ಆರೋಗ್ಯಕರ ಜೀವನಶೈಲಿ-ಅದೇ 'ಮಧುಮೇಹಕ್ಕೆ' ಸೂಕ್ತ ಚಿಕಿತ್ಸೆ

By: manu
Subscribe to Boldsky

ಮಧುಮೇಹ ವಂಶವಾಹಿನಿಯ ಮೂಲಕ ಬರುವ ಕಾಯಿಲೆಯಾಗಿದ್ದು ತಂದೆ ತಾಯಿ ತಾತ ಅಜ್ಜಿಯರಲ್ಲಿ ಯಾರಿಗಾದರೂ ಮಧುಮೇಹವಿದ್ದರೆ ಮಕ್ಕಳಿಗೂ ಆವರಿಸುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ವಂಶವಾಹಿನಿಯಲ್ಲಿ ಮಧುಮೇಹದ ಇತಿಹಾಸವಿರುವ ಮಕ್ಕಳು ತಮಗೆ ಯಾವಾಗ ಮಧುಮೇಹ ಆವರಿಸುತ್ತದೋ ಎಂಬ ಆತಂಕದಲ್ಲಿಯೇ ಇರುತ್ತಾರೆ. ಮಧುಮೇಹ ರೋಗದ ಹೆಡೆಮುರಿ ಕಟ್ಟಿಹಾಕುವ ಫಲಪ್ರದ ಮನೆಮದ್ದು

ಮಧುಮೇಹದ ಬಗ್ಗೆ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಲಭ್ಯವಿರುವ ಮಾಹಿತಿಯ ಪರಿಣಾಮವಾಗಿ ಇದರ ಬಗ್ಗೆ ಎಲ್ಲರೂ ಅರಿತಿದ್ದಾರೆ. ಹಿಂದೆಲ್ಲಾ ಸಕ್ಕರೆ ತಿಂದೇ ಮಧುಮೇಹ ಬರುತ್ತದೆ ಎಂದೇ ಹೆಚ್ಚಿನ ಜನರು ತಿಳಿದಿದ್ದರು. ಆದರೆ ಈ ಭ್ರಾಂತಿ ಈಗ ಹೆಚ್ಚೂ ಕಡಿಮೆ ಅಳಿದಿದೆ. ಮಧುಮೇಹಕ್ಕೆ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿಯಾಗದಿರುವುದು ಅಥವಾ ಉತ್ಪತ್ತಿಯಾದರೂ ಬಳಸಲ್ಪಡದಿರುವುದು ಮಧುಮೇಹಕ್ಕೆ ಕಾರಣವಾಗಿದೆ.

ಈ ಎರಡೂ ಕಾರಣಗಳನ್ನು ಆಧರಿಸಿ ಟೈಪ್ 1 ಮತ್ತು ಟೈಪ್ 2 ಮಧುಮೇಹವೆಂದು ವರ್ಗೀಕರಿಸಲಾಗಿದೆ. ಈ ಎರಡೂ ಸಂದರ್ಭಗಳಲ್ಲಿ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾಗಿರುತ್ತದೆ. ಮಧುಮೇಹದಿಂದ ಹತ್ತು ಹಲವು ಇತರ ಅಡ್ಡಪರಿಣಾಮಗಳಿವೆ. ಮಧುಮೇಹ ಬಂದ ಬಳಿಕ ಇದನ್ನು ಮತ್ತೆ ಇಲ್ಲವಾಗಿಸಲು ಸಾಧ್ಯವಿಲ್ಲ. ಆದರೆ ಇದನ್ನು ನಿಯಂತ್ರಣದಲ್ಲಿರಿಸಿ ಅಡ್ಡಪರಿಣಾಮಗಳಿಗೆ ಎದುರಾಗದಂತೆ ನೋಡಿಕೊಳ್ಳುವುದೇ ಜಾಣತನದ ಮತ್ತು ಆರೋಗ್ಯಕರ ಕ್ರಮ.

ಒಂದು ವೇಳೆ ಮಧುಮೇಹ ಆವರಿಸಿದ್ದರೆ ಕೆಲವು ಲಕ್ಷಣಗಳ ಮೂಲಕ ಇದನ್ನು ಅರಿಯಬಹುದು. ಸತತವಾಗಿ ಮೂತ್ರಕ್ಕೆ ಅವಸರವಾಗುವುದು, ಅತೀವ ಸುಸ್ತು, ಅತಿ ಹೆಚ್ಚಿನ ಹಸಿವು, ಅಕಾರಣವಾದ ತೂಕದಲ್ಲಿ ಇಳಿಕೆ ಅಥವಾ ಏರಿಕೆ, ಲೈಂಗಿಕ ಕ್ರಿಯೆಯಲ್ಲಿ ತೀವ್ರ ನಿರಾಸಕ್ತಿ, ಗಾಯಗಳಾದರೆ ಮಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದು ಇತ್ಯಾದಿಗಳು ಮಧುಮೇಹದ ಲಕ್ಷಣಗಳಾಗಿವೆ.  ಮಧುಮೇಹಿಗಳಿಗೆ 'ಆಹಾರ ಪಥ್ಯ', ತಪ್ಪದೇ ಅನುಸರಿಸಿ...

ಒಂದು ವೇಳೆ ಅರಿವಿನ ಕೊರತೆ ಅಥವಾ ನಿರ್ಲಕ್ಷ್ಯದ ಕಾರಣ ಮಧುಮೇಹಕ್ಕೆ ಸರಿಯಾದ ಕ್ರಮ ಕೈಗೊಳ್ಳದೇ ಹೋದರೆ ಇದು ನಿಧಾನವಾಗಿ ಹೆಚ್ಚಾಗುತ್ತಾ ಒಂದೊಂದಾಗಿ ಶರೀರದ ಅಂಗಗಳನ್ನೆಲ್ಲಾ ನಿಷ್ಕ್ರಿಯಗೊಳಿಸುತ್ತಾ ಬರುತ್ತದೆ.  ಮಧುಮೇಹಿಗಳ ಪಾಲಿಗೆ 'ನೀರೇ ಜೀವಾಮೃತ' ಮರೆಯದಿರಿ

ಆದ್ದರಿಂದ ಮಧುಮೇಹ ವಂಶವಾಹಿನಿಯಲ್ಲಿ ಇದ್ದವರು ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಮೂಲಕ ತಮಗೆ ಮಧುಮೇಹ ಎದುರಾಗುವ ಸಾಧ್ಯತೆಯನ್ನು ಸಾಧ್ಯವಾದಷ್ಟು ದೂರವಾಗಿಸುತ್ತದೆ. ಪ್ರಾಯಶಃ ವೃದ್ಧಾಪ್ಯದವರೆಗೂ. ಬನ್ನಿ, ಇದು ಹೇಗೆ ಸಾಧ್ಯವಾಗುತ್ತದೆ ಎಂಬುದನ್ನು ನೋಡೋಣ....     

ತೂಕ ಕಡಿಮೆಗೊಳಿಸಿ

ಒಂದು ಸಂಶೋಧನೆಯಲ್ಲಿ ಕಂಡುಕೊಂಡಂತೆ ನಿಮ್ಮ ಎತ್ತರಕ್ಕೆ ತಕ್ಕ ತೂಕವನ್ನು ಹೊಂದಿರುವುದರಿಂದ ಮಧುಮೇಹ ಆವರಿಸುವ ಸಾಧ್ಯತೆಯನ್ನು ಸಾಕಷ್ಟು ಮುಂದೂಡಬಹುದು. ಅಂದರೆ ಮಧುಮೇಹ ಆವರಿಸುವ ಸಾಧ್ಯತೆ ಹತ್ತು ಶೇಖಡಾ ಕಡಿಮೆಯಾಗುತ್ತದೆ.

ಹಸಿರು ಸೊಪ್ಪು ತರಕಾರಿಗಳನ್ನು ಹೆಚ್ಚು ಸೇವಿಸಿ

ತಮ್ಮ ಆಹಾರದಲ್ಲಿ ಸಾಕಷ್ಟು ಹಸಿರು ಸೊಪ್ಪು, ತರಕಾರಿ, ಹಣ್ಣುಗಳು ಇರುವಂತೆ ನೋಡಿಕೊಳ್ಳುವ ಮೂಲಕ ರಕ್ತದಲ್ಲಿ ಗ್ಲೂಕೋಸ್ ಮಟ್ಟವನ್ನು ಸರಿಯಾಗಿರಿಸಲು ಸಾಧ್ಯವಾಗುತ್ತದೆ.  ಟೈಪ್‌-2 ಮಧುಮೇಹಕ್ಕೆ, ಇಲ್ಲಿದೆ ನೋಡಿ ಆಯುರ್ವೇದ ಚಿಕಿತ್ಸೆ

ಶಿರ್ಕಾ ಸೇವಿಸಿ (ವಿನೇಗರ್)

ನಿಮ್ಮ ಆಹಾರದಲ್ಲಿ ಕೊಂಚವಾದರೂ ಶಿರ್ಕಾ ಇರುವಂತೆ ನೋಡಿಕೊಳ್ಳಿ. ಇದರಲ್ಲಿರುವ ಅಸೆಟಿಕ್ ಆಮ್ಲ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. 

 

ಸಾಕಷ್ಟು ನಡೆಯಿರಿ

ಒಂದು ಸಂಶೋಧನೆಯಲ್ಲಿ ಕಂಡುಕೊಂಡಿರುವ ಪ್ರಕಾರ ಪ್ರತಿದಿನ ಮೂವತ್ತೈದು ನಿಮಿಷವಾದರೂ ವೇಗದ ನಡಿಗೆ ನಡೆಯುವ ಮೂಲಕ ಮಧುಮೇಹದ ಸಾಧ್ಯತೆಯನ್ನು 80%ರಷ್ಟು ಭಾರೀ ಪ್ರಮಾಣದಲ್ಲಿ ಕಡಿಮೆ ಮಾಡಬಹುದು.

ಇಡಿಯ ಧಾನ್ಯಗಳನ್ನು ಹೆಚ್ಚು ಸೇವಿಸಿ

ಮಧುಮೇಹ, ಹೃದಯಾಘಾತ, ಹೃದಯದ ತೊಂದರೆಗಳ ಸಾಧ್ಯತೆಯನ್ನು ಕಡಿಮೆಗೊಳಿಸಲು ನಿತ್ಯವೂ ಆಹಾರದಲ್ಲಿ ಇಡಿಯ ಧಾನ್ಯಗಳನ್ನು ಹೊಂದಿರುವ ಆಹಾರಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸಿ. ಇವು ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಕಡಿಮೆಗೊಳಿಸಿ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.

ನಾರು ಹೆಚ್ಚಿರುವ ಆಹಾರ ಸೇವಿಸಿ

ನಿಮ್ಮ ಆಹಾರದಲ್ಲಿ ನಾರು ಹೆಚ್ಚಿರುವಂತೆ ನೋಡಿಕೊಳ್ಳಿ. ಸಾಧ್ಯವಾದಷ್ಟು ಹಸಿ ತರಕಾರಿ, ಸಿಪ್ಪೆ ಸಹಿತ ತಿನ್ನಬಹುದಾದ ಹಣ್ಣುಗಳು, ಹಸಿಯಾಗಿ ಸೇವಿಸಬಹುದಾದ ಸೊಪ್ಪುಗಳು ಮೊದಲಾದವು ಇನ್ಸುಲಿನ್ ಹೀರಿಕೊಳ್ಳಲು ನೆರವಾಗುತ್ತವೆ. ಇದು ಮಧುಮೇಹವನ್ನು ದೂರವಿರಿಸಲು ನೆರವಾಗುತ್ತದೆ.

ಕಾಫಿ ಕುಡಿಯಿರಿ

ಒಂದು ವೇಳೆ ನಿಮ್ಮ ಮನೆಯಲ್ಲಿ ಟೈಪ್ 2 ಮಧುಮೇಹ ವಂಶವಾಹಿನಿಯಾಗಿ ಹರಿದುಬರುತ್ತಿದ್ದರೆ ಆಗಾಗ ಕಾಫಿ ಕುಡಿಯುವ ಮೂಲಕ ಮಧುಮೇಹ ಆವರಿಸುವ ಸಾಧ್ಯತೆಯನ್ನು ಸುಮಾರು 50% ರಷ್ಟು ಕಡಿಮೆಗೊಳಿಸಬಹುದು ಎಂದು ಒಂದು ಸಂಶೋಧನೆ ತಿಳಿಸುತ್ತದೆ.

ಆರೋಗ್ಯಕರ ಆಹಾರವನ್ನೇ ಸೇವಿಸಿ

ನೋಡಲು ಎಷ್ಟು ಸುಂದರವಾಗಿ ಕಂಡರೂ ಅನಾರೋಗ್ಯಕರವಾದ ಸಿದ್ದ ಆಹಾರಗಳ ಮೋಹಕ್ಕೆ ಬಲಿಯಾಗಬೇಡಿ. ಇದು ಸ್ಥೂಲಕಾಯ ಮತ್ತು ಇದರ ಅಡ್ಡಪರಿಣಾಮಗಳು ಹಲವು ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಮನೆಯ ಆಹಾರವನ್ನೇ ಸೇವಿಸಿ.

ಕೆಂಪು ಮಾಂಸವನ್ನು ಆದಷ್ಟು ಕಡಿಮೆಗೊಳಿಸಿ

ಒಂದು ವೇಳೆ ವಂಶವಾಹಿನಿಯಲ್ಲಿ ಟೈಪ್ 2 ಮಧುಮೇಹದ ಇತಿಹಾಸವಿದ್ದರೆ ಕೆಂಪು ಮಾಂಸವನ್ನು ಸೇವಿಸುವವರಿಗೆ ಮಧುಮೇಹ ಆವರಿಸುವ ಸಾಧ್ಯತೆ 29% ರಷ್ಟು ಹೆಚ್ಚುತ್ತದೆ ಎಂದು ಒಂದು ಸಂಶೋಧನೆ ತಿಳಿಸುತ್ತದೆ. ಆದ್ದರಿಂದ ವಿಶೇಷವಾಗಿ ಕೆಂಪು ಮಾಂಸವನ್ನು ತ್ಯಜಿಸಿ ಬದಲಿಗೆ ಸಾಗರ ಉತ್ಪನ್ನಗಳನ್ನು ಅಂದರೆ ಬಿಳಿಯ ಮಾಂಸವನ್ನು ಆಯ್ದುಕೊಳ್ಳಿ.

ಧ್ಯಾನ ಆಚರಿಸಿ

ಆರೋಗ್ಯವನ್ನು ವೃದ್ಧಿಸುವಲ್ಲಿ ಧ್ಯಾನದ ಪ್ರಭಾವ ಅಪಾರವಾಗಿದ್ದು ಮಧುಮೇಹದ ಸಾಧ್ಯತೆಯನ್ನೂ ದೂರವಿರಿಸುತ್ತದೆ. ಆದ್ದರಿಂದ ವಾರದಕ್ಕೆ ಕೆಲವು ದಿನಗಳಾದರೂ ಸಾಧ್ಯವಾದಷ್ಟು ಹೊತ್ತು ಧ್ಯಾನ ಆಚರಿಸಿ, ಆರೋಗ್ಯವಂತರಾಗಿ.

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Monday, October 3, 2016, 10:11 [IST]
English summary

Surprising Ways To Prevent Getting Diabetes!

As diabetes is one of the most common disorders, most of us would already be aware of its causes and symptoms by now. Known as a metabolic disorder, diabetes involves a condition in which your blood sugar level or the blood glucose level increases due to the decreased production of insulin in your body.
Please Wait while comments are loading...
Subscribe Newsletter