For Quick Alerts
ALLOW NOTIFICATIONS  
For Daily Alerts

ಮಧುಮೇಹ ನಿಯಂತ್ರಣಕ್ಕೆ, ಪ್ರಯತ್ನಿಸಿ ನೈಸರ್ಗಿಕ ಆಹಾರಗಳು

|

ಮಧುಮೇಹ ಎಂದಾಕ್ಷಣ ಹೆಚ್ಚಿನವರು ಇದು ಸಕ್ಕರೆ ತಿಂದರೆ ಬರುವಂತಹ ಕಾಯಿಲೆ ಎಂದೇ ತಿಳಿದಿದ್ದಾರೆ. ಆದರೆ ಇದು ತಪ್ಪು, ಮಧುಮೇಹ ಬಂದಿರುವ ಕಾರಣದಿಂದಲೇ ಸಕ್ಕರೆ ತಿನ್ನಲಾಗದೇ ಹೊರತು ಸಕ್ಕರೆ ತಿನ್ನುವುದರಿಂದ ಸಕ್ಕರೆ ಕಾಯಿಲೆ ಬರುವುದಿಲ್ಲ. ಮಧುಮೇಹ ಎಂದರೆ ನಮ್ಮ ಆಹಾರದ ಮೂಲಕ ಸೇವಿಸುವ ಸಕ್ಕರೆಯನ್ನು ಬಳಸಿಕೊಳ್ಳಲು ಸಾಧ್ಯವಾಗದಿರುವ ಅಸಹಾಯಕತೆ ಎಂದು ಸುಲಭ ಪದಗಳಲ್ಲಿ ಹೇಳಬಹುದು. ಇದಕ್ಕೆ ಮುಖ್ಯ ಕಾರಣ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಇನ್ಸುಲಿನ್ ಎಂಬ ಕಿಣ್ವ. ಮೇದೋಜೀರಕ ಗ್ರಂಥಿ ಸ್ರವಿಸುವ ಈ ಕಿಣ್ವ ಸಕ್ಕರೆಯನ್ನು ಹೀರಿಕೊಳ್ಳಲು ತುಂಬಾ ಅಗತ್ಯ. ಮಧುಮೇಹವನ್ನು ನಿಯಂತ್ರಿಸುವ ಶಕ್ತಿ ಹಸಿ ತರಕಾರಿಯಲ್ಲಿದೆ

ಒಂದು ವೇಳೆ ನಮ್ಮ ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಉತ್ಪತ್ತಿಯಾಗದೇ ಇದ್ದರೆ ಆಗ ಸಕ್ಕರೆ ಬಳಸಲ್ಪಡದೇ ಮೂತ್ರದ ಮೂಲಕ ಹಾಗೇ ಹೊರಹೋಗುತ್ತದೆ. ಇದಕ್ಕೆ ಟೈಪ್ 1 ಮಧುಮೇಹ ಎಂದು ಕರೆಯುತ್ತಾರೆ. ಅದೇ ಒಂದು ವೇಳೆ ಸಾಕಷ್ಟು ಇನ್ಸುಲಿನ್ ಉತ್ಪತ್ತಿಯಾಗಿಯೂ ಬಳಸಲ್ಪಡಲು ಅಸಮರ್ಥವಾದರೆ ಇದಕ್ಕೆ ಟೈಪ್ 2 ಮಧುಮೇಹ ಎಂದು ಕರೆಯುತ್ತಾರೆ.

Miraculous Foods To Cure Diabetes Naturally

ಮಧುಮೇಹ ಆವರಿಸಲು ಕೆಲವಾರು ಕಾರಣಗಳಿವೆ. ಇದರಲ್ಲಿ ಪ್ರಮುಖವಾದುದು ವಂಶಪಾರಂಪರ್ಯವಾಗಿ ಬಂದಿರುವ ಮಧುಮೇಹದ ಇತಿಹಾಸ. ಇನ್ನುಳಿದಂತೆ ಮೇದೋಜೀರಕ ಗ್ರಂಥಿಯ ಕ್ಷಮತೆ ಉಡುಗುವುದು, ಮಧ್ಯಪಾನ, ಚಟುವಟಿಕೆಯಿಲ್ಲದ ಜೀವನ, ಸ್ಥೂಲಕಾಯ ಇತ್ಯಾದಿಗಳು ಮಧುಮೇಹಕ್ಕೆ ನೇರವಾಗಿ ಕಾರಣವಲ್ಲದಿದ್ದರೂ ಮುಂದೆಂದೋ ಬರಬೇಕಾಗಿದ್ದ ಮಧುಮೇಹವನ್ನು ಇಂದೇ ಬರುವಂತೆ ಮಾಡುತ್ತವೆ. ಒಂದೇ ತಿಂಗಳಿನಲ್ಲಿ ಮಧುಮೇಹ ನಿಯಂತ್ರಣ-ಚಾಲೆಂಜ್‌ಗೆ ರೆಡಿನಾ?

ಮಧುಮೇಹ ಬಂದಾಕ್ಷಣ ಸಾವು ಬರುತ್ತದೆ ಎಂದೇ ಆಡುವವರಿದ್ದಾರೆ. ಆದರೆ ಸರಿಯಾದ ಆರೈಕೆ, ಆಹಾರ ನಿಯಂತ್ರಣ, ದೈಹಿಕ ಚಟುವಟಿಕೆ ಇಲ್ಲದಿದ್ದರೆ ಸಾವು ಸಹಾ ಅಗಮಿಸಬಹುದು. ಇದಕ್ಕೂ ಮೊದಲು ಮೂತ್ರಪಿಂಡಗಳ ವೈಫಲ್ಯ, ಕಣ್ಣುಗಳ ದೃಷ್ಟಿ ಕುಂದುವುದು, ಗ್ರಾಂಗ್ರಿನ್ ಅಂದರೆ ಗಾಯಗಳು ಮಾಗದೇ ಕೊಳೆಯುವುದು, ರಕ್ತಪರಿಚಲನಾ ವ್ಯವಸ್ಥೆ ಕುಸಿಯುವುದು, ನರವ್ಯವಸ್ಥೆ ಶಿಥಿಲಗೊಳ್ಳುವುದು, ಅತೀವ ತೂಕದಲ್ಲಿ ಇಳಿಕೆ ಮೊದಲಾದವು ಎದುರಾಗುತ್ತವೆ. ಬದಲಿಗೆ ಸೂಕ್ತ ಚಿಕಿತ್ಸೆ, ನಿಯಮಿತ ಔಷಧಿ ಸೇವನೆ, ಆರೋಗ್ಯಕರ ಆಹಾರ ಸೇವನೆ, ದೈಹಿಕ ವ್ಯಾಯಮ ಮೊದಲಾದವುಗಳಿಂದ ಮಧುಮೇಹವಿದ್ದರೂ ಸಾಮಾನ್ಯ ಜೀವನವನ್ನು ನಡೆಸಿ ದೀರ್ಘಾಯಸ್ಸು ಪಡೆಯಬಹುದು.

ಟೈಪ್ 1 ರೋಗಿಗಳಲ್ಲಿ ಇನ್ಸುಲಿನ್ ಅನ್ನು ಇಂಜೆಕ್ಷನ್ ಮೂಲಕ ಕೃತಕವಾಗಿ ರಕ್ತಕ್ಕೆ ಸೇರಿಸುವ ಮೂಲಕ ಉತ್ತಮ ನಿಯಂತ್ರಣ ಸಾಧಿಸಬಹುದು. ಆದರೆ ಟೈಪ್ 2ನಲ್ಲಿ ಮಾತ್ರ ಕಟ್ಟುನಿಟ್ಟಾದ ಆಹಾರ ಮತ್ತು ಔಷಧಿಗಳ ಸೇವನೆಯೇ ದಾರಿ. ಈ ನಿಟ್ಟಿನಲ್ಲಿ ನಿಸರ್ಗ ಮಧುಮೇಹವನ್ನು ನಿಯಂತ್ರಿಸುವ ಹಲವಾರು ಔಷಧಿಗಳನ್ನು ಗಿಡಮೂಲಿಕೆ ಮತ್ತು ಹಣ್ಣು ತರಕಾರಿಗಳ ರೂಪದಲ್ಲಿ ನೀಡಿದ್ದು ಇವುಗಳ ನಿಯಮಿತ ಸೇವನೆಯಿಂದ ರಕ್ತದಲ್ಲಿ ಸಕ್ಕರೆಯ ಅಂಶವನ್ನು ಆರೋಗ್ಯಕರ ಮಟ್ಟದಲ್ಲಿರಿಸಲು ಸಾಧ್ಯವಾಗುತ್ತದೆ. ವಿಪರ್ಯಾಸವೆಂದರೆ ಹೆಚ್ಚಿನ ಜನರಿಗೆ ಈ ಬಗ್ಗೆ ಅರಿವೇ ಇಲ್ಲದಿರುವ ಕಾರಣ ಮಧುಮೇಹ ದೇಹವನ್ನು ಆವರಿಸಿ ಕಡೆಯ ಹಂತ ಬಂದು ಕುಸಿದ ಬಳಿಕವೇ ವೈದ್ಯರತ್ತ ಧಾವಿಸುತ್ತಾರೆ. ಕ್ಯಾಪ್ಸಿಕಂ-ಮಧುಮೇಹಿಗಳ ಪಾಲಿನ ಸಂಕಷ್ಟಹರ ತರಕಾರಿ

ಮಧುಮೇಹಕ್ಕೆ ಔಷಧಿಗಳು ಇವೆಯಾದರೂ ಇವುಗಳ ಸತತ ಸೇವನೆಯಿಂದ ದೇಹ ಈ ಔಷಧಿಗಳಿಗೂ ಒಗ್ಗಿಬಿಟ್ಟು ಮತ್ತೊಮ್ಮೆ ಹಿಂದಿನ ಸ್ಥಿತಿಗೆ ಬರುತ್ತದೆ. ಇದಕ್ಕೆ ಕಾರಣ ಏನೆಂದು ಇದುವರೆಗೆ ತಿಳಿದುಬಂದಿಲ್ಲ. ಅಂತೆಯೇ ವೈದ್ಯರು ಆಗಾಗ ಮಾತ್ರೆಗಳನ್ನು ಬದಲಿಸುತ್ತಾ ಇರುತ್ತಾರೆ. ಇದಕ್ಕೆ ಪರ್ಯಾಯವಾಗಿ ಕೆಲವು ಗಿಡಮೂಲಿಕೆ ಮತ್ತು ತರಕಾರಿಗಳು ಹಾಗೂ ಹೋಮಿಯೋಪಥಿ ಔಷಧಿಗಳೂ ಲಭ್ಯವಿದ್ದು ಮಾತ್ರೆಗಳು ನೀಡುವಂತಹ ಉಪಚಾರವನ್ನೇ ಯಾವುದೇ ಅಡ್ಡಪರಿಣಾಮವಿಲ್ಲದೇ ನೀಡುತ್ತವೆ. ಬನ್ನಿ, ಮಧುಮೇಹಿಗಳಿಗೆ ವರದಾನವಾಗಿರುವ ಈ ಆಹಾರಗಳು ಯಾವುದು ಎಂಬುದನ್ನು ಮುಂದೆ ಓದಿ...

*ಮೆಂತೆ
ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಆರೋಗ್ಯಕರ ಮಟ್ಟದಲ್ಲಿ ಇರಿಸಲು ಮೆಂತೆ ಅತ್ಯುತ್ತಮ ಆಯ್ಕೆಯಾಗಿದೆ. ವಿಶೇಷವಾಗಿ ಟೈಪ್ ೨ ಮಧುಮೇಹಿಗಳಿಗೆ ಇದು ಉತ್ತಮ ಪರಿಹಾರವಾಗಿದ್ದು ದೇಹದಲ್ಲಿ ಉತ್ಪತ್ತಿಯಾದ ಇನ್ಸುಲಿನ್ ಪ್ರಮಾಣವನ್ನು ಜೀವಕೋಶಗಳು ಹೀರಿಕೊಳ್ಳಲು ನೆರವಾಗುತ್ತದೆ. ಮೆಂತೆಸೊಪ್ಪಿನ ದೋಸೆ, ಸಾರು ಹಾಗೂ ಮೆಂತೆಕಾಳುಗಳನ್ನು ನೆನೆಸಿ ಅರೆದು ಸೇರಿಸಿ ಮಾಡಿದ ಖಾದ್ಯಗಳನ್ನು ನಿಯಮಿತವಾಗಿ ಸೇವಿಸುವ ಮೂಲಕ ಉತ್ತಮ ಪರಿಣಾಮ ಕಂಡುಕೊಳ್ಳಬಹುದು.

*ಕಯಾನ್ ಮೆಣಸಿನ ಪುಡಿ:(Cayenne Pepper)

ಕಾಳು ಮೆಣಸಿನ ಪುಡಿಯಂತೆಯೇ ಇರುವ ಕಯಾನ್ ಅಥವಾ ಕೆಯಾನ್ ಪೆಪ್ಪರ್ ಸಹಾ ರಕ್ತಪರಿಚಲನೆ ಮತ್ತು ಜೀವಕೋಶಗಳು ಇನ್ಸುಲಿನ್ ಹೀರಿಕೊಳ್ಳಲು ಪ್ರಚೋದನೆ ನೀಡುವ ಮೂಲಕ ಮಧುಮೇಹದ ಟೈಪ್ 2 ನಿಯಂತ್ರಣಕ್ಕೆ ಬರಲು ನೆರವಾಗುತ್ತದೆ. ಅಲ್ಲದೇ ವಿಶೇಷವಾಗಿ ರಕ್ತದೊತ್ತಡ ಹೆಚ್ಚು ಇರುವ ಮಧುಮೇಹಿಗಳಲ್ಲಿ ರಕ್ತದೊತ್ತಡವನ್ನು ಕಡಿಮೆ ಮಾಡಿ ಹೃದಯದ ಮೇಲಿನ ಭಾರವನ್ನು ಇಳಿಸುತ್ತದೆ. ಇದು ಪರೋಕ್ಷವಾಗಿ ಹಲವು ತೊಂದರೆಗಳಿಂದ ರಕ್ಷಿಸುತ್ತದೆ.

*ಡ್ಯಾಂಡೀಲಿಯಾನ್ ಹೂವು

ಸೇವಂತಿಗೆಯಂತೆಯೇ ಕಾಣುವ ಡ್ಯಾಂಡೀಲಿಯಾನ್ ಹೂವು ವಿಶೇಷವಾಗಿ ಯಕೃತ್‌ನ ಕ್ಷಮತೆಯನ್ನು ಹೆಚ್ಚಿಸುತ್ತದೆ. ಇದರಿಂದ ಗ್ಲುಕೋಸ್ ಕಣಗಳನ್ನು ಒಡೆದು ಸುಲಭವಾಗಿ ರಕ್ತ ಹೀರಿಕೊಳ್ಳಲು ಸಾಧ್ಯವಾಗುತ್ತದೆ. ಇದು ಕೊಂಚ ಹುಳಿಯಾದ ರುಚಿ ಹೊಂದಿದ್ದು ನಿತ್ಯದ ಆಹಾರಗಳಲ್ಲಿ ಸೇರಿಸಿಕೊಳ್ಳುವ ಮೂಲಕ ಅಂದರೆ ಸೂಪ್ ಮತ್ತು ಹುಳಿರುಚಿ ನೀಡಲು ಬಳಸುವ ಹುಣಸೆಯ ಬದಲಿಗೆ ಉಪಯೋಗಿಸುವ ಮೂಲಕ ಮಧುಮೇಹಿಗಳಿಗೆ ಹೆಚ್ಚು ಉಪಯುಕ್ತವಾಗಿಸಬಹುದು.

*ಹಾಗಲಕಾಯಿ
ಕಹಿ ಎಂಬ ಒಂದೇ ಒಂದು ಕಾರಣ ಬಿಟ್ಟರೆ ಹಾಗಲಕಾಯಿಯನ್ನು ನಿರಾಕರಿಸಲು ಮಧುಮೇಹಿಗಳಿಗೆ ಯಾವ ಕಾರಣವೂ ಉಳಿಯುವುದಿಲ್ಲ. ಉತ್ತಮ ಪರಿಣಾಮಕ್ಕಾಗಿ ಪ್ರತಿದಿನವೂ ಒಂದು ದೊಡ್ಡ ಚಮಚದಷ್ಟು ನೀರು ಸೇರಿಸದ ಹಾಗಲಕಾಯಿ ರಸವನ್ನು ಗಟಗಟ ಕುಡಿದು ಬಿಡಬೇಕು. ಇದರಿಂದ ಮೂತ್ರದಲ್ಲಿ ರಕ್ತದ ಮಟ್ಟ ಗಮನಾರ್ಹವಾಗಿ ಕಡಿಮೆಯಾಗುತ್ತದೆ.


ಇದು ಟೈಪ್ 1 ಮಧುಮೇಹಿಗಳಿಗೆ ಹೆಚ್ಚು ಸೂಕ್ತವಾಗಿದೆ. ಟೈಪ್ 2 ರೋಗಿಗಳೂ ಸೇವಿಸಬಹುದು. ದಿನದ ಪ್ರಥಮ ಆಹಾರವಾಗಿ ಈ ರಸವನ್ನು ಸೇವಿಸಿದರೆ ಗರಿಷ್ಠ ಉಪಯೋಗ ಪಡೆಯಬಹುದು. ಇನ್ನುಳಿದಂತೆ ದಿನದ ಇತರ ಆಹಾರಗಳಲ್ಲಿಯೂ ಸೇರಿಸಿಕೊಳ್ಳುವ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು. ಮಾರುಕಟ್ಟೆಯಲ್ಲಿ ಇದರ ಸಾಂದೀಕೃತ ಅಂಶವನ್ನು ಒಳಗೊಂಡ ಟೀ ಮತ್ತಿತರ ಆಹಾರಗಳು ಈಗ ಲಭ್ಯವಿದ್ದು ಇವುಗಳನ್ನೂ ಪ್ರಯತ್ನಿಸಬಹುದು.
English summary

Miraculous Foods To Cure Diabetes Naturally

The human body converts sugar into energy utilising the bodily hormone insulin that's produced in the pancreas. When insulin manufacturing gets hampered possibly by certain pancreatic problems of metabolism dysfunction, diabetes mellitus is the result. A few of the signs of diabetes mellitus include dehydration, excessive urination and tiredness. Regardless of whether you need a medicine or can employ a natural remedy for diabetes mellitus, it is mainly dependent on the kind of diabetes mellitus you have.
X
Desktop Bottom Promotion