For Quick Alerts
ALLOW NOTIFICATIONS  
For Daily Alerts

ಬೊಜ್ಜು-ಮಧುಮೇಹ ನಿಯಂತ್ರಣಕ್ಕೆ-ಒಂದೆರಡು ಲಿಂಬೆ ಸಾಕು!

ಬೊಜ್ಜು ಹಾಗೂ ಮಧುಮೇಹ ಬರದಂತೆ ತಡೆಯಬೇಕೆಂದರೆ ಲಿಂಬೆ ಹಣ್ಣು ಒಳ್ಳೆಯ ಮನೆಮದ್ದಾಗಿದೆ....

By Manu
|

ಸ್ವಲ್ಪ ನಡೆದಾದಡಿದರೆ ಸುಸ್ತು, ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವ ಮಾತು ನಮ್ಮ ಸಹೋದ್ಯೋಗಿಗಳಿಂದ, ನೆರೆಮನೆಯವರಿಂದ ಅಥವಾ ಸ್ನೇಹಿತರಿಂದ ಕೇಳಿಬರುತ್ತದೆ. ಅನಾರೋಗ್ಯ ಮಾನವನನ್ನು ಕಾಡುವುದು ಸಹಜ. ಆದರೆ ಕೆಲವೊಂದು ರೋಗಗಳನ್ನು ನಾವಾಗಿಯೇ ಬರ ಮಾಡಿಕೊಳ್ಳುತ್ತೇವೆ. ಇದರಲ್ಲಿ ಪ್ರಮುಖವಾಗಿ ಬೊಜ್ಜು ಹಾಗೂ ಮಧುಮೇಹ. ಚಿಟಿಕೆ ಹೊಡೆದಷ್ಟು ಸುಲಭವಾಗಿ ಹೊಟ್ಟೆಯ ಬೊಜ್ಜನ್ನು ಕರಗಿಸಿಕೊಳ್ಳಿ!

ಬೊಜ್ಜು ದೇಹದಲ್ಲಿ ಕಾಣಿಸಿಕೊಂಡರೆ ಅದರಿಂದ ಹಲವಾರು ರೋಗಗಳನ್ನು ದೇಹವನ್ನು ಆವರಿಸಿಕೊಳ್ಳುವುದು ಸಹಜ. ಗಂಟು ನೋವು, ರಕ್ತದೊತ್ತಡ ಹೀಗೆ ಬೊಜ್ಜಿನಿಂದ ಬರುವಂತಹ ರೋಗಗಳ ಪಟ್ಟಿ ಉದ್ದವಾಗಿದೆ. ಆಧುನಿಕ ಜೀವನಶೈಲಿ, ವ್ಯಾಯಾಮದ ಕೊರತೆ ಮತ್ತು ಸರಿಯಾದ ಆಹಾರ ಕ್ರಮ ಪಾಲಿಸದೆ ಇರುವುದು ಬೊಜ್ಜು ಹಾಗೂ ಮಧುಮೇಹಕ್ಕೆ ಪ್ರಮುಖ ಕಾರಣವಾಗಿದೆ. ತುಂಬಾ ಅಪಾಯಕಾರಿಯಾಗಿರುವ ಇಂತಹ ರೋಗಗಳನ್ನು ನಿವಾರಣೆ ಮಾಡಲು ತುಂಬಾ ಶ್ರಮ ವಹಿಸಬೇಕಾಗುತ್ತದೆ. ಏನೇ ಹೇಳಿ ಮಧುಮೇಹ ನಿಯಂತ್ರಣಕ್ಕೆ ಮನೆಮದ್ದೇ ಸೂಕ್ತ

ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಒಳ್ಳೆಯ ಜೀವನ ಸಾಗಿಸಬಹುದು. ಬೊಜ್ಜು ಹಾಗೂ ಮಧುಮೇಹ ಬರದಂತೆ ತಡೆಯಬೇಕೆಂದರೆ ಲಿಂಬೆಯು ಒಳ್ಳೆಯ ಮನೆಮದ್ದಾಗಿದೆ. ಇದು ಹೇಗೆಂದು ಮುಂದೆ ಓದುತ್ತಾ ತಿಳಿಯಿರಿ.....

ಮನೆಮದ್ದು ತಯಾರಿಸಲು ಬೇಕಾಗುವ ಸಾಮಗ್ರಿಗಳು

ಮನೆಮದ್ದು ತಯಾರಿಸಲು ಬೇಕಾಗುವ ಸಾಮಗ್ರಿಗಳು

*ಎರಡು ಲಿಂಬೆ

*ಅಡುಗೆ ಸೋಡಾ ½ ಚಮಚ

ಮಧುಮೇಹ ಹಾಗೂ ಬೊಜ್ಜನ್ನು ನಿವಾರಿಸಲು....

ಮಧುಮೇಹ ಹಾಗೂ ಬೊಜ್ಜನ್ನು ನಿವಾರಿಸಲು....

ಆರೋಗ್ಯಕರ ಆಹಾರ ಕ್ರಮ ಹಾಗೂ ವ್ಯಾಯಾಮದೊಂದಿಗೆ ಈ ಮನೆಮದ್ದನ್ನು ಬಳಸಿದರೆ ಇದು ಮಧುಮೇಹ ಹಾಗೂ ಬೊಜ್ಜನ್ನು ನಿವಾರಿಸಲು ತುಂಬಾ ಪರಿಣಾಮಕಾರಿ.

ಕೊಬ್ಬು ಹೆಚ್ಚಾಗಿರುವ ಆಹಾರ ಬಿಟ್ಟುಬಿಡಿ....

ಕೊಬ್ಬು ಹೆಚ್ಚಾಗಿರುವ ಆಹಾರ ಬಿಟ್ಟುಬಿಡಿ....

ಈ ಮನೆಮದ್ದನ್ನು ಸೇವಿಸುವಾಗ ಕೊಬ್ಬು ಹೆಚ್ಚಾಗಿರುವ ಆಹಾರವನ್ನು ಸೇವಿಸಬಾರದು ಮತ್ತು ದಿನದಲ್ಲಿ 45 ನಿಮಿಷ ಕಾಲ ವ್ಯಾಯಮ ಮಾಡಬೇಕು.

ಮಧುಮೇಹಕ್ಕೆ ಲಿಂಬೆ ಹಣ್ಣು ಹೆಚ್ಚು ಪರಿಣಾಮಕಾರಿ....

ಮಧುಮೇಹಕ್ಕೆ ಲಿಂಬೆ ಹಣ್ಣು ಹೆಚ್ಚು ಪರಿಣಾಮಕಾರಿ....

ಲಿಂಬೆಯಲ್ಲಿ ಆ್ಯಂಟಿಆಕ್ಸಿಡೆಂಟ್, ವಿಟಮಿನ್ ಸಿ, ಇತ್ಯಾದಿಗಳಿರುವ ಕಾರಣದಿಂದ ಇದೆಲ್ಲವೂ ಜತೆಯಾಗಿ ಕೆಲಸ ಮಾಡಿ ಸಕ್ಕರೆ ಮಟ್ಟವನ್ನು ಕಾಪಾಡಿಕೊಂಡು ಮಧುಮೇಹವನ್ನು ನಿವಾರಿಸಬಲ್ಲದು.

ಲಿಂಬೆ ಬೊಜ್ಜನ್ನೂ ನಿಯಂತ್ರಣದಲ್ಲಿಡುವುದು.....

ಲಿಂಬೆ ಬೊಜ್ಜನ್ನೂ ನಿಯಂತ್ರಣದಲ್ಲಿಡುವುದು.....

ಘನೀಕರಿಸಿದ ಲಿಂಬೆಯಲ್ಲಿರುವ ಆ್ಯಂಟಿಆಕ್ಸಿಡೆಂಟ್ ದೇಹದಲ್ಲಿನ ಚಯಾಪಚಾಯ ಕ್ರಿಯೆಯನ್ನು ಉತ್ತಮಪಡಿಸಿ ವಿಷಕಾರಿ ಅಂಶ ಹಾಗೂ ಕೊಬ್ಬಿನ ಕೋಶಗಳನ್ನು ಹೊರಹಾಕಿ ಬೊಜ್ಜನ್ನು ನಿವಾರಿಸುವುದು.

ಮನೆಮದ್ದು ತಯಾರಿಸುವ ವಿಧಾನ....

ಮನೆಮದ್ದು ತಯಾರಿಸುವ ವಿಧಾನ....

*ಎರಡು ಲಿಂಬೆಗಳನ್ನು ಅಡುಗೆ ಸೋಡಾ ಮತ್ತು ನೀರಿನ ಮಿಶ್ರಣದಲ್ಲಿ ತೊಳೆಯಿರಿ.

*ಲಿಂಬೆಯನ್ನು ಫ್ರೀಜರ್‌ನಲ್ಲಿ ಎರಡು ಗಂಟೆಗಳ ಕಾಲ ಇಡಿ.

ಮನೆಮದ್ದು ತಯಾರಿಸುವ ವಿಧಾನ....

ಮನೆಮದ್ದು ತಯಾರಿಸುವ ವಿಧಾನ....

*ಇನ್ನು ಲಿಂಬೆಯನ್ನು ಕತ್ತರಿಸಿಕೊಂಡು ಅದರ ರಸವನ್ನು ಸಲಾಡ್ ಅಥವಾ ಸೂಪ್‌ಗೆ ಹಾಕಿಕೊಳ್ಳಿ.

*ಈ ಅಭ್ಯಾಸವನ್ನು ಸುಮಾರು ಎರಡು ತಿಂಗಳ ಕಾಲ ನಿಯಮಿತವಾಗಿ ಪಾಲಿಸಿಕೊಂಡು ಹೋಗಿ.

English summary

Frozen Lemons Remedy To Treat Diabetes And Obesity!

Are you afraid that as you grow older, you may develop common disorders like diabetes and obesity? If yes, then you must follow this powerful home remedy that can help prevent and treat such dangerous disorders. Diseases like diabetes and obesity are extremely common these days, as many people tend to follow rather unhealthy lifestyles.
X
Desktop Bottom Promotion