For Quick Alerts
ALLOW NOTIFICATIONS  
For Daily Alerts

ಮಧುಮೇಹಿಗಳೇ ನಿಮಗೋಸ್ಕರನೇ ಈ ವಿಶೇಷ ಉಪಹಾರಗಳು!

By Arshad
|

ಮಧುಮೇಹಿಗಳು ಎಂದರೆ ಸಕ್ಕರೆ ಇರುವ ಏನನ್ನೂ ತಿನ್ನಬಾರದು ಎಂಬ ಕಟ್ಟಳೆಯುಳ್ಳವರು ಎಂದು ಹೆಚ್ಚಿನವರು ಅಂದುಕೊಂಡಿದ್ದೇವೆ. ಆದರೆ ಇದು ಪೂರ್ಣವಾಗಿ ಸತ್ಯವಲ್ಲ. ಮಧುಮೇಹಿಗಳಿಗೆ ಇತರರಂತೆ ಸಕ್ಕರೆಯನ್ನು ಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ ಎಂಬುದೇ ಕೊರತೆಯಾಗಿದೆಯೇ ಹೊರತು ಪೂರ್ಣವಾಗಿ ಇಲ್ಲವೇ ಇಲ್ಲವೆಂದಲ್ಲ. ಮಧುಮೇಹವನ್ನು ನಿಯಂತ್ರಿಸುವ ಅದ್ಭುತ ಆಹಾರಗಳು

ಆದರೆ ಬಿಳಿಸಕ್ಕರೆಯಲ್ಲಿ ಸಿಹಿನೀಡುವ ಸುಕ್ರೋಸ್ ಪ್ರಮಾಣ ಅಪಾರವಾಗಿರುವ ಕಾರಣ ಇದನ್ನು ಸೇವಿಸದಿರಲು ವೈದ್ಯರು ಹೇಳುತ್ತಾರೆಯೇ ಹೊರತು ನಿಸರ್ಗದ ಇತರ ಹಣ್ಣು ಹಂಪಲುಗಳನ್ನು ತಿನ್ನಲು ಅನುಮತಿ ನೀಡುತ್ತಾರೆ. ಅಲ್ಲದೇ ಉತ್ತಮ ವ್ಯಾಯಾಮ, ಆರೋಗ್ಯದ ಕಾಳಜಿ, ಕಾಲಕಾಲಕ್ಕೆ ಸೂಕ್ತ ಔಷಧಿಗಳನ್ನು ಸೇವಿಸುತ್ತಾ ಬಂದರೆ ಮಧುಮೇಹಿಗಳೂ ಇತರರಷ್ಟೇ ಚಟುವಟಿಕೆಯಿಂದ ಜೀವನ ಸಾಗಿಸಬಹುದು. ಮಧುಮೇಹ ರೋಗಿಗಳ ಆಹಾರ ಕ್ರಮ ಹೇಗಿರಬೇಕು?

ಅಲ್ಲದೇ ಇತರರಂತೆ ಆಹಾರವನ್ನೂ ಆಸ್ವಾದಿಸಬಹುದು, ಆದರೆ ಸಕ್ಕರೆ ರಹಿತವಾಗಿ. ಅಂತೆಯೇ ಮಧುಮೇಹಿಗಳಿಗೆ ಸೂಕ್ತವಾದ ಆಹಾರಗಳನ್ನು ತಯಾರಿಸುವಾಗ ಇವರಿಗೆ ಸೂಕ್ತವಾದುದು ಯಾವುದು ಎಂಬ ದ್ವಂದ್ವ ಅವರ ಮನೆಯವರಿಗೆ ಖಂಡಿತಾ ಕಾಡುತ್ತದೆ. ನಿಮ್ಮ ಮನೆಯಲ್ಲೂ ಮಧುಮೇಹಿಗಳಿದ್ದರೆ ಇವರು ಮೆಚ್ಚುವ ಅಡುಗೆಗಳನ್ನು ತಯಾರಿಸಲು ಕೆಳಗಿನ ಸ್ಲೈಡ್ ಶೋ ನಿಮ್ಮ ನೆರವಿಗೆ ಬರಲಿದೆ..

ಜೋಳದ ಉಪ್ಪಿಟ್ಟು

ಜೋಳದ ಉಪ್ಪಿಟ್ಟು

ಜೋಳದಲ್ಲಿ ಎರಡು ವಿಧಗಳಿವೆ. ಮುಸುಕಿನ ಜೋಳ ಮತ್ತು ಮೆಕ್ಕೆ ಜೋಳ. ಮುಸುಕಿನ ಜೋಳವನ್ನು ಉತ್ತರ ಕರ್ನಾಟಕದ ಜನರು ತಿನ್ನುತ್ತಾರೆಂಬ ಒಂದೇ ಕಾರಣಕ್ಕೆ ನಮ್ಮ ಕರ್ನಾಟಕದ ಇತರ ಭಾಗದ ಜನರು ಇದನ್ನು ರುಚಿನೋಡಲೂ ಹೋಗುವುದಿಲ್ಲ. ಆದರೆ ಇದರಲ್ಲಿ ಅತಿ ಕಡಿಮೆ ಗ್ಲೈಸಮಿಕ್ ಗುಣಾಂಕವಿದೆ, ಅಂದರೆ ಜೀರ್ಣವಾಗಲು ಅತಿ ಹೆಚ್ಚು ಸಮಯ ಹಿಡಿಯುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಜೋಳದ ಉಪ್ಪಿಟ್ಟು

ಜೋಳದ ಉಪ್ಪಿಟ್ಟು

ಇದೇ ಮಧುಮೇಹಿಗಳಿಗೆ ವರದಾನವೂ ಆಗಿದೆ. ಅಲ್ಲದೆ ಇದರಲ್ಲಿ ಅತಿ ಕಡಿಮೆ ಸಕ್ಕರೆ, ಹೆಚ್ಚು ಕಬ್ಬಿಣ ಮತ್ತು ಒಂದು ಬಾರಿಗೆ ಬಡಿಸಿದಾಗ ಕೇವಲ ನೂರಾ ಎಪ್ಪತ್ತೈದು ಕ್ಯಾಲೋರಿಗಳಿವೆ. ಮಧುಮೇಹಿಗಳಿಗೆ ಇದೊಂದು ಅತಿ ಸೂಕ್ತವಾದ ಉಪಾಹಾರವಾಗಿದೆ.

ಹೆಸರುಬೇಳೆಯ ಇಡ್ಲಿ

ಹೆಸರುಬೇಳೆಯ ಇಡ್ಲಿ

ನೆನೆಸಿದ ಹೆಸರುಬೇಳೆಯಲ್ಲಿ ಅತಿ ಕಡಿಮೆ ಕ್ಯಾಲೋರಿಗಳು ಮತ್ತು ಹೆಚ್ಚು ವಿಟಮಿನ್ ಸಿ ಮತ್ತು ಕೆ ಇವೆ. ಮಧುಮೇಹಿಗಳಲ್ಲಿ ರಕ್ತ ಹೆಪ್ಪುಗಟ್ಟುವ ಸಮಯ ಹೆಚ್ಚು ತಗಲುವುದರಿಂದ ಆಗಾಗ ಹೆಸರುಬೇಳೆ ಇಡ್ಲಿ ತಿನ್ನುತ್ತಾ ಬಂದರೆ ಈ ಸಮಯ ಕಡಿಮೆಯಾಗುತ್ತದೆ. ಅಲ್ಲದೇ ಮಧುಮೇಹದ ಕಾರಣ ಸಡಿಲಗೊಂಡಿದ್ದ ಮೂಳೆ ಮತ್ತು ಮಾಂಸಗಳನ್ನು ಬೆಸೆಯುವ ಅಂಗಾಶ, ಚರ್ಮ ಮೊದಲಾದವುಗಳನ್ನು ದೃಢಗೊಳಿಸಿ ಆರೋಗ್ಯ ವೃದ್ಧಿಸುತ್ತದೆ. ಇದು ಬೆಳಗ್ಗಿನ ಉಪಾಹಾರವಾಗಿಯೂ ಸಂಜೆಯ ತಿಂಡಿಯಾಗಿಯೂ ಮಧುಮೇಹಿಗಳಿಗೆ ನೆಚ್ಚಿನ ಆಹಾರವಾಗುವುದರಲ್ಲಿ ಸಂಶಯವಿಲ್ಲ.

ಬಾರ್ಲಿ ಪರೋಟ

ಬಾರ್ಲಿ ಪರೋಟ

ನೋಡಲು ಗೋಧಿಯಂತೆಯೇ ಇರುವ ಬಾರ್ಲಿ ಉತ್ತಮ ಮೂತ್ರವರ್ಧಕವಾಗಿದ್ದು ಮಧುಮೇಹಿಗಳು ಕನಿಷ್ಠ ವಾರಕ್ಕೊಂದು ಬಾರಿಯಾದರೂ ಸೇವಿಸಬೇಕಾದ ಆಹಾರವಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಕರಗದ ನಾರು ಮತ್ತು ಮ್ಯಾಂಗನೀಸ್ ಇದೆ. ಇದೂ ಸಹಾ ಅತಿ ಕಡಿಮೆ ಗ್ಲೈಸಮಿಕ್ ಗುಣಾಂಕ ಹೊಂದಿದ್ದು ಹೆಚ್ಚು ಹೊತ್ತು ಹಸಿವಾಗದೇ ಇರಲು ನೆರವಾಗುವ ಮೂಲಕ ಮಧುಮೇಹಿಗಳಿಗೆ ಒಂದು ಆದರ್ಶ ಆಹಾರವಾಗಿದೆ.

ಹಾಗಲಕಾಯಿಯ ಗೊಜ್ಜು

ಹಾಗಲಕಾಯಿಯ ಗೊಜ್ಜು

ರುಚಿಯಲ್ಲಿ ಕಹಿ ಎಂಬ ಒಂದೇ ಅವಗುಣವನ್ನು ಬದಿಗಿಟ್ಟು ನೋಡಿದರೆ ಮಧುಮೇಹಿಗಳ ಪಾಲಿಗೆ ಹಾಗಲಕಾಯಿ ಸಂಜೀವಿನಿ ಇದ್ದಂತೆ. ಅದರಲ್ಲೂ ವಿಶೇಷವಾಗಿ ಟೈಪ್ ೧ ಮಧುಮೇಹಿಗಳಿಗೆ ಹಿಂದಿನ ಆರೋಗ್ಯ ತಂದು ಕೊಡುವ ಏಜೆಂಟನೆಂದೇ ಹೇಳಬಹುದು. ಇದರಲ್ಲಿರುವ ಪಾಲಿ ಪೆಪ್ಟೈಡ್ ಗಳು ರಕ್ತದಲ್ಲಿರುವ ಸಕ್ಕರೆಯನ್ನು ನಿಯಂತ್ರಣದಲ್ಲಿರಿಸಲು ನೆರವಾಗುವುದೇ ಇದರ ಗುಟ್ಟು.

ಮೆಕ್ಸಿಕನ್ ರೈಸ್

ಮೆಕ್ಸಿಕನ್ ರೈಸ್

ಮಧುಮೇಹಿಗಳಿಗೆ ನೆಚ್ಚಿನ ಆಹಾರವಾಗುವ ಅರ್ಹತೆ ಪಡೆದ ಅಕ್ಕಿ ಎಂದರೆ ಮೆಕ್ಸಿಕನ್ ರೈಸ್. ಹೆಸರು ಮೆಕ್ಸಿಕೋದ್ದೇ ಹೊರತು ಅಕ್ಕಿಯೇನೂ ಮೆಕ್ಸಿಕೋದಿಂದ ಬಂದಿದ್ದಲ್ಲ. ಬದಲಿಗೆ ನಮ್ಮದೇ ಅಕ್ಕಿಯನ್ನು ಈರುಳ್ಳಿಯ ಒಣಪುಡಿ, ಬೆಳ್ಳುಳ್ಳಿಯ ಒಣಪುಡಿ ಬೆರೆಸಿ ಎಣ್ಣೆಯಲ್ಲಿ ಕೊಂಚ ಹುರಿದು ಟೊಮೇಟೊ ಸಾಸ್ ನಲ್ಲಿ ಮುಳುಗಿಸಿ ಹಬೆಯಲ್ಲಿ ಬೇಯಿಸಿ ಒಣಗಿಸಿದ್ದೇ ಮೆಕ್ಸಿಕನ್ ಅಕ್ಕಿ. ಈ ಅಕ್ಕಿಯಲ್ಲಿ ಹಬೆಯ ಕಾರಣ ಕೆಲವು ಪಿಷ್ಟಗಳು ಮತ್ತು ಸಕ್ಕರೆಗಳು ಕರಗಿ ಹೋಗುವ ಕಾರಣ ಮಧುಮೇಹಿಗಳು ಚಪ್ಪರಿಸಬಹುದಾದ ಹಲವು ಖಾದ್ಯಗಳನ್ನು ತಯಾರಿಸಬಹುದು.

ಶ್ರೀಖಂಡ

ಶ್ರೀಖಂಡ

ಇಂದು ಕೆನೆರಹಿತ ಮೊಸರು, ಕ್ರೀಂ, ಚೀಸ್ ಮೊದಲಾದವು ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಆದರೆ ಇವು ಮಧುಮೇಹಿಗಳಿಗೆ ಅಷ್ಟೊಂದು ಸೂಕ್ತವಲ್ಲದಿದ್ದರೂ ಇದರಿಂದ ತಯಾರಿಸಲಾದ ಕೆನೆರಹಿತ ಶ್ರೀಖಂಡವನ್ನು ಮಾತ್ರ ಅಪರೂಪಕ್ಕೊಮ್ಮೆ ಕೊಂಚ ಸೇವಿಸಬಹುದು. ಸಿಹಿ ತಿನಿಸುಗಳ ರಾಜ ಶ್ರೀಖಂಡ

ಸ್ವಾದಿಷ್ಟ ಮುಥಿಯಾ

ಸ್ವಾದಿಷ್ಟ ಮುಥಿಯಾ

ಸೋರೆಕಾಯಿ ಮತ್ತು ಗೋಧಿಯನ್ನು ಚಿಕ್ಕದಾಗಿ ಕೊಚ್ಚಿ ಹಬೆಯಲ್ಲಿ ಬೇಯಿಸಿ ತಯಾರಿಸಿದ ಮುಥಿಯಾ ಎಂಬ ಗುಜರಾತ್ ನ ಸಾಂಪ್ರಾದಾಯಿಕ ಖಾದ್ಯ ಮಧುಮೇಹಿಗಳ ಜಿಹ್ವಾಚಾಪಲ್ಯವನ್ನು ತಣಿಸಲು ಸಮರ್ಥವಾಗಿದೆ. ಮಧುಮೇಹಿಗಳಿಗೆ ಮಾತ್ರವಲ್ಲ, ಇತರರೂ ಇದನ್ನು ಚಪ್ಪರಿಸಬಹುದು. ಇದರಲ್ಲಿ ಸೇರಿಸಿರುವ ಸಾಂಬಾರ ಪದಾರ್ಥಗಳು ಸ್ವಾದವನ್ನು ಹೆಚ್ಚಿಸುವ ಜೊತೆಗೇ ಜೀರ್ಣಕ್ರಿಯೆಯನ್ನೂ ಉತ್ತಮಗೊಳಿಸುತ್ತವೆ.

English summary

Breakfast to dessert recipes for diabetics

Who says diabetics have to miss out on all the good things in life. If you exercise well and take the necessary care, diabetics can enjoy delicious food too whether International or Indian. Here are some recipes for breakfast, lunch, snacks, dinner and desserts, especially modified so that diabetics can enjoy them too.
Story first published: Monday, June 27, 2016, 20:17 [IST]
X
Desktop Bottom Promotion