For Quick Alerts
ALLOW NOTIFICATIONS  
For Daily Alerts

ಮನೆ ಔಷಧ: ಮಧುಮೇಹವನ್ನು ನಿಯಂತ್ರಿಸುವ 'ಆಹಾರ ಪಥ್ಯ'

By Manu
|

ಸದ್ದಿಲ್ಲದೆ ನಿಧಾನವಾಗಿ ಕೊಲ್ಲುವ ರೋಗವೇ ಮಧುಮೇಹ. ಬೇರೆ ರೋಗಗಳು ಮಧುಮೇಹದಷ್ಟು ಕಾಡುವುದು ಕಡಿಮೆ. ಮಧುಮೇಹ ಜೀವಮಾನವಿಡಿ ಕಾಡುತ್ತಲೇ ಇರುತ್ತದೆ. ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಆಗದೆ ಇರುವುದರಿಂದ ಮಧುಮೇಹ ಕಾಣಿಸುತ್ತದೆ. ಅದರಲ್ಲೂ ಎರಡನೇ ಮಟ್ಟದ ಮಧುಮೇಹವು ಯಾವುದೇ ವ್ಯಕ್ತಿಯನ್ನು ತೀವ್ರವಾಗಿ ಕಾಡುತ್ತದೆ.

ರಕ್ತದಲ್ಲಿ ಸಕ್ಕರೆ ಪ್ರಮಾಣ ಏರಿದಲ್ಲಿ ತಲೆದೋರುವ ಈ ಸಮಸ್ಯೆ, ಅತಿಯಾದ ಸಕ್ಕರೆ ಸೇವನೆಯಿಂದಲೇ ಮಾತ್ರವೇ ನಿಮ್ಮ ಬಳಿ ಸುಳಿಯುತ್ತದೆ ಎಂಬುದು ಮಾತ್ರ ಸತ್ಯವಲ್ಲ. ಅಧಿಕ ಬೊಜ್ಜು, ವಂಶಪಾರಂಪರ್ಯತೆ, ಅಧಿಕ ಒತ್ತಡ ಹೀಗೆ ಸಕ್ಕರೆ ಕಾಯಿಲೆ ದೇಹಕ್ಕೆ ಅಡರಲು ಒಂದು ಸಣ್ಣ ಕಾರಣ ಸಾಕು. ತೂಕ ನಿಯಂತ್ರಿಸಿ, ಖಂಡಿತ ಮಧುಮೇಹವನ್ನೂ ನಿಯಂತ್ರಿಸಬಹುದು...

ಈ ರೋಗ ನಿಮ್ಮನ್ನು ಕಾಡುತ್ತಿದೆ ಎಂದಾದಲ್ಲಿ ನೀವು ಹೆಚ್ಚು ತಲೆಬಿಸಿ ಮಾಡಬೇಕಾದ ಅಗತ್ಯವಿಲ್ಲ ಇಲ್ಲವೇ ಜೀವನವೇ ಮುಗಿಯಿತು ಎಂದಾಗಿ ನೀವು ನಿರ್ಧರಿಸಬೇಕೆಂದೇನಿಲ್ಲ. ಬದಲಾಗಿ ನಿಮ್ಮ ಜೀವನ ಶೈಲಿಯಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡುವ ಮೂಲಕ ನೀವು ಸಾಮಾನ್ಯವಾಗಿಯೇ ಜೀವಿಸಬಹುದಾಗಿದೆ. ಮಧುಮೇಹ ರೋಗದ ಹೆಡೆಮುರಿ ಕಟ್ಟಿಹಾಕುವ ಫಲಪ್ರದ ಮನೆಮದ್ದು

ಸಕ್ಕರೆ ಸೇವನೆಯನ್ನು ಮಿತವಾಗಿ ಬಳಸಿಕೊಂಡು, ನಿಯಮಿತ ವ್ಯಾಯಮವನ್ನು ಮಾಡುತ್ತಾ, ಪಥ್ಯ ಪ್ರಕಾರವಾಗಿ ಆಹಾರವನ್ನು ಸೇವಿಸುತ್ತಿದ್ದಲ್ಲಿ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು. ಅದಾಗ್ಯೂ ಕೆಲವೊಂದು ಆಯುರ್ವೇದ ಔಷಧ ವಿಧಾನವನ್ನು ಅರಿತುಕೊಂಡಲ್ಲಿ ಮಧುಮೇಹದ ಹುಟ್ಟಡಗಿಸಬಹುದು ಎಂಬ ಸಿಹಿ ಸುದ್ದಿಯನ್ನೇ ನಾವಿಂದು ಇಂದಿನ ಲೇಖನದಲ್ಲಿ ತಿಳಿಸಲಿದ್ದೇವೆ....

ಹಾಗಲಕಾಯಿಯ ರಸ

ಹಾಗಲಕಾಯಿಯ ರಸ

ಪ್ರತಿದಿನ ಒಂದು ಲೋಟ ಹಾಗಲಕಾಯಿಯ ರಸವನ್ನು ಕುಡಿದರೆ ರಕ್ತದಲ್ಲಿ ಹೆಚ್ಚಾಗಿರುವ ಸಕ್ಕರೆಯ ಅಂಶ ಮೂರೇ ದಿನದಲ್ಲಿ ತಹಬಂದಿಗೆ ಬರುತ್ತದೆ. ಇದಕ್ಕೆ ಕಾರಣ ಹಾಗಲಕಾಯಿಯಲ್ಲಿರುವ momorcidin ಮತ್ತು charatin ಎಂಬ ವಿಶೇಷ ನಿವಾರಕಗಳು (anti-hyperglycemic compounds) ಕಾರಣವಾಗಿವೆ.

ವಾಸ್ತವಾಗಿ ರಕ್ತದಲ್ಲಿನ ಸಕ್ಕರೆ ಉಪಯೋಗಿಸಲ್ಪಡದೇ ವಿಸರ್ಜಿಸಲಾಗಲು ಇನ್ಸುಲಿನ್ ಪ್ರಮಾಣ ಮಹತ್ವದ ಪಾತ್ರ ವಹಿಸುತ್ತದೆ. ಈ ಪೋಷಕಾಂಶಗಳು ಇನ್ಸುಲಿನ್ ಕೊರತೆಯಾಗದಂತೆ ನೋಡಿಕೊಳ್ಳುವುದೇ ಹಾಗಲಕಾಯಿಯ ಈ ಸಾಮರ್ಥ್ಯಕ್ಕೆ ಕಾರಣವಾಗಿದೆ.

ನುಗ್ಗೆಸೊಪ್ಪನ್ನು ಆದಷ್ಟು ಆಹಾರಕ್ರಮದಲ್ಲಿ ಬಳಸಿ....

ನುಗ್ಗೆಸೊಪ್ಪನ್ನು ಆದಷ್ಟು ಆಹಾರಕ್ರಮದಲ್ಲಿ ಬಳಸಿ....

ನುಗ್ಗೆಸೊಪ್ಪನ್ನು ದಂಟಿನಿಂದ ಬಿಡಿಬಿಡಿಯಾಗಿ ಬಿಡಿಸಿ ನೇರವಾಗಿ ಸಾಂಬಾರ್ ಅಥವಾ ದಾಲ್‌ಗಳಲ್ಲಿ ಇತರ ತರಕಾರಿಗಳೊಂದಿಗೆ ಸೇರಿಸಿ ಬೇಯಿಸಿ ತಿನ್ನಬಹುದು. ತಿಳಿಸಾರು, ಮಜ್ಜಿಗೆ ಹುಳಿ, ತಂಬುಳಿ, ಮೊದಲಾದ ರೂಪದಲ್ಲಿಯೂ ಸೇವಿಸಬಹುದು. ಇನ್ನೊಂದು ವಿಧಾನವೆಂದರೆ ಕೊಂಚ ಬೇಯಿಸಿದ ಎಲೆಗಳನ್ನು ಚಪಾತಿ ಹಿಟ್ಟಿನ ಜೊತೆಗೆ ಕಲಸಿ ಲಟ್ಟಿಸಿ ಪರೋಟಾ ಅಥವಾ ಚಪಾತಿಯ ರೂಪದಲ್ಲಿಯೂ ಸೇವಿಸಬಹುದು.

ದಾಲ್ಚಿನ್ನಿ ಬಳಕೆ

ದಾಲ್ಚಿನ್ನಿ ಬಳಕೆ

ಸಕ್ಕರೆಯ ಬದಲಿಗೆ ನಿಮ್ಮ ಆಹಾರದಲ್ಲಿ ದಾಲ್ಚಿನ್ನಿಯನ್ನು ಬಳಸಬಹುದಾಗಿದೆ. ದಾಲ್ಚಿನ್ನಿಯು ರಕ್ತದ ಸಕ್ಕರೆ ಮಟ್ಟವನ್ನು ಸ್ಥಿಮಿತದಲ್ಲಿರಿಸಲು ಸಹಾಯ ಮಾಡಲಿದ್ದು ಇದು ಸಕ್ಕರೆಯ ಬದಲಿಗೆ ಬಳಸಬಹುದಾದ ಉತ್ತಮ ಉತ್ಪನ್ನವಾಗಿದೆ. ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ.

ಬೆಂಡೆಕಾಯಿ

ಬೆಂಡೆಕಾಯಿ

ಬೆಂಡೆಕಾಯಿ ಮಧುಮೇಹಿಗಳಿಗೆ ಮತ್ತೊಂದು ಉತ್ತಮ ತರಕಾರಿಯಾಗಿದೆ. ಇದು ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ

ತಂಪು ಪಾನೀಯಗಳಿಂದ ದೂರವಿರಿ

ತಂಪು ಪಾನೀಯಗಳಿಂದ ದೂರವಿರಿ

ಕಾರ್ಬೋನೇಟೆಡ್ ಪಾನೀಯಗಳನ್ನು ಸೇವಿಸುವುದೂ ಕೂಡ ಮಧುಮೇಹ ಮೆಲ್ಲಿಟಸ್ ಅಪಾಯವನ್ನು ಮಹಿಳೆಯರಲ್ಲಿ ಎಂಭತ್ತೈದು ಶೇಕಡಾದಷ್ಟು ಹೆಚ್ಚಿಸಿದೆ. ತಂಪು ಪಾನೀಯಗಳನ್ನು ಮಧುಮೇಹಿಗಳು ಆದಷ್ಟು ಕಡಿಮೆ ಮಾಡಬೇಕು. ಕೊಬ್ಬಿನ ಆಹಾರ ಪದಾರ್ಥಗಳ ಸೇವನೆಯನ್ನೂ ಮಧುಮೇಹಿಗಳು ಕಡಿಮೆ ಮಾಡಬೇಕು ಏಕೆಂದರೆ ಇದರಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗಿರುತ್ತದೆ.

ಚಿನ್ನಾಗಿ ನಿದ್ರೆ ಮಾಡಿ...

ಚಿನ್ನಾಗಿ ನಿದ್ರೆ ಮಾಡಿ...

ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸಲು ನೀವು ಸಾಕಷ್ಟು ನಿದ್ದೆ ಮಾಡುವುದೂ ಅತ್ಯಗತ್ಯವಾಗಿದೆ. ನಿದ್ದೆಯು ನಿಮ್ಮ ಒತ್ತಡವನ್ನು ಇಳಿಮುಖಗೊಳಿಸಲಿದೆ. ನೀವು ಸಾಕಷ್ಟು ನಿದ್ದೆ ಮಾಡದೇ ಇರುವುದು ಮತ್ತು ಹೆಚ್ಚುವರಿ ಒತ್ತಡದಲ್ಲಿರುವುದರಿಂದ ಕೂಡ ಮಧುಮೇಹ ಏರುವ ಸಾಧ್ಯತೆ ಇದೆ ಎಂಬುದಾಗಿ ಅಧ್ಯಯನಗಳು ತಿಳಿಸಿವೆ.

English summary

Highly Effective Natural Treatments For Diabetes

Treating diabetes mellitus with natural remedies and changes in lifestyle and habits has been proved to be very fruitful according to research. It has been proved that you suffer from diabetes mellitus either due to wrong lifestyle choices or because it is hereditary. Clearly the best ways to treat diabetes mellitus is naturally and not through drugs....
Story first published: Thursday, December 22, 2016, 18:35 [IST]
X
Desktop Bottom Promotion