For Quick Alerts
ALLOW NOTIFICATIONS  
For Daily Alerts

ಮಧುಮೇಹಿಗಳಿಗೆ ಯಾವ ಹಣ್ಣುಗಳು ಸೂಕ್ತ? ಅದೂ ಎಷ್ಟು ಪ್ರಮಾಣದಲ್ಲಿ?

By manu
|

ಮಧುಮೇಹವಿದ್ದವರು ಸಕ್ಕರೆ ತಿನ್ನಲೇಬಾರದು ಎಂದು ಹೆಚ್ಚಿನ ಜನರು ತಿಳಿದುಕೊಂಡಿದ್ದಾರೆ. ವಾಸ್ತವವಾಗಿ ಮಧುಮೇಹಿಗಳಲ್ಲಿ ಇತರರಿಗಿಂತ ಸಕ್ಕರೆಯನ್ನು ಬಳಸಿಕೊಳ್ಳುವ ಸಾಮರ್ಥ್ಯ ಕಡಿಮೆ ಇರುತ್ತದೆಯೇ ಹೊರತು ಇಲ್ಲದೇ ಇರುವುದಿಲ್ಲ. ಅಂತೆಯೇ ನಿತ್ಯದ ಚಟುವಟಿಕೆಗಳಿಗೆ ಮಧುಮೇಹಿಗಳಿಗೂ ಸಕ್ಕರೆ ಅಗತ್ಯವಾಗಿ ಬೇಕು.

ಆದರೆ ಬಿಳಿಸಕ್ಕರೆಯನ್ನು ಬೆರೆಸಿ ಕುಡಿಯುವ ಪೇಯ ಅಥವಾ ಸಿಹಿ ತಿನಿಸುಗಳಲ್ಲಿ ಅವರ ದೇಹ ಸಹಿಸುವಷ್ಟಕ್ಕಿಂತಲೂ ಅಗಾಧ ಪ್ರಮಾಣದಲ್ಲಿ ಸಕ್ಕರೆ ಇರುವ ಕಾರಣ ಇವುಗಳನ್ನು ತಿನ್ನಲು ವೈದ್ಯರು ಬೇಡ ಎಂದಿರುತ್ತಾರೆ. ಇದನ್ನೇ ಹೆಚ್ಚಿನವರು ಸಕ್ಕರೆಯನ್ನೇ ತಿನ್ನಬರದು ಎಂದು ತಿಳಿದುಕೊಂಡಿದ್ದಾರೆ ಅಷ್ಟೇ. ಮಧುಮೇಹಿಗಳಿಗೆ ಅಗತ್ಯವಾದ ಸಕ್ಕರೆ ನಿತ್ಯದ ಆಹಾರಗಳ ಮೂಲಕ ಸಾಕಷ್ಟು ಲಭಿಸಿಬಿಡುತ್ತದೆ. ಇನ್ನುಳಿದಂತೆ ಸಕ್ಕರೆಯ ಪ್ರಮಾಣ ಕಡಿಮೆ ಇರುವ ಹಣ್ಣುಗಳನ್ನು ಸೇವಿಸಬಹುದು. ಮಧುಮೇಹಿಗಳು ಸೇವಿಸಬಹುದಾದ 7 ಸಿಹಿ ಹಣ್ಣುಗಳು

ಮಾವಿನ ಹಣ್ಣು ಸೀತಾಫಲ ಮೊದಲಾದವುಗಳಲ್ಲಿ ಸಕ್ಕರೆ ಅಪಾರ ಪ್ರಮಾಣದಲ್ಲಿರುವ ಕಾರಣ ಸಿಹಿತಿಂಡಿಗಳಂತೆಯೇ ಇವು ಮಧುಮೇಹಿಗಳಿಗೆ ತಕ್ಕುದಲ್ಲ. ಅದರಲ್ಲೂ 200 mg/dl ಪ್ರಮಾಣಕ್ಕೂ ಹೆಚ್ಚು ಸಕ್ಕರೆ ಇರುವವರು ಸರ್ವಥಾ ಸೇವಿಸಬಾರದು. ಆದರೆ ಸಕ್ಕರೆಯ ಪ್ರಮಣ ಕಡಿಮೆ ಇರುವ ಇತರ ಹಣ್ಣುಗಳನ್ನು ತಿನ್ನಬಹುದು. ಆದರೆ ಇವು ಯಾವುವು, ಎಷ್ಟು ಪ್ರಮಾಣದಲ್ಲಿ ಸೇವಿಸಬಹುದು ಎಂಬುದನ್ನು ಮುಂದೆ ಓದಿ....

ಸೇಬು

ಸೇಬು

ಒಂದು ಮಧ್ಯಮ ಗಾತ್ರದ ಸೇಬು ಮಧುಮೇಹಿಗಳಿಗೆ ಸಾಕು. ಏಕೆಂದರೆ ಇದರಲ್ಲಿ ಕ್ಯಾಲೋರಿಗಳೂ ಕಡಿಮೆ, ಇದರ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಅಂದರೆ ಆಹಾರದಲ್ಲಿ ಸಕ್ಕರೆ ಬೆರೆಯುವ ಗತಿಯೂ ಕಡಿಮೆ. ಅದರಲ್ಲೂ ಕೆಂಪು ಸೇಬಿಗಿಂತ ಹಸಿರು ಸೇಬೇ ಉತ್ತಮ. ಸೇಬು ಸೂಪ್ ಕುಡಿಯಿರಿ, ಸೇಬಿನಂತಾಗಿರಿ

ಸೇಬು

ಸೇಬು

ಇದರಲ್ಲಿ ಕೇವಲ ಇಪ್ಪತ್ತು ಗ್ರಾಂ ಕಾರ್ಬೋಹೈಡ್ರೇಟುಗಳಿದ್ದರೆ ಗ್ಲೈಸೆಮಿಕ್ ಇಂಡೆಕ್ಸ್ ಕೇವಲ 39 ಇದೆ. ಅಚ್ಚರಿಯೆಂದರೆ ಕಲ್ಲಂಗಡಿ ಹಣ್ಣಿನಲ್ಲಿ ಹೆಚ್ಚಿನಾಂಶ ನೀರೇ ಇದ್ದರೂ ಇದರ ಗ್ಲೈಸೆಮಿಕ್ ಇಂಡೆಕ್ಸ್ ಗರಿಷ್ಠ ಅಂದರೆ 72 ಇರುವ ಕಾರಣ ಇದನ್ನು ಸೇವಿಸಿದ ಕೆಲವೇ ಕ್ಷಣಗಳಲ್ಲಿ ಶಕ್ತಿ ಮರುತುಂಬಿಕೊಳ್ಳುತ್ತದೆ.

ನೇರಳೆ ಹಣ್ಣು

ನೇರಳೆ ಹಣ್ಣು

ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವ, ಸಕ್ಕರೆಯೂ ಕಡಿಮೆ ಇರುವ ಇನ್ನೊಂದು ಹಣ್ಣು ಅಂದರೆ ನೇರಳೆ. ಇದರಲ್ಲಿರುವ ಗ್ಲುಕೋಸೈಡ್ ಎಂಬ ಪೋಷಕಾಂಶ ರಕ್ತದಲ್ಲಿ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿರಿಸಲು ನೆರವಾಗುತ್ತದೆ. ಪ್ರತಿದಿನ ಐದಾರು ಮಧ್ಯಮ ಗಾತ್ರದ ನೇರಳೆ ಹಣ್ಣನ್ನು ಸೇವಿಸುವುದು ಮಧುಮೇಹಿಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ.

ಪಪ್ಪಾಯಿ ಹಣ್ಣು

ಪಪ್ಪಾಯಿ ಹಣ್ಣು

ಹೆಚ್ಚಿನ ಮಧುಮೇಹಿಗಳು ಪೊಪ್ಪಾಯಿಯಲ್ಲಿರುವ ಸಕ್ಕರೆ ತಮಗೆ ಅಪಾಯಕರ ಎಂದು ಭಾವಿಸಿ ತಿನ್ನಲಿಕ್ಕೆ ಹೋಗುವುದಿಲ್ಲ. ಆದರೆ ಒಂದು ಚಿಕ್ಕ ತುಂಡು ಅಥವಾ ಒಂದು ಚಿಕ್ಕ ಕಪ್ ನಲ್ಲಿ ಪಪ್ಪಾಯಿ ಹಣ್ಣಿನ ಚಿಕ್ಕ ಚೌಕಾಕಾರದ ತುಂಡುಗಳನ್ನು ಆಗಾಗ ಸೇವಿಸಬಹುದು. ಸರ್ವಗುಣ ಸಂಪನ್ನ ಪಪ್ಪಾಯಿ ಹಣ್ಣಿನ ಮೂಲ ಅರಿಯಿರಿ

ಪಪ್ಪಾಯಿ ಹಣ್ಣು

ಪಪ್ಪಾಯಿ ಹಣ್ಣು

ಏಕೆಂದರೆ ಇದರಲ್ಲಿ ಸಕ್ಕರೆ ಕೊಂಚ ಹೆಚ್ಚಾಗಿದ್ದರೂ ಇದರಲ್ಲಿರುವ ಇತರ ಪೋಷಕಾಂಶಗಳು ಮಧುಮೇಹಿಗಳ ಆರೋಗ್ಯಕ್ಕೆ ಪೂರಕವಾಗಿವೆ. ಅಲ್ಲದೇ ವಿಶೇಷವಾಗಿ ಟೈಪ್ - 2 ಮಧುಮೇಹಿಗಳಿಗೆ ಈ ಹಣ್ಣಿನ ನಿಯಮಿತ ಆದರೆ ಕಡಿಮೆ ಪ್ರಮಾಣದ ಸೇವನೆ ಮಧುಮೇಹವನ್ನು ನಿಯಂತ್ರಿಸಿಕೊಳ್ಳಲು ಪರೋಕ್ಷವಾಗಿ ನೆರವಾಗುತ್ತದೆ.

ಅನಾನಸ್ ಹಣ್ಣು

ಅನಾನಸ್ ಹಣ್ಣು

ಇದರಲ್ಲಿ ಸಕ್ಕರೆಯ ಅಂಶ ಕೊಂಚ ಹೆಚ್ಚಾಗಿದ್ದರೂ ಇದರ ಗ್ಲೈಸೆಮಿಕ್ ಇಂಡೆಕ್ಸ್ ಮತ್ತು ಕ್ಯಾಲೋರಿಗಳು ಕಡಿಮೆ ಇರುವ ಕಾರಣ ಮಧುಮೇಹಿಗಳೂ ಚಿಕ್ಕ ಪ್ರಮಾಣದಲ್ಲಿ ಅನಾನಾಸಿನ ತುಂಡನ್ನು ತಿನ್ನಬಹುದು.

ಅನಾನಸ್ ಹಣ್ಣು

ಅನಾನಸ್ ಹಣ್ಣು

ಎಷ್ಟು ಎಂದರೆ ಒಂದು ಚಿಕ್ಕ ಕಪ್‌ನಲ್ಲಿ ಮುಕ್ಕಾಲು ಕಪ್ ತುಂಬುವಷ್ಟು ಮಾತ್ರ. ಇದೂ ಪರೋಕ್ಷವಾಗಿ ಮಧುಮೇಹವನ್ನು ನಿಯಂತ್ರಿಸಲು ನೆರವಾಗುತ್ತದೆ. ಹುಳಿ ಮಿಶ್ರಿತ ಸಿಹಿಯಾದ ಅನಾನಸ್‌ ಜ್ಯೂಸ್‌‌ನ‌ ಮಹತ್ವ ಅರಿಯಿರಿ!

English summary

Fruits and their recommended servings for diabetics

A common query that most diabetics have when it comes to fruits is what to eat and how much to eat. Fruits like mangoes and custard apple are high in sugar and should mostly be avoided (strictly avoid if your sugar is more than 200 mg/dl and uncontrolled). Here health experts lists fruits ( and the quantity) that diabetics can eat every day.
X
Desktop Bottom Promotion