ಮಧುಮೇಹ ನಿಯಂತ್ರಣಕ್ಕೆ, ಪ್ರಯತ್ನಿಸಿ ನೈಸರ್ಗಿಕ ಆಹಾರಗಳು

ಒಂದು ಕಾಲದಲ್ಲಿ ಕೇವಲ ಶ್ರೀಮಂತರ ಕಾಯಿಲೆಯಾಗಿದ್ದ ಮಧುಮೇಹ ಇಂದು ಬಡವ ಬಲ್ಲಿದ, ಹಿರಿಯ ಕಿರಿಯನೆಂಬ ಭೇದ ಪರಿಗಣಿಸದೇ ಎಲ್ಲರನ್ನೂ ಆವರಿಸುತ್ತಿದೆ, ಆದರೆ ಇದನ್ನು ನಿಯಂತ್ರಿಸಲು ಹಲವಾರು ನೈಸರ್ಗಿಕ ಆಹಾರಗಳು ಲಭ್ಯವಿದೆ....

By: manu
Subscribe to Boldsky

ಮಧುಮೇಹ ಬಂದ ಬಳಿಕ ಇದನ್ನು ಸಂಪೂರ್ಣವಾಗಿ ನಿವಾರಿಸಲಂತೂ ಸಾಧ್ಯವಿಲ್ಲ. ಆದರೆ ಇದನ್ನು ನಿಯಂತ್ರಿಸುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದಕ್ಕಾಗಿ ಕೊಂಚ ಮನಸ್ಸನ್ನು ಬಿಗಿಹಿಡಿದರೆ ಸಾಕು. ಮಧುಮೇಹಿಗಳು ಸೇವಿಸಬಹುದಾದ 7 ಸಿಹಿ ಹಣ್ಣುಗಳು 

ಮಧುಮೇಹವನ್ನು ನಿಯಂತ್ರಿಸಲು ಕೆಲವು ಆಹಾರಗಳು ಸಮರ್ಥವಾಗಿದ್ದು ರಕ್ತದಲ್ಲಿ ಸಕ್ಕರೆಯ ಅಂಶವನ್ನು ಸಮತೋಲನದಲ್ಲಿರಿಸಲು ಹಾಗೂ ರಕ್ತದಲ್ಲಿ ಪೋಷಕಾಂಶಗಳನ್ನು ನಿಧಾನವಾಗಿ ಸೇರಿಸುತ್ತಾ, ಹೆಚ್ಚಿನ ಕಾಲ ಹಸಿವಿಲ್ಲದಂತೆ ಮಾಡಿ ಅನಗತ್ಯ ಆಹಾರವನ್ನು ಸೇವಿಸದಂತೆ ಮಾಡುತ್ತವೆ. ಬನ್ನಿ, ಈ ಅಹಾರಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯೋಣ.... 

ಹಾಗಲಕಾಯಿ

ಇದರ ಕಹಿಯಾದ ರುಚಿಯಿಂದಾಗಿಯೇ ಇದನ್ನು ಹೆಚ್ಚಿನವರು ತಿನ್ನುವುದಿಲ್ಲ. ಆದರೆ ಮಧುಮೇಹಿಗಳಿಗೆ ಹಾಗಲಕಾಯಿಗಿಂತ ಉತ್ತಮವಾದ ಆಹಾರ ಇನ್ನೊಂದಿಲ್ಲ. ಇದರಲ್ಲಿರುವ vicine, polypeptide-P ಎಂಬ charantin ಪೋಷಕಾಂಶಗಳು ಇನ್ಸುಲಿನ್‍ಗೆ ಪರ್ಯಾಯವಾಗಿದ್ದು ಇವೇ ಇದರ ಕಹಿಗುಣಕ್ಕೂ ಕಾರಣವಾಗಿವೆ. ಹಾಗಲಕಾಯಿ ಜ್ಯೂಸ್‌ನಲ್ಲಿದೆ 15 ಆರೋಗ್ಯಕರ ಪ್ರಯೋಜನಗಳು

ಹಾಗಲಕಾಯಿ

ಈ ಪೋಷಕಾಂಶಗಳು ರಕ್ತಕ್ಕೆ ಸೇರಿದ ಬಳಿಕ ರಕ್ತದ ಮಟ್ಟವನ್ನು ಸಮತೋಲನದಲ್ಲಿರಿಸಲು ನೆರವಾಗುತ್ತವೆ ಹಾಗೂ ಮೂತ್ರದಲ್ಲಿಯೂ ಹೆಚ್ಚಿನ ಪ್ರಮಾಣದ ಸಕ್ಕರೆ ನಷ್ಟವಾಗುವುದನ್ನು ತಡೆಯುತ್ತದೆ. ಮಧುಮೇಹಿಗಳು ವಾರಕ್ಕೆ ಕನಿಷ್ಠ ಮೂರು ಹೊತ್ತಾದರೂ ಹಾಗಲಕಾಯಿಯನ್ನು ಒಂದು ಖಾದ್ಯವಾಗಿ ಸೇವಿಸುವ ಮೂಲಕ ಅತ್ಯದ್ಭುತವಾದ ಪರಿಣಾಮಗಳನ್ನು ಪಡೆಯಬಹುದು.

ಮೆಂತೆ ಕಾಳು

ಮಧುಮೇಹವನ್ನು ನಿಯಂತ್ರಣದಲ್ಲಿರಿಸಲು ಮೆಂತೆಕಾಳುಗಳನ್ನು ನೂರಾರು ವರ್ಷಗಳಿಂದ ಭಾರತದಲ್ಲಿ ಬಳಸಲಾಗುತ್ತಾ ಬರಲಾಗಿದೆ. ಸುಮಾರು ಒಂದು ಚಿಕ್ಕ ಚಮಚದಷ್ಟು ಮೆಂತೆಕಾಳುಗಳನ್ನು ರಾತ್ರಿ ನೆನೆಸಿಟ್ಟು ಮರುದಿನ ಬೆಳಿಗ್ಗೆ ಈ ನೀರನ್ನು ಮತ್ತು ಕಾಳುಗಳನ್ನು ಸೇವಿಸುವ ಮೂಲಕ ರಕ್ತದಲ್ಲಿ ಸಕ್ಕರೆಯ ಪ್ರಮಾಣ ನಿಯಂತ್ರಣದಲ್ಲಿರಲು ಸಾಧ್ಯವಾಗುತ್ತದೆ.

ಮೆಂತೆ ಕಾಳು

ಅಲ್ಲದೇ ರಕ್ತದಲ್ಲಿ ಕೊಲೆಸ್ಟ್ರಾಲ್, ಟ್ರೈಗ್ಲಿಸರೈಡ್ ಮಟ್ಟವನ್ನೂ ನಿಯಂತ್ರಿಸಿ ಮಧುಮೇಹದ ಪರಿಣಾಮಗಳನ್ನು ಕನಿಷ್ಟವಾಗಿಸುತ್ತದೆ.    ಅಡುಗೆಮನೆಯ ಮೆಂತೆ- ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು!

ಮಾವಿನ ಎಲೆ

ಮಾವಿನ ಹಣ್ಣನ್ನು ಮಧುಮೇಹಿಗಳು ಸೇವಿಸಬೇಕೋ ಬೇಡವೋ ಎಂಬುದು ಚರ್ಚೆಗೆ ಗ್ರಾಸವಾಗಿದ್ದರೆ ಇದರ ಎಲೆಗಳು ಮಾತ್ರ ತಮ್ಮ ಔಷಧೀಯ ಗುಣಗಳಿಂದ ಮಧುಮೇಹಿಗಳಿಗೆ ಅಧ್ಬುತವಾದ ಪರಿಣಾಮವನ್ನೇ ನೀಡುತ್ತಿವೆ. ಇದಕ್ಕಾಗಿ ಕೊಂಚ ಎಳೆಯ ಮಾವಿನ ಎಲೆಗಳ ಅಗತ್ಯವಿದೆ. ಸುಮಾರು ಆರು ಮಾವಿನ ಎಲೆಗಳನ್ನು ಚೆನ್ನಾಗಿ ಹಿಸುಕಿ ಒಂದು ದೊಡ್ಡ ಲೋಟ ನೀರಿನಲ್ಲಿ ಕುದಿಸಿ ತಣಿಸಿ ಸೋಸಿದ ನೀರನ್ನು ಕುಡಿಯುವ ಮೂಲಕ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿರಿಸಬಹುದು.  ಮಾವಿನ ಎಲೆ ಮಧುಮೇಹ ನಿಯಂತ್ರಿಸಬಲ್ಲದು!

ಬೆಂಡೆ

ಬೆಂಡೆಕಾಯಿಯಲ್ಲಿರುವ ಉತ್ತಮ ಪ್ರಮಾಣದ ಕರಗುವ ನಾರು ಮತ್ತು ಕೆಲವು ಕಿಣ್ವಗಳು ಕಾರ್ಬೋಹೈಡ್ರೇಟುಗಳನ್ನು ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುವ ಮೂಲಕ ಹೆಚ್ಚು ಪಡೆಯಲು ಮತ್ತು ಕರುಳುಗಳು ಸಕ್ಕರೆಯನ್ನು ಕಡಿಮೆ ಹೀರುವಂತೆ ಮಾಡುವ ಮೂಲಕ ಮಧುಮೇಹವನ್ನು ನಿಯಂತ್ರಿಸಲು ನೆರವಾಗುತ್ತವೆ. ಅಲ್ಲದೇ ರಕ್ತದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸಲೂ ನೆರವಾಗುತ್ತವೆ. ಮಧುಮೇಹಿಗಳು ಸುರಕ್ಷಿತವಾಗಿ ಸೇವಿಸುವ ಈ ತರಕಾರಿ ಒಂದು ಅದ್ಭುತ ಆಹಾರವಾಗಿದೆ.  ಬೆಂಡೆಕಾಯಿ ನೆನೆಸಿಟ್ಟ ನೀರು ಕುಡಿದರೆ ಹತ್ತಾರು ಲಾಭ

ಬೆಳ್ಳುಳ್ಳಿ

ದಿನಕ್ಕೆ ಎರಡು ಅಥವ ಮೂರು ಎಸಳು ಹಸಿ ಬೆಳ್ಳುಳ್ಳಿಯನ್ನು ಆಹಾರದ ಮೂಲಕ ಸೇವಿಸುವ ಮೂಲಕ ಮಧುಮೇಹ ನಿಯಂತ್ರಣದಲ್ಲಿರಸಬಹುದು ಮಾತ್ರವಲ್ಲ, ರಕ್ತದಲ್ಲಿ ಹೆಚ್ಚಾಗಿದ್ದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಿ ಟ್ರೈಗ್ಲಿಸರೈಡ್ ಮತ್ತು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿರಿಸಲೂ ನೆರವಾಗುತ್ತದೆ. ಇದರಲ್ಲಿರುವ ಆಲಿಸಿನ್ ಎಂಬ ಪೋಷಕಾಂಶ ರಕ್ತದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸಲು ಮತ್ತು ಹೆಚ್ಚಿನ ಪ್ರಮಾಣದಲ್ಲಿ ರಕ್ತದ ಸಕ್ಕರೆಯನ್ನು ಹೀರಿಕೊಳ್ಳಲು ನೆರವಾಗುತ್ತದೆ. ಇದರಿಂದ ಮಧುಮೇಹ ನಿಯಂತ್ರಣದಲ್ಲಿರಲು ಸಾಧ್ಯವಾಗುತ್ತದೆ.

ಎಲೆಕೋಸು

ಕೋಸಿನ ಪೋಷಕಾಂಶಗಳು ರಕ್ತದಲ್ಲಿ ನಿಧಾನವಾಗಿ ಬಿಡುಗಡೆಯಾಗುತ್ತವೆ ಹಾಗೂ ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮಧುಮೇಹಿಗಳ ಆರೋಗ್ಯಕ್ಕೆ ಪೂರಕವಾಗಿದೆ. 2008ರಲ್ಲಿ ಇಲಿಗಳ ಮೇಲೆ ನಡೆಸಲಾದ ಪ್ರಯೋಗದಲ್ಲಿ ಸತತವಾಗಿ ಅರವತ್ತು ದಿನಗಳವರೆಗೆ ಎಲೆಕೋಸಿನ ಆಹಾರವನ್ನೇ ನೀಡಲಾಯಿತು.

ಎಲೆಕೋಸು

ಬಳಿಕ ಇವುಗಳ ಆರೋಗ್ಯವನ್ನು ಪರಿಶೀಲಿಸಿದಾಗ ಇವುಗಳ ರಕ್ತದಲ್ಲಿ ಸಕ್ಕರೆಯ ಮಟ್ಟ ಕಡಿಮೆಯಾಗಿರುವುದೂ ಸಕ್ಕರೆಯ ಮಟ್ಟದ ಏರಿಳಿತವೂ ನಿಯಂತ್ರಣಕ್ಕೆ ಬಂದಿರುವುದೂ ಕಂಡುಬಂದಿದೆ.   ಮಧುಮೇಹಿಗಳೇ, ಎಲೆಕೋಸಿನ ಬಗ್ಗೆ ಅಸಡ್ಡೆ ಮಾಡಬೇಡಿ

ಕರಿಮೆಣಸು

ಕರಿಮೆಣಸಿನಲ್ಲಿ ಅತಿ ಕಡಿಮೆ ಕ್ಯಾಲೋರಿಗಳು ಮತ್ತು ಅತಿ ಹೆಚ್ಚು ಕರಗದ ನಾರು ಇದ್ದು ಮಧುಮೇಹಿಗಳಿಗೆ ಸೂಕ್ತವಾದ ಆಹಾರವಾಗಿದೆ. ನಿಯಮಿತವಾಗಿ ಇತರ ಆಹಾರಗಳೊಂದಿಗೆ ಚಿಕ್ಕ ಪ್ರಮಾಣದಲ್ಲಿ ಸೇವಿಸುವ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿರಿಸಲು ನೆರವಾಗುತ್ತದೆ.   9 ಭಯಂಕರ ಕಾಯಿಲೆಗೆ ಮನೆಮದ್ದು ಈ ಕರಿಮೆಣಸು!

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Sunday, November 6, 2016, 12:09 [IST]
English summary

Foods that can help fight diabetes naturally!

One way to control blood sugar level and keep a tab on diabetes is by controlling your diet. What you eat has a direct relation to your blood sugar level, either raising it or keeping it within its normal range. So, it is important to eat sensibly to keep your blood sugar within the normal range. Here are some foods that might help.
Please Wait while comments are loading...
Subscribe Newsletter