For Quick Alerts
ALLOW NOTIFICATIONS  
For Daily Alerts

ತುರಿಕೆಯ ಸಮಸ್ಯೆಯೇ? ಮಧುಮೇಹದ ಸಂಜ್ಞೆಯಾಗಿರಬಹುದು!

|

ಮಧುಮೇಹ ಆವರಿಸಿರುವ ಲಕ್ಷಣಗಳೆಂದರೆ ಅತೀವ ಹಸಿವಾಗುವುದು, ಪದೇ ಪದೇ ಮೂತ್ರಕ್ಕೆ ಅವಸರವಾಗುವುದು, ಅತೀವ ಬಾಯಾರಿಕೆ ಇತ್ಯಾದಿ. ಆದರೆ ಇವುಗಳ ಜೊತೆಗೇ ಮೈ ತುರಿಕೆ ಸಹಾ ಒಂದು ಪ್ರಮುಖವಾದ ಲಕ್ಷಣವಾಗಿದೆ. ಹೆಚ್ಚಿನ ಮಧುಮೇಹಿಗಳಿಗೆ ಅವರ ಮಧುಮೇಹ ಪ್ರಾರಂಭವಾಗುವ ಸಮಯದಲ್ಲಿ ಮೈತುರಿಕೆ ಹೆಚ್ಚಾಗಿದ್ದರೂ ಇದಕ್ಕೆ ಬೇರೆಯೇ ಕಾರಣವಿರಬಹುದು ಎಂದು ತರ್ಕಿಸಿದ್ದ ಕಾರಣ ಮಧುಮೇಹದ ತಪಾಸಣೆ ತಡವಾಗಿದ್ದುದು ಕಂಡುಬಂದಿದೆ. ಆದರೆ ಒಂದು ವೇಳೆ ಮಧುಮೇಹಕ್ಕೆ ತಪಾಸಣೆ ನಡೆಸಿದ್ದರೆ ಇದನ್ನು ತಕ್ಷಣವೇ ಸರಿಪಡಿಸಲು ವೈದ್ಯರಿಗೆ ಹೆಚ್ಚಿನ ಸಮಯಾವಕಾಶ ದೊರೆತಂತಾಗುತ್ತಿತ್ತು.

Did you know itchy skin can be a sign of diabetes?

ಈ ತುರಿಕೆಗೆ ಏನು ಕಾರಣ? ಮಧುಮೇಹಿಗಳು ತಮ್ಮ ಚರ್ಮದ ಸೋಂಕು ಕಡಿಮೆಗೊಳಿಸಲು ಏನು ಮಾಡಬೇಕು? ಇದಕ್ಕೆ ಕೇವಲ ಚರ್ಮದ ಕ್ರೀಂ ಮತ್ತು ಆಯಿಂಟ್ ಮೆಂಟ್‌ಗಳು ಸಾಕೇ? ಇವೆಲ್ಲಾ ಸಾಮಾನ್ಯವಾಗಿ ಕೇಳಿಬರುವ ಪ್ರಶ್ನೆಗಳು. ಮಧುಮೇಹ ಆವರಿಸುವ ವೇಳೆಯಲ್ಲಿ ಇತರ ಸಂಜ್ಞೆಗಳು ಬರುವ ಮುನ್ನವೇ ಮೈಯಲ್ಲಿ ತುರಿಕೆ ಮೊದಲು ಪ್ರಾರಂಭವಾಗುತ್ತದೆ. ಒಂದು ವೇಳೆ ತುರಿಕೆ ಮಧುಮೇಹ ಪ್ರಾರಂಭವಾದ ಬಳಿಕ ಬಹಳ ವರ್ಷಗಳವರೆಗೆ ಕಾಡಿದರೆ ಇದು ಒಣಚರ್ಮಕ್ಕೆ ಕಾರಣವಾಗಬಹುದು. ಏಕೆಂದರೆ ಹೆಚ್ಚಿನ ಹೃದಯದೊತ್ತಡದ ಕಾರಣ ಚರ್ಮದಲ್ಲಿ ಶಿಲೀಂಧ್ರದ ಸೋಂಕು ಸುಲಭವಾಗಿ ಅಂಟುತ್ತದೆ. ಇದು ಹಲವು ಚರ್ಮವ್ಯಾಧಿಗಳಿಗೆ ಕಾರಣವಾಗುತ್ತದೆ. ಇದೇ ಸಮಯವನ್ನು ಕಾಯುತ್ತಿದ್ದ ಬ್ಯಾಕ್ಟೀರಿಯಾಗಳೂ ಧಾಳಿ ಮಾಡಿ ತಮ್ಮ ಪಾಲಿನ ಸೋಂಕನ್ನೂ ದಯಪಾಲಿಸುತ್ತವೆ.

ಒಂದು ವೇಳೆ ಈ ಸೋಂಕು ಗುಪ್ತಾಂಗಗಳಿಗೆ ಹರಡಿದರೆ ಇದು ಹರ್ಪೆಸ್ ಮತ್ತು ಇತರ ಮಾರಕ ಸೋಂಕುರೋಗಗಳಾದ vaginitis ಮತ್ತು balanitis ಎಂಬ ಸ್ಥಿತಿಗೆ ಕೊಂಡೊಯ್ಯಬಹುದು. ಇವು ಮಧುಮೇಹಿಗಳಲ್ಲಿ ಸಾಮಾನ್ಯವಾಗಿದೆ. ಇನ್ನೊಂದು ಮಾರಕ ಸೋಂಕು ಆಗಿರುವ tinea corporis ಎಂಬ ಸ್ಥಿತಿ ಇಡಿಯ ಮೈಯನ್ನೇ ವ್ಯಾಪಿಸಿದರೆ tinea cruris ಎಂಬ ಸೋಂಕು ಕೆಳಹೊಟ್ಟೆಯನ್ನು ಪ್ರಮುಖವಾಗಿ ಬಾಧಿಸುತ್ತದೆ. ಅಲ್ಲದೇ ಅನಿಯಂತ್ರಿತವಾದ ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣ ಚರ್ಮದಡಿಯಲ್ಲಿರುವ ದುಗ್ಧಗ್ರಂಥಿ ಮತ್ತು ಬೆವರಿನ ಗ್ರಂಥಿಗಳ ಮೇಲೆ ಪ್ರಭಾವ ಬೀರಿ ಇವುಗಳು ಸಾಕಷ್ಟು ಪ್ರಮಾಣದಲ್ಲಿ ದ್ರವಗಳನ್ನು ಸ್ರವಿಸದಂತೆ ತಡೆದು ತುರಿಕೆ ಪ್ರಾರಂಭವಾಗುತ್ತದೆ.

ವಿಶೇಷವಾಗಿ ಈ ತುರಿಕೆ ಪಾದ, ಮೊಣಕಾಲ ಮುಂಭಾಗ ಅಂದರೆ ಮೂಳೆ ನೇರವಾಗಿ ಚರ್ಮಕ್ಕೆ ತಾಕಿರುವ ಭಾಗದಲ್ಲಿ ಹೆಚ್ಚಾಗುತ್ತದೆ. ಈ ಭಾಗದಲ್ಲಿ ತುರಿಸಿದಾಗ ಚರ್ಮ ಹರಿದು ರಕ್ತ ಸೋರಿ ಸೋಂಕು ಹರಡಲು ಕಾರಣವಾಗುತ್ತದೆ. ಮಧುಮೇಹಿಗಳಿಗೆ ಇತರ ತೊಂದರೆಗಳಾದ ಎಕ್ಸಿಮಾ, ಮಾನಸಿಕ ಒತ್ತಡ ಮೊದಲಾದವು ಇದ್ದರೆ ಈ ಸ್ಥಿತಿ ಉಲ್ಬಣಾವಸ್ಥೆಗೆ ತಲುಪುತ್ತದೆ. ಆದರೆ ತುರಿಕೆ ಇದ್ದಾಕ್ಷಣ ಇದು ಮಧುಮೇಹವೇ ಎಂದು ಭಾವಿಸಲು ಸರ್ವಥಾ ಕಾರಣಗಳಿಲ್ಲ. ಒಂದು ವೇಳೆ ಕೇವಲ ಒಣಚರ್ಮ ಮತ್ತು ತುರಿಕೆ ಮಾತ್ರವಿದ್ದು ಮಧುಮೇಹದ ಇತರ ಗುರುತುಗಳು ಕಾಣಿಸಿಕೊಳ್ಳದೇ ಇದ್ದಲ್ಲಿ ಇದನ್ನು ಮಧುಮೇಹದ ಸಂಜ್ಞೆ ಎಂದು ಖಡಾಖಂಡಿತವಾಗಿ ಹೇಳುವಂತಿಲ್ಲ. ಆದರೆ ತುರಿಕೆಯ ಜೊತೆಗೇ ಮಧುಮೇಹದ ಇತರ ಸೂಚನೆಗಳು ಕೊಂಚವಾಗಿ ಕಂಡುಬರುತ್ತಿದ್ದರೆ ಮಾತ್ರ ತಪಾಸಣೆಗೊಳಗಾಗುವುದು ಅಗತ್ಯವಾಗಿದೆ.

ಹಾಗಾದರೆ ತುರಿಕೆಯನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ?
ಮಧುಮೇಹದ ನಿಯಂತ್ರಣಕ್ಕೆ ರಕ್ತದಲ್ಲಿ ಸಕ್ಕರೆಯ ಮಟ್ಟ ನಿಯಂತ್ರಣಕ್ಕೆ ಬರುವಂತೆ ಮಾಡಲು ವೈದ್ಯರು ಸೂಚಿಸಿದ ಔಷಧಿಗಳನ್ನು ಕಾಲಕಾಲಕ್ಕೆ ತೆಗೆದುಕೊಳ್ಳುತ್ತಾ ಇರಬೇಕು. ಮಧುಮೇಹದ ಸಾಧ್ಯತೆಯನ್ನು ಹೆಚ್ಚಿಸುವ ಕೆಲವು ಕಾರಣಗಳನ್ನು ಅರಿತು ಇದರಿಂದ ತಪ್ಪಿಸಿಕೊಳ್ಳುವ ಮೂಲಕ ಮಧುಮೇಹವನ್ನು ಮುಂದೂಡಬಹುದು ಅಥವಾ ನಿಯಂತ್ರಣದಲ್ಲಿರಿಸಬಹುದು. ಈ ನಿಟ್ಟಿನಲ್ಲಿ ಕೆಳಗಿನ ಸಲಹೆಗಳು ನಿಮಗೆ ನೆರವಾಗಬಲ್ಲವು.

* ಒಂದು ವೇಳೆ tinea corporis ಎಂಬ ಸೊಂಕಿಗೆ ಒಳಗಾಗಿದ್ದರೆ ದೇಹವನ್ನು ಸದಾ ತಂಪಾಗಿಡಬೇಕು. ಬೆವರಿನ ಮೂಲಕ ಈ ಸೋಂಕು ಶೀಘ್ರವಾಗಿ ಹರಡುತ್ತದೆ.

* ಸದಾ ಸಡಿಲವಾದ ಬಟ್ಟೆಗಳನ್ನು ತೊಡುವ ಮೂಲಕ ಶರೀರಕ್ಕೆ ಗಾಳಿಯಾಡಲು ನೆರವಾಗುತ್ತದೆ. ಇದು ಸೋಂಕು ಹರಡದಂತೆ ರಕ್ಷಿಸುತ್ತದೆ.

* ಪ್ರತಿದಿನ ಸ್ನಾನ ಮಾಡಲೇಬೇಕು. ಸಾಧ್ಯವಾದರೆ ಮುಂಜಾನೆ ಮತ್ತು ಸಂಜೆ ಕಚೇರಿಯಿಂದ ಹಿಂದಿರುಗಿದ ಬಳಿಕ ಒಟ್ಟು ಎರಡು ಬಾರಿ ಸ್ನಾನ ಮಾಡಬೇಕು. ಪ್ರತಿ ಸ್ನಾನದ ಬಳಿಕ ಕಡ್ಡಾಯವಾಗಿ ಟಾಲ್ಕಂ ಪೌಡರ್‌ನಿಂದ ಹಚ್ಚಿ ಮೈಯನ್ನು ಸವರಿಕೊಳ್ಳುವ ಮೂಲಕ ಶರೀರವನ್ನು ಒಣದಾಗಿರಿಸಿಕೊಳ್ಳಬೇಕು.

* ಶೂ ಮತ್ತು ಸಾಕ್ಸ್ ಅಥವಾ ಕಾಲುಚೀಲ ತೊಡುವವರಾದರೆ ಪ್ರತಿಬಾರಿ ಬೆವರನ್ನು ಹೀರದ ಮತ್ತು ಒಣಗಿರುವ ಸಾಕ್ಸ್ ಗಳನ್ನೇ ತೊಡಿರಿ. ಪ್ರತಿದಿನವೂ ಒಗೆದ ಕಾಲುಚೀಲಗಳನ್ನೇ ತೊಡಿರಿ. ಇಲ್ಲದಿದ್ದರೆ ಪಾದಗಳೂ ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ.

* ಮಧುಮೇಹಿಗಳು ಪ್ರತಿಬಾರಿ ಹವಾಮಾನ ಬದಲಾದಾಗ ಚರ್ಮದಲ್ಲಿ ಕೊಂಚ ತುರಿಕೆಯನ್ನು ಅನುಭವಿಸಬಹುದು. ಆದರೆ ಹೆಚ್ಚು ತುರಿಸಿಕೊಂಡಾಗ ಇದು ಪ್ರಕೋಪಕ್ಕೆ ತಿರುಬಹುದು. ತುರಿಕೆಯಿಂದ ಚರ್ಮ ಸುಲಭವಾಗಿ ಹರಿಯುತ್ತದೆ ಅಥವಾ ಪಕಳೆ ಏಳುತ್ತದೆ. ಇಲ್ಲಿ ಚರ್ಮ ಕೆಂಪಗಾಗುತ್ತದೆ. ಈ ಸಂದರ್ಭದಲ್ಲಿ ತಕ್ಷಣವೇ ಚರ್ಮವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಿರಿ. ತುರಿಕೆ ಹೆಚ್ಚಾಗಿದ್ದರೆ ಚಿಕ್ಕ ಟವೆಲ್ ಒಂದನ್ನು ಮಡಚಿ ಒರೆಸಿಕೊಳ್ಳುವ ಮೂಲಕ ಚರ್ಮಕ್ಕೆ ಹಾನಿಯಾಗದಂತೆ ತುರಿಕೆಯನ್ನು ಕಡಿಮೆ ಮಾಡಿಕೊಳ್ಳಬಹುದು.

English summary

Did you know itchy skin can be a sign of diabetes?

well Itchy skin is a common symptom of diabetes, and if you have been suffering from long-standing diabetes, it can lead to dry skin. This is because high blood sugar provides a favourable condition for fungal growth, thereby increasing your risk of skin problems like fungal infections and bacterial infections. If the infection spreads to the genitals, it might lead to herpes and other conditions like vaginitis and balanitis, which is common in diabetics. Also, tinea corporis, a fungal infection that affects the entire body, unlike tinea cruris, which leads to infection of the groin, is also seen in some cases.
Story first published: Tuesday, March 22, 2016, 11:40 [IST]
X
Desktop Bottom Promotion