For Quick Alerts
ALLOW NOTIFICATIONS  
For Daily Alerts

ಮಧುಮೇಹಿಗಳ ಪಾದಗಳ ಆರೈಕೆ- ಚಿಂತೆ ಬಿಡಿ, ಕೇರ್‌ ಮಾಡಿ

By Deepu
|

ಮಧುಮೇಹ ಇತ್ತೀಚೆಗೆ ಎಲ್ಲರಲ್ಲೂ ಸಾಮಾನ್ಯವೆನ್ನುವಷ್ಟರ ಮಟ್ಟಿಗೆ ವ್ಯಾಪಿಸಿಬಿಟ್ಟಿದೆ. ಮಧುಮೇಹ ಬಂದವರು ಹಲವಾರು ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಊಟ-ತಿಂಡಿ, ಪಥ್ಯ, ನಿದ್ದೆ, ಇತ್ಯಾದಿ ಸಂಪೂರ್ಣ ಜೀವನ ಶೈಲಿಯನ್ನು ಮಧುಮೇಹಕ್ಕೆ ಒಪ್ಪುವ ರೀತಿ ಇರಿಸಿಕೊಳ್ಳಬೇಕಾಗುತ್ತದೆ. ಮಧುಮೇಹಿಗಳಿಗೆ ಅವರ ಆರೋಗ್ಯ ಮತ್ತು ದೇಹವು ವಿಪರೀತ ಕಾಟ ಕೊಡಲು ಆರಂಭಿಸುತ್ತದೆ. ಕ್ಯಾಪ್ಸಿಕಂ-ಮಧುಮೇಹಿಗಳ ಪಾಲಿನ ಸಂಕಷ್ಟಹರ ತರಕಾರಿ

ಅಂತಹ ಸಮಸ್ಯೆಗಳಲ್ಲಿ ಡಯಾಬೆಟಿಕ್ ಫೂಟ್ ಅಥವಾ ಅಲ್ಸರ್ ಸಮಸ್ಯೆ ಸಹ ಒಂದು. ಇದು ಪೆರಿಫೆರಲ್ ಸೆನ್ಸರಿ ನ್ಯೂರೋಪತಿ, ಸಣ್ಣ ಪುಟ್ಟ ಗಾಯಗಳು, ಸ್ವಚ್ಛತೆಯಿಲ್ಲದ ಪಾದಗಳು, ದುರ್ಬಲ ಪಾದ ರಕ್ಷಣೆ ಮುಂತಾದವುಗಳಿಂದ ಈ ಸಮಸ್ಯೆ ಬರುತ್ತದೆ. ಅದಕ್ಕಾಗಿ ಪಾದಗಳನ್ನು ರಕ್ಷಿಸಿಕೊಳ್ಳಲು ನೀವು ವಿಪರೀತ ಕಾಳಜಿಯನ್ನು ತೋರಬೇಕಾಗುತ್ತದೆ. ವಿಶೇಷವಾಗಿ ನ್ಯೂರೋಪತಿ, ಪೆರಿಫೆರಲ್ ವ್ಯಾಸ್ಕುಲರ್ ಕಾಯಿಲೆ ಅಥವಾ ಸ್ಟ್ರಕ್ಚರಲ್ ಫೂಟ್ ಅಬ್‌ನಾರ್ಮಲಿಟಿ ಇರುವ ರೋಗಿಗಳು ಇದರ ಕುರಿತು ಹೆಚ್ಚಿನ ಕಾಳಜಿವಹಿಸಬೇಕಾದುದು ಅತ್ಯಗತ್ಯ. ಅದು ಹೇಗೆ ಕಾಳಜಿವಹಿಸಬೇಕು ಎಂಬುದನ್ನು ಮುಂದೆ ಓದಿ...

ರಕ್ತದಲ್ಲಿ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಿ

ರಕ್ತದಲ್ಲಿ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಿ

ನಿಮ್ಮ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ತೀರಾ ಅತ್ಯಗತ್ಯ. ಇದರ ಜೊತೆಗೆ ನಿಮ್ಮ ಆಹಾರ ಪದ್ಧತಿಯನ್ನು ಸಹ ಸರಿಯಾಗಿ ಇರಿಸಿಕೊಳ್ಳಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ರಕ್ತದಲ್ಲಿ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಿ

ರಕ್ತದಲ್ಲಿ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಿ

ಸಮಯಕ್ಕೆ ಸರಿಯಾಗಿ ವೈದ್ಯರು ಶಿಫಾರಸು ಮಾಡಿರುವ ಆಹಾರ ಪದಾರ್ಥಗಳನ್ನು ಸೇವಿಸಿ, ಜೊತೆಗೆ ವೈದ್ಯರು ಶಿಫಾರಸ್ಸು ಮಾಡಿದ ಔಷಧಿಗಳನ್ನು ತಪ್ಪದೆ ಸೇವಿಸಿ. ಇದರಿಂದ ನಿಮಗೆ ಬರುವ ಮಧುಮೇಹದ ಸಮಸ್ಯೆಗಳು ದೂರವಾಗುತ್ತವೆ.

ಪಾದರಕ್ಷೆಗಳನ್ನು ಸರಿಯಾಗಿ ಆರಿಸಿಕೊಳ್ಳಿ

ಪಾದರಕ್ಷೆಗಳನ್ನು ಸರಿಯಾಗಿ ಆರಿಸಿಕೊಳ್ಳಿ

ಚೂಪಾದ ಮತ್ತು ಸರಿಯಾಗಿ ಹೊಂದಿಕೆಯಾಗದ ಪಾದರಕ್ಷೆಗಳು ನಿಮಗೆ ಒಳ್ಳೆಯದಲ್ಲ. ಪಾದರಕ್ಷೆಯನ್ನು ಧರಿಸದೆ ಇರುವುದು ಸಹ ಅಪಾಯಕ್ಕೆ ಆಹ್ವಾನ ನೀಡಿದಂತೆ. ಇದರಿಂದ ನಿಮ್ಮ ಪಾದಕ್ಕೆ ಗಾಯಗಳು ಸಂಭವಿಸಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪಾದರಕ್ಷೆಗಳನ್ನು ಸರಿಯಾಗಿ ಆರಿಸಿಕೊಳ್ಳಿ

ಪಾದರಕ್ಷೆಗಳನ್ನು ಸರಿಯಾಗಿ ಆರಿಸಿಕೊಳ್ಳಿ

ಒಮ್ಮೆ ನಿಮ್ಮ ಪಾದವು ಗಾಯಗೊಂಡರೆ, ಅದು ಕೂಡಲು ದೀರ್ಘಕಾಲ ತೆಗೆದುಕೊಳ್ಳುತ್ತದೆ. ಇಂತಹ ಪರಿಸ್ಥಿತಿಗಳಲ್ಲಿ, ಸರಿಯಾದ ಪಾದರಕ್ಷೆಗೆ ಹಣವನ್ನು ತೊಡಗಿಸಿ (ಅದು ತೀರಾ ಸಡಿಲವಾಗಿಯೂ ಇರಬಾರದು ಮತ್ತು ಬಿಗಿಯಾಗಿಯು ಸಹ ಇರಬಾರದು).ಎಲ್ಲದ್ದಕ್ಕಿಂತ ಹೆಚ್ಚಿಗೆ ನಿಮ್ಮ ಪಾದವು ಗಾಯವಾಗದಂತೆ ತಡೆಯಲು ನೀವು ಮೃದುವಾದ ಇನ್‌ಸೋಲ್‌ಗಳನ್ನು ಬಳಸಬಹುದು.

ಯಾವುದೇ ಕಾರಣಕ್ಕು ಸ್ವಯಂ-ವೈದ್ಯ ಬೇಡ

ಯಾವುದೇ ಕಾರಣಕ್ಕು ಸ್ವಯಂ-ವೈದ್ಯ ಬೇಡ

ಸಾಮಾನ್ಯ ಜನರಂತೆ ಮಧುಮೇಹಿಗಳು ಸ್ವಯಂ ವೈದ್ಯವನ್ನು ಮಾಡಿಕೊಳ್ಳುವುದು ಒಳ್ಳೆಯದಲ್ಲ. ಸಣ್ಣ ಗಾಯ ತಾನೇ ಎಂದು ಸಹ ಉದಾಸೀನ ಮಾಡಬೇಡಿ. ಮೈಯಲ್ಲಿ ಅಥವಾ, ಕಾಲಿನಲ್ಲಿ ಸಣ್ಣ ಗಾಯವಾಗಲಿ ಅಥವಾ ದೊಡ್ಡ ಗಾಯವಾಗಲಿ, ನಿಮ್ಮ ವೈದ್ಯರ ಬಳಿ ಕೇಳಿ ಒಳ್ಳೆಯ ಔಷಧಿಯನ್ನು ಪಡೆದುಕೊಳ್ಳಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಯಾವುದೇ ಕಾರಣಕ್ಕು ಸ್ವಯಂ-ವೈದ್ಯ ಬೇಡ

ಯಾವುದೇ ಕಾರಣಕ್ಕು ಸ್ವಯಂ-ವೈದ್ಯ ಬೇಡ

ಸ್ವಾಭಾವಿಕ ಚಿಕಿತ್ಸೆ ಮತ್ತು ಸ್ವಯಂ ವೈದ್ಯಗಳು ಮಾಡಿಕೊಳ್ಳುವ ಮುನ್ನ ವೈದ್ಯರ ಸಲಹೆ ಅತ್ಯಗತ್ಯ. ಬನ್ನಿ ನಿಮ್ಮ ಪಾದಗಳಲ್ಲಿ ಕಾಣಿಸಿಕೊಳ್ಳುವ ಅಲ್ಸರ್‌ಗೆ ಹಂತ ಹಂತವಾದ ಆರೈಕೆ ಹೇಗೆ ನೀಡಬೇಕೆಂದುನೋಡೋಣ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹಂತ 1: ಗಾಯವನ್ನು ತೊಳೆಯುವುದು

ಹಂತ 1: ಗಾಯವನ್ನು ತೊಳೆಯುವುದು

ಗಾಯವನ್ನು ಧೂಳು, ಕೊಳೆ, ಹೊರಗಿನ ವಸ್ತುಗಳು ಅದರಲ್ಲಿ ಬಿದ್ದಿರುವುದನ್ನು ತೆಗೆಯುವುದು ಮತ್ತು ಇನ್‌ಫೆಕ್ಟ್ ಆದ ಅಥವಾ ಸತ್ತಕೋಶಗಳನ್ನು ಹೊರಗೆ ತೆಗೆಯುವುದು ಮತ್ತು ಕೀವನ್ನು ಹೊರ ಹಾಕುವುದು ಮಾಡಿ. ಹೀಗೆ ಡ್ರೆಸಿಂಗ್ ಆದ ಮೇಲೆ, ಶೀಘ್ರವಾಗಿ ಗಾಯ ವಾಸಿಯಾಗಲು ಇವು ತೀರಾ ಅವಶ್ಯಕ. ಈ ಪ್ರಕ್ರಿಯೆಯನ್ನು ಡಿಬ್ರೈಡ್‌ಮೆಂಟ್ ಎಂದು ಕರೆಯುತ್ತಾರೆ.

ಹಂತ 1: ಗಾಯವನ್ನು ತೊಳೆಯುವುದು

ಹಂತ 1: ಗಾಯವನ್ನು ತೊಳೆಯುವುದು

ಇದು ಸುತ್ತಮುತ್ತಲ ಕೋಶಗಳನ್ನು ಗುಣಪಡಿಸುತ್ತದೆ. ಈ ಪ್ರಕ್ರಿಯೆಯನ್ನು ವಾರಕ್ಕೆ ಎರಡರಿಂದ ಮೂರು ದಿನಗಳ ಕಾಲ ಮಾಡಬೇಕು. ಡ್ರೆಸ್ಸಿಂಗ್ ತುಂಬಾ ಅವಶ್ಯಕ, ಇದು ಗಾಯದಿಂದ ಹೊರಗೆ ಬರುವ ಕೀವು ಮುಂತಾದವುಗಳನ್ನು ಗುಣಪಡಿಸುತ್ತದೆ ಮತ್ತು ಗಾಯವನ್ನು ಇನ್‌ಫೆಕ್ಷನ್‌ನಿಂದ ಕಾಪಾಡುತ್ತದೆ. ಇದಕ್ಕಾಗಿ ನೀವು ಸರಳವಾದ ಗೇಜ್ ಡ್ರೆಸ್ಸಿಂಗ್ ಅನ್ನು ಬಳಸಬಹುದು.

ಹಂತ 2: ಗಾಯದ ಮೇಲೆ ಒತ್ತಡವನ್ನು ಕಡಿಮೆ ಮಾಡುವಿಕೆ

ಹಂತ 2: ಗಾಯದ ಮೇಲೆ ಒತ್ತಡವನ್ನು ಕಡಿಮೆ ಮಾಡುವಿಕೆ

ವೇಗವಾಗಿ ಗಾಯ ಗುಣವಾಗಲು, ಅದರ ಮೇಲೆ ಒತ್ತಡವನ್ನು ಕಡಿಮೆ ಮಾಡವುದು ತುಂಬಾ ಮುಖ್ಯ. ಇದಕ್ಕಾಗಿ ನೀವು ಊರುಗೋಲಿನ ಸಹಾಯವನ್ನು ಅಥವಾ ವೀಲ್ ಚೇರ್ ಸಹಾಯವನ್ನು ಪಡೆದು ನಡೆಯಬಹುದು. ಇಲ್ಲವೇ ವಿಶೇಷವಾಗಿ ಸಿದ್ಧಪಡಿಸಿದ ಪಾದರಕ್ಷೆಯನ್ನು ಸಹ ಧರಿಸಬಹುದು. ಇದು ನಿಮ್ಮ ಗಾಯವಾದ ಪಾದಗಳಿಗೆ ಆರಾಮವನ್ನು ನೀಡುತ್ತದೆ.

ಹಂತ 2: ಗಾಯದ ಮೇಲೆ ಒತ್ತಡವನ್ನು ಕಡಿಮೆ ಮಾಡುವಿಕೆ

ಹಂತ 2: ಗಾಯದ ಮೇಲೆ ಒತ್ತಡವನ್ನು ಕಡಿಮೆ ಮಾಡುವಿಕೆ

ಆದರೂ ಕೆಲವೊಂದು ಸಂದರ್ಭಗಳಲ್ಲಿ, ನಿಮ್ಮ ಪಾದಗಳಿಗೆ ಕ್ಯಾಸ್ಟ್ ಅನ್ನು ಲೇಪಿಸಬೇಕಾಗುತ್ತದೆ. ಇದರಿಂದ ನಿಮ್ಮ ಪಾದಗಳಿಗೆ ಉತ್ತಮ ಫಲಿತಾಂಶ ಬೇಕೆಂದಾಗ ಇದನ್ನು ನಿಮಗೆ ಶಿಫಾರಸು ಮಾಡಲಾಗುತ್ತದೆ.

ಹಂತ 3: ಔಷಧವನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳಿ

ಹಂತ 3: ಔಷಧವನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳಿ

ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ಆಂಟಿಬಯೋಟಿಕ್‌ಗಳನ್ನು ಶಿಫಾರಸು ಮಾಡಲಾಗುತ್ತದೆ. ಪಾದದ ಗಾಯವನ್ನು ಗುಣಪಡಿಸಲು ಇವು ಅತ್ಯಾವಶ್ಯಕ. ಜೊತೆಗೆ ಇವು ಬ್ಯಾಕ್ಟೀರಿಯಾಗಳನ್ನು ಸಹ ನಿವಾರಿಸುತ್ತದೆ. ತೀವ್ರ ಗಾಯವಾದವರನ್ನು ಆಸ್ಪತ್ರೆಗೆ ಸೇರಿಸುವುದು ಒಳ್ಳೆಯದು. ಆಗಲು ಸಹ ಆಂಟಿಬಯೋಟಿಕ್‌ಗಳನ್ನು ನೀಡಿ ಇವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತದೆ. ಇದರ ಜೊತೆಗೆ ಉರಿಬಾವು ನಿವಾರಕ ಔಷಧಗಳನ್ನು ಸಹ ಬಳಸಿ. ಇದರಿಂದ ಬಾವು ಮತ್ತು ನೋವು ಎರಡು ಗುಣಮುಖವಾಗುತ್ತದೆ. ಆಂಟಿಬಯೋಟಿಕ್‌ಗಳ ಮೂಲಕ ನಿಮ್ಮ ಗಾಯ ಮತ್ತು ನೋವು ಎರಡು ಗುಣ ಮುಖವಾಗುತ್ತದೆ

English summary

Diabetic foot care — everything you need to know

Uncontrolled diabetes is one of the reasons that puts you at a risk of diabetic foot or ulcers. However, there are various factors like peripheral sensory neuropathy, minor injuries of the foot, unhygienic wound care or poor foot protection. And hence, prevention of foot ulcers is of paramount importance, especially in diabetics with neuropathy, peripheral vascular disease, or structural foot abnormalities. Here are few tips for on diabetic foot care.
Story first published: Saturday, January 23, 2016, 12:44 [IST]
X
Desktop Bottom Promotion