For Quick Alerts
ALLOW NOTIFICATIONS  
For Daily Alerts

ಮಧುಮೇಹಿಗಳ ಪಾಲಿಗೆ 'ನೀರೇ ಜೀವಾಮೃತ' ಮರೆಯದಿರಿ

By Super Admin
|

ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರಲ್ಲಿ ಯಾರಾದರೂ ಸತತವಾಗಿ ಬಾಯಾರಿಕೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರೆ ಇದನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ತಕ್ಷಣ ವೈದ್ಯರ ಬಳಿ ಕರೆದುಕೊಂಡು ಹೋಗಿ ಸೂಕ್ತ ಪರೀಕ್ಷೆಗಳನ್ನು ಮಾಡುವುದು ಅವಶ್ಯಕ. ಏಕೆಂದರೆ ಇದು ಮಧುಮೇಹವಾಗಿರಲೂಬಹುದು. ಸದ್ದಿಲ್ಲದೆ ಸದ್ದುಮಾಡುವ 'ಮಧುಮೇಹದ' ಬಗ್ಗೆ ಇರಲಿ ಎಚ್ಚರ!

ಹೌದು, ಇದು ಮಧುಮೇಹವೇ ಎಂದು ಒಂದು ವೇಳೆ ಖಾತ್ರಿಯಾದರೆ ಎಲ್ಲಕ್ಕಿಂತ ಮೊದಲು ಮಾಡಬೇಕಾದ ಕೆಲಸವೆಂದರೆ ಕುಡಿಯುವ ನೀರಿನ ಪ್ರಮಾಣವನ್ನು ಹೆಚ್ಚಿಸುವುದು. ಏಕೆಂದರೆ ಮಧುಮೇಹಿಗಳ ರಕ್ತದಲ್ಲಿ ಬಳಕೆಯಾಗದ ಸಕ್ಕರೆ ಇರುತ್ತದೆ. ಈ ಸಕ್ಕರೆ ನಮ್ಮ ಜೀವಕೋಶಗಳಿಂದ ನೀರನ್ನು ಹೀರಿಕೊಳ್ಳುತ್ತದೆ. ಪರಿಣಾಮವಾಗಿ ದೇಹಕ್ಕೆ ಅಗತ್ಯವಾದ ನೀರಿನ ಪ್ರಮಾಣ ಕಡಿಮೆಯಾಗಿ ನಿರ್ಜಲೀಕರಣ ಎದುರಾಗುತ್ತದೆ. ಮಾವಿನ ಎಲೆ ಮಧುಮೇಹ ನಿಯಂತ್ರಿಸಬಲ್ಲದು!

ನಿಸರ್ಗ ನಮಗೆ ನೀಡಿರುವ ಅತ್ಯದ್ಭುತ ದ್ರವ ಎಂದರೆ ನೀರು. ಏಕೆಂದರೆ ಇದರಲ್ಲಿ ಕ್ಯಾಲೋರಿಗಳಿಲ್ಲ, ಕೊಲೆಸ್ಟ್ರಾಲ್, ಕೆಫೀನ್, ಸೋಡಿಯಂ, ಕೊಬ್ಬು ಮೊದಲಾವುವು ಯಾವುದೂ ಇಲ್ಲ. ಇವು ಇಲ್ಲದ್ದರಿಂದಲೇ ನೀರು ನಮಗೆ ಜೀವಜಲ. ವಿಶೇಷವಾಗಿ ಮಧುಮೇಹಿಗಳು ಇತರರಿಗಿಂತಲೂ ಹೆಚ್ಚು ನೀರು ಕುಡಿಯುವುದು ಅವಶ್ಯಕ ಮತ್ತು ಅನಿವಾರ್ಯ. ಮಧುಮೇಹಿಗಳು ನಿರ್ಜಲೀಕರಣದಿಂದ ರಕ್ಷಿಸಿಕೊಳ್ಳಬೇಕಾದರೆ ಹೆಚ್ಚು ನೀರನ್ನು ಕುಡಿಯಲೇಬೇಕು. ಇಲ್ಲಿವೆ ಕೆಲವು ಕಾರಣಗಳು...

ನಿರ್ಜಲೀಕರಣದ ಸಾಧ್ಯತೆ ತಗ್ಗಿಸುತ್ತದೆ

ನಿರ್ಜಲೀಕರಣದ ಸಾಧ್ಯತೆ ತಗ್ಗಿಸುತ್ತದೆ

ಕೆಲವೊಮ್ಮೆ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣ ಸಾಮಾನ್ಯಕ್ಕಿಂತಲೂ ಹೆಚ್ಚಾಗಿಬಿಡುತ್ತದೆ. ಆಗ ಅಂಗಾಂಶಗಳಿಂದಲೂ ನೀರನ್ನು ಪಡೆಯುವುದು ಅನಿವಾರ್ಯವಾಗುತ್ತದೆ. ಅಂಗಾಂಶಗಳಲ್ಲಿ ನೀರು ಇಲ್ಲದೇ ಇದ್ದರೆ ಮಾಂಸಖಂಡಗಳಲ್ಲಿನ ಶಕ್ತಿ ಇಲ್ಲವಾಗುತ್ತದೆ. ಈ ಸ್ಥಿತಿ ಉಲ್ಬಣಗೊಳ್ಳುತ್ತಾ ಹೋದಂತೆ ನಿರ್ಜಲೀಕರಣವೂ ಹೆಚ್ಚಿ ಸುಸ್ತು ಆವರಿಸುತ್ತದೆ. ಆದ್ದರಿಂದಲೇ ಹೆಚ್ಚು ಕಾಲ ನೀರು ಕುಡಿಯದ ಮಧುಮೇಹಿಗಳು ಕುಸಿದು ಬೀಳುತ್ತಾರೆ. ಇದೇ ಕಾರಣಕ್ಕೆ ಮಧುಮೇಹಿಗಳಿಗೆ ಉಪವಾಸ ಹಿಡಿಯದಂತೆ ವೈದ್ಯರು ಸೂಚಿಸುತ್ತಾರೆ.

ನಿರ್ಜಲೀಕರಣದ ಸಾಧ್ಯತೆ ತಗ್ಗಿಸುತ್ತದೆ

ನಿರ್ಜಲೀಕರಣದ ಸಾಧ್ಯತೆ ತಗ್ಗಿಸುತ್ತದೆ

ಆದ್ದರಿಂದ ಕಾಲಕಾಲಕ್ಕೆ ಸಾಕಷ್ಟು ನೀರು ಕುಡಿಯುತ್ತಲೇ ಇರಬೇಕು. ಆದರೆ ಇದರ ಪರಿಣಾಮವಾಗಿ ಮೂತ್ರವಿಸರ್ಜನೆಗೂ ಪದೇ ಪದೇ ಅವಸರವಾಗುವ ಕಾರಣ ಪ್ರಯಾಣ ಮೊದಲಾದ ಸಂದರ್ಭದಲ್ಲಿ ಸಂದರ್ಭಾನುಸಾರ ನೀರು ಕುಡಿಯಬೇಕು.

ಚರ್ಮದ ಸೋಂಕು ರಕ್ಷಿಸುತ್ತದೆ

ಚರ್ಮದ ಸೋಂಕು ರಕ್ಷಿಸುತ್ತದೆ

ಗಾಯಗಳು ಮಧುಮೇಹಿಗಳಲ್ಲಿ ಶೀಘ್ರವಾಗಿ ಮಾಗದ ಕಾರಣ ಚರ್ಮದಲ್ಲಿ ಸೋಂಕು ಸಾಮಾನ್ಯವಾಗುತ್ತದೆ. ವಿಶೇಷವಾಗಿ ಚರ್ಮದಲ್ಲಿ ಎದುರಾಗುವ ಸೂಕ್ಷ್ಮಗೀರುಗಳು. ರಕ್ತದಲ್ಲಿ ಹೆಚ್ಚಿರುವ ಸಕ್ಕರೆಯ ಕಾರಣ ದೇಹದ ಇತರ ಅಂಗಗಳ ಜೊತೆಗೇ ಚರ್ಮದಲ್ಲಿಯೂ ಆರ್ದ್ರತೆ ಕಡಿಮೆಯಾಗುತ್ತದೆ. ಇದರಿಂದ ಚರ್ಮ ಒಣಗಿ ಸೂಕ್ಷ್ಮಗೀರುಗಳು ಎದುರಾಗುತ್ತವೆ. ಇದರಿಂದ ಚರ್ಮದಲ್ಲಿ ತುರಿಕೆ ಉಂಟಾಗುತ್ತದೆ. ನವೆ ತಾಳಲಾಗದೇ ಉಗುರಿನಿಂದ ತುರಿಸಿದಾಗ ಈಗಾಗಲೇ ಒಣಗಿ ಶಿಥಿಲವಾಗಿರುವ ಚರ್ಮದ ಹೊರಪದರ ಸುಲಭವಾಗಿ ಹರಿದು ಗಾಯಗಳುಂಟಾಗುತ್ತವೆ.

ಚರ್ಮದ ಸೋಂಕು ರಕ್ಷಿಸುತ್ತದೆ

ಚರ್ಮದ ಸೋಂಕು ರಕ್ಷಿಸುತ್ತದೆ

ಈ ಗಾಯಗಳು ಗಾಳಿಯಲ್ಲಿನ ಬ್ಯಾಕ್ಟೀರಿಯಾಗಳಿಗೆ ಧಾಳಿ ನೀಡಲು ಸುಲಭ ಗುರಿಯಾಗಿದ್ದು ಸೋಂಕು ತಗಲುತ್ತದೆ. ಆದರೆ ಸತತವಾಗಿ ನೀರು ಕುಡಿಯುತ್ತಿರುವ ಮೂಲಕ ಚರ್ಮಕ್ಕೂ ಉತ್ತಮ ಪ್ರಮಾಣದ ಆರ್ದ್ರತೆ ದೊರೆತು ಚರ್ಮದ ಹೊರಪದರ ಬಲವುಳ್ಳದಾಗಿರುತ್ತದೆ. ಒಂದು ವೇಳೆ ತುರಿಕೆಯುಂಟಾದರೆ ಮಧುಮೇಹಿಗಳು ಉಗುರನ್ನು ಸರ್ವಥಾ ಚರ್ಮಕ್ಕೆ ತಾಗಿಸದೇ ದಪ್ಪ ಟವೆಲ್ ಅಥವಾ ಬಟ್ಟೆಯಿಂದ ಒರೆಸಿಕೊಂಡು ನವೆಯನ್ನು ಕಳೆದುಕೊಳ್ಳಲು ವೈದ್ಯರು ಸಲಹೆ ನೀಡುತ್ತಾರೆ.

ಸುಸ್ತು ಕಡಿಮೆ ಮಾಡಲು ನೆರವಾಗುತ್ತದೆ

ಸುಸ್ತು ಕಡಿಮೆ ಮಾಡಲು ನೆರವಾಗುತ್ತದೆ

ಮಧುಮೇಹ ಇದೆ ಎಂದಾಕ್ಷಣ ವ್ಯಾಯಾಮ ಮಾಡಬಾರದೆಂದೇನಿಲ್ಲ. ಮಧುಮೇಹಿಗಳಿಗೂ ವ್ಯಾಯಾಮ ಅಗತ್ಯ. ನಡಿಗೆ ಮಧುಮೇಹಿಗಳಿಗೆ ಹೇಳಿ ಮಾಡಿಸಿದಂತಹ ವ್ಯಾಯಾಮ. ವ್ಯಾಯಾಮದ ಕಾರಣ ಅಥವಾ ತಾಪಮಾನ ಹೆಚ್ಚಿದ್ದ ಸಮಯದಲ್ಲಿ ದೇಹದಿಂದ ಬೆವರಿನ ರೂಪದಲ್ಲಿ ನೀರು ಹೊರಹರಿಯುವ ಮೂಲಕವೂ ನೀರಿನ ಕೊರತೆಯುಂಟಾಗುತ್ತದೆ.

ಸುಸ್ತು ಕಡಿಮೆ ಮಾಡಲು ನೆರವಾಗುತ್ತದೆ

ಸುಸ್ತು ಕಡಿಮೆ ಮಾಡಲು ನೆರವಾಗುತ್ತದೆ

ಇದರಿಂದ ಸುಸ್ತು ಮತ್ತು ಬಳಲಿಕೆ ಆವರಿಸುತ್ತದೆ. ಕೆಲವೊಮ್ಮೆ ತಲೆಸುತ್ತುವಿಕೆಯೂ ಕಾಣಬರಬಹುದು. ಆದ್ದರಿಂದ ಮಧುಮೇಹಿಗಳು ವ್ಯಾಯಾಮದ ಮತ್ತು ಸೆಖೆಯ ಸಮಯದಲ್ಲಿ ಇತರರಿಗಿಂತಲೂ ಕೊಂಚ ಹೆಚ್ಚೇ ನೀರು ಕುಡಿಯಬೇಕು.

English summary

Why Do Diabetics Need To Drink Lots Of Water?

Water is one of the purest forms of liquid which does not contain calories, sodium, fat, cholesterol or caffeine. Driking lots of water, especially for diabetic people is important to prevent dehydration and also it is safe as it does not have any side-effects. Here are a few reasons why diabetic people need to drink lots of water. Take a look.
X
Desktop Bottom Promotion