For Quick Alerts
ALLOW NOTIFICATIONS  
For Daily Alerts

ಬಾರ್ಲಿಯಲ್ಲಿದೆ ಮಧುಮೇಹ ನಿಯಂತ್ರಿಸುವ ಶಕ್ತಿ

By Suma
|

ಇತ್ತೀಚಿನ ದಿನಗಳಲ್ಲಿ ಮಧುಮೇಹ ಸಮಸ್ಯೆಯು ಹೆಚ್ಚಿನವರಲ್ಲಿ ಕಾಡುತ್ತಿದೆ. ಇಂತಹ ಸಮಸ್ಯೆಗೆ ನಿಮ್ಮ ಒತ್ತಡವೂ ಸಹ ಒಂದು ಕಾರಣವಾಗಿದೆ. ಈ ನಿಟ್ಟಿನಲ್ಲಿ ಅನೇಕ ರೀತಿಯ ಔಷಧೀಯ ಉತ್ಪನ್ನಗಳು ಪ್ರಚಲಿತದಲ್ಲಿದ್ದು, ಹೆಚ್ಚೆಚ್ಚು ರಾಸಾಯನಿಕ ಸತ್ವಗಳನ್ನು ಸೇವಿಸುವ ಅನಿವಾರ್ಯತೆ ಎಲ್ಲರಲ್ಲಿಯೂ ಎದುರಾಗಿದೆ. ಕಾಯಿಲೆ ಬಂದಾಗ ಚಿಂತಿಸುವ ಬದಲು ಕಾಯಿಲೆಯು ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಅತ್ಯವಶ್ಯಕ.

ಈ ಸಂಬಂಧ ನೈಸರ್ಗಿಕ ಸತ್ವವಾದ ಬಾರ್ಲಿ ಅಥವಾ ಜವೆಗೋಧಿಯಿಂದ ಮಧುಮೇಹವನ್ನು ನಿಯಂತ್ರಿಸುವ ಕೆಲ ವಿಶಿಷ್ಟ ವಿಚಾರಗಳನ್ನು ಈ ಲೇಖನದಲ್ಲಿ ನಿಮಗಾಗಿ ನೀಡಲಾಗಿದೆ. ಬಾರ್ಲಿಯ ಸೇವನೆಯು ನಿಮಗೆ ಅನೇಕ ಪ್ರಯೋಜನಗಳನ್ನು ನೀಡಲಿದೆ. ಇತ್ತೀಚಿನ ಅಧ್ಯಯನದ ವರದಿಯ ಪ್ರಕಾರ ಬಾರ್ಲಿಯು ನಿಮ್ಮ ದೇಹದ ಆರೋಗ್ಯವನ್ನು ಸುಧಾರಿಸಿ, ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವುದಲ್ಲದೇ ಅದರಿಂದ ಉಂಟಾಗುವ ಮಧುಮೇಹವನ್ನು ನಿಯಂತ್ರಿಸುತ್ತದೆ.

Want to prevent diabetes? Include barley in your diet

ಅದರಲ್ಲಿಯೂ ಬಾರ್ಲಿಯಲ್ಲಿರುವ ನಾರಿನ ಮಿಶ್ರಣದ ಅಂಶವು ಜನರ ಹಸಿವಿನ ನಿವಾರಣೆಗೆ ಮತ್ತು ಹೃದಯ ಸಂಬಂಧಿ ಸಮಸ್ಯೆಗಳನ್ನು ನಿವಾರಿಸುವಲ್ಲಿ ಹೆಚ್ಚು ನೆರವಾಗುತ್ತದೆ ಎಂಬುದಾಗಿ ಅಧ್ಯಯನದ ವರದಿಯೊಂದು ಹೊರಬಿದ್ದಿದೆ. ಇದರಿಂದ ಬಾರ್ಲಿಯ ಬಗೆಗಿನ ಪರಿಣಾಮಕಾರಿ ಪ್ರಯೋಜನಗಳ ಬಗ್ಗೆ ಎಲ್ಲರಿಗೂ ತಿಳಿಸುತ್ತದೆ. ಬಾರ್ಲಿ ನೀರು, ಇದುವೇ ನಮ್ಮ ಆರೋಗ್ಯದ ಬೇರು

ಸಂಶೋಧಕರು ತಿಳಿಸಿರುವ ಪ್ರಕಾರ ನಾರಿನ ಅಂಶವು ನಿಮಗೆ ಕಡಿಮೆ ಅವಧಿಯಲ್ಲಿ ಹೆಚ್ಚು ಆರೋಗ್ಯಕರ ಪ್ರಯೋಜನಗಳನ್ನು ಹೊಂದಬಹುದಾಗಿದೆ. ಇದು ಆಶ್ಚರ್ಯಕರ ವಿಚಾರವಾಗಿದ್ದರೂ ನಂಬಲೇಬೇಕು. ಈ ಅಧ್ಯಯನಕ್ಕೆ ಆರೋಗ್ಯಯುತ ಮಧ್ಯವಯಸ್ಕರನ್ನು ಆಯ್ಕೆಮಾಡಿಕೊಂಡಿದ್ದು, ಅವರೆಲ್ಲರಿಗೆ ಶೇಖಡಾ 85 ರಷ್ಟು ಬಾರ್ಲಿ ಭಾಗಗಳನ್ನು ದಿನಕ್ಕೆ ಮೂರು ಬಾರಿ ಬೆಳಗಿನ ಉಪಹಾರಕ್ಕೆ, ಊಟಕ್ಕೆ ಮತ್ತು ರಾತ್ರಿ ಊಟಕ್ಕೆ ಸೇವಿಸಲು ನೀಡಲಾಯಿತು.

ಕೊನೆಯ ಊಟವಾದ ಸುಮಾರು 11 ರಿಂದ 14 ಗಂಟೆಗಳ ನಂತರ ಮಧುಮೇಹ ಮತ್ತು ಹೃದಯ ಸಂಬಂಧಿ ಸಮಸ್ಯೆಗಳು ಸಂಭವಿಸುವ ಅಂಶವನ್ನು ಪರಿಶೀಲನೆಗೆ ಒಳಪಡಿಸಲಾಯಿತು. ಬಾರ್ಲಿ ತಿರುಳಿರುವ ಬ್ರೆಡ್ ಅನ್ನು ಸೇವಿಸಿದ ಮೇಲೆ ಅವರಲ್ಲಿ ದೇಹದ ಸಂಚಲನ ವ್ಯವಸ್ಥೆಯನ್ನು ಸುಗಮಗೊಳಿಸುವ ಮತ್ತು ಹಸಿವನ್ನು ನಿವಾರಿಸಲು ನೆರವಾಗುವ ಗಟ್ ಹಾರ್ಮೊನ್ಸ್ ಉತ್ಪತ್ತಿಯಲ್ಲಿ ನೆರವಾಗುತ್ತದೆ.

ಇದರಿಂದ ಕಡಿಮೆ ಅವಧಿಯ ಉರಿಯೂತ ನಿವಾರಣೆಯಾಗಲು ನೆರವಾಗುತ್ತದೆ. ಅಲ್ಲದೆ ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಸಂಭವಿಸುವ ಅಪಾಯವನ್ನು ತಡೆಗಟ್ಟಲು ನೆರವಾಗುತ್ತದೆ ಎಂದು ಸಂಶೋಧಕರು ನಿರೂಪಿಸಿದ್ದಾರೆ. ಅದರಲ್ಲೂ ಆರೋಗ್ಯಕರ ರಕ್ತದೊತ್ತಡ ಮಟ್ಟವನ್ನು ಸಮತೋಲನದಲ್ಲಿರಿಸಲು ಬ್ರೆಡ್ ಆಯ್ದುಕೊಳ್ಳಿ. ಇದರ ಜೊತೆಗೆ ಧಾನ್ಯಗಳನ್ನು ಹೆಚ್ಚು ಸೇವಿಸಿರಿ. ಬಿಳಿ ಹಿಟ್ಟಿನ ಬದಲಾಗಿ ಬಾರ್ಲಿಯ ತಿರುಳನ್ನು ಸೂಪ್ ಮತ್ತು ಭಕ್ಷ್ಯಗಳಲ್ಲಿ ಬೆರೆಸಿಕೊಂಡು ಸೇವಿಸಿರಿ.

ಬಿಳಿ ಅನ್ನದ ಬದಲಾಗಿ ಬಾರ್ಲಿಯನ್ನು ಬೇಯಿಸಿ ಸೇವಿಸಬಹುದು. ಆರೋಗ್ಯಕ್ಕೆ ಹೆಚ್ಚು ನೆರವಾಗುವ ಬಾರ್ಲಿಯ ಹಾಗೆ ಹುರುಳಿ ಕಾಯಿ ಮತ್ತು ಗಜ್ಜರಿಯನ್ನು ಸಹ ಸೇವಿಸಬಹುದಾಗಿದೆ. ಇವುಗಳಲ್ಲಿ ಹೆಚ್ಚಿನ ನಾರಿನ ಅಂಶಗಳಿದ್ದು ನಿಮ್ಮ ಆರೋಗ್ಯ ಮತ್ತು ದೇಹದ ಸಂಚಲನ ವ್ಯವಸ್ಥೆಯನ್ನು ಸುಧಾರಿಸಲು ಸಹಕಾರಿಯಾಗಲಿದೆ.

English summary

Want to prevent diabetes? Include barley in your diet

Barley has come to our rescue as a recent study reveals that it can rapidly improve people’s health by reducing blood sugar levels and risk for diabetes. The Lund University study found that the secret lies in the special mixture of dietary fibres found in barley, which can also help reduce people’s appetite and risk for cardiovascular disease.
Story first published: Wednesday, February 10, 2016, 20:11 [IST]
X
Desktop Bottom Promotion