For Quick Alerts
ALLOW NOTIFICATIONS  
For Daily Alerts

ಮಧುಮೇಹಿಗಳೇ, ನಿಮ್ಮ ಬೆಳಗಿನ ಉಪಹಾರ ಹೀಗಿರಬೇಕು....

By manu
|

ಮಧುಮೇಹ(ಡಯಾಬಿಟಿಸ್) ಎನ್ನುವುದು ಮನುಷ್ಯನನ್ನು ಎಲ್ಲಾ ಹಂತದಲ್ಲಿ ಕಾಡುವಂತಹ ರೋಗವಾಗಿದೆ. ಪ್ರತಿಯೊಂದು ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡಬೇಕಾದ ರೋಗವಿದು. ಕುಡಿಯುವ ಪಾನೀಯಗಳಿಂದ ಹಿಡಿದು ತಿನ್ನುವ ಆಹಾರದ ತನಕ ಪ್ರತಿಯೊಂದರ ಬಗ್ಗೆಯೂ ಎಚ್ಚರಿಕೆ ಅತ್ಯಗತ್ಯ. ಮಧುಮೇಹವನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಿಲ್ಲವಾದರೂ ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದಾಗಿದೆ. ಮಧುಮೇಹ ರೋಗಿಗಳ ಆಹಾರ ಕ್ರಮ ಹೇಗಿರಬೇಕು?

ಬೆಳಿಗ್ಗಿನ ಉಪಹಾರವೆನ್ನುವುದು ಪ್ರತಿಯೊಬ್ಬರಿಗೂ ಅತೀ ಅಗತ್ಯವಾಗಿದೆ. ಇದು ಇಡೀ ದಿನಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಉಪಹಾರ ಮಾಡದೆ ಇರುವುದು ಅಥವಾ ಅನಾರೋಗ್ಯಕರವಾದ ಉಪಹಾರ ಮಾಡುವುದರಿಂದ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮಧುಮೇಹ ನಿಯಂತ್ರಣ: ಆಹಾರ-ಕ್ರಮ ಶಿಸ್ತು ಬದ್ಧವಾಗಿರಲಿ

ಇದರಿಂದಾಗಿ ಆರೋಗ್ಯಕರವಾದ ಉಪಹಾರ ಸೇವಿಸುವುದು ಅಗತ್ಯ. ಆದರೆ ಕೆಲವೊಂದು ಅನಾರೋಗ್ಯಗಳು ಇದ್ದರೆ ಆಗ ಉಪಹಾರದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವುದು ತುಂಬಾ ಅಗತ್ಯ. ಮಧುಮೇಹ ಹೊಂದಿರುವ ವ್ಯಕ್ತಿಗಳು ಪಾಲಿಸಿಕೊಂಡು ಹೋಗಬೇಕಾದ ಕೆಲವೊಂದು ಕ್ರಮಗಳನ್ನು ಇಲ್ಲಿ ನೀಡಲಾಗಿದೆ. ಇದನ್ನು ಓದಿಕೊಳ್ಳಿ.... ಮಧುಮೇಹಿಗಳೇ ನಿಮಗೋಸ್ಕರನೇ ಈ ವಿಶೇಷ ಉಪಹಾರಗಳು!

ಟಿಪ್ಸ್ #1

ಟಿಪ್ಸ್ #1

ಯಾವತ್ತೂ ಉಪಹಾರ ಸೇವನೆ ಮಾಡದೆ ಇರಬೇಡಿ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗಬಹುದು. ಇದರಿಂದ ಮಧುಮೇಹದ ಲಕ್ಷಣಗಳು ಮತ್ತಷ್ಟು ಕೆಟ್ಟದಾಗಬಹುದು.

ಟಿಪ್ಸ್#2

ಟಿಪ್ಸ್#2

ಆರೋಗ್ಯಕರವಾದ ಉಪಹಾರ ಸೇವನೆ ಮಾಡಿದರೆ ದಿನದ ಇತರ ಸಮಯದಲ್ಲಿ ಅನಾರೋಗ್ಯಕರವಾಗಿರುವ ಆಹಾರ ತಿನ್ನುವ ಅಭ್ಯಾಸವನ್ನು ತಡೆಯಬಹುದು.

ಟಿಪ್ಸ್#3

ಟಿಪ್ಸ್#3

ಮಧುಮೇಹ ಇದ್ದು, ಒಬ್ಬನೇ ವಾಸಿಸುತ್ತಿದ್ದರೆ ಆಗ ಹೊರಗಡೆ ಉಪಹಾರ ಮಾಡುವುದನ್ನು ಕಡೆಗಣಿಸಿ. ಕಡಿಮೆ ಸಕ್ಕರೆ ಹಾಗೂ ಕೊಬ್ಬನ್ನು ಹೊಂದಿರುವ ಉಪಹಾರವನ್ನು ನೀವೇ ಮಾಡಿಕೊಳ್ಳಿ.

ಟಿಪ್ಸ್#4

ಟಿಪ್ಸ್#4

ಸಂಪೂರ್ಣ ಧಾನ್ಯದ ಬ್ರೆಡ್ ಅಥವಾ ಸಿರೆಲ್ ಮಾಡಿಕೊಳ್ಳಿ. ಇದರೊಂದಿಗೆ ಹಣ್ಣುಗಳನ್ನು ಉಪಹಾರದಲ್ಲಿ ಬಳಸಿದರೆ ಮಧುಮೇಹಿಗಳು ಆರೋಗ್ಯಕರವಾದ ಉಪಹಾರ ಸೇವನೆ ಮಾಡಿದಂತೆ.

ಟಿಪ್ಸ್#5

ಟಿಪ್ಸ್#5

ತಾಜಾ ಹಣ್ಣುಗಳು ಹಾಗೂ ತರಕಾರಿಗಳನ್ನು ಉಪಹಾರದಲ್ಲಿ ಸೇರಿಸಿಕೊಳ್ಳಿ. ಇದರಲ್ಲಿನ ಆ್ಯಂಟಿಆಕ್ಸಿಡೆಂಟ್ ಮಧುಮೇಹವನ್ನು ನಿಯಂತ್ರಿಸುವುದು. ಮಧುಮೇಹಿಗಳು ತಿನ್ನಬಾರದ 10 ಹಣ್ಣುಗಳು

ಟಿಪ್ಸ್#6

ಟಿಪ್ಸ್#6

ಒಂದು ಚಮಚ ಅಗಸೆ ಬೀಜದ ಹುಡಿಯನ್ನು ನೀವು ಸೇವಿಸುವ ತಿಂಡಿಗೆ ಹಾಕಿಕೊಳ್ಳಿ. ಇದು ನಾರಿನಾಂಶಗಳಿಂದ ಸಮೃದ್ಧವಾಗಿದೆ ಮತ್ತು ಒಮೆಗಾ-3 ಕೊಬ್ಬನಾಮ್ಲಗಳಿವೆ. ಇದು ಮಧುಮೇಹಿಗಳಿಗೆ ಒಳ್ಳೆಯದು.

ಟಿಪ್ಸ್#7

ಟಿಪ್ಸ್#7

ಓಟ್ ಮೀಲ್ ಅನ್ನು ಪ್ರತೀದಿನ ತಿನ್ನುವುದು ಮಧುಮೇಹಿಗಳಿಗೆ ಸೂಚಿಸಲಾಗಿರುವ ಆರೋಗ್ಯಕರ ಉಪಹಾರವಾಗಿದೆ. ಇದನ್ನು ತಪ್ಪದೆ ಸೇವಿಸಬೇಕು.

ಟಿಪ್ಸ್#8

ಟಿಪ್ಸ್#8

ಕೊಬ್ಬು ರಹಿತವಾಗಿರುವ ಹಾಲನ್ನು ಉಪಹಾರಕ್ಕೆ ಸೇವಿಸಿ. ಕೆಲವೊಂದು ಲಕ್ಷಣಗಳನ್ನು ನಿವಾರಿಸಲು ಕ್ಯಾಲ್ಸಿಯಂನ ಅಗತ್ಯವಿರುತ್ತದೆ.

ಟಿಪ್ಸ್#9

ಟಿಪ್ಸ್#9

ಉಪಹಾರಕ್ಕೆ ಮೊಸರನ್ನು ಬಳಸುತ್ತಾ ಇದ್ದರೆ ಕೊಬ್ಬು ರಹಿತವಾಗಿರುವ, ಯಾವುದೇ ಸುವಾಸನೆ ಹಾಕದ ಮೊಸರನ್ನು ಬಳಸಿ.

ಟಿಪ್ಸ್#10

ಟಿಪ್ಸ್#10

ಕಿತ್ತಳೆ ಹಣ್ಣಿನ ಜ್ಯೂಸ್ ಬದಲಿಗೆ ಕಿತ್ತಳೆ ಹಣ್ಣನ್ನು ಬೆಳಿಗ್ಗಿನ ಉಪಹಾರಕ್ಕೆ ತಿನ್ನಿ. ಜ್ಯೂಸ್‪ನಲ್ಲಿ ಸಕ್ಕರೆ ಸೇರಿಸಿರಬಹುದು. ತಾಜಾ ಹಣ್ಣನ್ನು ತಿಂದರೆ ಅದರಲ್ಲಿನ ನಾರಿನಾಂಶವು ದೇಹಕ್ಕೆ ಲಭ್ಯವಾಗುತ್ತದೆ.

ಟಿಪ್ಸ್#11

ಟಿಪ್ಸ್#11

ದಾಲ್ಚಿನ್ನಿ ಬೆರೆಸಿದ ಹಾಲು ಕುಡಿಯಿರಿ-ಆರೋಗ್ಯ ಪಡೆಯಿರಿ

ಟಿಪ್ಸ್#12

ಟಿಪ್ಸ್#12

ಓಟ್ ಮೀಲ್‌ಗೆ ಸೇಬು ಅಥವಾ ಅವಕಾಡೋವನ್ನು ಹಾಕಿ ತಿನ್ನಬಹುದು. ಇದು ಆರೋಗ್ಯಕರ ಹಾಗೂ ರುಚಿಯನ್ನು ಒದಗಿಸುವುದರಿಂದ ಸಕ್ಕರೆ ಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ.

English summary

Breakfast Tips People With Diabetes Need To Follow

Are you suffering from diabetes? Is someone you know affected with this disorder? If yes, then there are a few breakfast tips that need to be followed to control the symptoms of diabetes. So, here are a few breakfast tips that people with diabetes need to follow, have a look.
X
Desktop Bottom Promotion