For Quick Alerts
ALLOW NOTIFICATIONS  
For Daily Alerts

ನೆನಪಿಡಿ, ಇದೇ ಕಾರಣಕ್ಕೆ ಮಧುಮೇಹ ರೋಗ ಕಾಣಿಸಿಕೊಳ್ಳುವುದು!

ಮಧುಮೇಹದಲ್ಲಿ ಟೈಪ್ 1 ಮತ್ತು ಟೈಪ್ 2 ಎನ್ನುವ ಎರಡು ವಿಧವಿದೆ. ಟೈಪ್ 2 ಮಧುಮೇಹವು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವುದು. ಮಧುಮೇಹವನ್ನು ನೈಸರ್ಗಿಕವಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕೆಂದರೆ ಈ ಲೇಖನವನ್ನು ನೀವು ಓದಲೇಬೇಕು...

By Manu
|

ಆಧುನಿಕ ಯುಗದಲ್ಲಿ ಮನುಷ್ಯನನ್ನು ಇನ್ನಿಲ್ಲದಂತೆ ಕಾಡುವಂತಹ ರೋಗವೆಂದರೆ ಅದು ಮಧುಮೇಹ. ಜೀವನಶೈಲಿ, ದೇಹಕ್ಕೆ ವ್ಯಾಯಾಮದ ಕೊರತೆ ಹಾಗೂ ಇನ್ನಿತರ ಹಲವಾರು ಕಾರಣಗಳು ಮಧುಮೇಹಕ್ಕೆ ಕಾರಣವಾಗಿದೆ. ಆದರೆ ದೈನಂದಿನ ಜೀವನದಲ್ಲಿ ಮಾಡುವಂತಹ ಕೆಲವೊಂದು ಸಾಮಾನ್ಯ ತಪ್ಪುಗಳು ನಮ್ಮನ್ನು ಮಧುಮೇಹಿಳಗಾಗಿಸುವ ಸಾಧ್ಯತೆಯಿದೆ. ಕ್ಯಾನ್ಸರ್, ಮಧುಮೇಹ ನಿಯಂತ್ರಿಸುವ ಪವರ್ ನುಗ್ಗೆಸೊಪ್ಪಿನಲ್ಲಿದೆ

ರಕ್ತದಲ್ಲಿರುವ ಗ್ಲೂಕೋಸ್ ಅನ್ನು ದೇಹವು ಬಳಸಲು ವಿಫಲವಾದಾಗ ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಇದನ್ನು ನಾವು ಮಧುಮೇಹವೆನ್ನುತ್ತೇವೆ. ಮಧುಮೇಹಕ್ಕೆ ಮುಖ್ಯ ಕಾರಣವೇನು? ಬೊಜ್ಜು, ಒತ್ತಡದ ಜೀವನ ಶೈಲಿ ಮೊದಲಾದವುಗಳು ಮಧುಮೇಹಕ್ಕೆ ಕಾರಣವಾಗಿದೆ. ಮಧುಮೇಹಿಗಳೇ, ವೈದ್ಯರಲ್ಲಿ ತಪ್ಪದೇ ಈ ಪ್ರಶ್ನೆಗಳನ್ನು ಕೇಳಿ...

ಮಧುಮೇಹದಲ್ಲಿ ಟೈಪ್ 1 ಮತ್ತು ಟೈಪ್ 2 ಎನ್ನುವ ಎರಡು ವಿಧವಿದೆ. ಟೈಪ್ 2 ಮಧುಮೇಹವು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವುದು. ಮಧುಮೇಹವನ್ನು ನೈಸರ್ಗಿಕವಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕೆಂದರೆ ಈ ಲೇಖನವನ್ನು ನೀವು ಓದಲೇಬೇಕು....

ಉಪಹಾರ ಮಾಡದಿರುವುದು

ಉಪಹಾರ ಮಾಡದಿರುವುದು

ಹೆಚ್ಚಿನವರು ತಮ್ಮ ಕಚೇರಿ ಮತ್ತು ಕೆಲಸಕ್ಕೆ ಹೋಗಲು ವಿಳಂಬವಾಗುತ್ತದೆ ಎಂದು ಹೇಳಿ ಬೆಳಗ್ಗಿನ ಉಪಹಾರ ಮಾಡುವುದೇ ಇಲ್ಲ. ಇದು ನಾವು ಮಾಡುವ ದೊಡ್ಡ ತಪ್ಪು. ಉಪಹಾರ ಮಾಡದೆ ಇರುವುದರಿಂದ ದೇಹವು ಮತ್ತಷ್ಟು ಕ್ಯಾಲರಿಯುಕ್ತ ಆಹಾರ ಸೇವಿಸುತ್ತದೆ. ಇದರಿಂದ ಸಕ್ಕರೆ ಮಟ್ಟದಲ್ಲಿ ಏರುಪೇರಾಗುವುದು.

ಜೈವಿಕ ಆಹಾರ ಸೇವಿಸದೆ ಇರುವುದು

ಜೈವಿಕ ಆಹಾರ ಸೇವಿಸದೆ ಇರುವುದು

ಜೈವಿಕ ಆಹಾರದಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳಿರುತ್ತದೆ ಮತ್ತು ಇದು ಜೀರ್ಣಕ್ರಿಯೆಗೆ ನೆರವಾಗುತ್ತದೆ. ಇದು ದೇಹದಲ್ಲಿ ಸಕ್ಕರೆ ಮಟ್ಟವನ್ನು ಕಾಪಾಡುತ್ತದೆ. ಜೈವಿಕ ಆಹಾರವನ್ನು ತಿನ್ನದೇ ಇರುವುದು ಮಧುಮೇಹಕ್ಕೆ ಕಾರಣವಾಗುತ್ತದೆ.

ವಿಟಮಿನ್ ಡಿ ಸರಿಯಾಗಿ ಲಭ್ಯವಾಗದೆ ಇರುವುದು

ವಿಟಮಿನ್ ಡಿ ಸರಿಯಾಗಿ ಲಭ್ಯವಾಗದೆ ಇರುವುದು

ದೇಹದಲ್ಲಿ ವಿಟಮಿನ್ ಡಿ ಕೊರತೆಯಾದರೆ ಆಗ ಟೈಪ್ 2 ಮಧುಮೇಹವು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ವಿಟಮಿನ್ ಡಿ ಇರುವ ಆಹಾರವನ್ನು ಸೇವಿಸಿ ಅಥವಾ ಸೂರ್ಯನ ಬಿಸಿಲಿಗೆ ನಿಂತರೆ ದೇಹಕ್ಕೆ ವಿಟಮಿನ್ ಡಿ ಲಭ್ಯವಾಗುವುದು....

ದಿನವಿಡೀ ಕುಳಿತಿರುವುದು

ದಿನವಿಡೀ ಕುಳಿತಿರುವುದು

ದಿನವಿಡೀ ಕುಳಿತಿರುವುದು

ದಿನವಿಡೀ ಕುಳಿತಿರುವುದು ಅಥವಾ ಕುಳಿತುಕೊಂಡೇ ಕೆಲಸ ಮಾಡುವುದು ಅಥವಾ ಯಾವುದೇ ದೈಹಿಕ ಚಟುವಟಿಕೆ ಇಲ್ಲದೆ ಟಿವಿ ನೋಡುತ್ತಾ ಇರುವುದು ಮಧುಮೇಹಕ್ಕೆ ಕಾರಣವಾಗಬಹುದು.

ಸರಿಯಾಗಿ ನಿದ್ರೆ ಮಾಡದಿರುವುದು

ಸರಿಯಾಗಿ ನಿದ್ರೆ ಮಾಡದಿರುವುದು

ತಡರಾತ್ರಿಯವರೆಗೆ ಟಿವಿ ನೋಡುತ್ತಾ ಕೆಲವೇ ಗಂಟೆಗಳ ಕಾಲ ಮಾತ್ರ ನಿದ್ರೆ ಮಾಡುವುದು ಮಧುಮೇಹ ಕಾಣಿಸಿಕೊಳ್ಳುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಸಂಸ್ಕರಿಸಿದ ಕಾರ್ಬೋಹೈಡ್ರೆಟ್

ಸಂಸ್ಕರಿಸಿದ ಕಾರ್ಬೋಹೈಡ್ರೆಟ್

ಗೋಧಿಯ ಬ್ರೆಡ್ ಮತ್ತು ಬಿಳಿ ಅನ್ನದಲ್ಲಿ ಸಂಸ್ಕರಿಸಿದ ಕಾರ್ಬೋಹೈಡ್ರೆಟ್ ಹೆಚ್ಚಾಗಿರುತ್ತದೆ. ಇದರಿಂದ ಮಧುಮೇಹ ಬರುವ ಸಾಧ್ಯತೆ ಹೆಚ್ಚು. ಇವುಗಳ ಸೇವನೆಯನ್ನು ಕಡಿಮೆ ಮಾಡಿದರೆ ಒಳ್ಳೆಯದು.

English summary

Common Mistakes That Will Surely Make You Diabetic

Diabetes is one of the major lifestyle health issues that is on the rise in recent times. You might be hearing of it quite often. There are certain common mistakes that we commit in our day-to-day life that will make one diabetic.....
X
Desktop Bottom Promotion