ಮಧುಮೇಹಿಗಳೇ, ವೈದ್ಯರಲ್ಲಿ ತಪ್ಪದೇ ಈ ಪ್ರಶ್ನೆಗಳನ್ನು ಕೇಳಿ...

ಪ್ರತೀ ಸಲ ವೈದ್ಯರನ್ನು ಭೇಟಿಯಾದಾಗ ಮಧುಮೇಹವಿರುವ ರೋಗಿಗಳು ಕೆಲವೊಂದು ಪ್ರಶ್ನೆಗಳನ್ನು ಕೇಳಲೇಬೇಕು. ನಿಮ್ಮ ದೇಹಕ್ಕೆ ಏನಾಗುತ್ತಿದೆ ಎಂದು ತಿಳಿದುಕೊಳ್ಳಲು ವೈದ್ಯರ ಬಳಿ ಕೆಲವೊಂದು ಪ್ರಶ್ನೆಗಳನ್ನು ಕೇಳುವುದು ಅತ್ಯಗತ್ಯವಾಗಿದೆ.

By: Hemanth
Subscribe to Boldsky

ಮಧುಮೇಹ (ಡಯಾಬಿಟಿಸ್) ದೇಹವನ್ನು ಹಿಂಡಿ ಹಿಪ್ಪೆ ಮಾಡಿ ಬಿಡುತ್ತದೆ. ಇದರ ಬಗ್ಗೆ ಎಷ್ಟು ಎಚ್ಚರ ವಹಿಸಿದರೂ ಸಾಲದು. ಅದರಲ್ಲೂ ಮಧುಮೇಹ ಹೆಚ್ಚಾಗಿರುವ ರೋಗಿಗಳು ತಮ್ಮ ದೇಹವನ್ನು ಹೂವಿನಂತೆ ಕಾಪಾಡಿಕೊಳ್ಳಬೇಕು. ಯಾಕೆಂದರೆ ಮಧುಮೇಹ ಇರುವವರು ಕೆಲವೊಂದು ಆಹಾರ ಕ್ರಮ ಹಾಗೂ ಜೀವನಶೈಲಿಯನ್ನು ಅನುಸರಿಸಿಕೊಂಡು ಹೋಗಬೇಕಾಗುತ್ತದೆ.  ಮಧುಮೇಹ ರೋಗದ ಹೆಡೆಮುರಿ ಕಟ್ಟಿಹಾಕುವ ಫಲಪ್ರದ ಮನೆಮದ್ದು

ಪ್ರತೀ ಸಲ ವೈದ್ಯರನ್ನು ಭೇಟಿಯಾದಾಗ ಮಧುಮೇಹವಿರುವ ರೋಗಿಗಳು ಕೆಲವೊಂದು ಪ್ರಶ್ನೆಗಳನ್ನು ಕೇಳಲೇಬೇಕು. ನಿಮ್ಮ ದೇಹಕ್ಕೆ ಏನಾಗುತ್ತಿದೆ ಎಂದು ತಿಳಿದುಕೊಳ್ಳಲು ವೈದ್ಯರ ಬಳಿ ಕೆಲವೊಂದು ಪ್ರಶ್ನೆಗಳನ್ನು ಕೇಳುವುದು ಅತ್ಯಗತ್ಯವಾಗಿದೆ. ಮಧುಮೇಹಿಗಳಿಗೆ ವೈದ್ಯರ ಬಳಿ ಏನು ಕೇಳಬೇಕೆಂದು ತಿಳಿದಿರುವುದಿಲ್ಲ.  ಮಧುಮೇಹ ನಿಯಂತ್ರಣಕ್ಕೆ, ಪ್ರಯತ್ನಿಸಿ ನೈಸರ್ಗಿಕ ಆಹಾರಗಳು

ಇದಕ್ಕಾಗಿಯೇ ನಾವು ಈ ಲೇಖನದಲ್ಲಿ ಮಧುಮೇಹಿಗಳು ವೈದ್ಯರ ಬಳಿ ಕೇಳಬೇಕಾದ ಕೆಲವೊಂದು ಅತೀ ಮುಖ್ಯ ಪ್ರಶ್ನೆಗಳ ಬಗ್ಗೆ ಪಟ್ಟಿಯನ್ನು ಮಾಡಿದ್ದೇವೆ. ಇದನ್ನು ಓದಿಕೊಂಡು ನಿಮ್ಮ ಕುಟುಂಬದಲ್ಲಿ ಯಾರಾದರೂ ಮಧುಮೇಹಿಗಳು ಇದ್ದರೆ ಅವರಿಗೆ ಈ ಬಗ್ಗೆ ತಿಳಿಸಿ... 

ಎಷ್ಟು ಸಲ ನಾನು ರಕ್ತದಲ್ಲಿನ ಸಕ್ಕರೆ ಮಟ್ಟ ಪರೀಕ್ಷಿಸಬೇಕು?

ಸಮಸ್ಯೆಗಳನ್ನು ನಿವಾರಣೆ ಮಾಡಲು ಮಧುಮೇಹಿಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಆಗಾಗ ಪರೀಕ್ಷಿಸುತ್ತಾ ಇರಲೇಬೇಕಾಗುತ್ತದೆ. ಇದರಿಂದಾಗಿ ವೈದ್ಯರಲ್ಲಿಗೆ ಹೋದಾಗ ಎಷ್ಟು ಸಲ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಕೇಳಿ. ಇದು ಪ್ರತಿಯೊಬ್ಬ ರೋಗಿಗೆ ಭಿನ್ನವಾಗಿರುತ್ತದೆ.

ಔಷಧಿಯನ್ನು ಯಾವಾಗ ತೆಗೆದುಕೊಳ್ಳಬೇಕು?

ಮಧುಮೇಹಿಗಳು ಸ್ವತಃ ಔಷಧಿ ತೆಗೆದುಕೊಳ್ಳುವುದು ಸರಿಯಾದ ನಿರ್ಧಾರವಲ್ಲ. ಇದರಿಂದ ಯಾವ ಔಷಧಿ ನಿಮಗೆ ಒಳ್ಳೆಯದು ಮತ್ತು ಅದನ್ನು ಯಾವಾಗ ತೆಗೆದುಕೊಳ್ಳಬೇಕು ಎಂದು ವೈದ್ಯರಲ್ಲಿ ಕೇಳಿ.

ಕಡಿಮೆ ಖರ್ಚಿನ ಔಷಧಿ ಇದೆಯಾ?

ಕೆಲವೊಂದು ಸಂದರ್ಭಗಳಲ್ಲಿ ತುಂಬಾ ಕಡಿಮೆ ವೆಚ್ಚದಲ್ಲಿ ಒಳ್ಳೆಯ ಔಷಧಿ ಸಿಗುತ್ತಿರುತ್ತದೆ. ವೈದ್ಯರಲ್ಲಿ ಕಡಿಮೆ ದರದಲ್ಲಿ ಸಿಗುವ ಔಷಧಿ ಬಗ್ಗೆ ಕೇಳಿ ತಿಳಿಯಿರಿ.

ಅಡ್ಡ ಪರಿಣಾಮಗಳು ಏನು?

ಮಧುಮೇಹದ ಮಾತ್ರೆಗಳಿಂದ ಆಗುವಂತಹ ಅಡ್ಡಪರಿಣಾಮಗಳು ಏನು ಎಂದು ವೈದ್ಯರಲ್ಲಿ ಕೇಳಿ. ಇದರಿಂದ ನೀವು ಮಾನಸಿಕವಾಗಿ ತಯಾರಾಗಿರಬಹುದು.

ಆಹಾರ ಕ್ರಮ ಹೇಗಿರಬೇಕು?

ಮಧುಮೇಹವು ಜೀವನಶೈಲಿಯಿಂದ ಬರುವ ರೋಗವಾಗಿರುವ ಕಾರಣದಿಂದ ಇದರ ಲಕ್ಷಣಗಳನ್ನು ನಿವಾರಣೆ ಮಾಡಲು ಆರೋಗ್ಯಕರ ಆಹಾರ ಕ್ರಮವನ್ನು ಪಾಲಿಸುವುದು ಅತ್ಯಗತ್ಯ. ವೈದ್ಯರನ್ನು ಕೇಳಿ ಅವರಿಂದ ಸಲಹೆ ಪಡೆದು ಆಹಾರಕ್ರಮ ಪಾಲಿಸಿ.  ಮಧುಮೇಹ ರೋಗಿಗಳ ಆಹಾರ ಕ್ರಮ ಹೇಗಿರಬೇಕು?

ಯಾವ ಆಹಾರ ತ್ಯಜಿಸಬೇಕು?

ಮಧುಮೇಹ ತುಂಬಾ ಕೆಟ್ಟ ಸ್ಥಿತಿಗೆ ತಲುಪುವುದನ್ನು ತಡೆಯಲು ಯಾವ್ಯಾವ ಆಹಾರಗಳನ್ನು ಕಡೆಗಣಿಸಬೇಕು ಎನ್ನುವ ಬಗ್ಗೆ ಅಗತ್ಯವಾಗಿ ವೈದ್ಯರಲ್ಲಿ ಕೇಳಿ.

ಮಾತ್ರೆ ಕಡಿಮೆ ಮಾಡಬಹುದೇ?

ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಸ್ಥಿರವಾಗಿ ಸಮತೋಲನ ಕಂಡುಬಂದಾಗ ಮಾತ್ರೆ ಕಡಿಮೆ ಮಾಡಬಹುದೇ ಎಂದು ವೈದ್ಯರನ್ನು ಕೇಳಿನೋಡಿ.

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

English summary

Important Questions Diabetes Patients Must Ask Their Doctors

When a person is suffering from a disorder, especially a disorder as serious as diabetes, it is extremely important to be completely aware of what is happening to your body, for that certain important questions must be asked when you visit your doctor. So, here is a list of important questions you must ask your doctor if you are diabetic, have a look.
Please Wait while comments are loading...
Subscribe Newsletter