For Quick Alerts
ALLOW NOTIFICATIONS  
For Daily Alerts

ಕ್ಯಾಪ್ಸಿಕಂ-ಮಧುಮೇಹಿಗಳ ಪಾಲಿನ ಸಂಕಷ್ಟಹರ ತರಕಾರಿ

|

ಮಧುಮೇಹಿಗಳಿಗೆ ಹಲವಾರು ಸಂಕಷ್ಟಗಳು, ಅದರ ಕಷ್ಟ ಅನುಭವಿಸಿದವರಿಗೆಯೇ ಗೊತ್ತು, ಒಮ್ಮೆ ಈ ಕಾಯಿಲೆ ಬಂತೆಂದರೆ ಸಾಕು ಅದು ಅವರನ್ನು ಹಿಂಡಿ ಹಿಪ್ಪೆ ಮಾಡಿಬಿಡುತ್ತದೆ. ಕೆಲವರು ಇದನ್ನು ನಿಯಂತ್ರಿಸಿಕೊಂಡು ಜೀವನ ಸಾಗಿಸಿದರೆ, ಇನ್ನೂ ಕೆಲವರು ಇದರ ಮುಂದೆ ಹಣ್ಣುಗಾಯಿ, ನೀರುಗಾಯಿ ಆಗಿಬಿಡುತ್ತಾರೆ. ಅದರಲ್ಲೂ ಮಧುಮೇಹಿಗಳಿಗೆ ಊಟವನ್ನು ಬಡಿಸುವಾಗ ಜಾಗರೂಕತೆಯಿಂದ ಬಡಿಸಬೇಕಾಗುತ್ತದೆ. ಹಣ್ಣು ಮತ್ತು ತರಕಾರಿಗಳನ್ನು ನೀಡುವಾಗಲೂ ಅಷ್ಟೇ, ನೋಡಿಕೊಂಡು ನೀಡಬೇಕಾಗುತ್ತದೆ.

ಒಂದು ತಿಂದರೆ ಹೆಚ್ಚು, ಇನ್ನೊಂದು ತಿಂದರೆ ಕಡಿಮೆ ಎಂಬಂತಹ ಸ್ಥಿತಿಯಲ್ಲಿ ಮಧುಮೇಹಿಗಳು ಬದುಕುತ್ತಾರೆ. ಸಕ್ಕರೆ ಎಲ್ಲಿ ಹೆಚ್ಚಾಗುತ್ತದೊ, ಅಥವಾ ಕಡಿಮೆಯಾಗುತ್ತದೊ ಎಂಬ ಆತಂಕ ಪ್ರತಿ ಮಧುಮೇಹಿಯದ್ದಾಗಿರುತ್ತದೆ. ಹಾಗಾಗಿ, ಇವೆಲ್ಲದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಎನ್ನುವಂತೆ, ಇವರ ದಿನನಿತ್ಯ ಆಹಾರ ಕ್ರಮದಲ್ಲಿ, ದಪ್ಪ ಮೆಣಸಿನಕಾಯಿ, ದೊಡ್ಡ ಮೆಣಸಿನಕಾಯಿ ಅಥವಾ ಕ್ಯಾಪ್ಸಿಕಂ ಸೇರಿಸುವುದು ಒಳ್ಳೆಯ ವಿಚಾರವೇ. ಇದು ರಕ್ತದಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ ಮತ್ತು ಅದಕ್ಕೆ ಸಂಬಂಧಿಸಿದ ಆರೋಗ್ಯದ ಸಮಸ್ಯೆಗಳನ್ನು ಸಹ ನಿವಾರಿಸುತ್ತದೆ. ಹಾಗಾದರೆ, ಬನ್ನಿ ಮಧುಮೇಹಿ ರೋಗಹಿಗಳು ಕ್ಯಾಪ್ಸಿಕಂ ಸೇವಿಸುವುದರಿಂದ ದೊರೆಯುವ ಪ್ರಯೋಜನಗಳ ಕುರಿತು ತಿಳಿದುಕೊಳ್ಳೋಣ...

ಕಾರ್ಬೊಹೈಡ್ರೇಟ್ ಮತ್ತು ಲಿಪಿಡ್‌ಗಳ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ

ಕಾರ್ಬೊಹೈಡ್ರೇಟ್ ಮತ್ತು ಲಿಪಿಡ್‌ಗಳ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ

ಈ ಕ್ಯಾಪ್ಸಿಕಂಗಳಲ್ಲಿ ಅಡಗಿರುವ ಅಂತೋಸೈಯಾನಿನ್‌ಗಳು ಆಲ್ಫಾ-ಗ್ಲುಕೊಸಿಡೇಸ್ ಮತ್ತು ಲಿಪೇಸ್ ಎಂಬ ಕಿಣ್ವಗಳ ಕಾರ್ಯವನ್ನು ಪ್ರತಿಬಂಧಿಸುತ್ತದೆ. ಆಲ್ಫಾ-ಗ್ಲುಕೊಸಿಡೇಸ್ ಕಿಣ್ವವು ಕಾರ್ಬೊಹೈಡ್ರೇಟ್ ಅನ್ನು ಗ್ಲೂಕೋಸ್ ಆಗಿ ಪರಿವರ್ತಿಸುತ್ತದೆ. ಮೇದೋಜೀರಕ ಗ್ರಂಥಿಯಲ್ಲಿ ಇರುವ ಲಿಪೆಸ್ ಕೊಬ್ಬನ್ನು ಕರಗಿಸುತ್ತದೆ ಅಥವಾ ಕೊಬ್ಬಿನ ಆಮ್ಲಗಳಾಗಿ ಪರಿವರ್ತಿಸುತ್ತದೆ.

ಕಾರ್ಬೊಹೈಡ್ರೇಟ್ ಮತ್ತು ಲಿಪಿಡ್‌ಗಳ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ

ಕಾರ್ಬೊಹೈಡ್ರೇಟ್ ಮತ್ತು ಲಿಪಿಡ್‌ಗಳ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ

ಒಂದು ವೇಳೆ ಕಾರ್ಬೊಹೈಡ್ರೇಟ್ ಮತ್ತು ಲಿಪಿಡ್‌ಗಳು ನಿಧಾನಗೊಂಡರೆ, ರಕ್ತದಲ್ಲಿ ಸಕ್ಕರೆ ಮತ್ತು ಲಿಪಿಡ್‌ಗಳ ಪ್ರಮಾಣವು ಸಹ ಕಡಿಮೆಯಾಗುತ್ತದೆ. ಹೀಗೆ ಇದು ನಿಮಗೆ ಹೈಪರ್‌ಗ್ಲಿಸೆಮಿಯಾ ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ದೇಹದಲ್ಲಿನ ರಕ್ತದಲ್ಲಿ ಗ್ಲುಕೋಸ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.

ಶಕ್ತಿಶಾಲಿ ಆಂಟಿಆಕ್ಸಿಡೆಂಟ್ ಚಟುವಟಿಕೆಯನ್ನು ನೀಡುತ್ತದೆ

ಶಕ್ತಿಶಾಲಿ ಆಂಟಿಆಕ್ಸಿಡೆಂಟ್ ಚಟುವಟಿಕೆಯನ್ನು ನೀಡುತ್ತದೆ

ನಿಮ್ಮ ರಕ್ತದಲ್ಲಿ ಗ್ಲೂಕೋಸ್ ಮಟ್ಟ ಮತ್ತು ಹೈಪರ್‌ಲಿಪಿಡೆಮಿಯಾ ಹೆಚ್ಚಾಗುವುದರಿಂದಾಗಿ, ನೀವು ಇನ್ನಷ್ಟು ಆಕ್ಸಿಡೇಟಿವ್ ಒತ್ತಡಕ್ಕೆ ಒಳಗಾಗುತ್ತೀರಿ. ಕ್ಯಾಪ್ಸಿಕಂನಲ್ಲಿ ಅಧಿಕ ಪ್ರಮಾಣದ ಫೈಟೊಕೆಮಿಕಲ್‌ಗಳು ಇರುತ್ತವೆ. ಇವುಗಳು ಶಕ್ತಿಶಾಲಿ ಆಂಟಿಆಕ್ಸಿಡೆಂಟ್‌ಗಳಾಗಿ ವರ್ತಿಸುತ್ತವೆ.

ಶಕ್ತಿಶಾಲಿ ಆಂಟಿಆಕ್ಸಿಡೆಂಟ್ ಚಟುವಟಿಕೆಯನ್ನು ನೀಡುತ್ತದೆ

ಶಕ್ತಿಶಾಲಿ ಆಂಟಿಆಕ್ಸಿಡೆಂಟ್ ಚಟುವಟಿಕೆಯನ್ನು ನೀಡುತ್ತದೆ

ಈ ಘಟಕಾಂಶಗಳು ಆಕ್ಸಿಡೇಟಿವ್ ಒತ್ತಡದಿಂದ ಬಿಡುಗಡೆಯಾದ ಅಪಾಯಕಾರಿ ಫ್ರೀ ರ‍್ಯಾಡಿಕಲ್‌ಗಳನ್ನು ನಿವಾರಿಸುತ್ತವೆ ಮತ್ತು ನಿಮಗೆ ಮಧುಮೇಹದಿಂದ ಬರುವ ಹಲವಾರು ಆರೋಗ್ಯದ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತವೆ.

ಕ್ಯಾಲೋರಿಗಳು ಕಡಿಮೆ ಇರುತ್ತವೆ

ಕ್ಯಾಲೋರಿಗಳು ಕಡಿಮೆ ಇರುತ್ತವೆ

ಒಂದು ವೇಳೆ ನಿಮಗೆ ಅನುವಂಶಿಕವಾಗಿ ಮಧುಮೇಹದ ಸಮಸ್ಯೆಯಿದ್ದಲ್ಲಿ, ನಿಮಗೂ ಸಹ ಮಧುಮೇಹ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಕ್ಯಾಪ್ಸಿಕಂ ಸೇವಿಸುವ ಮೂಲಕ, ವರ್ಕ್ ಔಟ್, ತೂಕ ಕಡಿಮೆ ಮಾಡಿಕೊಳ್ಳುವುದು ಮತ್ತು ಇನ್ನಿತರ ಚಟುವಟಿಕೆಗಳ ಮೂಲಕ ನೀವು ನಿಮ್ಮ ದೇಹದಲ್ಲಿನ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು.

ಕ್ಯಾಲೋರಿಗಳು ಕಡಿಮೆ ಇರುತ್ತವೆ

ಕ್ಯಾಲೋರಿಗಳು ಕಡಿಮೆ ಇರುತ್ತವೆ

ಕ್ಯಾಪ್ಸಿಕಂನಲ್ಲಿ ಕ್ಯಾಪ್ಸಾಸಿನ್ ಎಂಬ ಅಂಶವು ಇರುತ್ತದೆ. ಇದು ಕೊಬ್ಬನ್ನು ದಹಿಸಲು ಸಹಕರಿಸುತ್ತದೆ ಮತ್ತು ನಿಮ್ಮ ಜೀರ್ಣ ಕ್ರಿಯೆಯನ್ನು ಹೆಚ್ಚಿಸುತ್ತದೆ. ಆ ಮೂಲಕ ಇದು ಸ್ಥೂಲಕಾಯವನ್ನು ನಿಯಂತ್ರಿಸುತ್ತದೆ ಮತ್ತು ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ.

 ಗಮನದಲ್ಲಿರಿಸಬೇಕಾದ ಸಲಹೆಗಳು

ಗಮನದಲ್ಲಿರಿಸಬೇಕಾದ ಸಲಹೆಗಳು

ಜರ್ನಲ್ ನ್ಯಾಚುರಲ್ ಪ್ರೊಡಕ್ಟ್ಸ್ ರಿಸರ್ಚ್ ಪತ್ರಿಕೆಯಲ್ಲಿ ಪ್ರಕಟಗೊಂಡ ಅಧ್ಯಯನದ ಪ್ರಕಾರ ಹಳದಿ ಬಣ್ಣದ ಕ್ಯಾಪ್ಸಿಕಂ, ಹಸಿರು ಬಣ್ಣದ ಕ್ಯಾಪ್ಸಿಕಂಗಿಂತ ಒಳ್ಳೆಯದು ಎಂದು ತಿಳಿದುಬಂದಿದೆ. ಈ ಹಳದಿ ಕ್ಯಾಪ್ಸಿಕಂ ರಕ್ತದಲ್ಲಿ ಸಕ್ಕರೆ ಪ್ರಮಾನವನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.

 ಗಮನದಲ್ಲಿರಿಸಬೇಕಾದ ಸಲಹೆಗಳು

ಗಮನದಲ್ಲಿರಿಸಬೇಕಾದ ಸಲಹೆಗಳು

ಅದರಲ್ಲೂ ಮಧುಮೇಹಿಗಳಿಗೆ ಬೇಯಿಸಿದ ಕ್ಯಾಪ್ಸಿಕಂಗಿಂತ, ಕಚ್ಛಾ ಕ್ಯಾಪ್ಸಿಕಂ ಒಳ್ಳೆಯದು ಎಂದು ಹೇಳಲಾಗುತ್ತದೆ. ಸಲಾಡ್ ಮಾಡುವಾಗ ನೀವು ಕ್ಯಾಪ್ಸಿಕಂ ಅನ್ನು ಇತರೆ ತರಕಾರಿಗಳ ಜೊತೆಗೆ ಬೆರೆಸಿಕೊಳ್ಳಬಹುದು. ಅದರ ಮೇಲೆ ಸ್ವಲ್ಪ ಚಕ್ಕೆ ಪುಡಿಯನ್ನು ಚಿಮುಕಿಸಿಕೊಂಡು ಸ್ನ್ಯಾಕ್ಸ್ ರೀತಿ ಸೇವಿಸಿ.

English summary

Reasons why bell pepper is good for diabetics

Diabetics have to follow strict diet rules and think twice before putting anything on their plate. And this limits the intake of various fruits and vegetables. However, adding bell pepper, also known as capsicum, to your diet not only controls your blood glucose level but also lowers the risk of various health complications associated with it. Here’s how capsicum helps:
X
Desktop Bottom Promotion