For Quick Alerts
ALLOW NOTIFICATIONS  
For Daily Alerts

ಗ್ರೀನ್ ಟೀನಲ್ಲಿದೆ ಮಧುಮೇಹ ನಿಯಂತ್ರಿಸುವ ಶಕ್ತಿ

By Manu
|

ಮಧುಮೇಹ ಎಂದಾಕ್ಷಣ ಕೆಲವರಲ್ಲಿ ಅಳುಕಿನ ಭಾವ ಎದುರಾಗುತ್ತದೆ. ಇದರಿಂದ ತಮ್ಮ ಜೀವನವೇ ಮುಗಿದ ಹಾಗೆ ಎಂದು ಹೆಚ್ಚಿನವರು ಭಾವಿಸುತ್ತಾರೆ. ಇನ್ನು ಕೆಲವರು ಅನೇಕ ಔಷಧಿ ಮತ್ತು ಮಾತ್ರೆಗಳನ್ನು ಸೇವಿಸುತ್ತಾ ನರಳುತ್ತಿರುತ್ತಾರೆ. ತಾವು ಸೇವಿಸುವ ಔಷಧಿಗಳಿಂದ ಕೆಲವರಿಗೆ ಅಡ್ಡಪರಿಣಾಮಗಳು ಉಂಟಾಗಿ ಅನೇಕ ರೀತಿಯ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಈ ನಿಟ್ಟಿನಲ್ಲಿ ಬೋಲ್ಡ್ ಸ್ಕೈ ತಾಣವು ನಿಮ್ಮ

ಮನೆಯಲ್ಲಿಯೇ ಸಿಗುವ ವಸ್ತುಗಳಿಂದ ಪ್ರಾಕೃತಿಕವಾಗಿ ಮಧುಮೇಹವನ್ನು ನಿಯಂತ್ರಿಸಲು ಸಹಕಾರಿಯಾಗುವ ಸುಲಭದ ಸಂಗತಿಗಳನ್ನು ನಿಮ್ಮ ಉಪಯೋಗಕ್ಕಾಗಿ ನೀಡಿದೆ. ಮಧುಮೇಹದಿಂದ ಬಳಲುತ್ತಿರುವವರು ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದೆ ಮತ್ತು ರಕ್ತದೊತ್ತದ ಮಟ್ಟವನ್ನು ಸಮತೋಲನದಲ್ಲಿಡಲು ಸರ್ವಪ್ರಯತ್ನ ಮಾಡಬೇಕಿದೆ. ನಿರ್ಲಕ್ಷಿಸಿದರೆ, ಮಧುಮೇಹದ ತೊಂದರೆಯು ಹೆಚ್ಚಾಗಿ ಅಪಾಯವುಂಟಾಗಲು ಕಾರಣವಾಗುತ್ತದೆ.

Reasons why diabetics should start drinking green tea

ಹಲವಾರು ವರ್ಷಗಳಿಂದ ಮಧುಮೇಹಕ್ಕೆ ಮನೆಮದ್ದುಗಳಿಂದ ನಿಯಂತ್ರಿಸುವ ವಿಧಾನಗಳು ಹೆಚ್ಚು ಪರಿಣಾಮಕಾರಿಯಾಗಿದೆ. ಇದರಲ್ಲಿ ಗ್ರೀನ್ ಟೀ ಸಹ ಒಂದು ಅತ್ಯುತ್ತಮ ವಿಧಾನವಾಗಿದೆ. ಮಧುಮೇಹವನ್ನು ಪರಿಣಾಮಕಾರಿಯಾಗಿ ನಿವಾರಿಸಲು ಗ್ರೀನ್ ಟೀ ಸೇವನೆ ಹೆಚ್ಚು ಉಪಕಾರಿಯಾಗಿದೆ. ಇನ್ನೂ ಹೆಚ್ಚಿನ ವಿಧಾನಗಳಿದ್ದು, ಈ ಲೇಖನದಲ್ಲಿ ಗ್ರೀನ್ ಟೀ ಉಪಯೋಗದ ಬಗ್ಗೆ ನಿಮಗಾಗಿ ವಿಶಿಷ್ಟ ಸಂಗತಿಗಳನ್ನು ನೀಡಲಾಗಿದ್ದು, ಈ ವಿಧಾನಗಳು ಮಧುಮೇಹ ನಿಯಂತ್ರಣಕ್ಕೆ ರಾಮಬಾಣವಿದ್ದಂತೆ

ಒಂದನೇ ವರ್ಗದ ಮಧುಮೇಹದಲ್ಲಿ, ದೇಹವು ಇನ್ಸುಲಿನ್ ಉತ್ಪತ್ತಿಗೊಳಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳಲಿದ್ದು, ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಹೆಚ್ಚಿಸಲು ಕಾರಣವಾಗಿದೆ. ಗ್ರೀನ್ ಟೀನಿಂದ ಇನ್ಸುಲಿನ್ ವೃದ್ಧಿಸುವ ಸತ್ವವು ಹೇರಳವಾಗಿದೆ. ಇದರಿಂದ ಮಧುಮೇಹವನ್ನು ನಿಯಂತ್ರಿಸಿ ತಡೆಯಲು ನೆರವಾಗಲಿದೆ. ಪಿತ್ತಕೋಶದ ಕೋಶಗಳು ಹಾನಿಯಾಗುವುದನ್ನು ನಿಯಂತ್ರಿಸಿ ಪಿತ್ತಕೋಶವು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಮಾಡಿ ಇನ್ಸುಲಿನ್ ಅನ್ನು ವೃದ್ಧಿಗೊಳಿಸುತ್ತದೆ. ಉತ್ತಮ ಉತ್ಕರ್ಷಣ ನಿರೋಧಕವಾದ ಎಪಿಗ್ಯಾಲ್ಲೋಕ್ಯಾಟೆಚಿನ್ ಗ್ಯಾಲ್ಲೇಟ್ ಸತ್ವವು ಗ್ರೀನ್ ಟೀನಲ್ಲಿ ಇದ್ದು, ಒಂದನೇ ವರ್ಗದ ಮಧುಮೇಹವನ್ನು ನಿಯಂತ್ರಿಸಲು ಹೆಚ್ಚು ಉಪಯುಕ್ತ

ಗ್ರೀನ್ ಟೀನಲ್ಲಿ ಪಾಲಿಫೆನಾಲ್ಸ್ ಸತ್ವವು ಹೇರಳವಾಗಿದ್ದು, ಇದು ಒಂದು ಉತ್ತಮ ಮಧುಮೇಹ ನಿರೋಧಕ ಸತ್ವವಾಗಿದೆ. ಜೊತೆಗೆ ಆಕ್ಸಿಡೇಟಿವ್ ಒತ್ತಡವನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಇದರಿಂದ ರಕ್ತದಂಶದಲ್ಲಿ ಸಕ್ಕರೆ ಪ್ರಮಾಣವು ವೃದ್ಧಿಯಾಗಿ ಮಧುಮೇಹ ನಿಯಂತ್ರದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಸಣ್ಣ ಪ್ರಮಾಣದಲ್ಲಿರುವ ಕೆಫೇನ್ ಅಂಶವು ಇನ್ಸುಲಿನ್ ಸತ್ವದ ಸೂಕ್ಷ್ಮತೆಯನ್ನು ಕಾಪಾಡಲು ಹೆಚ್ಚು ಸಹಕಾರಿಯಾಗಲಿದೆ.

ಗ್ರೀನ್ ಟೀನಲ್ಲಿರುವ ಕಾಟೆಚಿನ್ಸ್ ರಕ್ತದಲ್ಲಿನ ಸಕ್ಕರೆ ಸಮಸ್ಯೆ ಮತ್ತು ಸಂಚಲನದ ಸಮಸ್ಯೆಯನ್ನು ಸುಲಭವಾಗಿ ನಿವಾರಿಸುತ್ತದೆ. ಇದರಿಂದ ಉಬ್ಬಸ ಕಡಿಮೆಯಾಗಿ ಆಯಾಸವು ಕಡಿಮೆಯಾಗುತ್ತದೆ. ಮೇದಾಮ್ಲ ಮತ್ತು ಟ್ರೈಗ್ಲಿಸರಾಯಿಡ್ ಮಟ್ಟವನ್ನು ನಿಯಂತ್ರಿಸಲು ಗ್ರೀನ್ ಟೀ ಸಹಕಾರಿಯಾಗಿದೆ. ಅಲ್ಲದೆ ಮಧುಮೇಹದ ತೊಂದರೆಯಿಂದ ಉಂಟಾಗುವ ಅಪಾಯದಿಂದ ದೂರವಾಗಲು ಗ್ರೀನ್ ಟೀ ಹೆಚ್ಚು ಉಪಯುಕ್ತವಾಗಿದೆ.

English summary

Reasons why diabetics should start drinking green tea

Green tea is one such ingredient that has a host of health benefits and one of them is prevention and control of diabetes. There are some more home remedies to keep diabetes in control. Here are ways green tea can benefit diabetics:
X
Desktop Bottom Promotion