For Quick Alerts
ALLOW NOTIFICATIONS  
For Daily Alerts

ಮಧುಮೇಹವನ್ನು ನಿಯಂತ್ರಿಸುವ ಶಕ್ತಿ ಹಸಿ ತರಕಾರಿಯಲ್ಲಿದೆ

By Arshad
|

ಇತ್ತೀಚಿನ ಒಂದು ಸಮೀಕ್ಷೆಯ ಪ್ರಕಾರ ಇಪ್ಪತ್ತು ವರ್ಷದ ಕೆಳಗಿನ ವ್ಯಕ್ತಿಗಳಲ್ಲಿ ಶೇಖಡಾ ಇಪ್ಪತ್ತರಷ್ಟು ವ್ಯಕ್ತಿಗಳಿಗೆ ಮಧುಮೇಹವಿರುವುದು ಕಂಡುಬಂದಿದೆ. ಅಷ್ಟೇ ಅಲ್ಲ, ಎರಡು ಲಕ್ಷದಷ್ಟು ಮಕ್ಕಳೂ ಮಧುಮೇಹಕ್ಕೆ ಒಳಗಾಗಿದ್ದಾರೆ. ಇಪ್ಪತ್ತು ವರ್ಷಕ್ಕೂ ಮೇಲ್ಪಟ್ಟವರನ್ನು ಪರಿಗಣಿಸಿದರೆ ಎರಡು ಕೋಟಿ ಜನರಿರುವ ಸಂಗತಿ ಗಾಬರಿ ಮೂಡಿಸುತ್ತದೆ. ಇದಕ್ಕೆ ಸಿದ್ಧ ಆಹಾರಗಳ ಸತತ ಸೇವನೆಯೇ ಒಂದು ಕಾರಣ ಎಂದು ಸಂಶೋಧನೆಗಳು ತಿಳಿಸುತ್ತವೆ.

ಆದರೆ ನಿತ್ಯದ ಆಹಾರದಲ್ಲಿ ಹಸಿ ಆಹಾರಗಳನ್ನು ಅಳವಡಿಸುವ ಮೂಲಕ ಆರೋಗ್ಯದಲ್ಲಿ ಸುಧಾರಣೆಯಾಗಿ ಈ ಅಂಕಿ ಅಂಶಗಳು ಆಶಾದಾಯಕ ರೂಪದಲ್ಲಿ ಕಂಡುಬರುವ ಸಾಧ್ಯತೆ ಇದೆ. ದೇಹದಲ್ಲಿ ಅಗತ್ಯ ಪ್ರಮಾಣದಲ್ಲಿ ಇನ್ಸುಲಿನ್ ಉತ್ಪತ್ತಿಯಾಗದಿರುವುದು ಟೈಪ್ 1 ಮಧುಮೇಹವಾದರೆ ಉತ್ಪತ್ತಿಯಾದ ಮಧುಮೇಹವನ್ನು ಬಳಸಿಕೊಳ್ಳಲು ಅಸಾಧ್ಯವಾಗುವುದು ಟೈಪ್ 2 ಮಧುಮೇಹವಾಗಿದೆ.

Can Raw Food Cure Diabetes?

ನಾವು ಆಹಾರ ಸೇವಿಸುವ ಮೂಲಕ ಪಡೆದುಕೊಳ್ಳುವ ಗ್ಲುಕೋಸ್ ಅನ್ನು ಬಳಸಿಕೊಳ್ಳಲು ಇನ್ಸುಲಿನ್ ಅಗತ್ಯವಾಗಿದೆ. ಇದರ ಕೊರತೆಯಿಂದ ಈ ಗ್ಲೂಕೋಸ್ ರಕ್ತದಲ್ಲಿ ಹೆಚ್ಚು ಸಾಂದ್ರವಾಗಿ ಹೆಚ್ಚಿನ ಪ್ರಮಾಣ ಮೂತ್ರದ ಮೂಲಕ ವ್ಯರ್ಥವಾಗಿ ಹೊರಹೋಗುತ್ತದೆ. ಆದ್ದರಿಂದ ಮಧುಮೇಹಿಗಳು ನಿಃಶಕ್ತಿ ಮತ್ತು ಬಳಲಿಕೆಯಿಂದ ಬಳಲುತ್ತಾರೆ. ರಕ್ತದಲ್ಲಿ ಅತಿ ಹೆಚ್ಚು ಗ್ಲೂಕೋಸ್ ಒಮ್ಮೆಲೇ ಬರದೆ, ನಿಧಾನವಾಗಿ ಬರುವಂತೆ ಮಾಡುವ ಮೂಲಕ ಮಧುಮೇಹಿಗಳು ಸೂಕ್ತ ಆರೋಗ್ಯ ಮತ್ತು ತೂಕವನ್ನು ಉಳಿಸಿಕೊಳ್ಳಬಹುದು.

ಮಧುಮೇಹ ತಜ್ಞರ ಪ್ರಕಾರ ಮಧುಮೇಹಿಗಳು ಆರೋಗ್ಯ ಉಳಿಸಿಕೊಳ್ಳಲು ಪೂರ್ಣವಾಗಿ ತಮ್ಮ ಆಹಾರಕ್ರಮವನ್ನು ಬದಲಿಸುವುದು ಅಗತ್ಯವಿಲ್ಲ. ಬದಲಿಗೆ ಕೊಂಚ ಕೊಂಚವಾಗಿ ಹಸಿ ತರಕಾರಿಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವ ಮೂಲಕ ನಿಧಾನವಾಗಿ ಮಧುಮೇಹವನ್ನು ನಿಯಂತ್ರಣಕ್ಕೆ ತರಬಹುದು. ಇದರೊಂದಿಗೆ ಸೂಕ್ತ ವ್ಯಾಯಾಮ ಮತ್ತು ತೂಕದಲ್ಲಿ ನಿಯಂತ್ರಣವನ್ನು ಸಾಧಿಸಿದರೆ ಇನ್ನೂ ಉತ್ತಮ ಪರಿಣಾಮ ಕಂಡುಬರುತ್ತದೆ.

ಹಸಿ ತರಕಾರಿಗಳ ಅನುಕೂಲತೆಗಳೇನು?
ಹಸಿ ತರಕಾರಿಗಳ ಸೇವನೆಯಿಂದ ಹಲವಾರು ಪ್ರಯೋಜನಗಳಿವೆ. ಚರ್ಮದ ಕಾಂತಿ ಹೆಚ್ಚಿಸುವುದು, ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆಗೊಳಿಸುವುದು, ದೇಹದ ಶಕ್ತಿಯನ್ನು ಹೆಚ್ಚಿಸುವುದು, ಜೀರ್ಣಕ್ರಿಯೆ ಉತ್ತಮಗೊಳಿಸುವುದು, ಮತ್ತು ಮುಖ್ಯವಾಗಿ ರಕ್ತದಲ್ಲಿ ಸಕ್ಕರೆಯ ಅಂಶವನ್ನು ನಿಧಾನವಾಗಿ ಏರಿಸುವುದು, ತನ್ಮೂಲಕ ಮಧುಮೇಹದ ಪರಿಣಾಮವನ್ನು ನಿಧಾನವಾಗಿ ಹಿಂದಕ್ಕೆ ತರುವುದು ಪ್ರಮುಖ ಪ್ರಯೋಜನಗಳಾಗಿವೆ. ತೂಕ ಇಳಿಸುವವರಿಗೂ ಹಸಿ ತರಕಾರಿಗಳೇ ಉತ್ತಮ ಆಹಾರವಾಗಿವೆ.

ಆದರೆ ಇದರ ಸೇವನೆಯ ಬಗ್ಗೆ ಕೆಲವು ಮಾಹಿತಿಗಳನ್ನು ಅರಿತಿರುವುದು ಮುಖ್ಯ. ಹಸಿ ತರಕಾರಿಗಳನ್ನು ಮಾತ್ರವೇ ಸೇವಿಸದೇ ತರಕಾರಿಗಳಿಂದ ಹಿಂಡಿ ತೆಗೆದ ರಸವನ್ನೂ ಜೊತೆಗೇ ಸೇವಿಸುವುದು ಹೆಚ್ಚು ಆರೋಗ್ಯಕರ. ಇದರಿಂದ ಮಧುಮೇಹದಿಂದ ಶೀಘ್ರವಾಗಿ ಹೊರಬರಲು ಮತ್ತು ಬಳಲಕೆಯಿಂದ ಮುಕ್ತಿ ಪಡೆಯಲು ಸಾದ್ಯವಾಗುತ್ತದೆ.

ಎಷ್ಟು ದಿನಗಳಲ್ಲಿ ಪರಿಣಾಮ ಕಾಣಬಹುದು
ಹಸಿ ತರಕಾರಿಗಳನ್ನು ಸೇವಿಸಲು ಪ್ರಾರಂಭಿಸಿದ ಏಳು ದಿನಗಳಲ್ಲಿಯೇ ಪರಿಣಾಮ ಪ್ರಾರಂಭವಾಗಿರುವುದನ್ನು ಗಮನಿಸಬಹುದು.

ಹಸಿ ತರಕಾರಿ ಅಂದರೆ ಯಾವ ತರಕಾರಿ?
ಹಸಿ ತರಕಾರಿ ಎಂದರೆ ಮೆಗ್ನೀಶಿಯಂ ಹೆಚ್ಚಿದ್ದು ಸೋಡಿಯಂ ಲವಣ ಕಡಿಮೆ ಇರುವ, ಕರಗದ ನಾರು, ಮೆಗ್ನೀಶಿಯಂ, ಫೈಟೋ ಕೆಮಿಕಲ್ ಗಳು ಹೆಚ್ಚು ಇರುವ ತರಕಾರಿಗಳನ್ನೇ ಆಯ್ದುಕೊಳ್ಳಬೇಕು. ಇದಕ್ಕಾಗಿ ಹಸಿ ಬೀನ್ಸ್, ತಜಾ ಹಣ್ಣುಗಳು, ಧಾನ್ಯಗಳು, ಫಲಗಳು, ಸಾಗರದ ಎಲೆಗಳು, ಒಣಫಲಗಳು, ಸಂಸ್ಕರಿಸದ ಸಾವಯವ ತರಕಾರಿಗಳು, ಮತ್ತು ದ್ವಿದಳಧಾನ್ಯಗಳನ್ನು ಸೇವಿಸಬೇಕು. ಒಂದು ವೇಳೆ ಸಿಹಿ ಸೇವನೆ ನಿಮಗೆ ಬಿಟ್ಟಿರಲಾರದಷ್ಟು ವ್ಯಸನದ ರೂಪದಲ್ಲಿದ್ದರೆ ಹಸಿ ಓಟ್ಸ್ ಮತ್ತು ಮೇಪಲ್ ಸಿರಪ್, ಒಣಫಲಗಳನ್ನು ಹಸಿಯಾಗಿಯೇ ಸೇವಿಸಿರಿ. ಮೇಪಲ್ ಸಿರಪ್ ಸಿಹಿಯಾಗಿದ್ದರೂ ಇದರಲ್ಲಿ ಸಕ್ಕರೆಯ ಪ್ರಮಾಣ ಕಡಿಮೆ ಇರುವ ಕಾರಣ ಮಧುಮೇಹಿಗಳ ಸಕ್ಕರೆಯ ವ್ಯಸನ ಸರಿದೂಗಿಸಲು ಸೂಕ್ತವಾಗಿದೆ.

ಹಸಿ ತರಕಾರಿಯ ಸೇವನೆ ಹೇಗೆ?
ಹಸಿ ತರಕಾರಿ ಮತ್ತು ಫಲಗಳ ಪ್ರಯೋಜನವನ್ನು ಕಂಡುಕೊಂಡ ಬಳಿಕ ಇವುಗಳ ಸೇವನೆ ಹೇಗಿರಬೇಕು ಎಂಬ ಪ್ರಶ್ನೆ ಸ್ವಾಭಾವಿಕವಾಗಿ ಮೂಡುತ್ತದೆ. ಆದರೆ ಯಾವುದೇ ಒಣಫಲಗಳನ್ನು ಮತ್ತು ತರಕಾರಿಗಳನ್ನು ಬಿಸಿ ಮಾಡುವುದುದಾದರೆ 116 ಡಿಗ್ರಿ ಫ್ಯಾರನ್ ಹೀಟ್ (ಸುಮಾರು 46.6 ಡಿಗ್ರಿ ಸೆಂಟಿಗ್ರೇಡ್) ಗಿಂತ ಹೆಚ್ಚು ಬಿಸಿಮಾಡಬೇಡಿ. ಇದರಿಂದ ಆಹಾರದ ಪೌಷ್ಠಿಕಾಂಶಗಳು ನಷ್ಟವಾಗುತ್ತವೆ. ಬದಲಿಗೆ ಹಣ್ಣುಗಳ ಜ್ಯೂಸ್, ಮೊಳಕೆ ಬರಿಸಿದ ಕಾಳುಗಳು, ಧಾನ್ಯಗಳು, ಒಣಗಿಸಿದ ಫಲಗಳು ಮೊದಲಾದವುಗಳ ಮಿಶ್ರಣವನ್ನು ಸೇವಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

English summary

Can Raw Food Cure Diabetes?

According to the recent statistics, more than 20 percent of the people below 20 years of age have been detected with diabetes. There are approximately 2 lakh children who are suffering from diabetes. More than 20 million people above 20 years of age are living their life with this horrible disease. Studies say that incorporating raw foods into your daily diet can have a great effect on the present statistics.
X
Desktop Bottom Promotion