For Quick Alerts
ALLOW NOTIFICATIONS  
For Daily Alerts

ಮಧುಮೇಹ ಸೈಲೆಂಟಾಗಿ 'ಕಣ್ಣಿಗೂ' ಮಾರಕವಾಗಬಹುದು!

By Manu
|

ದೇಹದಲ್ಲಿ ಎಲ್ಲಾ ಅಂಗಾಂಗಗಳೂ ಉಪಯುಕ್ತವಾದುವುಗಳು. ಯಾವುದೇ ಅಂಗಕ್ಕೂ ಕಿಂಚಿತ್ತು ಏರುಪೇರಾದರೂ ಅದರ ಪರಿಣಾಮ ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಆಗುತ್ತದೆ. ಈ ಅಂಗಗಳಲ್ಲಿ ಕೆಲವು ಸೂಕ್ಷ್ಮಾತಿಸೂಕ್ಷ್ಮ ಅಂಗಗಳೂ ಸೇರಿವೆ. ಅದರಲ್ಲಿ ನಮ್ಮ ಅಮೂಲ್ಯ ಎರಡು ಕಣ್ಣುಗಳು ಸಹ ಪ್ರಮುಖವಾದವು. ಈ ಲೇಖನದಲ್ಲಿ ಮಧುಮೇಹದಿಂದ ಕಣ್ಣುಗಳಿಗೆ ಆಗುವ ತೊಂದರೆಗಳ ಬಗ್ಗೆ ಪ್ರಸ್ತಾಪಿಸಲಾಗಿದೆ.

ಮಧುಮೇಹಕ್ಕೂ ಕಣ್ಣಿಗೂ ಏನು ಸಂಬಂಧ ಎಂದು ಕೆಲವರು ಪ್ರಶ್ನಿಸುತ್ತಾರೆ. ಇದು ಅವರ ತಿಳುವಳಿಕೆಯ ಕೊರತೆಯನ್ನು ತೋರಿಸುತ್ತದೆ. ಮಧುಮೇಹಿಗಳು ಮುಖ್ಯವಾಗಿ ತಮ್ಮ ದೇಹದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿಟ್ಟರೆ ಅವರೂ ಸಹ ಇತರರಂತೆ ಆನಂದದಿಂದ ಜೀವನ ಸಾಗಿಸಬಹುದು. ಆದರೆ ನಿಮ್ಮ ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಅಂಶವು ನಿಯಂತ್ರಣದಲ್ಲಿ ಇರದಿದ್ದರೆ, ನಿಮ್ಮ ರೋಗ ನಿರೋಧಕ ಶಕ್ತಿಯು ಕುಂದುತ್ತದೆ.

ಇದರಿಂದ ಸಹಜವಾಗಿ ಮಧುಮೇಹದಿಂದ ಉಂಟಾಗುವ ಮಧುಮೇಹದ ಕಣ್ಣಿನ ತೊಂದರೆಯಂತಹ (ರೆಟಿನೋಪತಿ) ಹಲವಾರು ಅರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ. ವಯಸ್ಸಾದಂತೆ ನೇತ್ರದ ಸಮಸ್ಯೆ ಉಂಟಾಗುವ ಅಪಾಯವೂ ಸಹ ಹೆಚ್ಚಾಗುತ್ತದೆ. ಇದರಿಂದ ನಿಮ್ಮ ಕಣ್ಣುಗಳಿಗೆ ಕಾಟರಾಕ್ಟ್ ಹಾಗೂ ಗ್ಲೌಕೋಮಾದಂತಹ ಅಪಾಯಕಾರಿ ಸಮಸ್ಯೆಗಳು ಉಂಟಾಗಲು ಕಾರಣವಾಗುತ್ತದೆ. ನಂತರದ ದಿನಗಳಲ್ಲಿ ಬೊಜ್ಜಿನ ಸಮಸ್ಯೆ, ಅಧಿಕ ರಕ್ತದೊತ್ತಡ ಅಥವಾ ಹೃದಯ ಸಂಬಂಧಿತ ಸಮಸ್ಯೆಗಳು ಉಂಟಾಗುವ ಅಪಾಯ ಹೆಚ್ಚಿರುತ್ತದೆ. ಮಧುಮೇಹಿಗಳ ಪಾದಗಳ ಆರೈಕೆ- ಚಿಂತೆ ಬಿಡಿ, ಕೇರ್‌ ಮಾಡಿ

ಈ ಕಾರಣದಿಂದಾಗಿಯೇ ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಬಳಲುತ್ತಿರುವವರಲ್ಲಿ ಗ್ಲೌಕೋಮಾ ದಂತಹ ಸಮಸ್ಯೆಗಳು ಅಧಿಕವಿರುತ್ತದೆ ಮತ್ತು ನಿಮ್ಮ ಕಣ್ಣುಗಳಲ್ಲಿ ಹೆಚ್ಚು ಒತ್ತಡ ಉಂಟಾಗಲು ಕಾರಣವಾಗುತ್ತದೆ. ಮಧುಮೇಹಿಕ ಸಮಸ್ಯೆಗಳನ್ನು ನಿವಾರಿಸಲು ಇರುವ ಪ್ರಮುಖ ದಾರಿಯೆಂದರೆ ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸಮತೋಲನದಲ್ಲಿರಿಸುವುದು. ಆದ್ದರಿಂದಲೇ ಮಧುಮೇಹದಿಂದ ಬಳಲುತ್ತಿರುವವರು ಮುಂದಿನ ಬೆಳವಣಿಗೆಗೆ ಕಾಯದೇ ಕ್ರಮವಾಗಿ ಆಗಿಂದಾಗ್ಗೆ ತಮ್ಮ ಕಣ್ಣುಗಳನ್ನು ಪರೀಕ್ಷಿಸಿಕೊಳ್ಳುವುದು ಅನಿವಾರ್ಯ. ಮಧುಮೇಹ ರೆಟಿನೋಪತಿ (ಮಧುಮೇಹದ ಕಣ್ಣಿನ ತೊಂದರೆ)ಯಿಂದ ಬಳಲುತ್ತಿರುವವರ ಗುಣ ಲಕ್ಷಣಗಳು ಹೀಗಿವೆ- ಮಧುಮೇಹಿಗಳಿಗಾಗಿ ಏಳು 'ಜೀವ ರಕ್ಷಕ' ಪರೀಕ್ಷೆಗಳು

Diabetes can damage your eyes! Here are tips you should follow

*ದೃಷ್ಟಿಯಲ್ಲಿ ಅಸ್ಪಷ್ಟತೆ
*ಫ್ಲೋಟರ್ಸ್ ಎಂದು ಕರೆಯುವ ಕಪ್ಪು ಕಲೆಗಳು ದೃಷ್ಟಿಯಲ್ಲಿ ಚಲಿಸುವಿಕೆ
*ದೃಷ್ಟಿಯಲ್ಲಿ ಕೆಲವು ಕಾಣದ ಭಾಗಗಳು
*ರಾತ್ರಿ ಹೊತ್ತಿನಲ್ಲಿ ದೃಷ್ಟಿಯಲ್ಲಿ ಅಸ್ಪಷ್ಟತೆ
*ಕೆಲವು ತೀವ್ರತೆಯ ಪ್ರಕರಣಗಳಲ್ಲಿ ದೃಷ್ಟಿಮಾಂಧ್ಯತೆ

ಇದನ್ನು ನಿವಾರಿಸುವ ಬಗೆ?
*ರಕ್ತದಲ್ಲಿ ಸಕ್ಕರೆಯ ಅಂಶವು ಸಮತೋಲನದಲ್ಲಿದ್ದರೂ ಸಹ ವರ್ಷಕ್ಕೊಮ್ಮೆ ನೇತ್ರಗಳನ್ನು ಕ್ರಮವಾಗಿ ಸುದೀರ್ಘ ಪರೀಕ್ಷೆಗಳಿಗೆ ಒಳಪಡಿಸಿಕೊಳ್ಳಿ. ಮಧುಮೇಹಿಗಳಲ್ಲಿ ಸಂಚಲನ ವ್ಯವಸ್ಥೆಯಲ್ಲಿನ ನೆನಪಿನ ಶಕ್ತಿಯು ಅಧಿಕವಿದ್ದು, ಇದು ಮಧುಮೇಹಿಗಳಲ್ಲಿ ಸಹಜವಾದ ರಕ್ತದಲ್ಲಿನ ಸಕ್ಕರೆ ಅಂಶವಿದ್ದು, ನಿಜವಾದ ಹಾನಿಯು ಮಧುಮೇಹದಿಂದ ಅಂಗಾಂಗಗಳಿಗೆ ಆಗುವಂತಿದ್ದು, ಅದನ್ನು ಮರುಸ್ಥಾಪಿಸಲು ಸಾಧ್ಯವಿಲ್ಲ. ಕೆಲವು ಪ್ರಕರಣಗಳಲ್ಲಿ ರಕ್ತದಲ್ಲಿನ ಸಕ್ಕರೆ ಅಂಶವು ಸಹಜವಾಗಿದ್ದರೂ ಸಹ ಅವರ ರೆಟಿನಾ ಅಥವಾ ನೇತ್ರಗಳಲ್ಲಿ ಸಮಸ್ಯೆಗಳು ಕಂಡುಬಂದಿವೆ. ಈ ಪ್ರಕರಣದವರಲ್ಲಿ ಪಾದಗಳು ಉರಿಯುವಿಕೆ ಅಥವಾ ರೆಟಿನೋಪತಿಯಲ್ಲಿನ ಬದಲಾವಣೆಗಳು ಅನುಭವಕ್ಕೆ ಬರುತ್ತವೆ. ಮಧುಮೇಹಿಗಳಲ್ಲಿ ನೇತ್ರಗಳನ್ನು ಸಂರಕ್ಷಿಸಲು ಕೆಲವು ಉಪಯುಕ್ತ ವಿಧಾನಗಳನ್ನು ನಿಮ್ಮ ಪ್ರಯೋಜನಕ್ಕಾಗಿ ಈ ಲೇಖನದಲ್ಲಿ ನೀಡಲಾಗಿದೆ.

ಅದರಲ್ಲೂ, ಅನಿಯಂತ್ರಿತ ಮಧುಮೇಹಿಗಳು ವೈದ್ಯರ ಬಳಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವ ಅನಿವಾರ್ಯತೆ ಇದೆ. ರೆಟಿನಾದಲ್ಲಿನ ಬದಲಾವಣೆಗಳಿಂದ ಉಂಟಾಗುವ ಮಸ್ಕುಲಾರ್ ರೆಟೀನಾ ಅಥವಾ ಪ್ರೊಲಿಫರೇಟಿವ್ರೆ ಟೀನಾ ದಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಸೂಕ್ತ ಚಿಕಿತ್ಸೆ ಪಡೆಯುವುದು ಅವಶ್ಯಕ. ಇನ್ನೂ ಕೆಲವು ತೀವ್ರತೆಯ ಪ್ರಕರಣಗಳಲ್ಲಿ ನಿಮ್ಮ ಕಣ್ಣಿನ ತಜ್ಞರು ರೆಟೀನಾ ಒಳಗೆ ಪೇರಿಸುವ ಇಂಟ್ರಾ ವಿಟ್ರಿಯಸ್ ಇಂಜೆಕ್ಷನ್ ಅಥವಾ ಚಿಕಿತ್ಸೆಯ ಸಲಹೆಯನ್ನು ನೀಡಲಿದ್ದಾರೆ. ಇದರಿಂದ ನಿಮ್ಮ ಸ್ಥಿತಿಯು ಉತ್ತಮಗೊಳ್ಳಲಿದ್ದು, ರಕ್ತದ ಸಕ್ಕರೆ ಅಂಶವು ಸಮತೋಲನದಲ್ಲಿರುವಂತೆ ಮಾಡುತ್ತದೆ. ರಕ್ತಸ್ರಾವದಂತಹ ತೀವ್ರತೆಯ ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಿಸುವುದು ಅನಿವಾರ್ಯ.

English summary

Diabetes can damage your eyes! Here are tips you should follow

When your blood glucose is not under control, your immunity also tends to drop, which predisposes you to various complications of diabetes like diabetic retinopathy. The risk is high as you age, which means that it not only affects the retina but also puts you at risk of other eye problems like cataract and glaucoma. This is why every diabetic is recommended not to wait for symptoms to develop but go for regular eye checkups. The symptoms of diabetic retinopathy are -
X
Desktop Bottom Promotion