ಕ್ಯಾನ್ಸರ್, ಮಧುಮೇಹ ನಿಯಂತ್ರಿಸುವ ಪವರ್ ನುಗ್ಗೆಸೊಪ್ಪಿನಲ್ಲಿದೆ

ಇತ್ತೀಚಿನ ಸಂಶೋಧನೆಯಲ್ಲಿ ಕಂಡುಕೊಂಡಂತೆ ಈ ಸೊಪ್ಪು ಹಲವು ರೀತಿಯ ಕ್ಯಾನ್ಸರ್ ಬರುವುದನ್ನು ತಡೆಗಟ್ಟುವುದರ ಜೊತೆಗೆ ಮಧುಮೇಹವನ್ನು ನಿಯಂತ್ರಿಸುತ್ತದೆ....

By: Arshad
Subscribe to Boldsky

ನಮ್ಮ ದೇಹದ ಎಲ್ಲಾ ಕಾಯಿಲೆಗಳಿಗೂ ನಿಸರ್ಗವೇ ಮದ್ದನ್ನೂ ಸಹಾ ನೀಡಿದೆಯಂತೆ. ಆದರೆ ಯಾವ ರೋಗಕ್ಕೆ ಯಾವ ಮದ್ದು ಎಂದು ಕಂಡುಕೊಳ್ಳುವುದೇ ಕಷ್ಟದ ಕೆಲಸ. ಇದೇ ಕಾರಣಕ್ಕಲ್ಲವೇ, ಸಂಜೀವಿನಿಗಾಗಿ ಇಡಿಯ ಬೆಟ್ಟವನ್ನೇ ಜಾಂಬವಂತ ಹೊತ್ತು ತಂದದ್ದು. ಮಾರಕ ಎಂದೇ ಪರಿಗಣಿಸಲ್ಪಟ್ಟಿರುವ ಕ್ಯಾನ್ಸರ್‌‌ಗೂ ಒಂದು ಗಿಡಮೂಲಿಕೆ ಇದೆ ಎಂದರೆ ಆಶ್ಚರ್ಯವಾಗುತ್ತದೆ ಅಲ್ಲವೇ?

cancer
 

ಯಾರಿಗಾದರೂ ಕ್ಯಾನ್ಸರ್ ಇದೆ ಎಂದಾಕ್ಷಣ ಅವರ ಜೀವನದ ದಿನಗಳು ಎಣಿಕೆಯಲ್ಲಿವೆ ಎಂದೇ ಹೆಚ್ಚಿನವರು ತಿಳಿದುಬಿಡುತ್ತಾರೆ. ಉಲ್ಬಣಗೊಂಡ ಕಾಯಿಲೆ ಇರುವ ವ್ಯಕ್ತಿಗಳಿಗಂತೂ ವೈದ್ಯರೇ ಅಂತಿಮ ದಿನವನ್ನೂ ತಿಳಿಸುವ ಮಟ್ಟಕ್ಕೆ ಇಂದಿನ ವೈದ್ಯವಿಜ್ಞಾನ ಮುಂದುವರೆದಿದೆ. ಅಷ್ಟಕ್ಕೂ ಕ್ಯಾನ್ಸರ್ ಎಂದರೇನು? ನಮ್ಮ ದೇಹದ ಪ್ರತಿ ಅಂಗ ಅಥವಾ ದ್ರವದ ಪ್ರತಿ ಕಣಕ್ಕೂ ಒಂದು ಮಿತಿಯಿದೆ. ಮಧುಮೇಹ, ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ- ನುಗ್ಗೆ ಸೊಪ್ಪು   

cancer
 

ಯಾವುದಾದರೂ ಅಂಗದ ಜೀವಕೋಶಗಳು, ಅಥವಾ ಅಂಗಾಂಶಗಳು ಅಥವಾ ಕಣಗಳು ಮಿತಿಮೀರಿ ಬೆಳೆದರೆ ಇದು ಅನಗತ್ಯವಾದ ಗಡ್ಡೆಯಾಗಿ ಬೆಳೆಯುತ್ತದೆ. ಇದು ಯಾವ ಅಂಗ, ಅಂಗಾಂಶ ಅಥವಾ ಕಣಗಳ ಬೆಳವಣಿಗೆಗೆ ಕಾರಣವಾಗುತ್ತದೆಯೋ ಅದೇ ಅಂಗದ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಸ್ತನ ಕ್ಯಾನ್ಸರ್, ಕರುಳು ಕ್ಯಾನ್ಸರ್, ರಕ್ತದ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಪ್ರಾಸ್ಟ್ರೇಟ್ ಕ್ಯಾನ್ಸರ್ ಇತ್ಯಾದಿಗಳು.    ದುಃಸ್ವಪ್ನವಾಗಿ ಕಾಡುವ ಸ್ತನ ಕ್ಯಾನ್ಸರ್‌ನ ಲಕ್ಷಣಗಳು   

drumstick leaves
 

ಕ್ಯಾನ್ಸರ್‌ನ ಗಡ್ಡೆ ಯಾವ ಹಂತಕ್ಕೆ ಬೆಳೆದಿದೆ, ಇದರ ಪರಿಣಾಮ ಎಷ್ಟರ ಮಟ್ಟಿಗೆ ಇದೆ ಎಂದು ಆಧರಿಸಿ ಇದರ ಪರಿಣಾಮವನ್ನು ಕಂಡುಕೊಳ್ಳಬಹುದು. ಇದರ ಬೆಳವಣಿಗೆ ತಡೆಗಟ್ಟಿ ಈ ಗಡ್ಡೆಯನ್ನು ನಿವಾರಿಸುವುದು ಪ್ರಾಥಮಿಕ ಹಂತದಲ್ಲಿ ಸಾಧ್ಯ. ಆದರೆ ಉಲ್ಬಣಗೊಂಡ ಬಳಿಕ ಚಿಕಿತ್ಸೆ ಫಲಕಾರಿಯಾಗುವುದು ಕೊಂಚ ಕಷ್ಟಕರ. ಆದರೆ ಈ ಮಾರಕ ರೋಗವನ್ನು ತಡೆಗಟ್ಟಲು ಮತ್ತು ಗುಣಪಡಿಸಲು ನಿಸರ್ಗ ನೀಡಿರುವ ಕೆಲವು ಸಾಮಾಗ್ರಿಗಳು ಸಮರ್ಥವಾಗಿವೆ. ಬನ್ನಿ, ಈ ಸಮರ್ಥ ನೈಸರ್ಗಿಕ ವಿಧಾನವನ್ನು ಈಗ ನೋಡೋಣ: ಇದುವೇ ಕ್ಯಾನ್ಸರ್ ನಿಯಂತ್ರಿಸುವ ಪವರ್ ಫುಲ್ ಜ್ಯೂಸ್    

drum stick leaves
 

ಅಗತ್ಯವಿರುವ ಸಾಮಾಗ್ರಿಗಳು
*ನುಗ್ಗೆಸೊಪ್ಪು: ಅರ್ಧ ಕಪ್
*ನೀರು : ಒಂದು ಕಪ್

ನುಗ್ಗೆಕಾಯಿಯನ್ನು ಸಾಂಬಾರ್‌ನಲ್ಲಿ ಬಳಸುವ ಮೂಲಕ ಒಂದು ತರಕಾರಿಯಾಗಿ ಉಪಯೋಗವಾದರೆ ಇದರ ಎಲೆಗಳು ಔಷಧಿಯ ರೂಪದಲ್ಲಿ ಹೆಚ್ಚು ಸಮರ್ಥವಾಗಿವೆ. ಈ ಎಲೆಗಳನ್ನು ನೂರಾರು ವರ್ಷಗಳಿಂದ ಕೆಲವಾರು ರೋಗಗಳಿಗೆ ಔಷಧಿಯ ರೂಪದಲ್ಲಿ ಬಳಸಲಾಗುತ್ತಾ ಬರಲಾಗಿದೆ. 

drum stick leaves
 

ಈ ಸೊಪ್ಪಿನಲ್ಲಿ ಆರೋಗ್ಯಕರ ಆಂಟಿ ಆಕ್ಸಿಡೆಂಟುಗಳು, ಫೈಟೋ ನ್ಯೂಟ್ರಿಯೆಂಟ್ ಗಳಿವೆ. ಇತ್ತೀಚಿನ ಸಂಶೋಧನೆಯಲ್ಲಿ ಕಂಡುಕೊಂಡಂತೆ ಈ ಸೊಪ್ಪು ಹಲವು ರೀತಿಯ ಕ್ಯಾನ್ಸರ್ ಬರುವುದನ್ನು ತಡೆಗಟ್ಟುವುದನ್ನು ಹಾಗೂ ಕೆಲವಾರು ಕ್ಯಾನ್ಸರ್ ಗಳನ್ನು ಗುಣಪಡಿಸುತ್ತದೆ. ಊತ-ಸ್ನಾಯು ಸೆಳೆತಕ್ಕೆ, ಹಿಡಿಯಷ್ಟು 'ನುಗ್ಗೆ ಸೊಪ್ಪು' ಸಾಕು!

ಅಷ್ಟೇ ಅಲ್ಲ, ಈ ಸೊಪ್ಪಿಗೆ ಮಧುಮೇಹ ನಿಯಂತ್ರಿಸುವ ಗುಣವೂ ಇದೆ. ಈ ಎಲೆಗಳನ್ನು ನಿಯಮಿತ ರೂಪದಲ್ಲಿ ಸೇವಿಸುತ್ತಾ ಬಂದರೆ ರಕ್ತದಲ್ಲಿ ಸಕ್ಕರೆಯ ಪ್ರಮಾಣ ನಿಯಂತ್ರಣದಲ್ಲಿರುತ್ತದೆ.

Diabetes
 

ಈ ಅದ್ಭುತ ಪೇಯವನ್ನು ತಯಾರಿಸುವ ಬಗೆ:
*ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ.
*ನೀರು ಕುದಿಯಲು ಪ್ರಾರಂಭಿಸಿದಾಗ ಇದಕ್ಕೆ ಚೆನ್ನಾಗಿ ತೊಳೆದ ಎಲೆಗಳನ್ನು ಹಾಕಿ ಇನ್ನಷ್ಟು ಕುದಿಸಿ.
*ನೀರು ಸುಮಾರು ಅರ್ಧದಷ್ಟಾದ ಬಳಿಕ ಉರಿಯನ್ನು ಆರಿಸಿ ತಣಿಸಿ.

drum stick leaves

*ಈ ನೀರು ಉಗುರು ಬೆಚ್ಚಗಾಗುವಷ್ಟು ತಣಿದ ಬಳಿಕ ಈ ನೀರನ್ನು ಸೋಸಿ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
*ಬಳಿಕ ಮುಕ್ಕಾಲು ಗಂಟೆ ಏನನ್ನೂ ಸೇವಿಸದಿರಿ. ನಂತರ ನಿತ್ಯದ ಉಪಾಹಾರ ಸೇವಿಸಿ. ಮಾವಿನ ಎಲೆ ಮಧುಮೇಹ ನಿಯಂತ್ರಿಸಬಲ್ಲದು!

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Tuesday, October 25, 2016, 12:20 [IST]
English summary

Herb Can Prevent Cancer & Treat Diabetes

There are many home remedies and also certain herbs that can prevent and even treat cancer, that have proven to be quite effective. So, if you are looking for a natural remedy for cancer, & Treat Diabetes this common, yet powerful herb can help!
Please Wait while comments are loading...
Subscribe Newsletter