For Quick Alerts
ALLOW NOTIFICATIONS  
For Daily Alerts

ಸೈಲೆಂಟ್ ಕಿಲ್ಲರ್ ಮಧುಮೇಹದ ಆರಂಭಿಕ ಲಕ್ಷಣಗಳು....

By Arshad
|

ಹಿಂದೆ ಪರಂಗಿಯವರ ಕಾಯಿಲೆ ಎಂದೇ ಗುರುತಿಸಲ್ಪಡುತ್ತಿದ್ದ ಡಯಾಬಿಟೀಸ್, ಅಥವಾ ಡಯಾಬಿಟೀಸ್ ಮೆಲ್ಲಿಟಸ್ ಎಂಬ ರೋಗ ಈಗ ಮಧುಮೇಹ ಎಂಬ ಹೆಸರಿನಲ್ಲಿ ದೇಶದಾದ್ಯಂತ ತಾಂಡವವಾಡುತ್ತಿದೆ. ಬಹುತೇಕ ಪ್ರತಿ ಮನೆಯಲ್ಲಿಯೂ ಮಧುಮೇಹಿಗಳಿದ್ದಾರೆ. ರಕ್ತದಲ್ಲಿ ಸಕ್ಕರೆಯ ಮಟ್ಟ ಸಾಮಾನ್ಯಕ್ಕಿಂತ ಕೊಂಚ ಹೆಚ್ಚಿರುವುದು ಇದರ ಸಾಮಾನ್ಯ ಲಕ್ಷಣವಾಗಿದೆ.

ಇದಕ್ಕೆ ಎರಡು ಕಾರಣಗಳಿವೆ. ಮೊದಲನೆಯದು ನಮ್ಮ ದೇಹದಲ್ಲಿ ಉತ್ಪತ್ತಿಯಗುವ ಇನ್ಸುಲಿನ್ ಎಂಬ ರಾಸಾಯನಿಕದ ಪ್ರಮಾಣ ಸಾಕಷ್ಟು ಇಲ್ಲದೇ ಇರುವುದು. ಆಗ ಸಕ್ಕರೆ ಬಳಕೆಯಾಗದೇ ಮೂತ್ರದಲ್ಲಿ ವಿಸರ್ಜಿಸಲ್ಪಡುತ್ತದೆ. ಇದನ್ನು ಟೈಪ್ 1 ಮಧುಮೇಹ ಎಂದು ಕರೆಯಲಾಗುತ್ತದೆ. ಮಗುವಿಗೆ ಮಧುಮೇಹ ಬಂದರೆ ಕಂಡುಹಿಡಿಯುವುದು ಹೇಗೆ?

ಎರಡನೆಯದಾಗಿ ಸಾಕಷ್ಟು ಇನ್ಸುಲಿನ್ ಉತ್ಪತ್ತಿಯಾದರೂ ಸಕ್ಕರೆಯನ್ನು ಬಳಸಿಕೊಳ್ಳಲು ನಮ್ಮ ಜೀವಕೋಶಗಳು ವಿಫಲವಾಗುವ ಮೂಲಕ ಸಕ್ಕರೆ ಬಳಕೆಯಾಗದೇ ವ್ಯರ್ಥವಾಗಿ ಮೂತ್ರದಲ್ಲಿ ಹರಿದು ಹೋಗುತ್ತದೆ. ಇದನ್ನು ಟೈಪ್ 2 ಮಧುಮೇಹ ಎಂದು ಕರೆಯುತ್ತಾರೆ.

ಮಧುಮೇಹದ ಪ್ರಮುಖ ಲಕ್ಷಣಗಳೆಂದರೆ ಸತತವಾಗಿ ಮೂತ್ರಕ್ಕೆ ಅವಸರವಾಗುವುದು, ಅತಿಯಾದ ಹಸಿವು, ಸುಸ್ತು, ತೂಕದಲ್ಲಿ ಇಳಿಕೆ ಅಥವಾ ಏರಿಕೆ, ಗಾಯಗಳಾದರೆ ಮಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದು, ವಾಕರಿಕೆ, ತಲೆನೋವು ಇತ್ಯಾದಿಗಳು. ಮಧುಮೇಹ, ಅಸ್ತಮಾ ನಿಯಂತ್ರಣಕ್ಕೆ ಬೆಂಡೆಕಾಯಿ ರಾಮಬಾಣ

ಹೆಚ್ಚಿನವರಿಗೆ ತಮಗೆ ಮಧುಮೇಹ ಆವರಿಸಿರುವುದೇ ಗೊತ್ತಿರುವುದಿಲ್ಲ. ದೇಹ ಇದರ ಇರುವಿಕೆಯನ್ನು ಹಲವು ರೂಪದಲ್ಲಿ ಪ್ರಕಟಿಸಿದರೂ ನಿರ್ಲಕ್ಷ್ಯದಿಂದ ವೈದ್ಯರ ಬಳಿ ಹೋಗದೇ ಕಡೆಗೊಂದು ದಿನ ಅನಿವಾರ್ಯವಾಗಿ ಹೋಗಬೇಕಾದ ಸಂದರ್ಭ ಬಂದಾಗ ತಡವಾಗಿರುತ್ತದೆ. ಈ ಸೂಚನೆಗಳ ಕಡೆ ಕೊಂಚ ಗಮನ ನೀಡಿದರೆ ಮಧುಮೇಹವನ್ನು ಪ್ರಾರಂಭಿಕ ಹಂತದಲ್ಲಿಯೇ ನಿಯಂತ್ರಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಬನ್ನಿ, ನಿರ್ಲಕ್ಷಿಸಲೇಬಾರದಾದ ಈ ಸೂಚನೆಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ:

ಚರ್ಮದ ಅಸ್ವಾಭಾವಿಕ ಸ್ಥಿತಿಗಳು

ಚರ್ಮದ ಅಸ್ವಾಭಾವಿಕ ಸ್ಥಿತಿಗಳು

ರಕ್ತದಲ್ಲಿ ಇನ್ಸುಲಿನ್ ಪ್ರಮಾಣ ಏರುಪೇರಾದರೆ ಮೊದಲು ಇದರ ಪರಿಣಾಮ ಚರ್ಮದ ಮೇಲಾಗುತ್ತದೆ. ಚರ್ಮದಲ್ಲಿ ಕಪ್ಪು ಕಲೆಗಳಾಗುವುದು, ನೆರಿಗೆ ಮೂಡುವುದು, ಬಣ್ಣ ತಿಳಿಯಾಗುವುದು ಅಥವಾ ಗಾಢವಾಗುವುದು ಮೊದಲಾದವು ಕಂಡುಬಂದರೆ ಮೊದಲು ತಪಾಸಣೆಗೊಳಗಾಗುವುದು ಅಗತ್ಯ.

ಕೇಳುವ ಸಾಮರ್ಥ್ಯ ಕುಂದುವುದು

ಕೇಳುವ ಸಾಮರ್ಥ್ಯ ಕುಂದುವುದು

ಇತ್ತೀಚಿನ ಸಂಶೋಧನೆಯ ಪ್ರಕಾರ ಮಧುಮೇಹದ ಪರಿಣಾಮವಾಗಿ ಕಿವಿಯ ಶ್ರಾವ್ಯಶಕ್ತಿಗೆ ರಕ್ತಸಂಚಾರ ಒದಗಿಸುವ ಸೂಕ್ಷ್ಮನರಗಳ ಮೇಲೂ ಪ್ರಭಾವ ಬೀರುವ ಮೂಲಕ ಕಿವಿಯ ಕೇಳುವಿಕೆಯ ಕ್ಷಮತೆ ಗಮನಾರ್ಹವಾಗಿ ಕಡಿಮೆಯಾಗುತ್ತದೆ.

ಥಟ್ಟನೇ ಉತ್ತಮಗೊಳ್ಳುವ ದೃಷ್ಟಿ

ಥಟ್ಟನೇ ಉತ್ತಮಗೊಳ್ಳುವ ದೃಷ್ಟಿ

ಕೆಲವೊಮ್ಮೆ ರಕ್ತದಲ್ಲಿ ಅಧಿಕವಾದ ಸಕ್ಕರೆಯ ಇರುವಿಕೆಯಿಂದ ಕಣ್ಣುಗಳ ದೃಷ್ಟಿ ತಾತ್ಕಾಲಿಕವಾಗಿ ಉತ್ತಮಗೊಳ್ಳುತ್ತದೆ. ಇದಕ್ಕೆ ದೇಹದ ದ್ರವದಲ್ಲಿ ಏರಿಕೆಯಾಗುವುದೇ ಕಾರಣ. ತನ್ಮೂಲಕ ಕಣ್ಣಿನಲ್ಲಿರುವ ದ್ರವವೂ ಹೆಚ್ಚಳಗೊಂಡು ನಿಮ್ಮ ದೃಷ್ಟಿ ಥಟ್ಟನೇ ಉತ್ತಮಗೊಂಡ ಭಾವನೆ ಮೂಡಬಹುದು.

ಸತತ ತುರಿಕೆ

ಸತತ ತುರಿಕೆ

ಮಧುಮೇಹದ ಮೂಲಕ ರಕ್ತಸಂಚಾರದಲ್ಲಿ ಕೊಂಚ ಬಾಧೆಯುಂಟಾಗುತ್ತದೆ. ಪರಿಣಾಮವಾಗಿ ಹೃದಯದಿಂದ ದೂರವಿರುವ ಪಾದ ಮತ್ತು ಹಸ್ತಗಳಿಗೆ ಸಾಕಷ್ಟು ರಕ್ತ ದೊರಕದೇ ಆರ್ದ್ರತೆಯ ಕೊರತೆಯಿಂದ ಚರ್ಮ ಒಣಗುತ್ತದೆ. ಇದರಿಂದ ಆ ಭಾಗಗಳಲ್ಲಿ ಸತತವಾಗಿ ತುರಿಕೆ ಪ್ರಾರಂಭವಾಗುತ್ತದೆ.

ಕಚಗುಳಿಯ ಸಂವೇದನೆ

ಕಚಗುಳಿಯ ಸಂವೇದನೆ

ಮಧುಮೇಹಿಗಳ ದೇಹದಲ್ಲಿ ಅಲ್ಲಲ್ಲಿ ಕಚಗುಳಿ ಇಟ್ಟಂತೆ ಅನುಭವವನ್ನು ಪಡೆಯುತ್ತಾರೆ. ನಿಮಗೂ ಹೀಗೇ ಆಗುತ್ತಿದ್ದರೆ ತಕ್ಷಣ ತಪಾಸಣೆಗೆ ಒಳಪಡುವುದು ಅನಿವಾರ್ಯ.

ಸತತ ಸೋಂಕು

ಸತತ ಸೋಂಕು

ಮಧುಮೇಹ ಪ್ರಾರಂಭವಾಗುವಾಗ ದೇಹದ ರೋಗ ನಿರೋಧಕ ಶಕ್ತಿ ಕೊಂಚ ಉಡುಗುವ ಕಾರಣ ರೋಗಿಗಳು ವಿವಿಧ ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳ ಧಾಳಿಗೆ ಸುಲಭವಾಗಿ ತುತ್ತಾಗುತ್ತಾರೆ.

ಉಸಿರಿನಲ್ಲಿ ದುರ್ವಾಸನೆ

ಉಸಿರಿನಲ್ಲಿ ದುರ್ವಾಸನೆ

ಒಂದು ವೇಳೆ ನಿಮ್ಮ ಉಸಿರಿನಲ್ಲಿ ದುರ್ವಾಸನೆಯನ್ನು ನಿಮ್ಮ ಮನೆಯವರು ಗಮನಿಸಿದರೆ, ಅದರಲ್ಲೂ ಬಾಯಿಯ ಸ್ವಚ್ಛತೆಯನ್ನು ನೀವು ಕಾಪಾಡಿಕೊಂಡ ಬಳಿಕವೂ ದುರ್ವಾಸನೆ ದೂರಾಗದಿದ್ದರೆ ಮಧುಮೇಹದ ಪರೀಕ್ಷೆಯಾಗಲೇ ಬೇಕು ಎಂಬುದನ್ನು ಇದು ಸೂಚಿಸುತ್ತದೆ. ಏಕೆಂದರೆ ಬಾಯಿಗೆ ಲಭಿಸುವ ಲಾಲಾರಸದಲ್ಲಿಯೂ ಸಕ್ಕರೆ ಹೆಚ್ಚಿದ್ದು ಇಲ್ಲಿ ಬ್ಯಾಕ್ಟೀರಿಯಾಗಳು ಸಕ್ಕರೆಯನ್ನು ಶೀಘ್ರವಾಗಿ ಕೊಳೆಸುತ್ತವೆ.

ದೇಹದ ತೂಕದಲ್ಲಿ ಏರುಪೇರು....

ದೇಹದ ತೂಕದಲ್ಲಿ ಏರುಪೇರು....

ನಿಮಗೆ ಅರಿವಿಲ್ಲದೇ ದಿನೇ ದಿನೇ ನಿಮ್ಮ ತೂಕ ಇಳಿಮುಖವಾಗುತ್ತಿರುವುದು ಇನ್ನೊಂದು ಸ್ಪಷ್ಟ ಸೂಚನೆಯಾಗಿದೆ. ರಕ್ತದಲ್ಲಿ ಸಕ್ಕರೆ ಇಲ್ಲದಿದ್ದರೆ ಅಥವಾ ಇದ್ದಿದ್ದೂ ಬಳಕೆಯಾಗದೇ ಇದ್ದರೆ ಜೀವಕೋಶಗಳಾದರೂ ಎಲ್ಲಿಂದ ತಮ್ಮ ಸಾಮರ್ಥ್ಯಕ್ಕೆ ಪೂರಕವಾದ ಕೆಲಸಗಳನ್ನು ನಿರ್ವಹಿಸಲಾಗುತ್ತದೆ? ಆಗ ಅನಿವಾರ್ಯವಾಗಿ ದೇಹಕ್ಕೆ ಸಂಗ್ರಹವಾಗಿದ್ದ ಕೊಬ್ಬನ್ನು ಬಳಸಿಕೊಳ್ಳಬೇಕಾಗಿ ಬರುತ್ತದೆ. ಇದು ಶೀಘ್ರವಾಗಿ ತೂಕ ಇಳಿಯಲು ಕಾರಣವಾಗುತ್ತದೆ.

ಪದೇ ಪದೇ ಹಸಿವು!

ಪದೇ ಪದೇ ಹಸಿವು!

ಮಧುಮೇಹ ಆವರಿಸುತ್ತಿದ್ದಂತೆಯೇ ಹಸಿವೂ ಹೆಚ್ಚಾಗತೊಡಗುತ್ತದೆ. ಇಡಿಯ ದಿನ ಏನಾದರೂ ತಿನ್ನುತ್ತಲೇ ಇರಬೇಕೆಂದೆನಿಸುತ್ತದೆ. ಏಕೆಂದರೆ ನಮ್ಮ ಜೀವಕೋಶಗಳಿಗೆ ಸಕ್ಕರೆ ತಲುಪಲೇ ಇಲ್ಲವಾದುದರಿಂದ ಮೆದುಳು ಹೆಚ್ಚಿನ ಸಕ್ಕರೆಯನ್ನು ಒದಗಿಸಲು ಹಸಿವಿನ ಮೂಲಕ ಆಜ್ಞೆ ನೀಡುವ ಕಾರಣ ಹೆಚ್ಚಿನ ಆಹಾರವನ್ನು ಸೇವಿಸಲು ಅವಸರವಾಗುತ್ತದೆ.

ಕಾಡುವ ಸುಸ್ತು

ಕಾಡುವ ಸುಸ್ತು

ದಿನಂಪ್ರತಿ ಜೀವಕೋಶಗಳಿಗೆ ಸಕ್ಕರೆಯ ಪ್ರಮಾಣ ಕಡಿಮೆಯಾಗುತ್ತಾ ಹೋಗುವುದರಿಂದ ದೇಹದ ಸಕಲ ಅಂಗಗಳು ತಮ್ಮ ಕಾರ್ಯಕ್ಷಮತೆಯನ್ನು ಕಳೆದುಕೊಳ್ಳುತ್ತಾ ಬರುತ್ತವೆ. ಇದರಿಂದಾಗಿ ದಿನದ ಚಟುವಟಿಕೆಗಳಿಗೆ ಶಕ್ತಿ ಸಾಲದೇ ಸುಸ್ತು ಬೇಗನೇ ಆವರಿಸುತ್ತದೆ. ಒಂದು ವೇಳೆ ಈ ಪರಿಸ್ಥಿತಿ ಎದುರಾದರೆ ತಡಮಾಡದೇ ಪರೀಕ್ಷೆಗೆ ಒಳಗಾಗಬೇಕಾಗಿದೆ.

English summary

Surprising Symptoms Of Diabetes That You Never Knew!

Diabetes, also known as diabetes mellitus, is classified as a group of metabolic disorders where the affected person's blood sugar/blood glucose level is higher than normal. The blood sugar level in a diabetic person can increase when the insulin produced in the body is very low or because the cells of the body do not respond well to the insulin produced. . Here are a few surprising symptoms of diabetes which you must never ignore!
Story first published: Wednesday, July 20, 2016, 13:23 [IST]
X
Desktop Bottom Promotion