For Quick Alerts
ALLOW NOTIFICATIONS  
For Daily Alerts

ಮಧುಮೇಹ ರೋಗ- ಆಹಾರಗಳ ಸೇವನೆಯಲ್ಲಿ ನಿಗಾ ವಹಿಸಿ...

By Vani Naik
|

ಒಂದು ಬಾರಿ ನಿಮ್ಮ ರಕ್ತದಲ್ಲಿ ಹೆಚ್ಚಿನ ಸಕ್ಕರೆ ಅಂಶ ಇದೆ ಎಂದು ನಿಮಗೆ ಗೊತ್ತಾದರೆ, ನಿಮ್ಮ ಆಹಾರಪದ್ಧತಿ ಹಾಗು ಜೀವನಶೈಲಿಯನ್ನು ಬದಲಾಯಿಸಿಕೊಳ್ಳಲೇಬೇಕು. ನಿಮ್ಮ ವೈದ್ಯರ ಬಳಿ ಹೋಗಿ ಅವರು ಕೊಡುವ ಸಲಹೆ-ಸೂಚನೆಗಳ ಪ್ರಕಾರ ನಡೆದುಕೊಳ್ಳಬೇಕು. ಯಾವ ಆಹಾರವನ್ನು ಸೇವಿಸಬೇಕು ಮತ್ತು ಯಾವುದನ್ನು ಬಿಡಬೇಕು ಎಂಬುದನ್ನು ತಿಳಿದುಕೊಳ್ಳಬೇಕು. ಆಗಾಗ ರಕ್ತದಲ್ಲಿ ಸಕ್ಕರೆ ಅಂಶ ಎಷ್ಟಿದೆ ಎಂಬುದನ್ನು ರಕ್ತ ಪರೀಕ್ಷೆ ಮಾಡಿಸಿಕೊಂಡು ತಿಳಿದುಕೊಳ್ಳಬೇಕು.

Best & Worst Foods For Diabetic Patients

ನೀವು ಮಧುಮೇಹಿ ರೋಗಿಗಳಾಗಿದ್ದರೆ, ರಿಫೈನ್ಡ್ ಸಕ್ಕರೆ, ಡೆಸೆರ್ಟ್ಸ್, ಸಿರಪ್, ಗ್ಲೂಕೋಸ್, ಜಾಮ್, ಹಣ್ಣಿನಲ್ಲಿರುವ ಸಕ್ಕರೆ ಅಂಶ, ಐಸ್ಕ್ರೀಮ್, ಕೇಕ್ಸ್, ಪೇಸ್ಟ್ರಿ, ಸಿಹಿ ತಿನಿಸುಗಳು, ಬಿಸ್ಕೆಟ್‌ಗಳು , ಚಾಕ್ಲೆಟ್‌ಗಳು, ಕಾರ್ಬೋನೇಟೆಡ್ ಡ್ರಿಂಕ್ಸ್‌ಗಳು , ಕೆನೆ, ಮಂದಗೊಳಿಸಿದ ಹಾಲು, ಕರಿದ ಪದಾರ್ಥಗಳು ಹಾಗು ಇನ್ನಿತರ ಪೂರ್ವಸಿದ್ಧತೆಗೊಳಿಸಿರುವ ಮತ್ತು ಸಂರಕ್ಷಕಗಳನ್ನು ಬಳಸಿ ತಯಾರಿಸಿದ ಆಹಾರ ಪದಾರ್ಥಗಳಿಂದ ದೂರವಿರಬೇಕು. ಮಧುಮೇಹ ರೋಗಿಗಳ ಆಹಾರ ಕ್ರಮ ಹೇಗಿರಬೇಕು?

ಗಿಡಮೂಲಿಕೆಗಳಿಂದ ತಯಾರಿಸಿದ ಪಾರ್ಸ್ಲಿ ಟೀ, ಗ್ರೀನ್ ಟೀ, ಬ್ಲೂಬೆರ್ರಿ ಎಲೆಗಳಿಂದ ತಯಾರಿಸಿದ ಟೀ, ಅಕ್ರೋಡ್ ಮರದ ಎಳೆ ಎಲೆಗಳಿಂದ ತಯಾರಿಸಿದ ಟೀಯನ್ನು ಕುಡಿಯಬೇಕು. ಸಂಶೋಧನೆಯ ಪ್ರಕಾರ ಕಿಡ್ನಿಬೀನ್ ಬೀಜಗಳನ್ನು ಬೇಯಿಸಿದ ನೀರು ಸಹ ಮಧುಮೇಹಿಗಳಿಗೆ ಒಳ್ಳೆಯದು ಎಂದು ತಿಳಿದು ಬಂದಿದೆ.

ಮಿತವಾಗಿ ಬಳಸಬೇಕಾಗಿರುವ ಆಹಾರವೆಂದರೆ, ಜೇನು, ಪಾಮ್ ಸಕ್ಕರೆ, ಖರ್ಜೂರವನ್ನು ಬಿಳಿಯ ಸಕ್ಕರೆ ಬದಲಾಗಿ ಬಳಸಬಹುದು. ಕಡಿಮೆ ಕೊಬ್ಬಿನ ಅಂಶವಿರುವ ಆಹಾರವಾದ ಕೆನೆತೆಗೆದ ಹಾಲು(ಸ್ಕಿಮ್ಡ್ ಮಿಲ್ಕ್), ಮನೆಯಲ್ಲೇ ತಯಾರಿಸಿದ ಗಿಣ್ಣು ಮೊದಲಾದವುಗಳನ್ನು ಮಿತವಾಗಿ ಸೇವಿಸಬಹುದು.

ಧಾನ್ಯಗಳು, ಹಣ್ಣುಗಳು, ಬೀಜಗಳು,ತರಕಾರಿಗಳು, ಹಾಲಿನ ಉತ್ಪನ್ನಗಳು..ಇವು ಮಧುಮೇಹಿಗಳಿಗೆ ಒಳ್ಳೆಯ ಆಹಾರವಾಗಿರುತ್ತದೆ. ಹಾಗೆಯೇ ಸೌತೆಕಾಯಿ, ಲೆಟ್ಯೂಸ್, ಈರುಳ್ಳಿ, ಬೆಳ್ಳುಳ್ಳಿ, ನಾರಿಲ್ಲದ ಹುರಳೀಕಾಯಿ, ಮೂಲಂಗಿ, ಟೊಮೇಟೊ, ಪಾಲಕ್, ಎಲೆಕೋಸು, ಟರ್ನಿಪ್ ಮುಂತಾದವುಗಳು ಮಧುಮೇಹಿ ರೋಗಿಗಳಿಗೆ ಉತ್ತಮ ಆಹಾರವಾಗಿದೆ. ಟೈಪ್‌-2 ಮಧುಮೇಹಕ್ಕೆ, ಇಲ್ಲಿದೆ ನೋಡಿ ಆಯುರ್ವೇದ ಚಿಕಿತ್ಸೆ

ಬಣ್ಣದ ತರಕಾರಿಗಳು ಪ್ಯಾನ್ಕ್ರಿಯಾಸ್ ಕೆಲಸ ಮಾಡುವುದಕ್ಕೆ ಸಹಾಯ ಮಾಡುತ್ತದೆ. ಮೊಳಕೆ ಬರಿಸಿದ ಹೆಸರು ಕಾಳು ಮತ್ತು ಬ್ರಿವರ್ಸ್ ಯೀಸ್ಟ್(ಬುರುಗು)ದೇಹದ ಆರೋಗ್ಯ ಕಾಪಾಡುವಲ್ಲಿ ಲಾಭದಾಯಕವಾಗಿದೆ. ಹೆಚ್ಚು ನಾರಿನಂಶವಿರುವ ಆಹಾರವನ್ನು ಸೇವಿಸಿದರೆ, ಇನ್ಸುಲಿನ್ ಅವಶ್ಯಕತೆಯನ್ನು ಕಡಿಮೆ ಮಾಡುತ್ತದೆ.

ಯಾರು ಹೆಚ್ಚು ನಾರಿನಾಂಶ ಇರುವ ಪದಾರ್ಥಗಳನ್ನು ಅಥವಾ ಧಾನ್ಯಗಳೊಳಗೊಂಡ ಆಹಾರವನ್ನು ನಿಯಮಿತವಾಗಿ ಸೇವಿಸುತ್ತಾರೋ ಅವರಲ್ಲಿ ಡೈಯಾಬಿಟಿಸ್ ಮೆಲ್ಲಿಟಸ್ ತಗ್ಗುತ್ತದೆ ಅಥವಾ ಸಂಪೂರ್ಣವಾಗಿ ಹೊರಟು ಹೋಗುತ್ತದೆ. ಹೆಚ್ಚು ನಾರಿನಂಶವಿರುವ ಆಹಾರದಲ್ಲಿ ಕ್ರೋಮಿಯಮ್ ಇರುತ್ತದೆ. ಇದು ಮಧುಮೇಹ ರೋಗಿಗಳಿಗೆ ಉತ್ತಮವಾದದ್ದು.

ಪೊಟಾಶಿಯಮ್ಯಿಂದ ಸಮೃದ್ಧವಾದ ಆಹಾರವಾದ ಹಸಿ ಬೀಜ, ಟೊಮೇಟೊ, ಬಾಳೆಹಣ್ಣು, ಕರ್ಬೂಜ, ಒಣ ಬಟಾಣಿ, ಆಲೂಗಡ್ಡೆ, ಸೇಬು, ಗೋಧಿ, ಸ್ಕಿಮ್ಡ್ ಪೌಡರ್ಡ್ ಮಿಲ್ಕ್ ಹೆಚ್ಚಾಗಿ ಬಳಸಬೇಕು. ಆದರೆ ಪೊಟಾಶಿಯಮ್ ಪೂರಕಗಳನ್ನು ತೆಗೆದುಕೊಳ್ಳಬೇಡಿ. ಮಧುಮೇಹಕ್ಕೆ ತಡೆ ಹಾಕುವ ಆರೋಗ್ಯಕರ ಜೀವನಶೈಲಿ

ನಿಮ್ಮ ನಿತ್ಯದ ಆಹಾರದಲ್ಲಿ ಬಾರ್ಲಿ, ಓಟ್ಸ್, ಬಾದಾಮಿ, ಒಣ ಹುರುಳಿಕಾಳು, ಕಿಡ್ನಿ ಕಾಳು, ಬಟಾಣಿ, ಬೇಯಿಸಿದ ಕಪ್ಪು ಹುರಳಿ ಕಾಳು, ಧಾನ್ಯಗಳು ಹಾಗು ಗಾರ್ಬಾನ್ಸೊ ಕಾಳುಗಳನ್ನು ಕೂಡ ಸೇವಿಸಿ.

English summary

Best & Worst Foods For Diabetic Patients

Once you find out that you have high blood sugar levels, you should make certain changes to your diet and your lifestyle. Take the guidance of your physician and find out what foods you should include in your diet and which ones you should avoid. Check your sugar level often so that the sugar level does not go beyond the proposed level.
X
Desktop Bottom Promotion