For Quick Alerts
ALLOW NOTIFICATIONS  
For Daily Alerts

ಬೆಳಗಿನ ಉಪಹಾರ ತಪ್ಪಿಸಿದರೆ, ಆಪತ್ತು ಕಟ್ಟಿಟ್ಟ ಬುತ್ತಿ

By Manjula Balaraj
|

ಸಮಯಕ್ಕೆ ಸರಿಯಾಗಿ ಊಟೋಪಚಾರ ಸೇವಿಸಿದರೆ ಮನುಷ್ಯನ ದೇಹ ಸರಿಯಾದ ರೀತಿಯಲ್ಲಿ ಸಾಗುತ್ತದೆ. ಇಲ್ಲದಿದ್ದರೆ ಸುಮ್ಮನೆ ಕಾಯಿಲೆಗಳಿಗೆ ಆಹ್ವಾನ ನೀಡಿದಂತೆ. ಕೆಲವರು ಬೆಳಗ್ಗಿನ ಉಪಹಾರ ತ್ಯಜಿಸಿ ಮಧ್ಯಾಹ್ನದ ಊಟದ ಜೊತೆಗೆ ಮಾಡುವ ಪದ್ಧತಿಯನ್ನು ರೂಢಿಸಿಕೊಂಡಿರುತ್ತಾರೆ. ಇದು ಇವತ್ತಿಲ್ಲದೇ ನಾಳೆ ಒಂದಲ್ಲಾ ಒಂದು ಕಾಯಿಲೆಯನ್ನು ಬರಮಾಡಿಕೊಳ್ಳಲು ನಾವೇ ಆಸ್ಪದ ನೀಡಿದಂತೆ.

ಬೆಳಗಿನ ಉಪಹಾರವನ್ನು ತಪ್ಪಿಸಿದರೆ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವ ನೇರ ಮಾರ್ಗವೆಂದು ಬಹಳಷ್ಟು ಜನರಿಗೆ ತಪ್ಪು ಕಲ್ಪನೆ ಇದೆ. ಮಕ್ಕಳನ್ನು ಶಾಲೆಗೆ ಹೊರಡಿಸುವುದರಲ್ಲೋ ಅಥವಾ ಸ್ವತ: ಆಫೀಸಿಗೆ ಹೊರಡುವ ಗಡಿಬಿಡಿಯಲ್ಲಿ ಬೆಳಗಿನ ಉಪಹಾರವನ್ನು ತಪ್ಪಿಸಿ ಸಮಯ ಉಳಿಸಬೇಕೆಂದಿದ್ದರೆ ಅದನ್ನು ನಿಲ್ಲಿಸಿ. ಯಾಕೆಂದರೆ ಇದೊಂದು ತಪ್ಪು ವಿಧಾನ. ಬೆಳಗಿನ ಉಪಹಾರವನ್ನು ತಪ್ಪಿಸುವುದು

ಅನಾರೋಗ್ಯಭರಿತ ಜೀವನ ಶೈಲಿಯನ್ನು ಆರಂಭಿಸಲು ನಾವೇ ಸೂಚಿಸಿದಂತೆ. ಇದರಿಂದ ದೇಹಕ್ಕೆ ಪ್ರಾಣಾಂತಿಕವಾದ ಅಪಾಯ ಎದುರಾಗುವ ಸಾಧ್ಯತೆ ಇಲ್ಲದಿಲ್ಲ ಎನ್ನುವುದನ್ನು ಅರಿತರೆ ಸೂಕ್ತ. ಒಂದು ಸರ್ವೇಯ ಪ್ರಕಾರ ವಯಸ್ಕರು ಮತ್ತು ಹದಿಹರೆಯದವರು ಬೆಳಗ್ಗಿನ ಊಟವನ್ನು ತಪ್ಪಿಸಿದರೆ ತಮ್ಮ ಆರೋಗ್ಯದ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು ಎನ್ನುವ ಅಭಿಪ್ರಾಯವನ್ನು ಹೊಂದಿದ್ದಾರೆ. ಧೂಮಪಾನಿಗಳು, ಕುಡಿತದ ದಾಸ್ಯ ಹೊಂದಿರುವವರು ಮತ್ತು ವ್ಯಾಯಾಮ ಕಡಿಮೆ ಮಾಡುವವರು ಪ್ರತೀದಿನ ಸರಿಯಾದ ಸಮಯದಲ್ಲಿ ಉಪಹಾರ ಸೇವಿಸುವುದನ್ನು ರೂಢಿ ಮಾಡಿಕೊಂಡಿರುವುದಿಲ್ಲ. ಬೆಳಿಗ್ಗೆ ಆಹಾರ ತಪ್ಪಿಸುವವರಿಗೆ ಒಂದು ನಿರ್ದಿಷ್ಟ ಕೆಲಸದ ಕಡೆ ಗಮನ ಕೊಡಲು ಕಷ್ಟವಾಗುತ್ತದೆ, ಅಲ್ಲದೇ ಏಕಾಗ್ರತೆ ಕೂಡಾ ಇರುವುದಿಲ್ಲ. ಬನ್ನಿ ಈ ಕುರಿತು ಇನ್ನಷ್ಟು ಮಾಹಿತಿಯನ್ನು ಸ್ಲೈಡ್ ಶೋ ಮೂಲಕ ನೋಡೋಣ..

ಹದಿಹರೆಯದವರೇ ಜಾಸ್ತಿ

ಹದಿಹರೆಯದವರೇ ಜಾಸ್ತಿ

ಒಂದು ಅಧ್ಯಯನದ ಪ್ರಕಾರ ವಯಸ್ಕರು, ಹದಿಹರೆಯದವರು, ಹೆಚ್ಚು ಧೂಮಪಾನಿಗಳು, ಕಡಿಮೆ ವ್ಯಾಯಾಮ, ಗುಣಮಟ್ಟದ ಪೌಷ್ಟಿಕ ಆಹಾರ ಸೇವಿಸದೇ ಇರುವವರು, ಕುಡಿತದ ಚಟವಿರುವವರು, ಹೆಚ್ಚಿನ ಬಿಎಂಐ ಇರುವ ವಯಸ್ಕರು, ಹದಿಹರೆಯದವರು ಉಪಹಾರವನ್ನು ತಪ್ಪಿಸುವುದು ಹೆಚ್ಚು ಎಂದು ಅಧ್ಯಯನದಲ್ಲಿ ಹೊರಬಿದ್ದ ಸತ್ಯಾಂಶ.

ಸರಿಯಾದ ಸಮಯದಲ್ಲಿ ಊಟ ಮಾಡದೇ ಇರುವುದು

ಸರಿಯಾದ ಸಮಯದಲ್ಲಿ ಊಟ ಮಾಡದೇ ಇರುವುದು

ಸಂಶೋಧನೆಯ ಪ್ರಕಾರ ಸರಿಯಾದ ಸಮಯದಲ್ಲಿ ಉಪಹಾರ ಮಾಡದೇ ಇರುವುದು ಮತ್ತು ಹೊಟ್ಟೆಯನ್ನು ಖಾಲಿ ಬಿಟ್ಟು ದಿನವನ್ನು ಶುರು ಮಾಡುವುದರಿಂದ ಹಸಿವು ನಿಯಂತ್ರಣದಲ್ಲಿರುತ್ತದೆ. ಅಲ್ಲದೇ ಇದರಿಂದ ನಿಮ್ಮ ತೂಕವನ್ನೂ ಕೂಡ ನಿಯಂತ್ರಣದಲ್ಲಿರಿಸಬಹುದು ಎನ್ನುವ ಭಾವನೆಯಲ್ಲಿ ತುಂಬಾ ಜನರಿದ್ದರು.

ಧೂಮಪಾನದ ಹವ್ಯಾಸವಿರುವ ಮಕ್ಕಳೇ ಜಾಸ್ತಿ

ಧೂಮಪಾನದ ಹವ್ಯಾಸವಿರುವ ಮಕ್ಕಳೇ ಜಾಸ್ತಿ

ಸುಮಾರು 5500 ಹುಡುಗ, ಹುಡುಗಿಯರನ್ನು ಮತ್ತು ಅವರ ಪೋಷಕರನ್ನು ಸಂಪರ್ಕಿಸಿ, ಅವರು ಸರಿಯಾದ ಸಮಯದಲ್ಲಿ ಉಪಹಾರ ಸೇವಿಸುತ್ತಿದ್ದಾರೋ, ಅವರ ತೂಕ, ಕುಡಿತ ಮತ್ತು ಊಟದ ಹವ್ಯಾಸದ ಬಗ್ಗೆ ಸಂಶೋಧನೆಯ ವೇಳೆ ಇಂತಹ ಪ್ರಶ್ನೆಗಳನ್ನು ಕೇಳಿ ಬರೆದಿಟ್ಟು ಕೊಳ್ಳಲಾಗಿತ್ತು. ಉಪಹಾರ ಸೇವಿಸದೇ ಇರುವ ಪೋಷಕರ ಮಕ್ಕಳು ಕೂಡಾ ಇದನ್ನೇ ಅಭ್ಯಾಸ ಮಾಡಿಕೊಂಡಿರುತ್ತಾರೆ. ಇಂತಹ ಸರಿಯಾದ ಊಟದ ವ್ಯವಸ್ಥೆಯನ್ನು ಪಾಲಿಸದ, ಜೊತೆಗೆ ಮದ್ಯಪಾನ, ಧೂಮಪಾನದ ಹವ್ಯಾಸವಿರುವ ಮಕ್ಕಳು ಇದರಿಂದ ಭಾರೀ ತೊಂದರೆಯನ್ನು ಅನುಭವಿಸಬೇಕಾಗುತ್ತದೆ.

ರಕ್ತದಲ್ಲಿರುವ ಸಕ್ಕರೆ ಅಂಶದ ಸಮತೋಲನ ಕಾಪಾಡಿಕೊಳ್ಳಲು

ರಕ್ತದಲ್ಲಿರುವ ಸಕ್ಕರೆ ಅಂಶದ ಸಮತೋಲನ ಕಾಪಾಡಿಕೊಳ್ಳಲು

ಬೆಳಗಿನ ಉಪಹಾರವನ್ನು ಸಮಯಕ್ಕೆ ಸರಿಯಾಗಿ ಮಾಡುವುದರಿಂದ ರಕ್ತದಲ್ಲಿರುವ ಸಕ್ಕರೆ ಅಂಶದ ಸಮತೋಲನವನ್ನು ಕಾಪಾಡಿಕೊಳ್ಳಬಹುದು ಇದರಿಂದ ಹಸಿವು ಮತ್ತು ದೇಹದ ಶಕ್ತಿ ಸರಿಯಾದ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದೆಂದು ಅಧ್ಯಯನದಲ್ಲಿ ಸಾಬೀತಾಗಿದೆ.

ಬೆಳಗಿನ ಉಪಹಾರದ ಮಹತ್ವ

ಬೆಳಗಿನ ಉಪಹಾರದ ಮಹತ್ವ

ಇನ್ನೊಂದು ಅಧ್ಯಯನದ ಪ್ರಕಾರ 3000ಕ್ಕಿಂತಲೂ ಹೆಚ್ಚಿನ ಅಮೆರಿಕನ್ನರ ಅನುಭವದ ಪ್ರಕಾರ ಯಾರು ಬೆಳಗಿನ ಉಪಹಾರವನ್ನು ಸರಿಯಾದ ಸಮಯದಲ್ಲಿ ತೆಗೆದುಕೊಳ್ಳುತ್ತಾರೋ ಅವರು ಸರಿಯಾದ ದೇಹದ ತೂಕ ಹೊಂದಿರುತ್ತಾರೆ, ಮಧುಮೇಹದ ತೊಂದರೆಯಿಂದ ಮುಕ್ತರಾಗಿರುತ್ತಾರೆ. ಇದು ಸರಿಯಾಗಿ ಉಪಹಾರ ತೆಗೆದುಕೊಳ್ಳದೇ ಇರುವವರಿಗಿಂತ ಜಾಸ್ತಿ ಪ್ರಮಾಣದಲ್ಲಿರುವುದು ಸರ್ವೇಯಲ್ಲಿ ಕಂಡು ಬಂದಿದೆ.ಆದುದರಿಂದ ಸಮಯಕ್ಕೆ ಸರಿಯಾಗಿ ಉಪಹಾರ ಸೇವಿಸುವುದನ್ನು ಯಾವತ್ತು ತಪ್ಪಿಸಿಕೊಳ್ಳಬೇಡಿ. ಹಾಗೆಯೇ, ಮಕ್ಕಳ ಪೋಷಕರೂ ಕೂಡ ತಮ್ಮ ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಪೌಷ್ಠಿಕ ಆಹಾರವನ್ನು ದಿನ ನಿತ್ಯ ಸರಿಯಾದ ಸಮಯದಲ್ಲಿ ಕೊಡುವುದನ್ನು ಮರೆಯಬಾರದು.

English summary

Why Skipping Breakfast Makes You Fat & Diabetic?

Skipping breakfast appears to be a straightforward way of decreasing weight or saving time while getting the kids ready for school or rushing off to work. It could additionally be a symptom of an unhealthy lifestyle with possible dangerous consequences, including an increased risk of death.
Story first published: Saturday, March 26, 2016, 20:06 [IST]
X
Desktop Bottom Promotion