ. ಆದರೆ ಟೈಟ್ -2

ಮಧುಮೇಹಿಗಳಿಗೆ ಸಕ್ಕರೆಯ ಪ್ರಮಾಣ ಸಾಮಾನ್ಯ ಪ್ರಮಾಣಕ್ಕೆ ಬರಬಹುದೇ ವಿನಃ ತಲೆ ತಿರುಗುವಷ್ಟು ಕಡಿಮೆಯಾವುದೇ ಇಲ್ಲ!

ಟೈಪ್ 1 ಮಧುಮೇಹಿಗಳು ಕೊಂಚ ಅದೃಷ್ಟವಂತರು!

ಟೈಪ್ 1 ಮಧುಮೇಹಿಗಳು ಕೊಂಚ ಅದೃಷ್ಟವಂತರು!

ಈ ಎರಡೂ ಬಗೆಯ ಮಧುಮೇಹಿಗಳಲ್ಲಿ ಟೈಪ್ 1 ಮಧುಮೇಹಿಗಳು ಕೊಂಚ ಅದೃಷ್ಟವಂತರು ಎಂದು ತಿಳಿಯಬಹುದು. ಏಕೆಂದರೆ ಇವರಿಗೆ ಆಗಾಗ ಅಥವಾ ದಿನದಲ್ಲಿ ಕೊಂಚವಾದರೂ ಸಕ್ಕರೆ ಅಥವಾ ಸಿಹಿ ತಿನ್ನುವ ಭಾಗ್ಯವಿದೆ. ಆದರೆ ಟೈಪ್ 2 ಮಧುಮೇಹಿಗಳಿಗೆ ಸಕ್ಕರೆ ಸಂಪೂರ್ಣವಾಗಿ ವರ್ಜ್ಯವಾಗಿದ್ದು ವ್ಯಾಯಾಮ ಅನಿವಾರ್ಯವಾದ ಕಾರಣ ಒಲ್ಲದ ಮನಸ್ಸಿನಿಂದಲಾದರೂ ದಿನಕ್ಕೆರಡು ಬಾರಿ ನಡೆದಾಡಲೇಬೇಕು. ಇಲ್ಲದಿದ್ದರೆ ಮರುದಿನದ ಸಕ್ಕರೆ ಏರಿ ಸುಸ್ತಿನ ಜೊತೆಗೇ ಚಿಂತೆಯನ್ನೂ ಹೆಚ್ಚಿಸುತ್ತದೆ.

ನಲವತ್ತೈದು ದಾಟಿದ ಬಳಿಕ ಕಾಡುವ ಟೈಪ್ 2 ಮಧುಮೇಹ

ನಲವತ್ತೈದು ದಾಟಿದ ಬಳಿಕ ಕಾಡುವ ಟೈಪ್ 2 ಮಧುಮೇಹ

ಈ ಎರಡು ಬಗೆಯಲ್ಲಿ ಇನ್ನೊಂದು ಸ್ಪಷ್ಟ ವ್ಯತ್ಯಾಸವೆಂದರೆ ಟೈಪ್ 1 ಮಧುಮೇಹ ಮಕ್ಕಳಿಗೂ, ಮಧ್ಯವಯಸ್ಕರಿಗೂ, ಹಿರಿಯರಿಗೂ ಆವರಿಸಬಹುದು. ಆದರೆ ಟೈಪ್ 2 ಮಧುಮೇಹ ಚಿಕ್ಕ ವಯಸ್ಸಿನಲ್ಲಿ ಆವರಿಸುವುದು ಬಹಳ ಅಪರೂಪ. ಸಾಮಾನ್ಯವಾಗಿ ನಲವತ್ತೈದು ದಾಟಿದ ಬಳಿಕವೇ ಇದು ಆವರಿಸುವ ಸಾಧ್ಯತೆ ಹೆಚ್ಚು.ಟೈಪ್‌-2 ಮಧುಮೇಹಕ್ಕೆ, ಇಲ್ಲಿದೆ ನೋಡಿ ಆಯುರ್ವೇದ ಚಿಕಿತ್ಸೆ

English summary

How Does Type 1 Diabetes Differ From Type 2 Diabetes?

Diabetes mellitus is of three distinct kinds. Type 1, type 2 and gestational diabetes. Gestational diabetes is the one that a pregnant woman ...
X
Desktop Bottom Promotion