For Quick Alerts
ALLOW NOTIFICATIONS  
For Daily Alerts

ಹದಿಹರೆಯದವರೇ ಮಧುಮೇಹದ ಅಪಾಯ ತಿಳಿಯಿರಿ!

By Hemanth
|

ಮಧುಮೇಹ ದೇಹಕ್ಕೆ ಒಂದು ಸಲ ಒಗ್ಗಿಕೊಂಡರೆ ಅದನ್ನು ಹೊರಗೆ ಓಡಿಸುವುದು ತುಂಬಾ ಕಷ್ಟ. ಇದನ್ನು ನಿಧಾನವಾಗಿ ಕೊಲ್ಲುವ ರೋಗವೆಂದೇ ಕರೆಯಬಹುದು. ಯಾಕೆಂದರೆ ಇದು ನಿಧಾನವಾಗಿ ನಿಮ್ಮ ದೇಹದ ಒಂದೊಂದೇ ಅಂಗವನ್ನು ನಿಷ್ಕ್ರೀಯವಾಗಿಸುತ್ತದೆ. ಮಧುಮೇಹದ ಬಗ್ಗೆ ನಾವು ಎಚ್ಚರಿಕೆ ವಹಿಸದಿದ್ದರೆ ಅದು ಪ್ರಾಣಾಂತಿಕ ರೋಗವಾಗಬಹುದು.

ದೇಹದಲ್ಲಿ ಇನ್ಸುಲಿನ್ ಉತ್ಪತ್ತಿಯಾಗದೆ ಇರುವುದು ಅಥವಾ ಇನ್ಸುಲಿನ್ ಅನ್ನು ದೇಹವು ಉಪಯೋಗಿಸಿಕೊಳ್ಳಲು ವಿಫಲವಾಗುವುದಕ್ಕೆ ಡಯಾಬಿಟಿಸ್ ಯಾನೆ ಮಧುಮೇಹ ಎನ್ನುತ್ತಾರೆ. ಮೌನ ಕೊಲೆಗಾರ 'ಮಧುಮೇಹದ' ಅಪಾಯಕಾರಿ ಲಕ್ಷಣಗಳು!

Dangers Of Diabetes In Teenagers

ಒಂದನೇ ವರ್ಗದ ಡಯಾಬಿಟಿಸ್ (ಟೈಪ್ 1) ಇದ್ದರೆ ಅಂತವರು ಇನ್ಸುಲಿನ್ ಚುಚ್ಚಿಕೊಳ್ಳಬೇಕು. ಎರಡನೇ ಹಂತದ ಡಯಾಬಿಟಿಸ್ ಇದ್ದರೆ ಆಗ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಜೀವನ ಸಾಗಿಸಬಹುದಾಗಿದೆ. ವಂಶವಾಹಿನಿಯಾಗಿ ಬರುವಂತಹ ಮಧುಮೇಹ ಇಂದಿನ ದಿನಗಳಲ್ಲಿ ಹದಿಹರೆಯದವರಲ್ಲೂ ಕಾಣಸಿಗುತ್ತಿದೆ. ಕುಟುಂಬದಲ್ಲಿ ಯಾರಿಗಾದರೂ ಡಯಾಬಿಟಿಸ್ ಇದ್ದರೆ ಹದಿಹರೆಯದವರಿಗೂ ಇದು ಬರುವ ಸಾಧ್ಯತೆ ಇರುತ್ತದೆ. ಒಂದೇ ತಿಂಗಳಿನಲ್ಲಿ ಮಧುಮೇಹ ನಿಯಂತ್ರಣ-ಚಾಲೆಂಜ್‌ಗೆ ರೆಡಿನಾ?

ಹದಿಹರೆಯದವರಲ್ಲಿ ಡಯಾಬಿಟಿಸ್ ಕಾಣಿಸಿಕೊಂಡರೆ ಅದು ದೊಡ್ಡ ಅಪಾಯವನ್ನು ಉಂಟು ಮಾಡಬಹುದು. ಯಾಕೆಂದರೆ ಹದಿಹರೆಯದವರು ಆಹಾರದಲ್ಲಿ ನಿಯಂತ್ರಣ ಮಾಡುವುದು ಕಷ್ಟ. ಲೆಕ್ಕವಿಲ್ಲದಷ್ಟು ಸಕ್ಕರೆಯನ್ನು ಸೇವಿಸುತ್ತಾ ಇರುತ್ತಾರೆ ಮತ್ತು ವ್ಯಾಯಾಮದ ಕೊರತೆಯಿಂದಾಗಿ ಮಧುಮೇಹ ಹದಿಹರೆಯದವರಲ್ಲಿ ಹೆಚ್ಚಿನ ಅಪಾಯವನ್ನು ಉಂಟುಮಾಡಬಹುದು.

ಹದಿಹರೆಯದವರಲ್ಲಿ ಸಮಸ್ಯೆ ಪತ್ತೆಯಾದ ಬಳಿಕ ಕುಟುಂಬದವರು ತುಂಬಾ ಎಚ್ಚರಿಕೆ ವಹಿಸಿಕೊಳ್ಳುವುದು ಮುಖ್ಯ. ಹದಿಹರೆಯದವರಲ್ಲಿ ಕಾಣಿಸಿಕೊಳ್ಳುವ ಮಧುಮೇಹದಿಂದ ಉಂಟಾಗುವ ಅಪಾಯದ ಬಗ್ಗೆ ಮುಂದಕ್ಕೆ ಓದಿಕೊಳ್ಳಿ. ಟೈಪ್‌-2 ಮಧುಮೇಹಕ್ಕೆ, ಇಲ್ಲಿದೆ ನೋಡಿ ಆಯುರ್ವೇದ ಚಿಕಿತ್ಸೆ

ಬೊಜ್ಜು
ಮಧುಮೇಹವು ಬೊಜ್ಜನ್ನು ಉಂಟುಮಾಡುವುದಿಲ್ಲ. ನಿಮಗೆ ಮಧುಮೇಹವಿದ್ದು, ಬೊಜ್ಜು ಬೆಳೆಸಿಕೊಂಡಿದ್ದರೆ ಇದು ಕಳವಳಕಾರಿ. ಮಧುಮೇಹದ ರೋಗಿಯಾಗಿ ನೀವು ತುಂಬಾ ನಿಶ್ಯಕ್ತಿ, ಆಯಾಸದಿಂದ ಬಳಲುತ್ತೀರಿ. ನಿಯಮಿತವಾಗಿ ವ್ಯಾಯಾಮ ಮಾಡದೆ ಇದ್ದರೆ ಆಗ ಈ ಸಮಸ್ಯೆ ಹೆಚ್ಚಾಗುತ್ತದೆ. ದೈಹಿಕ ಚಟುವಟಿಕೆಯಿಂದ ನಿಮ್ಮ ಬೊಜ್ಜನ್ನು ಇಳಿಸಬಹುದು.

ಕಿಡ್ನಿ ವೈಫಲ್ಯ
ಸಣ್ಣ ವಯಸ್ಸಿನಲ್ಲಿ ಮಧುಮೇಹಕ್ಕೆ ತುತ್ತಾಗುವವರು ಕಿಡ್ನಿ ವೈಫಲ್ಯಕ್ಕೆ ಒಳಗಾಗುವುದು ಹೆಚ್ಚು. ಮಧುಮೇಹವಿದ್ದರೆ ಆಗ ನಿಮ್ಮ ಕಿಡ್ನಿಗಳ ಸ್ವಚ್ಛಗೊಳಿಸುವ ಕಾರ್ಯ ತುಂಬಾ ಕಠಿಣವಾಗುತ್ತದೆ ಮತ್ತು ಇದರಿಂದ ಕಿಡ್ನಿ ವೈಫಲ್ಯವಾಗುತ್ತದೆ. ಇದರ ಬಗ್ಗೆ ತುಂಬಾ ಎಚ್ಚರಿಕೆ ಅಗತ್ಯ.

ಹೃದಯಾಘಾತ
ಹೃದಯದ ರಕ್ತನಾಳಗಳಲ್ಲಿ ಅಧಿಕ ಸಕ್ಕರೆಯಂಶ ಶೇಖರಣೆಯಾಗಿ ಅದರಿಂದ ರಕ್ತನಾಳದ ಗೋಡೆಗಳು ದಪ್ಪವಾಗುತ್ತದೆ. ಇದರಿಂದ ಹೃದಯಕ್ಕೆ ಸರಿಯಾಗಿ ರಕ್ತ ಪರಿಚಲನೆಯಾಗದೆ ಹೃದಯಾಘಾತವಾಗಬಹುದು. ಹದಿಹರೆಯದವರಲ್ಲಿ ಮಧುಮೇಹ ಕಾಣಿಸಿಕೊಂಡರೆ ಈ ಅಪಾಯ ಕಟ್ಟಿಟ್ಟಬುತ್ತಿ. ಮಧುಮೇಹ ರೋಗದ ಹೆಡೆಮುರಿ ಕಟ್ಟಿಹಾಕುವ ಫಲಪ್ರದ ಮನೆಮದ್ದು

ದೃಷ್ಟಿ ಸಮಸ್ಯೆ
ಹದಿಹರೆಯದವರಲ್ಲಿ ಮಧುಮೇಹ ಕಾಣಿಸಿಕೊಂಡರೆ ಈ ಸಮಸ್ಯೆಯನ್ನು ಕಡೆಗಣಿಸಲು ಸಾಧ್ಯವೇ ಇಲ್ಲ. ಮಧುಮೇಹದಿಂದಾಗಿ ರೆಟಿನಾದ ರಕ್ತನಾಳಗಳಿಗೆ ತೊಂದರೆಯಾಗುತ್ತದೆ. ಇದರಿಂದ ಕಣ್ಣಿನ ಪೊರೆ ಅಥವಾ ಗ್ಲುಕೋಮಾದ ಸಮಸ್ಯೆಯಾಗಬಹುದು.

ಖಿನ್ನತೆ
ಹದಿಹರೆಯದವರಲ್ಲಿ ಮಧುಮೇಹ ಕಾಣಿಸಿಕೊಂಡರೆ ಆಗ ಅವರಿಗೆ ಸಾಮಾನ್ಯ ಜೀವನ ಸಾಗಿಸಲು ತುಂಬಾ ಕಷ್ಟವಾಗುತ್ತದೆ. ಅವರು ಹೆಚ್ಚಿನ ಸಮಯವನ್ನು ಔಷಧಿ ಹಾಗೂ ಇಂಜೆಕ್ಷನ್ ನಲ್ಲಿ ಕಳೆಯುತ್ತಾರೆ. ಇದರಿಂದ ಅವರು ಖಿನ್ನತೆಗೆ ಒಳಗಾಗುತ್ತಾರೆ. ಈ ವೇಳೆ ಪೋಷಕರು ಕೌನ್ಸಿಲರ್ ಮೊರೆ ಹೋಗಿ ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು.


ಹದಿಹರೆಯದವರಲ್ಲಿ ಮಧುಮೇಹ ಕಾಣಿಸಿಕೊಂಡರೆ ಎದುರಿಸುವ ಅಪಾಯಗಳನ್ನು ನೀವು ತಿಳಿದುಕೊಂಡಿದ್ದೀರಿ. ಸರಿಯಾದ ಜೀವನ ಶೈಲಿಯನ್ನು ಅನುಸರಿಸಿದರೆ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಅಪಾಯವನ್ನು ಎದುರಿಸಿ ಮಧುಮೇಹವನ್ನು ಗೆದ್ದು ನಗೆ ಬೀರಬಹುದು.
English summary

Dangers Of Diabetes In Teenagers

Diabetes is one of those silent killers of human life that slowly damages your body and becomes the reason for several organ failures. Diabetes mellitus is definitely a life-threatening disease, in which either the human body produces less insulin or the body becomes inefficient to use the insulin. So, what are the dangers of diabetes in teenagers? Yes, teenagers can have diabetes if they have the family history of it. Read on to know more.
X
Desktop Bottom Promotion